ಮಹಿಳೆಯರಿಗೆ ಉದ್ಯೋಗವನ್ನು ಒದಗಿಸಿ ಅವರ ಆರ್ಥಿಕ ಗುಣಮಟ್ಟವನ್ನು  ಹೆಚ್ಚಿಸಬಲ್ಲ ಯೋಜನೆ ‘ಮಹಿಳೋದಯ’. ನಿರುದ್ಯೊಗ ನಮ್ಮ ದೇಶದ ದೊಡ್ಡ ಸಮಸ್ಯೆ. ಆಗಬೇಕಾದ ಕೆಲಸಗಳು ಬಹಳ ಇವೆ; ಕೆಲಸ ಬೇಕೆಂಬ ಹಂಬಲನವುಳ್ಳವರೂ ಅನೇಕರಿದ್ದಾರೆ. ಹೀಗಿದ್ದರೂ ನಿರಿದ್ಯೋಗ ಸಮಸ್ಯೆ ಇಂದಿನ ಸಮಾಜವನ್ನು ಕಾಡುತ್ತಿರುವುದು ಒಂದು ದೊಡ್ಡ ವಿಪರಾಸ್ಯವೇ ಸರಿ. ಯೋಗ್ಯ ರೀತಿಯಲ್ಲಿ ನಮ್ಮ ಸಂಪಲ್ಮೂಲಗಳು ಬಳಕೆಯಾಗದಿರುವುದೇ ನಿರುದ್ಯೋಗದ ಮೂಲ. ಈ ಸಮಸ್ಯೆಯನ್ನು ಇಲ್ಲವಾಗಿಸಿ ಗ್ರಾಮೀಣ ಭಾಗಗಳಲ್ಲಿಯೂ ಕೃಷಿಯೊಂದಿಗೆ ಹೊಂದಿಕೊಳ್ಳಬಹುದಾದ, ಮನೆಯಲ್ಲಿಯೇ ನಿರ್ವಹಿಸಬಹುದಾದ ಚಿಕ್ಕ ಚಿಕ್ಕ ಉದ್ಯೋಗಳಲ್ಲಿ ಶ್ರೀಮಠದಿಂದ ತೊಡಗಿಸಲಾಗುತ್ತದೆ.

ಈ ಯೋಜನೆಯ ಅಡಿಯಲ್ಲಿ ವಿವಿಧ ರೀತಿಯ ಉತ್ಪನ್ನಗಳ ತಯಾರಿಕೆಗೆ ತರಬೇತಿಯನ್ನು ನೀಡಲಾಗುತ್ತಿದೆ. ಕುಂಕುಮ ತಯಾರಿಕೆ, ಹಪ್ಪಳ, ಸಂಡಿಗೆ ಇತ್ಯಾದಿಗಳನ್ನು ಸಿದ್ದಪಡಿಸಿ, ಅವುಗಳ ಮಾರಾಟಕ್ಕೆ  ಅವರೇ ಸ್ಥಾಪಿಸಿದ ಸಹಕಾರಿ ಮಳಿಗೆಗಳನ್ನು ಬಳಸಿಕೊಳ್ಳಲಾಗುವುದು. ಈ ರೀತಿಯ ವ್ಯವಸ್ಥೆಯನ್ನು ಈಗಾಗಲೇ ಕಾಸರಗೋಡಿನ ‘ಬದಿಯಡ್ಕ’ದಲ್ಲಿ ಸ್ಥಾಪಿಸಲಾಗಿದೆ.

ಮಹಿಳೋದಯ
ಲಕ್ಷ್ಮೀ ವೆಂಕಟೇಶ್ವರ ಕಟ್ಟಡ,
ಬದಿಯಡ್ಕ, ಅಂಚೆ : ಪೆರಡಾಲ
ಕಾಸರಗೋಡು ಜಿಲ್ಲೆ –
ದೂರವಾಣಿ: ೦೪೯೯೮ – ೨೬೦೨೬೬, ೨೮೬೭೮೫

ಛಾಯಾಚಿತ್ರಗಳು:

Facebook Comments Box