ಎಲ್ಲೆಲ್ಲೂ ನಾವು ನಮ್ಮ ಸಂಸ್ಕೃತಿ-ನಮ್ಮ ಭಾರತವನ್ನು ಕಾಣಬೇಕು. ಎಲ್ಲಿಯವರೆಗೆ ನಮ್ಮ ನೆಲ ಹಾಗೂ ನಮ್ಮ ನೆಲೆಯನ್ನು ಮರೆಯುವುದಿಲ್ಲವೋ – ಅಲ್ಲಿಯವರೆಗೆ ಒಳಿತು ನಮ್ಮನ್ನು ಬಿಟ್ಟು ಹೋಗದು ಎಂದು ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ನುಡಿದರು.

ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಇಂದು ವಿಜಯನಗರದಲ್ಲಿರುವ ಶ್ರೀ ಭಾರತೀ ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಈ ಸ್ಥಳ ಸಮಾಜಕ್ಕೆ ಪೂರ್ವಗುರುಗಳ ಅನುಗ್ರಹ . ಈ ಎಲ್ಲ ಯಶಸ್ಸುಗಳು ಹಿಂದೆ ಮಠದ ಭದ್ರ ಅಡಿಪಾಯ ಇದೆ. ಇದು ಗುರುಸ್ಥಾನ ಎನ್ನುವುದು ಎಲ್ಲರ ನೆನಪಿನಲ್ಲಿರಬೇಕು.

ಶ್ರೀಮಠದ ವಿದ್ಯಾವಿಭಾಗದಿಂದ ಅನೇಕ ಉತ್ತಮ ಕೆಲಸಗಳು ಆಗಿವೆ ಇತ್ತೀಚೆಗಷ್ಟೇ ಹಿಂದುಳಿದ ಸಮಾಜ ಎಂದು ಯಾವುದು ಕ್ರೆಯಲ್ಪಡುತ್ತದೆಯೋ , ಅ ಮುಕ್ರಿ ಸಮಾಜದ ಸುಮಾರು ೬೪ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಶ್ರೀಮಠ ವಹಿಸಿಕೊಂಡಿದೆ. ಕಳೆದೆರಡು ವರ್ಷದಲ್ಲಿ ಸುಮಾರು ೩೨ಲಕ್ಷ ರೂಪಾಯಿ ವಿದ್ಯಾನಿಧಿಯನ್ನು ಹಂಚಿದೆ ಎಂದು ಹೇಳಿದರು.

ಈ ಶಾಲೆಯಲ್ಲಿ ಒಳ್ಳೆಯ ಸುಸಂಸ್ಕೃತ ವಿಧ್ಯಾಭ್ಯಾಸ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಕಲೆಗಳ ವಿಕಾಸ ಆಗ್ತಾ ಇದೆ. ಆದರೆ ಇಲ್ಲಿ ಎಲ್ಲಿ ನೋಡಿದರೂ ಭಾರತದ ಸಂಸ್ಕೃತಿ ಕಾಣಬೇಕು. ಮಕ್ಕಳು ಭಾರತರಾಗಬೇಕು. ಇದು ಮಠದ್ದೇ ವಿಸ್ತರಣೆ. ಆ ರೀತಿಯ ವಾತಾವರಣ ಸೃಷ್ಟಿಯಾಗಬೇಕು. ವಿದ್ಯಾರ್ಥಿಗಳು.ಶಿಕ್ಷಕರು ಎಲ್ಲ ವಸ್ತುಗಳು ಮಠದ ಸಂಸ್ಕೃತಿಯನ್ನು ವ್ಯಕ್ತಪಡಿಸಬೇಕು. ಇವೆರಡನ್ನೂ ಬೆರೆಸಿ ವಿದ್ಯಾರ್ಥಿಗಳನ್ನು ಬೆಳೆಸುವ ಕಾರ್ಯ ಆಗಬೇಕು, ಎಲ್ಲ ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಖ್ಯಾತ ಜಾನಪದ ವಿದ್ವಾಂಸ ಹಾಗೂ ಬರಹಗಾರರಾದ ಶ್ರೀ ಗೋ. ರು. ಚನ್ನಬಸಪ್ಪ ಮಾತನಾಡಿ- ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀಗಳು ಸಾನ್ನಿಧ್ಯವನ್ನು ವಹಿಸಿರುವುದು ಈ ಶಾಲೆಗೇ ಶ್ರೀರಕ್ಷೆಯಾಗಲಿದೆ. ಬೆಂಗಳೂರಿನಲ್ಲಿ ಎಷ್ಟೊಂದು ಶಾಲೆಗಳಿದ್ದರೂ ಈ ಶಾಲೆಯಲ್ಲಿ ೮೦೦೦-೯೦೦ ವಿದ್ಯಾರ್ಥಿಗಳಿದ್ದಾರೆ ಎಂಬುದೇ ಇಲ್ಲಿನ ಶಿಕ್ಷಣ ಗುಣುಮಟ್ಟವನ್ನು ಹೇಳುತ್ತದೆ. ಎಂದರು.

ಸಮಾಜ ಇಂದು ಗೊಂದಲದಲ್ಲಿದೆ. ನಾವೂ ಕೂಡ ಗೊಂದಲದಿಲ್ಲೇದೇವೆ.ನಾವೇ ಪಡೆದಂತಹ ಸ್ವಾತಂತ್ರ್ಯ, ನಾವೇ ರೋಪಿಸಿದಂತಹ ಕಾನೂನು, ನಾವೇ ರಚಿಸಿದಂತಹ ಸರ್ಕಾರ, ನಾವೇ ಅರಿಸಿದಂತಹ ಪ್ರತಿನಿಧಿಗಳು. ಆದರೆ ಈ ನಮ್ಮ ವ್ಯವಸ್ಥೆಯಲ್ಲಿ ಅದನ್ನು ಅನುಭವಿಸುವಂತಿಲ್ಲ ಬಿಡುವಂತಿಲ್ಲ. ಯಾವುದು ಸತ್ಯ ಯಾವುದು ಮಿಥ್ಯ ಎಂದು ತಿಳಿಯಲಾರದ ಮಟ್ಟಿಗೆ ಕಂಗೆಟ್ಟು ಹೋಗಿದ್ದೇವೆ. ಅಷ್ಟರಮಟ್ಟಿಗೆ ವ್ಯವಸ್ಥೆ ಹದಗೆಟ್ಟಿದೆ. ಶಿಕ್ಷಣದ ಆಶಯ ಜೀವನ ಪ್ರಜ್ಞೆಯನ್ನು ತುಂಬುವುದು, ಅದಿಲ್ಲದೆ ಪ್ರಜ್ಞಾಹೀನವಾಗಿ ದೇಶದ ಪರಿಸ್ಥಿತಿ ಕಂಗೆಟ್ಟುಹೋಗಿದೆ.
ಅವರಲ್ಲಿ ಯಾವುದು ಸರಿ-ಯಾವುದು ತಪ್ಪು ಎಂದು ನಿರ್ಧರಿಸುವ ವಿವೇಚನಾ ಶಕ್ತಿಯನ್ನು ತುಂಬಬೇಕು.

ಬೋಧನೆಯಲ್ಲಿ ಬದುಕಿನ ಸ್ವಸ್ಥ್ಯ ಇರಬೇಕು, ಸಂಸ್ಕೃತಿಯ ಸಂಸ್ಕಾರ ಇರಬೇಕುಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಈ ಕೆಲಸವನ್ನು ಭಾರತಿ ವಿದ್ಯಾಲಯ ಈಗಾಗಲೇ ಮಾಡ್ತ ಇದೆ ಎಂಬುದನ್ನ ಕೇಳಿ ಸಂತೋಷವಾಯಿತು. ಇಂದಿನ ಮಕ್ಕಳನ್ನು ನಮ್ಮ ಪರಂಪರೆಯ ಸಾಂಸ್ಕೃತಿಕ ಸಂಪತ್ತಾಗಿ ಉಳುಸಬೇಕು ಎಂಬ ಉದ್ದೇಶ ಇದ್ದಲ್ಲಿ, ನಮ್ಮ ಕೆಂದ್ರೀಕೃತ ದೃಷ್ಟಿ ನಮ್ಮ ಮಕ್ಕಳ ಮೇಲಿರಬೇಕು. ಇವತ್ತಿನ ಮಕ್ಕಳನ್ನು ಸೂಕ್ತ ರೀತಿಯಲ್ಲಿ ನಾವು ತಯಾರು ಮಾಡಿಲ್ಲ ಅಂದ್ರೆ ಅದರಷ್ಟು ದೊಡ್ಡ ದೇಶದ್ರೋಹದ ಕೆಲಸ ಇನ್ನೊಂದಿಲ್ಲ. ಇದರಲ್ಲಿ ಶಿಕ್ಷಕರ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಪಾಲಕರದ್ದೂ ಇದೆ. ಇದನ್ನರಿತು ನಾವು ಕೆಲಸ ಮಾಡಬೇಕು ಇಲ್ಲದಿದ್ದರೆ ನಾವು ರಾಕ್ಷಸರ ಕೈಗೆ ದೇಶವನ್ನು ಕೊಡಬೇಕಾಗುತ್ತದೆ.

ಶಿಕ್ಷಣದಲ್ಲಿ ದೇಶಪ್ರೇಮ, ಆತ್ಮವಿಶ್ವಾಸ, ಆತ್ಮಗೌರವ ಇವುಗಳು ಇಲ್ಲ ಅಂತಾದ್ರೆ ಆ ಶಿಕ್ಷಣ ವ್ಯರ್ಥ, ಮಕ್ಕಳಲ್ಲಿ ದೈವ ಶೃದ್ಧೆ, ಧರ್ಮ ಜಾಗೃತಿ, ಪರಿಸರ ಪ್ರೇಮ, ಸಹಜೀವನವನ್ನು ಬೆಳೆಸಬೇಕು. ಇವುಗಳಿಂದ ಅವರೆಲ್ಲ ಸಮಾಜದ ಸಭ್ಯನಾಗರಿಕರಾಗಬಹುದು, ದೇಶದ ಹೆಮ್ಮೆಯ ಪ್ರಜೆಗಳಾಗಬಹುದು ಎಂದರು.

ಇದಕ್ಕೂ ಮೊದಲು ಮಾತಾಡಿದ ಶ್ರೀಭಾರತಿ ವಿದ್ಯಾಲಯದ ಚೇರಮೆನ್ ಶ್ರೀ ಎಂ.ಜಿ.ಹೆಗಡೆ ಅವರು, ನಮ್ಮ ಶಾಲೆಯಲ್ಲಿ ವಿಧ್ಯಾಭ್ಯಾಸಕ್ಕೆ ಹಾಗೂ ಅವರಲ್ಲಿರುವ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹದಾಯಕವಾದಂತಹ ವಾತಾವರಣ ಹಾಗೂ ಬೆನ್ನು ತಟ್ಟಿ ಬೆಳೆಸುವಂತಹ ಕ್ರಮ ನಡೆದುಕೊಂಡು ಬರುತ್ತಾ ಇದೆ. ಮುಂದೆಯೂ ನಡೆದುಕೊಂಡು ಹೋಗುತ್ತದೆ. ಮುಂದಿನ ವರ್ಷಕ್ಕೆ ಎರಡು ಪ್ರಮುಖ ಯೋಜನೆಗಳನ್ನು ಹಾಕಿಕೊಂಡಿದ್ದು , ಮೊದಲನೆಯದಾಗಿ ಲಲಿತಕಲೆಗಳ ತರಬೇತಿಗಾಗಿ ಹಸ್ಥಳಾವಕಾಶ ಒದಗಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಭಾರತೀಯ ಮೊಲ್ಯಗಳನ್ನು ತುಂಬಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು. ಐಸಿಎಸ್ಸಿ ವಿಭಾಗದ ಶ್ರೀಮತಿ ದೀಪಾರಾಣಿ ಸ್ವಾಗತಿಸಿದರು ಶಾಲೆಯ ಪ್ರಾಧ್ಯಾಪಕಿ ಶ್ರೀಮತಿ ಗಾಯತ್ರಿ ಹೆಗಡೆ ನಿರೂಪಿಸಿದರು. ರಾಜರಾಜೇಶ್ವರಿ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಟ್ಟೇಗೌಡರು ಉಪಸ್ಥಿತರಿದ್ದರು

Facebook Comments