ಬೆಂಗಳೂರು: ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ಬೆಂಗಳೂರು ಮಂಡಲಾಂತರ್ಗತ ವಿಜಯನಗರ ಹಾಗೂ ಕೋರಮಂಗಲ ವಲಯಗಳಿಂದ ಸರ್ವಸೇವೆ ನಡೆಯಿತು. ಆರ್ಯ ಈಡಿಗ ರಾಘವೇಶ್ವರಭಾರತೀ ಮಹಾಸ್ವಾಮಿಜಿ ಅಭಿಮಾನಿ ಬಳಗ ಹಾಗೂ ನಾಡವ ಸಮಾಜದವರಿಂದ ಶ್ರೀಗುರುಪಾದುಕಾಪೂಜೆ ನೆರೆವೇರಿತು.

ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿ ಹಾಗೂ ‘ವಿಚಾರ ವಿಹಾರ’ ಪುಸ್ತಕವನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆ ಮಾಡಿದರು. ಉತ್ತರಕನ್ನಡ ಜಿಲ್ಲಾಪಂಚಾಯತಿ ಸದಸ್ಯರಾದ ಪ್ರದೀಪ್ ಕುಮಾರ್ ನಾಯಕ, ಆರ್ಯ ಈಡಿಗ ರಾಘವೇಶ್ವರಭಾರತೀ ಮಹಾಸ್ವಾಮಿಜಿ ಅಭಿಮಾನಿ ಬಳಗದ ಸದಸ್ಯರು, ನಾಡವ ಸಮಾಜದ ಭಕ್ತರು, ನಾಡಿನ ನಾನಾ ಭಾಗಗಳ ಭಕ್ತರು ಉಪಸ್ಥಿತರಿದ್ದರು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ನವಗ್ರಹ ಶಾಂತಿ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

• ಶ್ರೀಭಾರತೀಪ್ರಕಾಶನದ ” ವಿಚಾರ ವಿಹಾರ ” ಪುಸ್ತಕ ಲೋಕಾರ್ಪಣೆ
• ಆರ್ಯ ಈಡಿಗ ರಾಘವೇಶ್ವರಭಾರತೀ ಮಹಾಸ್ವಾಮಿಜಿ ಅಭಿಮಾನಿ ಬಳಗ ಹಾಗೂ ನಾಡವ ಸಮಾಜದವರಿಂದ ಶ್ರೀಗುರುಪಾದುಕಾಪೂಜೆ ನೆರೆವೇರಿತು.

ಇಂದಿನ ಕಾರ್ಯಕ್ರಮ (14.08.2016):
ಬೆಳಗ್ಗೆ 7.00 : ಕಾಮಧೇನು ಹವನ, ರಾಮತಾರಕ ಹವನ, ಶಾಂತದುರ್ಗಾ ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
ಲೋಕಾರ್ಪಣೆ : ಅಂದಿಗಸ್ಟು, ಇಂದಿಗಿಸ್ಟು – ಪುಸ್ತಕ
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಅಪರಾಹ್ನ 3.00 : ಗೋಕಥಾ
ವಿಶಿಷ್ಟ ನಿರೂಪಣೆಯ ಗೋಕಥಾ: ಗೋವಿನ ಕುರಿತಾದ ಕಥಾ ನಿರೂಪಣೆ, ಗಾಯನ, ಚಿತ್ರರಚನೆಗಳನ್ನೋಳಗೊಂಡ ವೈಶಿಷ್ಟ್ಯಪೂರ್ಣವಾದ ‘ಗೋಕಥಾ’ ಸಂಪನ್ನವಾಗಲಿದ್ದು, ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಗೋಕಥೆ ನಿರೂಪಣೆಯನ್ನು ಮಾಡಲಿದ್ದಾರೆ.

ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

Facebook Comments