ಗೋವಿಗೂ ಬದುಕುವ ಹಕ್ಕಿದೆ – ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಬೆಂಗಳೂರು: ನೂರಾರು ಜೀವಿಗಳಿಗೆ ಒಳಿತೆಸಗುವ ಈ ಪ್ರಪಂಚದಲ್ಲಿ ಬದುಕುವ ಹಕ್ಕು ನಮ್ಮೆಲ್ಲರಿಗಿಂತ ಜಾಸ್ತಿ ಗೋವಿಗೆ ಇದೆ. ಅಂತಹ ಪರೋಪಕಾರಿ ಜೀವಿಯ ಜೀವಕ್ಕೆ ಕೈ ಹಾಕಬಾರದು ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಯಾರು ಬದುಕಿದ್ದರಿಂದ ಇನ್ನೊಬ್ಬರು ಸಾಯಬೇಕಾಗುತ್ತದೋ, ಅವರು ಬದುಕಲು ಯೋಗ್ಯರಲ್ಲ. ಯಾರು ಬದುಕಿದ್ದರಿಂದ ಇನ್ನೊಬ್ಬರಿಗೆ ಸಹಾಯ ಆಗುವುದಿಲ್ಲವೋ ಅವರು ಸ್ವಲ್ಪ ಕಾಲ ಬದುಕಲು ಯೋಗ್ಯರು. ಯಾರ ಬದುಕಿನಿಂದ ಬೇರೆಯವರು ಬದುಕಲು ಸಹಾಯವಾಗುತ್ತದೋ ಅವರು ಸರ್ವಥಾ ಬದುಕಲು ಯೋಗ್ಯರು. ಗೋವು ಈ ಮೂರನೆ ಸಾಲಿಗೆ ಸೇರುವಂತದ್ದು ಎಂದು ನುಡಿದರು.
ಸಮಾಜಕ್ಕೆ ಒಳಿತು ಮಾಡಲು ಹೊರಡುವವರು ವಿಷವನ್ನು ನುಂಗಲು ಸಿದ್ಧರಿರಬೇಕು. ಒಳಿತಿನ ಬದುಕು ಸಂಘರ್ಷಮಯ, ಒಳಿತು ಅದನ್ನ ಬಯಸುವುದಿಲ್ಲ, ಆದರೆ ಕೆಡುಕು ಸುಮ್ಮನಿರುವುದಿಲ್ಲ. ಆದರೆ ಸಂಘರ್ಷದಿಂದ ಒಳಿತಿಗೆ ಹಾನಿಯಿಲ್ಲ, ಚಿನ್ನ ಮತ್ತಷ್ಟು ಹೊಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆಂಗೇರಿ ಓಂಕಾರ ಹಿಲ್ಸ್ನ ಓಂಕಾರಾಶ್ರಮದ ಶ್ರೀಮಧುಸೂದನಾನಂದಪುರಿ ಸ್ವಾಮೀಜಿ, ಪರಿವ್ರಾಜಕನಾದ ಒಂದು ಹಸುವಿಗೆ ನಮಸ್ಕಾರ ಮಾಡಿದರೆ ೩೩ಕೋಟಿ ದೇವತೆಗಳಿಗೆ ನಮಿಸಿದಂತೆ. ಗೋಸೇವೆಯಿಂದ ರೋಗರುಜಿನಗಳು ನಾಶವಾಗಿ ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ. ತಪಸ್ಸು ಅನುಷ್ಠಾನಗಳಿಗೆ ಅತಿ ಶೀಘ್ರ ಫಲ ಬರುವ ಸ್ಥಾನ ಎಂದರೆ ಅದು ಗೋಶಾಲೆ ಎಂದರು.
ಹಾಲನ್ನು ಮಾರಿಯೇ, ಗೋಸೇವೆಯ ಮೂಲಕ ಶಾಲೆಯನ್ನು ಸ್ಥಾಪಿಸಿದ ನಾರಾಯಣ ಸ್ವಾಮೀಜಿಗೆ ಗೋ ಸೇವಾಪುರಸ್ಕಾರವನ್ನು ನೀಡಲಾಯಿತು.
ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ಮಧುಸೂದನಾನಂದಪುರಿಗಳು ಹಾಗೂ ಸ್ಯಮಂತಕೋಪಾಖ್ಯಾನ ಪುಸ್ತಕವನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು.
ಮೂರೂರು ಕಲ್ಲಬ್ಬೆ, ಉಪ್ಪಿನಪಟ್ಟಣ, ವಾಲಗಳ್ಳಿ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ರವೀಂದ್ರ ಭಟ್ ಸೂರಿ ಹಾಗೂ ಲೋಹಿತ ಶರ್ಮಾ ನಿರೂಪಿಸಿದರು. ಅನಂತರ ಮೇಘಾ ಹರಿಶಂಕರ್ ಮತ್ತು ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
ಸಮಾಜಕ್ಕೆ ಒಳಿತು ಮಾಡಲು ಹೊರಡುವವರು ವಿಷವನ್ನು ನುಂಗಲು ಸಿದ್ಧರಿರಬೇಕು. ಒಳಿತಿನ ಬದುಕು ಸಂಘರ್ಷಮಯ, ಒಳಿತು ಅದನ್ನ ಬಯಸುವುದಿಲ್ಲ, ಆದರೆ ಕೆಡುಕು ಸುಮ್ಮನಿರುವುದಿಲ್ಲ. ಆದರೆ ಸಂಘರ್ಷದಿಂದ ಒಳಿತಿಗೆ ಹಾನಿಯಿಲ್ಲ, ಚಿನ್ನ ಮತ್ತಷ್ಟು ಹೊಳೆಯುತ್ತದೆ – ಶ್ರೀರಾಘವೇಶ್ವರಶ್ರೀಗಳು, ಶ್ರೀರಾಮಚಂದ್ರಾಪುರಮಠ

ಗೋಸೇವೆಯಿಂದ ರೋಗರುಜಿನಗಳು ನಾಶವಾಗಿ ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ. ತಪಸ್ಸು ಅನುಷ್ಠಾನಗಳಿಗೆ ಅತಿ ಶೀಘ್ರ ಫಲ ಬರುವ ಸ್ಥಾನ ಎಂದರೆ ಅದು ಗೋಶಾಲೆ
– ಶ್ರೀಮಧುಸೂದನಾನಂದಪುರಿ ಸ್ವಾಮೀಜಿ, ಓಂಕಾರಾಶ್ರಮ

• ನಾರಾಯಣ ಸ್ವಾಮೀಜಿ ಇವರಿಗೆ ಗೋ ಸೇವಾ ಪುರಸ್ಕಾರ ಪ್ರದಾನ
• ಶ್ರೀಭಾರತೀಪ್ರಕಾಶನದ ‘ಸ್ಯಮಂತಕೋಪಾಖ್ಯಾನ’ ಪುಸ್ತಕ ಲೋಕಾರ್ಪಣೆ
• ಓಂಕಾರಾಶ್ರಮದ ಶ್ರೀಮಧುಸೂದನಾನಂದಪುರಿ ಸ್ವಾಮೀಜಿ ಉಪಸ್ಥಿತಿ

09.08.2016 ರ ಕಾರ್ಯಕ್ರಮಗಳು:

 • ಬೆಳಗ್ಗೆ 7.00 ಕಾಮಧೇನು ಹವನ
 • ಬೆಳಗ್ಗೆ 9.00 : ಕುಂಕುಮಾರ್ಚನೆ
 • ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
 • ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
 • ಅಪರಾಹ್ನ 3.30 :
  ಗೋಸಂದೇಶ : ಹಸಿರು ಹುಲ್ಲಿನ ತಳಿಗಳು – ಡಾ. ವೆಂಕಟರಮಣ ಜಿ ಶೆಟ್ಟಿ
  ಲೋಕಾರ್ಪಣೆ : ಪ್ರಕೃತಿ-ಪಾಠ ಪುಸ್ತಕ
  ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
  ಗೋಸೇವಾಪುರಸ್ಕಾರ : ಭಾಜನರು – ಡಾ. ವೆಂಕಟರಮಣ ಜಿ ಶೆಟ್ಟಿ
  ಸಂತ ಸಂದೇಶ : ಪರಮಪೂಜ್ಯ ಷ. ಬ್ರ. ಶ್ರೀ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ
  ಮಹಾಸ್ವಾಮಿಗಳು, ಮಾನ್ವಿ, ರಾಯಚೂರು.
  ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
 • ಸಂಜೆ: 5.00 : ಕಲಾರಾಮ – ಭಜನೆ : ಶ್ರೀಮಾತಾ ಹವ್ಯಕ ಭಜನಾ ಸಂಘ
 • ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
 • ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ
Facebook Comments