ಪೆರಿಯ, ಕಾಸರಗೋಡು, 22-ಸೆ-2013:

ಈ ಕಾರ್ಯಕ್ರಮ ಒಂದು ಅದ್ಭುತ. ಎಲ್ಲ ಜಾತಿ, ರಾಜಕೀಯ ಪಕ್ಷಗಳ ಉಪಸ್ಥಿತಿ ಈ ಕಾರ್ಯಕ್ರಮದ ಸಂದೇಶ. ಗೋವುವೂ ಹಾಗೆಯೇ, ಅದೂ ಕೂಡಾ ಸೆಕ್ಯುಲರ್.
ಯಾವುದೇ ಬೇಧಭಾವವಿಲ್ಲದೆ ಗೋವು, ಹಾಲು ನೀಡುತ್ತದೆ. ಅದರ ಉಪಸ್ಥಿತಿ ಎಲ್ಲರನ್ನು ನಿರಾಮಯಗೊಳಿಸಲು ಗೋವು ನೆರವು ನೀಡುತ್ತದೆ.
ಅಂಗವೈಕಲ್ಯದ ನಡುವೆಯೂ ಪರಿಶ್ರಮಪಟ್ಟು ಪದವಿ ಪರೀಕ್ಷೆಯಲ್ಲಿ ರೇಂಕ್ ಗಳಿಸಿದ ಜಿಜೇಶ್ ಬಗ್ಗೆ ನಮಗೆ ತುಂಬ ಹೆಮ್ಮೆ ಇದೆ.
ಇಂತಹ ಅನೇಕ ಪೀಡಿತರನ್ನು ಸಮಾಜದ ಪ್ರಗತಿಗಾಗಿ ಮುನ್ನಡೆಸಲು ಮಠ ಯೋಜನೆಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ನಿರಾಮಯ ಕಾರ್ಯಕ್ರಮದ ಹಿಂದೆ ಅನೇಕರ ಪರಿಶ್ರಮವಿದೆ.
ಯೋಜನೆಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇವೆ. ಕೇಂದ್ರಸರಕಾರದ ಆಯುಷ್ ಸಂಸ್ಥೆಯೂ ಕೂಡಾ ಗೋಮೂತ್ರ ಇತ್ಯಾದಿ ಪಂಚಗವ್ಯ ಉತ್ಪನ್ನಗಳನ್ನು ಅಂಗೀಕರಿಸಿದೆ.
ಆದ್ದರಿಂದ ಪಂಚಗವ್ಯ ಉತ್ಪನ್ನಗಳನ್ನು ಬಳಸಿ, ಎಂಡೋಸಲ್ಪಾನ್ ಪೀಡಿತರನ್ನು ಕ್ಷೇಮದಿಂದ ಇರಿಸುವ ‘ನಿರಾಮಯ’ ಯೋಜನೆ ಯಶಸ್ವಿಯಾಗುತ್ತದೆ.” ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಅಭಿಪ್ರಾಯಪಟ್ಟರು.

ಅವರು 22-09-2013 ಭಾನುವಾರ ಪುಲ್ಲೂರು ಪೆರಿಯ ಗ್ರಾಮ ಪಂಚಾಯತು ಮತ್ತು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಮಾರ್ಗದರ್ಶನದಲ್ಲಿ “ಮಾ ಫೌಂಡೇಶನ್” ಸಂಸ್ಥೆಯು ಪುಲ್ಲೂರು ಪೆರಿಯ ಗ್ರಾಮ ಪಂಚಾಯತಿನ ಪೆರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಿದ “ನಿರಾಮಯ-೨೦೧೩” ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ಅನುಗ್ರಹಿಸುತ್ತಿದ್ದರು.

Reported by:
Ravishankara Doddamani, Kasaragod

Facebook Comments Box