ನಾಡಿನ ಹೆಮ್ಮೆಯ ಯಕ್ಷಗಾನ ಕಲಾವಿದ, ಶ್ರೀರಾಮಚಂದ್ರಾಪುರ ಮಠದ ಚಾತುರ್ಮಾಸ್ಯ ಪ್ರಶಸ್ತಿ ವಿಜೇತ ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ಅಸ್ತಂತಗತರಾಗಿದ್ದು ಶ್ರೀಗಳವರಿಗೆ ಮತ್ತು ಶ್ರೀಮಠದ ಭಕ್ತರಿಗೆ ವಿಷಾದ ತರುವ ಸಂಗತಿಯಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ. “ಮಹಾಬಲ ಹೆಗಡೆ ಇಲ್ಲದ ಯಕ್ಷಗಾನವೆಂದರೆ ಯಕ್ಷಗಾನವಿಲ್ಲದ ರಾತ್ರಿಯಂತೆ“ -ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಚಿತ್ರಕೃಪೆಃ http://www.yakshaganamahabala.com/
ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ: ವಸತಿ: ಶ್ರೀ ದೇವಶ್ರವ ಶರ್ಮ, ಅಶೋಕೆ, ಗೋಕರ್ಣ ಶ್ರೀಭಿಕ್ಷೆ ; ರಾಘವೇಂದ್ರ ಬನದಕೊಪ್ಪ ದಿನವಿಶೇಷ: ಸೂರ್ಯೋದಯಕ್ಕೆ ಸರಿಯಾಗಿ ಗೋಕರ್ಣದ ಶ್ರೀಮಹಾಗಣಪತಿಗೆ ಶ್ರೀಕರಗಳಿಂದ ಪೂಜೆ.. ಶ್ರೀ ಆತ್ಮಲಿಂಗಕ್ಕೆ ರುದ್ರಾಭಿಷೇಕಪೂರ್ವಕ ಪೂಜೆ.. ಶ್ರೀ ತಾಮ್ರಗೌರಿಯ ಪೂಜೆ.. ಶ್ರೀ ಕೋಟಿತೀರ್ಥದ ಉತ್ತರ ತೀರದಲ್ಲಿ ಶೋಭಿಸುವ ಶ್ರೀ ರಘೂತ್ತಮ… Continue Reading →
ಗೋಕರ್ಣ, ಅಕ್ಟೋಬರ್ ೨೯, ೨೦೦೯: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿನಚರಿ – ವಸತಿ : ಶ್ರೀ ದೇವಶ್ರವ ಶರ್ಮಾ,ಅಶೋಕೆ, ಗೋಕರ್ಣ ಪ್ರಾತಃಕಾಲ ಮುಂಬಯಿಯಿಂದ ಭೂಮಾರ್ಗವಾಗಿ ಆಗಮನ, ಭದ್ರಕಾಳಿಯ ಪರಿಸರದಲ್ಲಿ ಸ್ವಾಗತ, ಶ್ರೀರಾಮಾರ್ಚನೆ. ಮಧ್ಯಾಹ್ನ :ಕಲ್ಕತ್ತೆಯ IAS ಅಧಿಕಾರಿ ಶ್ರೀ ಸುಮಂತ್ರೋ ಚೌಧರಿಯವರ ಪರವಾಗಿ ಶ್ರೀ ರಾಮ ಸಾಮ್ರಾಜ್ಯ ಪಟ್ಟಾಭಿಷೇಕ….. Continue Reading →
ದಬ್ಬಾಳಿಕೆಯ ಆದಿ ಯಾವುದು..? ವಿನಾಶದ ಪ್ರಾರಂಭ ಎಲ್ಲಿಂದ..? ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಕಲಹಗಳು.. ಸಮೃದ್ಧ ಕುಟುಂಬಗಳಲ್ಲಿ ವಿರಸ-ವಿಚ್ಛೇದನಗಳು.. ದೇಶ-ದೇಶಗಳ ಮಧ್ಯೆ ಸಂಗ್ರಾಮಗಳು..ಹೀಗೇಕೆ..? ಉತ್ತರವನ್ನು ನಾವಿಲ್ಲಿ ಕಂಡೆವು….. ಒಂದಾನೊಂದು ಊರು, ಆ ಊರಿಗೊಬ್ಬ ಜಮೀನ್ದಾರ, ಊರಿಗೆ ಆತ ತುಂಡರಸನಂತಿದ್ದ, ಆತನ ಅಪ್ಪಣೆಯಿಲ್ಲದೆ ಆ ಊರಿನಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುವನ್ತಿರಲಿಲ್ಲ.. ಕಾಲದ ಮಹಿಮೆಯಿಂದಾಗಿ ಆತನನ್ನು ವಿಚಿತ್ರ ಕಾಯಿಲೆಯೊಂದು ಆವರಿಸಿಕೊಂಡಿತು.. ಪರೀಕ್ಷಿಸಿದ… Continue Reading →
ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆಹಾವಳಿಗೆ ತತ್ತರಿಸಿದ ಶಿಷ್ಯಕೋಟಿಗೆ ಶ್ರೀಮಠವು ಸ್ಪಂದಿಸಿದ ವರದಿ: ಶ್ರೀಗಳಿಂದ ಪ್ರವಾಹಪೀಡೆಯ ಪ್ರತ್ಯಕ್ಷ ದರ್ಶನ.. ಆಪನ್ನರಿಗೆ ಶ್ರೀಗಳ ಅಭಯವಾಣಿ.. ಪ್ರವಾಹ ಪೀಡಿತರಿಗಾಗಿ ೫೦೦೦ ಮನೆಗಳ ನಿರ್ಮಾಣದ ಗುರಿ.. ಶ್ರೀಕ್ಷೇತ್ರ ಗೋಕರ್ಣದಲ್ಲಿ ೨೭ ವರ್ಷಗಳ ನಂತರ ನೆರವೇರಲಿದ್ದ ವಿಶ್ವ ಮಟ್ಟದ ಕಾರ್ಯಕ್ರಮ ‘ಶ್ರೀ ಮಹಾಬಲೇಶ್ವರ ದೇವರ ಅಷ್ಟಬಂಧ‘ದ ಮುಂದೂಡಿಕೆ.. ಭೂಮಂಡಲದ ಇತಿಹಾಸದಲ್ಲಿಯೇ ಇದಂ-ಪ್ರಥಮವಾದ “ಕೋಟಿರುದ್ರ“ದ… Continue Reading →