ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರ ಆಶ್ರಯದಲ್ಲಿರುವ ಮುಳ್ಳೇರ್ಯ ಮಂಡಲ ಗುಂಪೇ ವಲಯ ಸಭೆಯು 03.01.2016 ಆದಿತ್ಯವಾರ ಸುಬ್ರಹ್ಮಣ್ಯ ಭಟ್ ಕೊಂದಲಕಾಡು ಇವರ ನಿವಾಸದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀ ಅಮ್ಮಂಗಲ್ಲು ರಾಮ ಭಟ್ ವಹಿಸಿದ್ದರು. ವಲಯ ಕಾರ್ಯದರ್ಶಿ ಶ್ರೀ ಕೇಶವ ಪ್ರಾಸದ ಎಡಕ್ಕಾನ ಇವರು ಗತ ಸಭೆಯ ವರದಿ ಮಂಡಿಸಿದರು.

ಮೂಲ ಮಠ ಅಶೋಕೆಯ ಕೆಲಸಗಳ ಪ್ರಗತಿಗಳ ಮಾಹಿತಿ, ಮುಂಚಿಕ್ಕಾನ ಗಣೇಶ ಭಟ್ಟರವರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಚಲಿಸುವ ಗೋ ದೇವಾಲಯದ ಕುರಿತಾದ ಮಾಹಿತಿಯನ್ನು ಶ್ರೀಯುತ ಅಮ್ಮಂಕಲ್ಲು ರಾಮ ಭಟ್ಟರು ಸಭೆಗೆ ನೀಡಿದರು. ಶ್ರೀ ಗುರುಗಳ ಸಮಾಜಮುಖೀ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಬೇಕಾಗಿ ತಿಳಿಸಲಾಯಿತು . ಶ್ರೀಯುತ ಸುಬ್ರಹ್ಮಣ್ಯ ಭಟ್ ಕೊಂದಲಕಾಡು ಇವರು ಇಂತಹ ಸಭೆಗಳನ್ನು ಮನೆ ಮನೆ ಗಳಲ್ಲಿ ನಡೆಸುವುದರಿಂದ ಹೆಚ್ಚಿನ ಸದಸ್ಯರಿಗೆ ಸಭೆಗಳಲ್ಲಿ ಭಾಗವಹಿಸಿ ಮಠದ ಕೆಲಸ ಕಾರ್ಯಗಳ ಮಾಹಿತಿ ಲಭಿಸುವುದಲ್ಲದೆ ಮಠದ ಸಮಾಜಮುಖೀ ಕೆಲಸಗಳಲ್ಲಿ ದುಡಿದು ಸಮಾಜಕ್ಕೆ ತಮ್ಮ್ಕಿಂದಾದ ಸೇವೆ ಸಲ್ಲಿಸಲು ಅವಕಾಶ ಲಭಿಸುವುದಾಗಿ ಅಭಿಪ್ರಾಯ ಪಟ್ಟರು.

ಜಯರಾಮ ಚೆಕ್ಕೆಮನೆ ಧನ್ಯವಾದವಿತ್ತರು. ಶಾಂತಿ ,ಮಂತ್ರ ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

ಸಚಿತ್ರ ವರದಿ: ಗೋವಿಂದ ಭಟ್ ಬಳ್ಳಮೂಲೆ, ಪ್ರಸಾರ ಪ್ರಧಾನರು – ಮುಳ್ಳೇರ್ಯ ಮಂಡಲ

Facebook Comments