ಪೆರಡಾಲ, 02.1.2016:
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶ್ರಯದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ಪೆರಡಾಲ ವಲಯ ಸಭೆಯು ಪುದ್ಯೋಡು ಸೀತಾರಾಮ ಭಟ್ಟ ಇವರ ನಿವಾಸದಲ್ಲಿ ಜರಗಿತು. ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು.

ವಲಯ ಅಧ್ಯಕ್ಷ ಶ್ರೀ ಹರಿಪ್ರಸಾದ್ ಪೆರುಮುಖ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಶ್ರೀ ಕೃಷ್ಣ ಭಟ್ ಮಡಿಪ್ಪು ಗತಸಭೆ ವರದಿಯನ್ನಿತ್ತರು. ಸಭೆಯಲ್ಲಿ ಮಹಾಅಭಿಯಾನದ ಕುರಿತು ಸಮಾಲೋಚಿಸಿ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಗೋಕರ್ಣ ಮೂಲ ಮಠ ಅಶೋಕೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಮಲ್ಲಿಕಾರ್ಜುನ ದೇವಾಲಯದ ಲೋಕಾರ್ಪಣಾ ಮಾಹಿತಿಯನ್ನು ವಿವರಿಸಲಾಯಿತು. ಈ ಸಂದರ್ಭದಲ್ಲಿ ಮಾತೃ ವಿಭಾಗದ ನೇತೃತ್ವದಲ್ಲಿ ಕುಂಕುಮಾರ್ಚನೆಯು ಜರಗಿತು.

ವಲಯ ಪದಾಧಿಕಾರಿಗಳು, ಗುರಿಕ್ಕಾರರುಗಳು ಉಪಸ್ಥಿತರಿದ್ದರು. ಸಾಮೂಹಿಕ ರಾಮನಾಮಜಪ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯಗೊಂಡಿತು.

ಚಿತ್ರ, ವರದಿ: ಶ್ರೀ ಗೋವಿಂದ ಭಟ್, ಬಳ್ಳಮೂಲೆ. (ಪ್ರಸಾರ ಪ್ರಧಾನರು – ಮುಳ್ಳೇರ್ಯ ಮಂಡಲ)

Facebook Comments