ಶ್ರೀ ರಾಮಾಶ್ರಮ, ಬೆಂಗಳೂರು 31/08/2 015

ಬೆಳಗ್ಗೆ:
~
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಕರಾಟೆ, ಸಂಗೀತ, ಕಬ್ಬಡ್ಡಿ ಮುಂತಾದ ವಿಭಾಗಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿ ಶರಧಿ ಇವರಿಗೆ

~
ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಅಖಿಲಾ ಹೆಗಡೆ ಬರೆದ ‘ಅಂಗದ’ ಪುಸ್ತಕ ಲೋಕಾರ್ಪಣೆಗೊಂಡಿತು

~
ಸರ್ವಸೇವೆ : ಸಾಗರ ಮಂಡಲಾಂತರ್ಗತ ಸಾಗರ ಪೂರ್ವ, ಸಾಗರ ಪಶ್ಚಿಮ ಹಾಗೂ ಆವಿನಹಳ್ಳಿ ವಲಯದವರಿಂದ ಸರ್ವಸೇವೆ ನಡೆಯಿತು.

ಧರ್ಮಸಭೆ

ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡುತ್ತಾ, ಮಗುವನ್ನು ತಾಯಿಯಲ್ಲದೆ, ಆಯಾ ಕೂಡ ನೋಡಿಕೊಳ್ಳುವುದುಂಟು. ಹಾಗೆಯೇ ಈ ಸಮಾಜಕ್ಕೆ ಗುರುಪೀಠ ತಾಯಿಯಿದ್ದಂತೆ. ಸಂಘಟನೆ ಆಯಾ ಇದ್ದಂತೆ. ಎಲ್ಲೆಡೆ ಒಂದೇ ಬಾರಿ ಇರಲು ಸಾಧ್ಯವಾಗದ್ದರಿಂದ ಗುರುಪೀಠ ಸಮಾಜವನ್ನು ಸಂಘಟನೆ ಕೈಯಲ್ಲಿಟ್ಟಿದೆ. ಅದನ್ನು ಸಂಘಟನೆ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ನುಡಿದರು.
ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಅಖಿಲಾ ಹೆಗಡೆ ಬರೆದ ‘ಅಂಗದ’ ಪುಸ್ತಕ ಲೋಕಾರ್ಪಣೆಗೊಂಡಿತು. ಕರಾಟೆ, ಸಂಗೀತ, ಕಬ್ಬಡ್ಡಿ ಮುಂತಾದ ವಿಭಾಗಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿ ಶರಧಿ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು.ಮೂಲಮಠ ಉಪಾಧ್ಯಕ್ಷ ಮೂಗಿಮನೆ ಗಣಪತಿ ಹೆಗಡೆ, ಮಹಾಮಂಡಲ ಅಧ್ಯಕ್ಷ ಡಾ.ವೈ.ವಿ ಕೃಷ್ಣಮೂರ್ತಿ, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಪ್ರಸಾರ ಪ್ರಧಾನ ರಮೇಶ ಹೆಗಡೆ ಗುಂಡೂಮನೆ ಮತ್ತಿತರರಿದ್ದರು. ಸ್ವಾತಿ, ಶ್ರುತಿ ನಿರೂಪಿಸಿದರು.

SRI_1068

SRI_1066

SRI_1063

SRI_1061

Audio:

Download: Link

Facebook Comments