ದಿನಾಂಕ 07-02-2016, ಶ್ರೀ ರಾಮಾಶ್ರಮ – ಗಿರಿನಗರ:
ಉದ್ಯೋಗಾರ್ಥಿಗಳಿಗೆ ಉದ್ಯೋಗವನ್ನು ಅರಸಲು ಸಹಕರಿಸಿ, ಮುಂದಿನ ಬಾಳಿಗೆ ಏಳ್ಗೆಯನ್ನು ಹಾರೈಸುವ ಶ್ರೀಮಠದ ವಿಭಾಗವಾದ “ದಿಶಾದರ್ಶಿ” ಹಾಗೂ ಅಂತರ್ಜಾಲ-ಪ್ರಸ್ತುತಿ ವಿಭಾಗದಿಂದ ಅಂತರಜಾಲ ಪ್ರಸ್ತುತಿ ಕಾರ್ಯಾಗಾರವು ಇಂದು ನಡೆಯಿತು.
ಕಾರ್ಯಾಗಾರದಲ್ಲಿ ಶ್ರೀಕಾರ್ಯದರ್ಶಿಗಳಾದ ಮೋಹನ ಭಾಸ್ಕರ ಹೆಗಡೆಯವರು Social Spiritual Responsibility -ಎಂಬ ವಿಚಾರದಲ್ಲಿ Stress Management ಮತ್ತು ಧಾರ್ಮಿಕ ತೊಡಗುವಿಕೆಗಳ ಬಗೆಗೆ ತಿಳಿಸಿಕೊಟ್ಟರು. ವಕೀಲರಾದ ಗೋವಿಂದರಾಜ ಕೋರಿಕ್ಕಾರು – ಇವರು ಅಂತರ್ಜಾಲೀಯ ಕಾನೂನುಗಳ ಬಗೆಗೆ ತಿಳಿಸಿಕೊಟ್ಟರು. ವಿಶ್ವಕನ್ನಡದ ಡಾ. ಯು.ಬಿ.ಪವನಜ – ಇವರಿಂದ ಟ್ವಿಟರ್ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಋಷಿ ಸಿಸ್ಟಮ್ ನ ಶ್ರೀ ಸತ್ಯಶಂಕರ ಮರಕಿಣಿ ಇವರು ಸಾಮಾಜಿಕ ಮಾಧ್ಯಮದ ಉಪಯೋಗದ ಕುರಿತಾಗಿ ತಿಳಿಸಿಕೊಟ್ಟರು. ಖ್ಯಾತ ವಾಗ್ಮಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಸಾಮಾಜಿಕ ಜಾಲತಾಣಗಳ ಸದ್ವಿನಿಯೋಗದ ಕುರಿತಾಗಿ ತಿಳಿಸಿಕೊಟ್ಟರು.

ಅಪರಾಹ್ನ ಶ್ರೀಶ್ರೀಗಳವರೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಿತು. ನೆರೆದ ಶಿಷ್ಯರು ಹಲವಾರು ವಿಚಾರಗಳ ಕುರಿತು ಶ್ರೀಗಳೊಂದಿಗೆ ಚರ್ಚಿಸಿದರು. ಅಂತರ್ಜಾಲದಲ್ಲಿ ನಿತ್ಯಧಾರಾವಾಹಿ ಸಾಹಿತ್ಯವನ್ನು ಹರಡಿಸುತ್ತಿರುವ ವಿದ್ವಾನ್ ಜಗದೀಶ ಶರ್ಮಾ, ಶ್ರೀ ಗೋವಿಂದ ಭಟ್ ಬಳ್ಳಮೂಲೆ, ಶ್ರೀ ದತ್ತುಭಟ್ ಶ್ರೀಪರಿವಾರ, ಶ್ರೀ ಲೋಹಿತಶರ್ಮ ಮತ್ತು ಉಲ್ಲಾಸ್ ಸಿ.ಕೆ ಇವರನ್ನು ಗುರುತಿಸಲಾಯಿತು. ನೂರಾರು ಶಿಬಿರಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.

ಫೋಟೋ: ಗೌತಮ್ ಬಿ.ಕೆ. ಶ್ರೀಪರಿವಾರ.

Facebook Comments