ಮುಳ್ಳೇರ್ಯ, 27.12.2015.
ಶ್ರೀ ರಾಮಚ೦ದ್ರಾಪುರ ಮಠದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನಿರ್ದೇಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲದ ಮಾಸಿಕ ಸಭೆಯು ಶ್ರೀ ಸತ್ಯ ನಾರಾಯಣ ಭಟ್ ಮೀನಗದ್ದೆ ಅವರ ನಿವಾಸದಲ್ಲಿ ಜರಗಿತು.

ಧ್ವಜಾರೋಹಣವಾಗಿ ಶಂಖಧ್ವನಿ, ಗುರುವಂದನೆಯೊಂದಿಗೆ ಸಭೆ ಆರಂಭವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಶ್ರೀ ಬಿ.ಜಿ. ರಾಂ ಭಟ್ ವಹಿಸಿದರು.
ಮಂಡಲ ಕಾರ್ಯದರ್ಶಿ ಸತ್ಯನಾರಾಯಣ ಭಟ್ಬ ಮೊಗ್ರ ಗತ ಸಭೆಯ ವರದಿ ನೀಡಿ ಸಭಾ ಸಂಯೋಜನೆ ಮಾಡಿದರು.
ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಅಶೋಕೆಯ ಮೂಲಮಠ ಪುನರ್ ನಿರ್ಮಾಣ ಸಮಿತಿಯ ಕಛೇರಿ ಕಾರ್ಯದರ್ಶಿ ಶ್ರೀ ಗಣೇಶ್ ಕೂಜಳ್ಲಿ ಅವರು ಅಶೋಕೆಯ ಮುಂದಿನ ಕಾರ್ಯಯೋಜನೆಗಳ ಕುರಿತು ಸವಿಸ್ಥಾರ ಮಾಹಿತಿಗಳನ್ನಿತ್ತರು. ಸಂಘಟನಾ ಕಾರ್ಯದರ್ಶಿ ಶ್ರೀ ಹರಿಪ್ರಸಾದ್ ಪೆರಿಯಾಪು ಶುಭಾಶಮ್ಸನೆಯಿತ್ತರು.

ಶ್ರೀ ಬಂಗಾರಡ್ಕ ಜನಾರ್ಧನ ಭಟ್ ಪೆರಾಜೆ ಮಾಣೀ ಮಠದ ವಾರ್ಷಿಕೋತ್ಸವದ ಕುರಿತು ವಿವರಣೆಗಳನ್ನಿತ್ತರು. ಮಂಡಲ ಕಾಮದುಘಾ ಸಂಚಾಲಕ ಗಣೇಶ ಭಟ್ ಮಂಡಲದಲ್ಲಿ ಸಂಚಾರೀ ಗೋಪೂಜೆಯ ಮಹತ್ವವನ್ನು ವಿವರಿಸಿದರು. ಸಹಾಯ ನಿಧಿ ಆಶ್ರಯದಲ್ಲಿ ಸುಮಂಗಲ ಭಟ್ ಅವರಿಗೆ ಎನ್ಮಕಜೆ ವಲಯದ ವತಿಯಿಂದ ಸಂಗ್ರಹಿಸಿದ ಮೊತ್ತವನ್ನು ಹಸ್ಥಾನತರಿಸಲಾಯಿತು.
ವಿಭಾಗ ಪ್ರಮುಖರು, ವಲಯ ಪದಾಧಿಕಾರಿಗಳು ವರದಿಗಳನ್ನಿತ್ತರು. ರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

ಸಚಿತ್ರ ವರದಿ:
ಶ್ರೀ ಗೋವಿಂದ ಭಟ್, ಬಳ್ಳಮೂಲೆ. (ಪ್ರಸಾರ ಪ್ರಧಾನರು – ಮುಳ್ಳೇರ್ಯ ಮಂಡಲ)

 

Facebook Comments