ಆದಿ ಶಂಕರಾಚಾರ್ಯರ ಜನ್ಮ ನಾಡಿನಲ್ಲಿ ಗೋಪೂಜೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ದೇಶೀಯ ತಳಿಯ ಗೋವಿನ ಮೂಲಕ ಕೃಷಿಯನ್ನು ಮಾಡಿದರೆ ಒಳ್ಳೆಯ ಫಸಲನ್ನು ಪಡೆಯುವುದರೊಂದಿಗೆ, ಉತ್ತಮ ಆರೋಗ್ಯದಿಂದ ಬಾಳಬಹುದು.
– ಮುಹಮ್ಮದ್ ಫೈಜ್ ಖಾನ್

04-01-2016: ಪೆರ್ಲ : ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಉತ್ತರಪ್ರದೇಶ ವಾರಣಾಸಿಯ ಖ್ಯಾತ ಗೋಕಥಾಕಾರ ಮುಹಮ್ಮದ್ ಫೈಝ್ ಖಾನ್ ಅವರು ಸೋಮವಾರ ಭೇಟಿಯಿತ್ತು ಗೋಶಾಲೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ತಮ್ಮ ವಾಹನದಿಂದ ಇಳಿದ ಕೂಡಲೇ ಚಪ್ಪಲಿಯನ್ನು ಬದಿಗಿರಿಸಿ ಭಕ್ತಿಭಾವದಿಂದ ಗೋವುಗಳ ಮೈತಡವಿ ಸಂತಸಪಟ್ಟರು. ಲಿಮ್ಕಾ ದಾಖಲೆಯ ಗೋವು `ಬಂಗಾರಿ’ಗೆ ಗೋಗ್ರಾಸವನ್ನಿತ್ತು ಆರತಿಯನ್ನು ಬೆಳಗಿ, ತಿಲಕವನ್ನಿಟ್ಟು ಗೋಪೂಜೆಯನ್ನು ನೆರವೇರಿಸಿದರು.
ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಹಿಮಾಲಯದ ಗೋಮುಖದಿಂದ ಕನ್ಯಾಕುಮಾರಿಯ ತನಕ ಗೋವಿನ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪಾದಯಾತ್ರೆಯನ್ನು ಕೈಗೊಳ್ಳಲಿದ್ದೇನೆ ಎಂದು ಘೋಷಿಸಿದರು. ಇದಕ್ಕೆ ಗೋಶಾಲೆಯ, ಗೋಭಕ್ತರು ಸಂಪೂರ್ಣ ಸಹಕಾರವನ್ನು ನೀಡಬೇಕು ಎಂದು ಹೇಳಿದರು.

ಗೋಶಾಲೆಯ ಗವ್ಯೋತ್ಪನ್ನ ತಯಾರಿಕಾ ಘಟಕವನ್ನು ವೀಕ್ಷಿಸಿದರು. ಗೋಶಾಲೆಯ ವತಿಯಿಂದ ಶಾಲು ಹೊದೆಸಿ ಗವ್ಯೋತ್ಪನಗಳನ್ನಿತ್ತು ಗೌರವಿಸಲಾಯಿತು. ಯುವಾಬ್ರಿಗೇಡ್ ಕನರ್ಾಟಕ ರಾಜ್ಯ ಪ್ರಚಾರ ಪ್ರಮುಖ್ ದಯಾ ಆಕಾಶ್, ಗೋಶಾಲೆಯ ಕಾರ್ಯದಶರ್ಿ ಕೃಷ್ಣಪ್ರಸಾದ ಬನಾರಿ, ಕೋಶಾಧ್ಯಕ್ಷ ಶ್ರೀಧರ ಭಟ್ ತೆಂಕಮಾಣಿಪ್ಪಾಡಿ, ಸತ್ಯಪ್ರಕಾಶ್ ಬಾಳೆಮೂಲೆ, ವಿನಯಕೃಷ್ಣ ಕಾವಿನಮೂಲೆ, ಗಣರಾಜ ಕಡಪ್ಪು, ಮುಳ್ಳೇರಿಯ ಮಂಡಲ ಕಾಮದುಘಾ ಪ್ರಧಾನ ಹಾಗೂ ಚಲಿಸುವ ಗೋ ದೇವಾಲಯದ ರೂವಾರಿ ಗಣೇಶ್ ಭಟ್ ಮುಣ್ಚಿಕ್ಕಾನ ಮುಂತಾದವರು ಉಪಸ್ಥಿತರಿದ್ದರು.

ವರದಿ : ಶ್ಯಾಮಪ್ರಸಾದ ಸರಳಿ.

Facebook Comments Box