ಮುಳ್ಳೇರ್ಯ,14-11-2015
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ವ್ಯಾಪ್ತಿಯ ಕಾಸರಗೋಡು ವಲಯ ಸಭೆಯು ಹವ್ಯಕ ಸಭಾಭವನದಲ್ಲಿ ಜರಗಿತು.
ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಉಪಾಧ್ಯಕ್ಷ ಏತಡ್ಕ ಗೋವಿಂದ ಭಟ್ ಅವರು ಗತಸಭಾವರದಿವಾಚನ ಮಾಡಿ ಪುತ್ತೂರಿನಲ್ಲಿ ನಡೆದ ಧರ್ಮಜಾಗೃತಿ ಸಮಾವೇಶದ ವಿವರಗಳನ್ನಿತ್ತರು. ವಲಯ ಅಧ್ಯಕ್ಷ ಈಶ್ವರ ಭಟ್ ಉಳುವಾನ ಅವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ತಾ 23-11-15 ಅಪರಾಹ್ನ ನಡೆಯಲಿರುವ ರುದ್ರ ಪಾರಾಯಣದ ಕುರಿತು ಮಾಹಿತಿಗಳನ್ನಿತ್ತರು.

ಕಾಸರಗೋಡು ನಗರಸಭೆಗೆ ಆಯ್ಕೆಯಾದ ಶ್ರೀಮತಿ ಸವಿತಾ ಟೀಚರ್ ಅವರನ್ನು ಹಿರಿಯ ವಕೀಲ ಶ್ರೀ ಐ ವಿ ಭಟ್ ಅವರು ಶಾಲು ಹೊದೆಸಿ, ಹಿರಿಯ ವೈದ್ಯರಾಗಿರುವ ಶ್ರೀ ಗಣಪತಿ ಭಟ್ ಅವರು ಫಲಪುಷ್ಪನ್ನಿತ್ತು ಸನ್ಮಾನಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಯಸ್ ವಿ ಭಟ್ , ವಲಯ ಪದಾಧಿಕಾರಿಗಳು, ಗುರಿಕ್ಕಾರರುಗಳು ಉಪಸ್ಥಿತರಿದ್ದರು.

ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯಗೊಂಡಿತು.

(ವರದಿ: ಗೋವಿಂದ ಬಳ್ಳಮೂಲೆ, ಪ್ರಸಾರ – ಮುಳ್ಳೇರ್ಯ ಮಂಡಲ)

Facebook Comments Box