ತಮಗಿರುವ, ಶ್ರೀ ರಾಮಚಂದ್ರಾಪುರ ಸಂಸ್ಥಾನಕ್ಕೆ ಇರುವ ಅದೆಸ್ಟೋ ಬಿರುದುಗಳ ಪೈಕಿ ತಮಗೆ ಅತ್ಯಂತ ಪ್ರಿಯವಾಗುವುದು ಅಂದರೆ ಪ್ರೀತಿಯ ಸಂಸ್ಥಾನ ಎಂಬುದು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳಾದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ತಿಳಿಸಿದರು . ದಿನಾಂಕ ೩೧ ಆಗಸ್ಟ್ ರಂದು ನಡೆದ ಸಾಗರದ ಪ್ರಸನ್ನ ಮಾವಿನಕುಳಿ ಯವರಿಂದ ರಚಿತವಾದ, ಒಪ್ಪಣ್ಣ ಪ್ರಕಾಶನದಿಂದ ಪ್ರಕಾಶಿತವಾದ ಶ್ರೀಗಳ ಕುರಿತಾದ ಮೊದಲ ಕ್ರತಿ ನಮ್ಮ ಪ್ರೀತಿಯ ಶ್ರೀ ಸಂಸ್ಥಾನ ಕೃತಿ ಯ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು . ಎಂದೂ ಕೂಡ ನಮ್ಮ ಬಗ್ಗೆ ಹೇಳಿಕೊಳ್ಳುವುದು ನಮಗೆ ಅಸ್ಟೊಂದು ಸಮ್ಮತವಲ್ಲ – ನಮ್ಮ ಎಲ್ಲ ಕಾರ್ಯಗಳ ಹಿಂದೆ ರಾಮ ಮತ್ತು ನಮ್ಮ ಗುರು ಪರಂಪರೆ ಕಾರಣ ಎಂಬ ನಂಬಿಕೆಯೇ ಇದಕ್ಕೆ ಕಾರಣ . ಆದರೆ ನಮ್ಮ ಅತ್ಯಂತ ಪ್ರೀತಿಯ ಪ್ರಸನ್ನ ಆತನ ಮತ್ತು ತಮ್ಮೆಲ್ಲರ ಪ್ರೀತಿಯ ಗುರುಗಳಿಗೊಸ್ಕರ ಪ್ರೀತಿಯಿಂದ ನಮ್ಮಿಂದ ಅತ್ಯಂತ ಕಷ್ಟ ಪಟ್ಟು ಒಪ್ಪಿಗೆ ತೆಗೆದು ಕೊಂಡು ಅತ್ಯಂತ ಸುಂದರ ವಾಗಿ ಬರೆದ ಈ ಕ್ರತಿಯನ್ನು ತಾವೆಲ್ಲರೂ ಅಸ್ಟೆ ಪ್ರೀತಿಯಿಂದ ಓದಬೇಕು ಮತ್ತು ಎಲ್ಲವನ್ನೂ ಬಿಟ್ಟು ಸನ್ಯಾಸ ಆಶ್ರಮ ಸ್ವೀಕರಿಸಿದ ತಮಗೆ ಉಳಿದಿರುವುದು ಮತ್ತು ತಮ್ಮೆಲ್ಲರಿಂದ ಅಪೇಕ್ಷಿಸುವುದು ಇಂತಹ ನಿಷ್ಕಲ್ಮಶ ಪ್ರೀತಿ ಅಭಿಮಾನ ಮಾತ್ರ ಎಂದು ಸಂದೇಶ ನೀಡಿದರು.

ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಆನಂದವನದ ಶ್ರೀ ಗುರು ದತ್ತ ಚಕ್ರವರ್ತಿಗಳು , ಶ್ರೀ ರಾಘವೇಶ್ವರರು ಎಲ್ಲರ ಮನಸ್ಸಿನಲ್ಲಿ ಮಾತ್ರವಲ್ಲ ಹ್ರದಯದಲ್ಲಿ ಮನೆ ಮಾಡಿದ್ದಾರೆ – ಆದ್ದರಿಂದ ನಮ್ಮ ಪ್ರೀತಿಯ ಸಂಸ್ಥಾನ ಎನ್ನುವ ಹೆಸರು ಅವರ ಕುರಿತಾದ ಮೊದಲ ಕ್ರತಿ ಗೆ ಅತ್ಯಂತ ಸೂಕ್ತ ಎಂದರಲ್ಲದೆ ಶ್ರೀ ಸಂಸ್ಥಾನದ ಜೊತೆಗೆ ಲಕ್ಷ ಲಕ್ಷ ಜನ ಎಂದೆಂದಿಗೂ ಇದ್ದಾರೆ ಎನ್ನುವದಕ್ಕೆ ಇಲ್ಲಿ ಇಂದು ಸೇರಿದ ಜನ ಸ್ತೋಮವೇ ಸಾಕ್ಷಿ – ಅಲ್ಲದೆ ಪ್ರಸನ್ನ ಮಾವಿನಕುಳಿ ತನ್ನ ತಲೆ ತಲೆ ಮಾರುಗಳಿಂದ ಶ್ರೀ ಪೀಠದ ಜೊತೆಗೆ ಇರುವ ಸಂಭಂದದ ಕಾರಣ ದಿಂದ ಒಂದು ಉತ್ತಮ ಕ್ರತಿ ಯನ್ನು ಬರೆದಿದ್ದು ಅದು ಅತ್ಯಂತ ತೂಕವಾಗಿದೆ ಎಂಬ ಮಾತನ್ನಾಡಿದರು

ಪುಸ್ತಕದ ಕುರಿತಾಗಿ ದೀರ್ಘವಾಗಿ ಮಾತನಾಡಿದ ವಕೀಲರೂ ನ್ಯಾಯವಾದಿಗಳು ಆದ ಶ್ರೀ ಎಂ ಅರ್ ಸತ್ಯನಾರಾಯಣ ರವರು , ಪುಸ್ತಕವನ್ನು ಪ್ರಸನ್ನ ಅನುಭವಿಸಿ ಬರೆದಿದ್ದರಿಂದ ಭಾವ ಇದರಲ್ಲಿ ತುಂಬಿದೆ – ಇದು ಭಾವದಿಂದ ಕೂಡಿದೆಯಾದ್ದರಿಂದ ಭಾಷೆ ಕೂಡ ಅತ್ಯಂತ ಸರಳವಾಗಿದ್ದು ಓದಿಸಿಕೊಂಡು ಹೋಗುತ್ತದೆ – ಅಮೇರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ತರುಣ ಇಂತಹ ಒಂದು ಕ್ರತಿ ರಚಿಸಿದ್ದಾನೆ ಎಂದರೆ ಸಾಮಾನ್ಯ ಜನರಿಗೆ ಶ್ರೀಗಳ ಮೇಲೆ ಸಾಮಾನ್ಯ ಜನರಿಗೆ ಇರುವ ಪ್ರೀತಿ ಮತ್ತು ಅಭಿಮಾನ ಏನು ಎಂದು ಅರ್ಥವಾಗುತ್ತದೆ ಎಂದರು . ಅಲ್ಲದೆ ಇವತ್ತಿನ ಸಂಕೀರ್ಣ ಸಂದರ್ಭ ಮತ್ತು ಸಾಮಾನ್ಯ ಜನರನ್ನೂ ಆಕರ್ಷಿಸುವ ಕೃತಿ ಯಲ್ಲಿ ಪ್ರಸ್ತಾಪಿಸಿದ ಶ್ರೀಗಳ ಹಲವು ಗುಣಗಳ ಬಗೆಗೆ ಅತ್ಯಂತ ದೀರ್ಘವಾಗಿ ಮಾತನಾಡಿದರು

ಪೂಜ್ಯ ಗಂವ್ಹಾರ ಸ್ವಾಮೀಜಿ , ಯೆಲ್ಲಾಪುರದ ಶಾಸಕರಾದ ಶಿವರಾಮ ಹೆಬ್ಬಾರ್ ಸೇರಿದಂತೆ ಹತ್ತಾರು ಸಾವಿರ ಗುರುಭಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು – ಅಲ್ಲದೆ ಎಂತಹ ಸಂದರ್ಭದಲ್ಲೂ ಗುರುಗಳ ಜೊತೆ ತಾವಿದ್ದೇವೆ ಎಂಬ ಘೋಷಣೆಗಳ ಮುಖಾಂತರ ಶ್ರೀಗಳಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದರು.

~

ಧ್ವನಿ:

ಶ್ರೀಯುತ ಎಂ.ಆರ್.ಸತ್ಯನಾರಾಯಣರ ಮಾತುಗಳು:

 

~

Facebook Comments