ಬೆಂಗಳೂರು : ಗೋರಕ್ಷಕರಿಗೆ ನಮ್ಮ ಬೆಂಬಲವಿದೆ, ಗೋರಕ್ಷಣೆಯನ್ನು ನಾವು ಬೆಂಬಲಿಸುತ್ತೇವೆ ಆದರೆ ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸೆಗೆ ನಮ್ಮ ಸಹಮತವಿಲ್ಲ. ಸರ್ಕಾರಗಳು ಸರಿಯಾಗಿ ಕೆಲಸ ನಿರ್ವಹಿಸಿದರೆ, ಗೋರಕ್ಷಕರಿಗೆ ಕೆಲಸವೇ ಇರುವುದಿಲ್ಲ. ಭಯೋತ್ಪಾದನಾ ನಿಗ್ರಹದಳ, ನಕ್ಸಲ್ ನಿಗ್ರಹ ದಳ ಇದ್ದಂತೆ ಅಮೂಲ್ಯವಾದ ಗೋಮಾತೆಯ ರಕ್ಷಣೆಗೂ ಒಂದು ತಂಡವನ್ನು ರಚಿಸಿ ಗೋಸಂರಕ್ಷಣೆಯಲ್ಲಿ ಸರ್ಕಾರವೇ ತೊಡಗಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಗೋವನ್ನು ಮಾರುವವರು ಕೆಲವರು, ಕಡಿಯುವವರು ಕೆಲವರು, ಆದರೆ ತಿನ್ನುವವರು ಇಡೀ ದೇಶ ಎಂಬಂತಾಗಿದೆ. ಬ್ರಿಟೀಷರು ಧರ್ಮಬ್ರಷ್ಟಗೊಳಿಸಲು ಗೋವಿನ ಕೊಬ್ಬನ್ನು ಮದ್ದು ಗುಂಡು ಬಳಸಿದರು, ಈಗಿನ ಪರಿಸ್ತಿತಿಯೂ ಹಾಗೆಯೇ ಆಗಿದೆ. ಗೋವಿನ ಕೊಬ್ಬು, ಮೂಳೆ, ಗೊರಸು, ಕೊಂಬು, ರಕ್ತ ಇತ್ಯಾದಿಗಳನ್ನು ಹಲವು ನಿತ್ಯೋಪಯೋಗಿ ವಸ್ತುಗಳಲ್ಲಿ ಬಳಸಲಾಗುತ್ತಿದೆ, ಹಲವು ವಸ್ತುಗಳಲ್ಲಿ ಕಲಬೆರಕೆ ಮಾಡಲಾಗುತ್ತಿದೆ, ಬ್ರಿಟೀಷರಿಗೂ ಹಾಗೂ ಈಗ ದೇಶವನ್ನು ಆಳುತ್ತಿರುವವರಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ ಶ್ರೀಗಳು, ಗೋವಿನ ಅವಯವಗಳನ್ನು ಬಳಸುವ ವಸ್ತುಗಳಲ್ಲಿ ಕಡ್ಡಾಯವಾಗಿ ಈ ಕುರಿತು ಸ್ಪಷ್ಟವಾಗಿ ನಮೂದಿಸಬೇಕು ಎಂದು ಆಗ್ರಹಿಸಿದರು.

ಮಂಗಳೂರಿನ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮಿಗಳು ಸಂತಸಂದೇಶ ನೀಡಿ, ಸುಡಾನ್ ದೇಶದಲ್ಲಿ ಜನರು ಗೋಮೂತ್ರದಿಂದ ಸ್ನಾನ ಮಾಡುತ್ತಾರೆ, ಹಸುಗಳನ್ನು ಕತ್ತಿ ಹಿಡಿದುಕೊಂಡು ರಕ್ಷಿಸುತ್ತಾರೆ, ನಮ್ಮ ದೇಶದಲ್ಲಿ ಯಾಕೆ ಸಾಧ್ಯವಿಲ್ಲ ಎಂದ ಅವರು, ಗೋರಕ್ಷಕರಿಗೆ ತಮ್ಮ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದರು.

ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಗೋಸೇವಾ ಆಯೋಗದ ಮಾಜೀ ಅಧ್ಯಕ್ಷ ಎಂ ಬಿ ಪುರಾಣಿಕ್ ಹಾಗೂ ಸಿಗಂದೂರಿನ ಗೀತಾ ಶೇಷಗಿರಿ ಭಟ್ ಅವರುಗಳಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಶ್ರೀಭಾರತೀಪ್ರಕಾಶನವು ಹೊರತಂದ ಗೋಭಾರತ ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ವಜ್ರದೇಹಿ ಮಠದ ಶ್ರೀಗಳು ಲೋಕಾರ್ಪಣೆ ಮಾಡಿದರು. . ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಲೋಕಾರ್ಪಣೆಯಾದ ಪುಸ್ತಕದ ಲೇಖಕರಾದ ಮಧು ದೊಡ್ಡೇರಿ ಹಾಗೂ ಯು ಬಿ ಪವನಜ ಅವರುಗಳು ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರಿಕ್ಷೇತ್ರ ಸಿಗಂದೂರಿನ ಶೇಷಗಿರಿ ಭಟ್ ದಂಪತಿಗಳು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

ಗೋವಿನ ಕೊಬ್ಬು, ಮೂಳೆ, ಗೊರಸು, ಕೊಂಬು, ರಕ್ತ ಇತ್ಯಾದಿಗಳನ್ನು ಹಲವು ನಿತ್ಯೋಪಯೋಗಿ ವಸ್ತುಗಳಲ್ಲಿ ಬಳಸಲಾಗುತ್ತಿದೆ, ಹಲವು ವಸ್ತುಗಳಲ್ಲಿ ಕಲಬೆರಕೆ ಮಾಡಲಾಗುತ್ತಿದೆ, ಬ್ರಿಟೀಷರಿಗೂ ಹಾಗೂ ಈಗ ದೇಶವನ್ನು ಆಳುತ್ತಿರುವವರಿಗೂ ಏನು ವ್ಯತ್ಯಾಸ? ಗೋವಿನ ಅವಯವಗಳನ್ನು ಬಳಸುವ ವಸ್ತುಗಳಲ್ಲಿ ಕಡ್ಡಾಯವಾಗಿ ಈ ಕುರಿತು ಸ್ಪಷ್ಟವಾಗಿ ನಮೂದಿಸಬೇಕು.
– ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ

ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಗೋಸೇವಾ ಆಯೋಗದ ಮಾಜೀ ಅಧ್ಯಕ್ಷ ಎಂ ಬಿ ಪುರಾಣಿಕ್ ಅವರುಗಳಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು.

ಶ್ರೀಭಾರತೀಪ್ರಕಾಶನವು ಹೊರತಂದ ಗೋಭಾರತ ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ವಜ್ರದೇಹಿ ಮಠದ ಶ್ರೀಗಳು ಲೋಕಾರ್ಪಣೆ ಮಾಡಿದರು. ಶ್ರಿಕ್ಷೇತ್ರ ಸಿಗಂದೂರಿನ ಶೇಷಗಿರಿ ಭಟ್ ದಂಪತಿಗಳು ಹಾಗೂ ಎಂ ಬಿ ಪುರಾಣಿಕ್ ಉಪಸ್ಥಿತಿ.

30.08.2016 ರ ಕಾರ್ಯಕ್ರಮ:
ಬೆಳಗ್ಗೆ 7.00 : ಕಾಮಧೇನು ಹವನ
ಬೆಳಗ್ಗೆ 9.00: ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
ಅಪರಾಹ್ನ 3.00 :
ಗೋಸಂದೇಶ : ಜೀವನ್ ಕುಮಾರ್
ಲೋಕಾರ್ಪಣೆ : ಪುಸ್ತಕ :
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಜೀವನ್ ಕುಮಾರ್
ಸಂತ ಸಂದೇಶ : ಪೂಜ್ಯ ಶ್ರೀ ಈಶ್ವರಾನಂದ ಪುರಿ ಸ್ವಾಮಿಜಿ, ಕಾಗಿನೆಲೆ ಪೀಠ, ಹೊಸದುರ್ಗ
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ : ದಾಸರ ಪದ – ಭಾನುಸಿಂಹ ಹಾಗು ಸಂಗಡಿಗರು
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

Facebook Comments