ನಿತ್ಯ ಸೂರ್ಯೋದಯದೊಂದಿಗೆ ‘ಸತ್ಯ ಸೂರ್ಯೋದಯ’ ವೀಕ್ಷಿಸುತ್ತಾ ದಿನಾರಂಭಿಸುವ ಭಾಗ್ಯ..!!

ಇದೇ ಬರುವ ಸೋಮವಾರದಿಂದ(ಫೆ.29) ನಿತ್ಯ ಸೂರ್ಯೋದಯದೊಂದಿಗೆ ‘ಸತ್ಯ ಸೂರ್ಯೋದಯ’ ಕಾರ್ಯಕ್ರಮವನ್ನು ವೀಕ್ಷಿಸುತ್ತಾ ದಿನಾರಂಭಿಸುವ ಸುಯೋಗ ನಮ್ಮೆಲ್ಲರದ್ದಾಗಲಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.

ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಪ್ರವಚನಧಾರೆ ಹಾಗೂ ಸಂವಾದಗಳಿಂದ ಕೂಡಿದ ವಿಶಿಷ್ಟಪರಿಕಲ್ಪನೆಯ ‘ಸತ್ಯ ಸೂರ್ಯೋದಯ’ ಎಂಬ ಕಾರ್ಯಕ್ರಮ ಸರಣಿ ಫೆಬ್ರವರಿ 29 ರಿಂದ ಪ್ರಜಾ ಟಿವಿಯಲ್ಲಿ ಶುಭಾರಂಭವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಗ್ಗೆ 6.30ಕ್ಕೆ ವಿಶಿಷ್ಟವಾದ ಈ ಕಾರ್ಯಕ್ರಮ ಮೂಡಿಬರಲಿದೆ.
ನಿತ್ಯದ ಜೀವನಕ್ಕೆ ಹತ್ತಿರವಾಗುವ ತತ್ತ್ವಗಳನ್ನೋಳಗೊಂಡ, ಆಪ್ಯಾಯಮಾನವಾದ ಪ್ರವಚನಮಾಲಿಕೆ ಹಾಗೂ ಸತ್ಯ ಸಂವಾದದಿಂದ ಕೂಡಿದ ಕಾರ್ಯಕ್ರಮ ಇದಾಗಲಿದ್ದು, ಪೂಜ್ಯ ಶ್ರೀಗಳ ಎಂದಿನ ಅನುಪಮವಾದ ಶೈಲಿಯಲ್ಲಿ ‘ಸತ್ಯ ಸೂರ್ಯೋದಯ’ಮೂಡಿಬರಲಿದೆ.

ನಾಡಿನ ಜನತೆ ನಿತ್ಯ ‘ಸತ್ಯ ಸೂರ್ಯೋದಯ’ದೊಂದಿಗೆ ದಿನಾರಂಭಿಸಿ ಧನ್ಯರಾಗಬಹುದಾಗಿದ್ದು, ಜನತೆಗೆ ಈ ಕಾರ್ಯಕ್ರಮದ ಕುರಿತು ತಮ್ಮ ಮಾಧ್ಯಮದ ಮೂಲಕ ತಿಳಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.

 

Facebook Comments