ಶ್ರೀ ರಾಮಾಶ್ರಮ, ಬೆಂಗಳೂರು 1/09/2 015

ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಛದ್ಮವೇಶ, ಸಂಗೀತ, ಯಕ್ಷಗಾನ ಮುಂತಾದ ವಿಭಾಗಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿ ವರ್ಷಾ ಭಂಡಾರಿ ಇವರಿಗೆ

~
ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಡಾ.ಗಜಾನನ ಶರ್ಮಾ ಬರೆದ ‘ಮಕ್ಕಳ ರಾಜ್ಯವ ಕಟ್ಟಿಕೊಡು’ ಕವನ ಸಂಕಲನ ಪುಸ್ತಕ

~
ಸರ್ವಸೇವೆ : ಸಾಗರ ಮಂಡಲಾಂತರ್ಗತ ಕೋಗೋಡು, ಗೋಳಗೋಡು ಹಾಗೂ ಮರಗುಡಿ ವಲಯದವರಿಂದ ಸರ್ವಸೇವೆ ನಡೆಯಿತು.

ಧರ್ಮಸಭೆ

ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರ ಭಾರತೀಶ್ರೀಗಳ ಛಾತ್ರಛಾತುರ್ಮಾಸ್ಯದ ಮೂವತ್ತೆರಡನೇ ದಿನವಾದ ಮಂಗಳವಾರ ಸಾಗರ ಮಂಡಲಾಂತರ್ಗತ ಕೋಗೋಡು, ಗೋಳಗೋಡು ಹಾಗೂ ಮರಗುಡಿ ವಲಯಗಳಿಂದ ಸರ್ವಸೇವೆ ನಡೆಯಿತು.
ನಂತರ ನಡೆದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಡಾ.ಗಜಾನನ ಶರ್ಮಾ ಬರೆದ ‘ಮಕ್ಕಳ ರಾಜ್ಯವ ಕಟ್ಟಿಕೊಡು’ ಕವನ ಸಂಕಲನ ಪುಸ್ತಕ ಲೋಕಾರ್ಪಣೆಗೊಂಡಿತು. ಛದ್ಮವೇಶ, ಸಂಗೀತ, ಯಕ್ಷಗಾನ ಮುಂತಾದ ವಿಭಾಗಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿ ವರ್ಷಾ ಭಂಡಾರಿ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಗ್ರಾಮರಾಜ್ಯ ಕಾರ್ಯದರ್ಶಿ ಆರ್.ಎಸ್ ಹೆಗಡೆ ಹರಗಿ, ಉತ್ಸವ ಕಾರ್ಯದರ್ಶಿ ಸುಬ್ರಹ್ಮಣ್ಯ ಐಸಿರಿ, ಮಹಾಮಂಡಲ ಅಧ್ಯಕ್ಷ ಡಾ.ವೈ.ವಿ ಕೃಷ್ಣಮೂರ್ತಿ, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಪ್ರಸಾರ ಪ್ರಧಾನ ರಮೇಶ ಹೆಗಡೆ ಗುಂಡೂಮನೆ, ಛಾತ್ರ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್ ಉಪಸ್ಥಿತರಿದ್ದರು. ವಿಶ್ವಾಸ ನಿರೂಪಿಸಿದರು.

~

Chaatru Puraskara

Chaatru Puraskara

Lokarpane

Lokarpane

SRI_1081

Audio:

Download : Link

Facebook Comments