ಡಿ.೩೧ – ರಾಜಸ್ಥಾನದ ಯಾತ್ರೆ – ಕೋಟಾದಿಂದ ಭೀಲವಾಡಾಕ್ಕೆ
Thursday, December 31st, 2009
Info@HareRaama.in
zero
ಡಿ.೩೧ – ಕ್ರಿಸ್ತಶಕ ೨೦೦೯ರ ಕೊನೆಯ ದಿನ ಇಂದು ರಾತ್ರಿ ಚಂದ್ರಗ್ರಹಣವೂ ಇರುವುದೊಂದು ವಿಶೇಷ. ಹೊಸವರ್ಷ ಪ್ರಾರಂಭವಾದ ಕೂಡಲೇ ಗ್ರಹಣ ಸಮಾಧಾನವೆಂದರೆ ಹೊಸವರ್ಷದ ಸೂರ್ಯೋದಯವಾಗುವಾಗ ಚಂದ್ರ ಗ್ರಹಣ ಮುಕ್ತನಾಗಿರುತ್ತಾನೆ.
ಇಂದು ಯಾತ್ರೆ ಕೋಟಾ ನಗರದಿಂದ ಹೊರಟು ಡಾಬೀ, ಬಿಜೋಲಿಯಾ, ಚಿತ್ತೋಡಗಢದ ಮೂಲಕ ಭೀಲವಾಡಾ ನಗರವನ್ನು ಪ್ರವೇಶಿಸಿತು.
ಬಿಜೋಲಿಯಾದಲ್ಲಿ ಅಂದಾಜು ೨೦೦೦ ಜನರು ಮಧ್ಯಾಹ್ನದ ಬಿಸಿಲಿನಲ್ಲೂ ಸಭೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಸೀತಾರಾಮ ಕೆದಿಲಾಯರು ಪ್ರಮುಖ ಭಾಷಣ ಮಾಡಿದರು. ಶ್ರೀ ಹುಕುಂಚಂದ್ ಜೀ ಸಾವ್ಲಾ ಅವರೂ ತಮ್ಮ ವಿಶಿಷ್ಟ ಶೈಲಿಯಲ್ಲಿ ಮಾರ್ಮಿಕವಾಗಿ [...]





