LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

09-ಸೆಪ್ಟೆಂಬರ್ -2016 : ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಗೋಚಾತುರ್ಮಾಸ್ಯ : ದಿನ 53– Report

Author: ; Published On: ಶುಕ್ರವಾರ, ಸೆಪ್ಟೆಂಬರ 9th, 2016;

Switch to language: ಕನ್ನಡ | English | हिंदी         Shortlink:

ಬೆಂಗಳೂರು : ಗೋವುಗಳಿಗೆ ಕೃತ್ರಿಮ ಗರ್ಭಧಾರಣೆ ಮಾಡುವುದು ಧಾರ್ಮಿಕತೆಗೆ ವಿರುದ್ಧ ಹೌದೋ ಅಲ್ಲವೋ ಅನ್ನುವುದಕ್ಕಿಂತ ಅದು ಮನುಷ್ಯತ್ವಕ್ಕೆ ವಿರುದ್ಧವಾಗಿದೆ. ತನ್ನಂತೆ ಪರರು ಎಂದು ಭಾವಿಸುವ ನಾವು ಗೋವುಗಳಿಗೆ ಮಾಡಿದಂತೆ, ಎಲ್ಲಾ ಮನುಷ್ಯರಿಗೆ ಕೃತ್ರಿಮ ಗರ್ಭಧಾರಣೆ ಮಾಡಲು ಒಪ್ಪುತ್ತೇವೆಯೇ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ  ಮಾತನಾಡಿ,  ಗೋವುಗಳಿಗೆ ಸಹಜ ಗರ್ಭಧಾರಣೆಗೆ ಅವಕಾಶಕೊಡದೆ, ಕೃತಕ ಗರ್ಭಧಾನ ಮಾಡುವುದು ಗೋವುಗಳ ಹಕ್ಕಿನ ಮೇಲಾಗುತ್ತಿರುವ ಆಕ್ರಮಣವಲ್ಲವೇ, ನಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ನ್ಯಾಯಾಲಯಗಳ ಮೆಟ್ಟಿಲೇರುವ ನಾವು ಗೋವುಗಳ ಹಕ್ಕನ್ನು ಕಸಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಶ್ರೀಗಳು, ಸಹಜತೆಗೆ ಶರಣಾಗಬೇಕು, ಅಸಹಜತೆ – ಮನುಷ್ಯನ ಹಸ್ತಕ್ಷೇಪ ಆದರೆ ಅದರಲ್ಲಿ ದೋಷಗಳು ಇದ್ದೇ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ದೇಶೀ ಹಸುಗಳಿಗೆ ಮಿಶ್ರತಳಿಯ ಧಾತುವನ್ನು ಬಳಸಿ ಕೃತಕ ಗರ್ಭಧಾನ ಮಾಡುವುದು ಅವೈಜ್ಞಾನಿಕವಾಗಿದ್ದು, ಸಣ್ಣ ತಳಿಯ ಹಸುಗಳಿಗೆ ದೊಡ್ಡ ಗಾತ್ರದ ಹಸುವಿನಿಂದ ಗರ್ಭವಾದರೆ ಕರು ಹೊರಬರಲಾಗದೇ ಹಸು-ಕರು ಎರಡೂ ದುರ್ಮರಣವನ್ನು ಹೊಂದುತ್ತದೆ, ಕೃತ್ರಿಮ ಗರ್ಭಧಾರಣೆ ಮಾಡುವಾಗ ಗರ್ಭಕೋಶಕ್ಕೂ ಹಾನಿಯಾಗುವ ಸಂಭವವಿರುತ್ತದೆ,  ಇದರಲ್ಲಿ ಯಶಸ್ಸಿನ  ಅಂಶವೂ ಸರಾಸರಿ 50% ಮಾತ್ರ ಆಗಿದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಬ್ರೂಸೆಲ್ಲೋಸಿಸ್ ಮುಂತಾದ ಅನೇಕ ರೋಗಗಳ ಮೂಲ ಕೃತ್ರಿಮ ಗರ್ಭಧಾರಣೆಯಿಂದ ಹುಟ್ಟಿದ ಮಿಶ್ರತಳಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ಇವೆಲ್ಲದರ ಜೊತೆಗೆ ಮಾನವತೆಯ ಆಧಾರದಮೆಲೆ ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀಮಠದ ಬಳಗ ಕೃತ್ರಿಮ ಗರ್ಭಧಾರಣೆಯನ್ನು ವಿರೋಧಿಸುತ್ತದೆ ಎಂದರು.

ಯಾದಗೀರಿ ಸೊಪ್ಪಿನ ಬಸವೇಶ್ವರ ಮಠದ ಪೂಜ್ಯ ಶ್ರೀ ಷ| ಬ್ರ| ಚನ್ನವೀರ ಸ್ವಾಮೀಜಿ ಹಾಗೂ ಶ್ರೀ ಷ.ಬ್ರ. ಗುರುಶಾಂತ ಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂತಸಂದೇಶ ನೀಡಿ,  ಶ್ರೀರಾಮಚಂದ್ರಾಪುರಮಠದ ಗೋಯಾತ್ರೆಗೆ ನಮ್ಮ ಬೆಂಬಲವಿದ್ದು, ಗೋವಿನ ಕುರಿತಾದ ಈ ಮಹಾ ಆಂದೋಲನಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕರೆನೀಡಿದರು.

ಯಕ್ಷಗಾನ ಕಲೆಯ ಮೂಲಕ ವಿಶಿಷ್ಟವಾಗಿ ಕಲೆಯಮೂಲಕವೂ ಗೋವಿನ ಕುರಿತಾಗಿ ಜಾಗೃತಿ ಮೂಡಿಸಲು ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿರುವ ಹೊಸನಗರದ ರಾಮಾರ್ಪಣ ಕಲಾವೇದಿಕೆ, ಮಾರುತೀಪುರ ಹಾಗೂ ಗೋಪ್ರೇಮಿ ನ್ಯಾಯವಾದಿ ಬಿ ಎಸ್ ಪೈ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಶ್ರೀಭಾರತೀಪ್ರಕಾಶನವು ಹೊರತಂದ ಗೃಹವಾಸ್ತು ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯವಹಿಸಿದ್ದ ಸಂತರು ಲೋಕಾರ್ಪಣೆ ಮಾಡಿದರು.  ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಗೋಪ್ರೀತಿಯ ಮಕ್ಕಳು ಎಂಬ ನಾಟಕವನ್ನು ಮಕ್ಕಳು ನಡೆಸಿಕೊಟ್ಟರು.

ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

ಯಕ್ಷಗಾನ ಕಲೆಯ ಮೂಲಕ ವಿಶಿಷ್ಟವಾಗಿ ಕಲೆಯಮೂಲಕವೇ ಗೋವಿನ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ಹೊಸನಗರದ ರಾಮಾರ್ಪಣ ಕಲಾವೇದಿಕೆ, ಮಾರುತೀಪುರ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು.

ಯಕ್ಷಗಾನ ಕಲೆಯ ಮೂಲಕ ವಿಶಿಷ್ಟವಾಗಿ ಕಲೆಯಮೂಲಕವೇ ಗೋವಿನ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ಹೊಸನಗರದ ರಾಮಾರ್ಪಣ ಕಲಾವೇದಿಕೆ, ಮಾರುತೀಪುರ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು.

ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋಸಂದೇಶವನ್ನು ನೀಡಿದರು.

ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋಸಂದೇಶವನ್ನು ನೀಡಿದರು.

10.09.2016ರ ಕಾರ್ಯಕ್ರಮ:

  • ಬೆಳಗ್ಗೆ 7.00 : ಕಾಮಧೇನು ಹವನ
  • ಬೆಳಗ್ಗೆ 9.00: ಕುಂಕುಮಾರ್ಚನೆ
  • ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
  • ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
  • ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
  • ಲೋಕಾರ್ಪಣೆ : ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
  • ಕಲಾರಾಮ : ಭರತನಾಟ್ಯ ಹಾಗೂ ದಾಸರ ಪದ
  • ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
  • ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

Leave a Reply

Highslide for Wordpress Plugin