ಸಂತರು ಜಾಗೃತರಾಗಿ ಶಿಷ್ಯರನ್ನು ಜಾಗೃತ ಗೊಳಿಸಿ ಗೋಸಂರಕ್ಷಣೆ ಕೆಲಸಕ್ಕೆ ಮುಂದಾದರೆ ಬೇರೇನೂ ಬೇಕಿಲ್ಲ. ಮಠ ಮಂದಿರಗಳು ಗೋ ಕೇಂದ್ರಿತ ಬದುಕಿನ ಪ್ರಯೋಗಶಾಲೆ ಆಗಬೇಕು. ಮಾದರಿಯೂ ಆಗಬೇಕು ಎಂಬುದನ್ನು ಸ್ವತಃ ಸಾಧಿಸಿ ತೋರುತ್ತಿರುವ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಈ ಕುರಿತ ಅನಿಸಿಕೆ ಹಂಚಿಕೊಂಡಿದ್ದಾರೆ..

ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )

ಜಾಗೃತ ಸಂತರಿಂದ ಸಮಾಜವೂ ಜಾಗೃತ –  ಮಠ, ಮಂದಿರಗಳಿಂದಲೇ ಗೋಸಂರಕ್ಷಣೆ ಆರಂಭವಾಗಲಿ

ಸಂತರನ್ನು ನೀವು ಗೋರಕ್ಷಣೆಯ ಅಭಿಯಾನದಲ್ಲಿ ತೊಡಗಿಸಿದ್ದೀರಿ ಏಕೆ?
ಸರ್ಕಾರ ಗೋರಕ್ಷಣೆ ಮಾಡುತ್ತಿಲ್ಲ, ಮಾಡುವ ಲಕ್ಷಣವು ಕಾಣುತ್ತಿಲ್ಲ. ಅದರ ಬದಲು ಗೋಹತ್ಯೆಗೆ ಗೋಭಕ್ಷಣೆಗೆ ಸರ್ಕಾರ ಪೆÇ್ರೀತ್ಸಾಹ ಕೊಡ್ತಾ ಇದೆ, ಸಮಾಜ ಮಲಗಿದೆ. ಒಂದು ಸಣ್ಣ ಭಾಗ ಎಚ್ಚೆತ್ತಿದ್ದರೂ ಕೂಡಾ, ಪೂರ್ತಿ ಸಾಕಾಗ್ತಾ ಇಲ್ಲ. ರೈತನನ್ನ ಭ್ರಮೆಯಲ್ಲಿರಿಸಲಾಗಿದೆ, ಗೋ ಶೂನ್ಯವಾದ ಕೃಷಿ, ರಾಸಾಯನಿಕಮಯವಾದ ಕೃಷಿಯೇ ತುಂಬ ಲಾಭಕಾರಿ ಅನ್ನುವ ಭ್ರಮೆಯಲ್ಲಿ ರೈತನನ್ನ ಇಡಲಾಗಿದೆ, ಗೋಮಾಳವನ್ನ ಕಿತ್ತುಕೊಳ್ಳಲಾಗಿದೆ, ಹೀಗಾಗಿ ರೈತರಿಗೆ ಸಾಗಾಣಿಕೆ ವೆಚ್ಚ ಕೂಡಾ ಜಾಸ್ತಿ ಆಗ್ತಾ ಇದೆ. ಇದೆಲ್ಲದರ ಪರಿಣಾಮವಾಗಿ ಯಾರೂ ಇಲ್ಲವಲ್ಲ ಹಾಗಾಗಿ ಸಂತರನ್ನ ಗೋರಕ್ಷಣೆಗೆ ತೊಡಗಿಸುವುದು ಅನಿವಾರ್ಯವಾಯಿತು.

ಮತ್ತೆ ಇನ್ನೊಂದು ಕಾರಣ ಅವರಿಗೆ ಸಹಜ ಕರ್ತವ್ಯ ಇದು, ಯಾಕೆಂದರೆ ಗೋವು ಅನ್ನುವುದು ಧರ್ಮದ ಪ್ರತೀಕವೂ ಹೌದು, ಧರ್ಮ ರಕ್ಷಣೆ ಸಂತರಿಗೆ ಆದ್ಯ ಕರ್ತವ್ಯ, ಮತ್ತೆ ಗೋವು ಅಂದರೆ ಒಳಿತಿನ ಪ್ರತೀಕವೂ ಹೌದು, ಒಳ್ಳೆಯದನ್ನ ಉಳಿಸಿ ಬೆಳೆಸುವುದು ಸಂತರ ಆಧ್ಯ ಕರ್ತವ್ಯ ಆದ್ದರಿಂದ ಸಂತರನ್ನ ಜೋಡಿಸಬೇಕಾಯಿತು.

ಸಂತ ಮತ್ತು ಗೋವು ಎರಡೂ ಒಂದೇ ರೀತಿಯ ಶಕ್ತಿಗಳು, ಎರಡೂ ಲೋಕ ಕ್ಷೇಮಕ್ಕಾಗಿ ಇವೆ. ಎರಡೂ ಸ್ವಾರ್ಥವನ್ನ ಸ್ವಂತವನ್ನ ಉಪೇಕ್ಷಿಸಿವೆ, ಕೆಡುಕಿನ ಸುಳಿವಿಲ್ಲ ಕೇವಲ ಒಳಿತೇ ಒಳಿತೆನ್ನುವ ಭಾವ. ಗೋವಿನ ಗುಣ ಇದ್ದರೆ ಅವನು ಸಂತನಾಗ್ತಾನೆ, ಸಂತನ ಗುಣವಿರುವ ಪ್ರಾಣಿಗೆ ಗೋವು ಅಂತ ಹೆಸರು, ಹಾಗಾಗಿ ಎರಡು ಒಂದೇ ರೀತಿಯ ಸಂಗತಿಗಳು ಒಂದಕ್ಕೆ ಒಂದು ಪೂರಕವಾಗಿರಬೇಕು, ಒಳಿತನ್ನ ಇನ್ನೊಂದು ಒಳಿತೇ ರಕ್ಷಣೆ ಮಾಡಬೇಕೇ ಹೊರತು ಕೆಡುಕು ರಕ್ಷಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಂತರು ಗೋವಿನ ರಕ್ಷಣೆ ಮಾಡಬೇಕು, ನಾವು ಚ್ಯವನ ಮಹರ್ಷಿ ಕಥೆ ಕೇಳತೇವೆ, ತನ್ನ ಸಮತೂಕದ ಯಾವುದಾದರೂ ಒಂದು ವಸ್ತುವನ್ನು ಕೊಡಬೇಕೆಂಬ ವಿಚಾರ ಬಂದಾಗ ಇಡೀ ರಾಜ್ಯವೂ ಅವನ ಸಮತೂಕದ್ದಾಗಲಿಲ್ಲ ಆಗ ಗೋವು ಅವನ ಸಮತೂಕದ್ದಾಯಿತು ಅಂತ ಕೇಳ್ತೇವೆ. ಹಾಗೆ ಇಲ್ಲೆಲ್ಲ ಇರುವ ಸಂದೇಶ ಗೋವು ಮತ್ತು ಸಂತ ಒಂದೇ ರೀತಿಯ ಎರಡು ಶಕ್ತಿಗಳು ಆ ಎರಡೂ ಒಟ್ಟಿಗೇ ಇರಬೇಕು, ಒಂದನ್ನೊಂದು ರಕ್ಷಿಸಬೇಕು ಪೆÇೀಷಿಸಬೇಕು.

 

ಗೋವು ಮತ್ತು ಸಂತ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ್ದರ ಅರ್ಥವೇನು?
ಸಂತನೆಂದರೆ ಮಂತ್ರ; ಗೋವು ಎಂದರೆ ಹವಿಸ್ಸು. ಗವ್ಯ ವಸ್ತುಗಳೆಲ್ಲ ಹವಿಸ್ಸು. ಘೃತ ತುಂಬಾ ಶ್ರೇಷ್ಠವಾಗಿರತಕ್ಕಂತಹಾ ಹವಿಸ್ ಪದಾರ್ಥ. ಹಾಗಾಗಿ ಅದೆರಡೂ ಅಂದರೆ, ಮಂತ್ರ ಮತ್ತು ಹವಿಸ್ಸು ಸೇರಿದರೆ ಯಜ್ಞ. ಹಾಗೆ ಅವೆರಡಕ್ಕೂ ಅಂದರೆ, ಗೋವು ಹಾಗೂ ಸಂತನಿಗೂ ತುಂಬಾ ಹತ್ತಿರದ ಬಾಂಧವ್ಯವಿದೆ. ಮೊದಲೇ ಹೇಳಿದಂತೆ ಎರಡೂ ಲೋಕ ಕಲ್ಯಾಣ ಕಾರ್ಯಗಳು. ಸ್ವಾರ್ಥಕ್ಕೆ ಇರುವವಲ್ಲ.

 

ಬೇರೆ ಬೇರೆ ಜಾತಿ ಮತ ಪಂಥದ ಅನುಯಾಯಿಗಳನ್ನು ಹೊಂದಿರುವ ಸಂತರು ಗೋವಿಗಾಗಿ ಒಗ್ಗೂಡುವರು ಎಂಬುದು ನಿಮ್ಮ ಅನಿಸಿಕೆಯೇ?
ಹೌದು. ಸಂತರು ಬೇರೆ ಬೇರೆ ಸಂತ ಪರಂಪರೆಗೆ ಸೇರಿದವರು, ಬೇರೆ ಬೇರೆ ಜನ ವಿಭಾಗಗಳಿಗೆ ಮಾರ್ಗದರ್ಶನ ಮಾಡುವವರು, ಎಲ್ಲ ಸರಿ. ಆದರೇ, ಈಗ ಎಲ್ಲ ಮತ-ಪಂಥಗಳು, ಎಲ್ಲ ಜಾತಿ-ಜನಾಂಗಗಳು ಒಪ್ಪುವ ಒಂದು ಸಂಗತಿ ಎಂದರೆ ಗೋವು. ಅದು meeಣiಟಿg ಠಿoiಟಿಣ. ಬೇರೆ ಬೇರೆ ಪರಂಪರೆಗೆ ಸೇರಿದ, ಬೇರೆ ಬೇರೆ ದಾರಿಗಳಲ್ಲಿ ಸಾಗುವಂತಹ ಎಲ್ಲ ಜನಾಂಗಗಳಿಗೆ, ಎಲ್ಲ ಮತ-ಧರ್ಮಗಳಿಗೆ ಒಂದು meeಣiಟಿg ಠಿoiಟಿಣ ಅಂತಿದ್ರೆ, ಅದು ಗೋವು. ಗೋವನ್ನು ಎಲ್ಲರೂ ಒಪ್ಪುತ್ತಾರೆ. ಈಗ, ರಾಮನನ್ನು ಒಪ್ಪುವವರು ಶಿವನನ್ನು ಒಪ್ಪದೇ ಇರಬಹುದು, ಶಿವನನ್ನು ಒಪ್ಪುವವರು ವಿಷ್ಣುವನ್ನು ಒಪ್ಪದೇ ಇರಬಹುದು, ವಿಷ್ಣುವನ್ನು ಒಪ್ಪುವವರು ದುರ್ಗೆಯನ್ನು ಒಪ್ಪದೇ ಇರಬಹುದು. ಸೌರ, ಗಣಪದ, ಶೈವ, ಶಾಕ್ತ, ವೈಷ್ಣವ, ಬೇರೆ ಬೇರೆ ಪಂಥಗಳು ಒಂದನ್ನೊಂದು ಒಪ್ಪದೇ ಇರಬಹುದು. ಎಲ್ಲರೂ ಒಪ್ಪುತ್ತಾರೆ ಗೋವನ್ನ. ಹಾಗಾಗಿ ಗೋವು ಎಲ್ಲರನ್ನೂ ಒಗ್ಗೂಡಿಸಬಲ್ಲದು.

 

ತಮ್ಮ ಧರ್ಮ, ಸಂಪ್ರದಾಯಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿರುವಾಗ ಸಂತರು ಗೋರಕ್ಷಣೆಯ ಕಾರ್ಯದಲ್ಲಿ ತೊಡಗಬಲ್ಲರೆ?
ತಮ್ಮ ತಮ್ಮ ಧರ್ಮ ಸಂಪ್ರದಾಯಗಳನ್ನ ರಕ್ಷಣೆ ಮಾಡಿಕೊಳ್ಳುವುದು ಮೊದಲ ಆದ್ಯತೆ ಆಮೇಲೆ ಗೋರಕ್ಷಣೆ ಮಾಡುವುದು ಎರಡನೇ ಆದ್ಯತೆ ಅಂತ ಯಾರು ಹೇಳಿದ್ದಾರೆ. ಗೋ ರಕ್ಷಣೆಯೇ ಮೊದಲ ಆದ್ಯತೆ ಮತ್ತೆ ಉಳಿದದ್ದೆಲ್ಲಾ “ಮತ್ತೆ ಧರ್ಮ, ಸಂಪ್ರದಾಯ ಇವೆಲ್ಲಾ ಗೋವನ್ನವಲಂಬಿಸಿಯೇ ಇದೆ ಗೋವನ್ನ ಬಿಟ್ಟಿಲ್ಲ, ಸಂಪ್ರದಾಯದ ಧರ್ಮದ ಭಾಗವೇ ಆಗಿದೆ ಗೋವು, ಅದಕ್ಕೆ ಮೀರಿಯೂ ವ್ಯಾಪ್ತಿಯಿದೆ, ವಿಜ್ಞಾನ, ಪರಿಸರ ಆರೋಗ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಕೂಡಾ ವ್ಯಾಪ್ತಿಯಿದೆ ಅದಕ್ಕೆ ಹೀಗಿರುವಾಗ ಅದನ್ನ ಬೇರೆ ಬೇರೆ ಮಾಡಬೇಕಾಗಿಯೇ ಇಲ್ಲ ಮೊದಲ ಆದ್ಯತೆಯಾಗಿ ಗೋ ರಕ್ಷಣೆಯನ್ನ ಇಡಬಹುದು.

ನೀವು ಸಂತಸಮೂಹದಿಂದ ಯಾವ ರೀತಿ ಸಹಕಾರದ ನಿರೀಕ್ಷೆ ಮಾಡುತ್ತಿದ್ದೀರಿ?
ಸಂತಸಮೂಹ ಒಟ್ಟಿಗಿರಬೇಕು, ಒಟ್ಟಿಗೆ ಸ್ವರವೆತ್ತಬೇಕು.  ತಮ್ಮ ತಮ್ಮ ಶಿಷ್ಯರನ್ನ ಭಕ್ತರನ್ನ ಸಂಘಟಿಸಬೇಕು. ಜಾಗೃತಗೊಳಿಸಬೇಕು.  ತಾವು ಸ್ವತಃ ಗೋರಕ್ಷಣೆ, ಗೋಪಾಲನೆ ಮಾಡಬೇಕು. ಒಂದೊಂದು ಮಠದಲ್ಲೂ ಗೋಶಾಲೆಯಿದ್ದರೆ ಗೋರಕ್ಷಣೆಗೆ ಬೇರೆನೂ ಬೇಕಾಗುವುದಿಲ್ಲ.  ಹಾಗೆ ಸ್ವತಃ ಗೋಶಾಲೆ, ಗೋಪಾಲನೆ ಹಾಗೆಯೇ ಅಲ್ಲಿ ಮಾಡಬಹುದಾದ ಸಾವಯವ ಕೃಷಿ ಪ್ರಾತ್ಯಕ್ಷಿಕೆ ಅಂತಹ ತೋಟ, ಗದ್ದೆ, ಹೊಲಗಳನ್ನು ಅವರು ತಮ್ಮ ಮಠದಲ್ಲೇ ಮಾಡಬಹುದು. ರೈತರಿಗೆ ಮಾರ್ಗದರ್ಶನವಾಗುವ ಹಾಗೆ, ಪೂರಕ ಚಟುವಟಿಕೆಗಳನ್ನು ಮಾಡಬಹುದು. ಮುಖ್ಯವಾಗಿ ಸಮಾಜಕ್ಕೆ ಮಾರ್ಗದರ್ಶನ, ಪ್ರೇರಣೆಯನ್ನು ಸಂತರು ಕೊಡಬೇಕು.  ಸಮಾಜ ಸಮಷ್ಟಿ ಜಾಗೃತವಾದಾಗ ಸರಕಾರ ಅದಕ್ಕೆ ತಲೆಬಾಗಲೇ ಬೇಕಾಗುತ್ತದೆ.

 

Read Gouvaani E-Magazine: www.gouvaani.in 

Facebook Comments Box