ಹೊಸನಗರ, 09-Jan-2015

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಇಂದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಶ್ರೀಚಕ್ರ ಆರಾಧನೆ, ಸೌಂದರ್ಯ ಲಹರೀ ಪಾರಾಯಣ, ಹವನ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ಜರುಗಿದವು.

ಯುವ ಚಿಂತಕ, ಖ್ಯಾತ ವಾಗ್ಮಿ ಶ್ರೀ ಚಕ್ರವರ್ತಿ, ಸೂಲಿಬೆಲೆಯವರ ದಿಕ್ಸೂಚಿ ಭಾಷಣ, ಶ್ರೀ ಶ್ರೀ ಸಂಸ್ಥಾನದವರಿಂದ ಆಶೀರ್ವಚನವು ನೆರವೇರಿತು. ಕರ್ನಾಟಕ, ಕೇರಳಗಳಿಂದ ಬಂದ ಸುಮಾರು ಐದು ಸಾವಿರಕ್ಕೂ ಅಧಿಕ ಶಿಷ್ಯವೃಂದವು “ಗುರುವನು ಅರಿಯೋಣ, ಗುರಿಯನು ಸೇರೋಣ” ಎಂಬ ಧ್ಯೇಯವಾಕ್ಯವನ್ನು ಮತ್ತೆ ಮತ್ತೆ ನೆನಪಿಸಿಕೊಂಡರು.

ಫೋಟೋ ಕೃಪೆ: ಹರೇರಾಮ ತಂಡ

 

 

Facebook Comments