ಗೋ ಸಂರಕ್ಷಣೆ, ಸಂವರ್ಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಮಾರ್ಗದರ್ಶನದಲ್ಲಿ ರೂಪುಗೊಂಡಿರುವಂಥದ್ದು ಭಾರತೀಯ ಗೋಪರಿವಾರ. ಇದು ಗೋವುಗಳ ಪರ ಧ್ವನಿಯಾಗಿ, ಒಂದು ಮಾಧ್ಯಮವಾಗಿ ಸಮಾಜದಲ್ಲಿ ಬೆರೆಯಲಿದೆ. ಜಾಗೃತಿ ಮೂಡಿಸಲಿದೆ. ಈ ಕುರಿತ ಎಲ್ಲ ವಿವರಗಳನ್ನು ಗೋವಾಣಿ ಜತೆ ಹಂಚಿಕೊಂಡಿದ್ದಾರೆ ಪರಿವಾರದ ದಿಗ್ದರ್ಶಕರಾದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು.

ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ

ಗೋಪರ ಧ್ವನಿಯೇ ಭಾರತೀಯ ಗೋಪರಿವಾರ

೧. ಭಾರತೀಯ ಗೋಪರಿವಾರದ ಉದ್ದೇಶ ಹಾಗೂ ವ್ಯಾಪ್ತಿ ಏನು?
ಶ್ರೀಶ್ರೀ: ಭಾರತೀಯ ಗೋಪರಿವಾರದ ಉದ್ದೇಶ ವಿಶಾಲವಾದ ಸಂಘಟನೆಯನ್ನ ನಿರ್ಮಾಣ ಮಾಡುವುದು, ಗೋ ಪ್ರೇಮಿಗಳು, ಗೋಭಕ್ತರು ಗೋರಕ್ಷಕರು ಎಲ್ಲ ರೀತಿಯಲ್ಲಿ ಗೋವಿಗೆ ಯಾರು ಸಂಬಂಧಿಸಿದ್ದಾರೋ ಎಲ್ಲರನ್ನೂ ಒಳಗೊಂಡಿರುವಂಥ ಒಂದು ದೊಡ್ಡ ಸಂಘಟನೆಯನ್ನ ಕಟ್ಟುವಂಥದ್ದು ಗೋಪರಿವಾರದ ಉದ್ದೇಶ ತನ್ಮೂಲಕ ಗೋರಕ್ಷಣೆ ವ್ಯಾಪ್ತಿ’ ಸಮಗ್ರ ಭಾರತ ಗೋವು ವ್ಯಾಪಿಸತಕ್ಕಂಥ ಎಲ್ಲ ಕ್ಷೇತ್ರಗಳು.

೨ ಗೋರಕ್ಷಕರ ಮೇಲೆ ಸತತವಾಗಿ ಸರ್ಕಾರಿ ವ್ಯವಸ್ಥೆಯ ಎಲ್ಲಾ ಅಂಗಗಳಿಂದ ಪ್ರಹಾರವಾಗುತ್ತಿರುವ ಹಿನ್ನೆಲೆಯಲ್ಲಿ, ಗೋಪರಿವಾರದ ಪ್ರಸ್ತುತತೆ ಏನು?
ನಿಜ, ಗೋರಕ್ಷಕರ ಮೇಲೆ ಬಾರಿ ಬಾರಿಗೂ ಆಕ್ರಮಣಗಳಾಗ್ತಾ ಇದಾವೆ. ಅದು ಸರ್ಕಾರಗಳಿಂದ ಅಧಿಕಾರಿಗಳಿಂದ ಕಟುಕರ ಲಾಬಿಯಿಂದ ಕೆಲ ಬಾರಿ ಮಾಧ್ಯಮಗಳಿಂದ, ನಾನಾ ಪ್ರಕಾರವಾದ ದಾಳಿಗಳು ಗೋರಕ್ಷಕರ ಮೇಲೆ ಆಗುತ್ತಾ ಇದೆ. ಹೇಗೆ ಗೋವುಗಳ ಮೇಲೆ ಆಗ್ತಾ ಇದೆಯೋ ಹಾಗೆ ಗೋರಕ್ಷಕರ ಮೇಲೆ ಕೂಡಾ ಹಾಗೇ ದಾಳಿ ಆಗ್ತಾ ಇದೆ. ನಾವು ನೋಡಿದಂತೆ ಗೋರಕ್ಷಕರಲ್ಲಿ ಹೆಚ್ಚಿನವರು ಬಡವರು ಅಥವಾ ಮಧ್ಯಮ ವರ್ಗದವರು ಇರುವಂಥದ್ದು ಅವರು ತಮ್ಮ ಜೀವವನ್ನೇ ಪಣಕ್ಕೊಡ್ಡಿ, ಜೀವನವನ್ನೇ ಪಣಕ್ಕೊಡ್ಡಿ ಯಾಕೆ ಈ ಎರಡನ್ನೂ ಹೇಳತಾ ಇದೀವಿ ಅಂದರೆ ಅವರು ಗೋವನ್ನು ರಕ್ಷಿಸುವ ಯತ್ನದಲ್ಲಿ ಎ? ಬಾರಿ ಸಾವಿಗೀಡಾಗುತ್ತಾರೆ, ಅಂಗಾಂಗಗಳನ್ನ ಕಳೆದುಕೊಳ್ಳುತ್ತಾರೆ ದೊಡ್ಡ ಹಲ್ಲೆಗಳಿಗೆ ಒಳಗಾಗುತ್ತಾರೆ, ಅಂಥದೆಲ್ಲಾ ಇದೆ. ಇನ್ನು ಅವರ ಮೇಲೆ ಕೇಸುಗಳು ಬೀಳುತ್ತವೆ, ಅವರಿಗೆ ಉತ್ಪತ್ತಿ ಸಾಮಾನ್ಯವಾಗಿ ಇರೋದಿಲ್ಲ ಹಾಗಾಗಿ ತುಂಬ ಕಷ್ಟ ಪಡ್ತಾರೆ ಕೇಸು, ಬೇಲ್ ಇವುಗಳಿಗಾಗಿ ತುಂಬಾ ಕಷ್ಟಪಡುವ ಸಂದರ್ಭಗಳಿವೆ. ಹಾಗಾಗಿ ಜೀವ, ಜೀವನವನ್ನೇ ಅವರು ಪಣಕ್ಕೆ ಒಡ್ಡಿ ಅವರು ಗೋವಿನ ಕೆಲಸವನ್ನ ಗೋರಕ್ಷಣೆ ಕೆಲಸವನ್ನು ಅವರ ಮೇಲೆ ಪ್ರಹಾರವಾದರೆ ಪಾಪ! ಎಲ್ಲಿ ಹೋಗಬೇಕು, ಅವರು ಗೋಪರಿವಾರದ ಪ್ರಸ್ತುತತೆ ಏನೆಂದರೆ ಇಡೀ ಸಮಾಜದಲ್ಲಿ ಗೋಪರಿವಾರದ ವಾತಾವರಣ ಮೂಡಿಸಿದಾಗ, ಸಮಾಜ ಅವರ ಬಗ್ಗೆ ಅನುಕಂಪದಲ್ಲಿ ಅವರ ಜೊತೆ ನಿಂತುಕೊಂಡಾಗ ಅವರಿಗೆ ತುಂಬಾ ಹಗುರವಾಗುತ್ತೆ, ಈಗ ಸಮಾಜದ ಸಹಕಾರ ಇದ್ದರೆ ಗೋರಕ್ಷಣೆ ತುಂಬಾ ಸುಲಭ.ಅದಿಲ್ಲದಿದ್ದಾಗ ಸಮಾಜ ಉದಾಸೀನವಾಗಿ ಇದ್ದಾಗ ತುಂಬಾ ಕಷ್ಟವಾಗುತ್ತೆ, ಹಾಗಾಗಿ ಆ ದೃಷ್ಟಿಯಿಂದ ತುಂಬಾ ಸುಲಭ ಅವರಿಗೆ, ಗೋ ಪರಿವಾರ ನಿರ್ಮಾಣ ಮಾಡುವಂಥ ಸಾಮಾಜಿಕ ವಾತಾವರಣ ಇದ್ದಾಗ ಅವರ ಜೊತೆ ನಿಂತುಕೊಂಡಾಗ ಅವರಿಗೆ ತುಂಬಾ ಹಗುರವಾಗುತ್ತಿದೆ ಆ ಕೆಲಸ ಮಾಡಲಿಕ್ಕೆ ತುಂಬಾ ಹಗುರವಾಗುತ್ತದೆ. ಈಗ ಸಮಾಜದ ಸಹಕಾರವಿದ್ದರೆ ಗೋರಕ್ಷಣೆ ತುಂಬಾ ಸುಲಭ. ಗೋಪರಿವಾರ ನಿರ್ಮಾಣ ಮಾಡುವುದಕ್ಕೆ ಸಾಮಾಜಿಕ ವಾತಾವರಣ ಅವರಿಗೆ ವರದಾನ.

೩ ಶೇ.೭೫ ಕ್ಕಿಂತ ಹೆಚ್ಚು ಜನರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಗೋಹತ್ಯೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದನ್ನು ಮೆಟ್ಟಿನಿಲ್ಲಲು ಗೋಪರಿವಾರಕ್ಕೆ ಸಾಧ್ಯವೇ?
ವಸ್ತುಸ್ಥಿತಿ ಹಾಗಿಲ್ಲ. ಶೇ.೭೫ಕ್ಕಿಂತ ಹೆಚ್ಚು ಜನರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಾ ಇದ್ದಾರೆ. ಬಹು ಹೆಚ್ಚು ಜನ ಗೋವಿನ ಪರವಾಗಿದ್ದಾರೆ ಆದರೆ ಅವರ ಧ್ವನಿ ಕೇಳ್ತಾ ಇಲ್ಲ ಅದಕ್ಕೊಂದು ವ್ಯವಸ್ಥಿತ ಮಾಧ್ಯಮ ಇಲ್ಲ. ಗೋಪರಿವಾರ ಅದನ್ನ ಮಾಡಿಕೊಡುತ್ತದೆ ಅಂತ. ಈಗ ಉದಾಹರಣೆಗೆ ಅಭಯಾಕ್ಷರ ತಗೊಳ್ಳಿ ಅಭಯಾಕ್ಷರದ ಮೂಲಕವಾಗಿ ಕೋಟಿ ಕೋಟಿ ಜನ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವ್ಯಕ್ತಪಡಿಸುವಂತಾಯ್ತು. ಅಂತಹ ಅವಕಾಶ ಇಲ್ಲದೇ ಹೋದ್ರಿಂದ ಅದು ಗೊತ್ತಾಗ್ತಾ ಇಲ್ಲ. ಒಂದರ್ಥದಲ್ಲಿ ಹೌದು ಈಗ ನಾವು ಗೋವಧ ಜನ್ಯ ವಸ್ತುಗಳನ್ನ ಗೊತ್ತಿಲ್ಲದೇ ನಾವು ಸೇವನೆ ಮಾಡ್ತಾ ಇದ್ದೀವಿ, ಬಳಸ್ತಾ ಇದ್ದೀವಿ ಅವುಗಳು ಕಸಾಯಿಖಾನೆಯನ್ನು ಪ್ರೋತ್ಸಾಹಿಸುತ್ತವೆ ನೇರವಾಗಿ. ಯಾಕೆಂದರೆ ಕೇವಲ ಗೋ ಮಾಂಸದಿಂದ ಕಸಾಯಿಖಾನೆಗಳು ನಡೆಯುವುದಿಲ್ಲ. ಈ ಚರ್ಮದಿಂದ, ಮೂಳೆಯಿಂದ… ಇತರ ಬೇರೆ ಬೇರೆ ಸಂಗತಿಗಳಿಂದ ಬೇರೆ ಬೇರೆ ವಸ್ತುಗಳನ್ನ ಮಾಡಿ ಆ ಒಂದು ಜಾಗದ ಮೂಲಕವಾಗಿ ಅವುಗಳಿಗೆ ಅನುಕೂಲವಾಗುವಂತದ್ದು, ಲಾಭವಾಗುವಂತದ್ದು. ಗೋವಧ ಜನ್ಯ ವಸ್ತುಗಳ ಬಳಕೆಯ ರೂಪದಲ್ಲಿ ಕಸಾಯಿಖಾನೆಗಳಿಗೆ ತುಂಬ ಪ್ರೋತ್ಸಾಹ ಸಿಗ್ತಾ ಇದೆ. ಸುಮಾರು ಜನ ಗೊತ್ತಿಲ್ಲದೇ ಪರೋಕ್ಷವಾಗಿ ಭಾಗಿಯಾಗ್ತಾ ಇದ್ದಾರೆ. ಅರಿವು ಮೂಡಿಸಿದರೆ ಅದು ನಿಲ್ಲಬಹುದು ಅನ್ನಿಸುತ್ತದೆ ನಮಗೆ. ೭೫% ಅಲ್ಲ, ೯೯% ಅಲ್ಲ, ಹತ್ತಿರ ಹತ್ತಿರ ೧೦೦% ವಿರೋಧ ಇದ್ದರೂ ಭಾರತೀಯ ಗೋಪರಿವಾರ ಮೆಟ್ಟಿ ನಿಲ್ತದೆ. ಏಕೆಂದರೆ ಸತ್ಯಕ್ಕೆ ತನ್ನದೇ ಆದ ಬಲ ಇದೆ. ಅಂತಿಮವಾಗಿ ಜಯ ಸತ್ಯಕ್ಕೆ ಹಾಗಾಗಿ ಇಡೀ ಪ್ರಪಂಚವೇ ತಿರುಗಿ ನಿಂತರೂ ಗೋಪರಿವಾರ ಸಾಧನೆ ಮಾಡಿಯೇ ಮಾಡುತ್ತದೆ.

೪ ಜಾತಿ-ಧರ್ಮ- ರಾಜಕಾರಣಗಳನ್ನು ಮೀರಿ ಈ ಆಂದೋಲನ ಯಶಸ್ವಿ ಆಗಬಲ್ಲದೇ?
ಆಗಬಲ್ಲದು, ಯಾಕೆಂದರೆ ಗೋವು ಹಾಲು ಕೊಡುವಾಗ ಜಾತಿ ನೋಡಲಿಲ್ಲ, ಗೋವು ಕ್ಯಾನ್ಸರ್ ಗುಣ ಮಾಡುವಾಗ ಪಕ್ಷ ನೋಡಲಿಲ್ಲ, ವರ್ಗ ನೋಡಲಿಲ್ಲ ಹಾಗಾಗಿ ಸಾಧ್ಯ. ಮೊದಲನೆಯದಾಗಿ ಹಿಂದೂಗಳಲ್ಲಿ ಅಥವಾ ಜೈನರಲ್ಲಿ ಸಿಖ್ಖರಲ್ಲಿ ಎಲ್ಲಾ ರೀತಿಯ ನಂಬಿಕೆಯವರೂ, ಎಲ್ಲಾ ಸಂಪ್ರದಾಯದವರೂ ಕೂಡಾ ಗೋವನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ, ತಾಯಿ ದೇವರು ಅಂತ ಭಾವಿಸ್ತಾರೆ, ಇನ್ನು ಕ್ರೈಸ್ತರೋ ಮುಸಲ್ಮಾನರೋ ತಗೊಂಡ್ರೆ ಅಲ್ಲೂ ಕೂಡಾ ಗೋವಿನ ವೈಜ್ಞಾನಿಕ ಮಹತ್ವ ಗೋವಿನ ಆರೋಗ್ಯ ದೃಷ್ಟಿಯಿಂದಾಗುವ ಉಪಕಾರಗಳು. ಗೋವಿನಿಂದಾಗುವ ಲಾಭಗಳು ಪ್ರಯೋಜನಗಳು. ಅವರನ್ನು ಕೂಡಾ ಇದರಲ್ಲಿ ಬದ್ಧಗೊಳಿಸುತ್ತವೆ ಕ್ರೈಸ್ತವಾದಗಲೀ ಇಸ್ಲಾಂ ಆಗಲಿ ಗೋವಧೆಯ ಪ್ರೋತ್ಸಾಹಿಸುವುದಿಲ್ಲ, ಗೋವಧೆಯನ್ನು ಅಪ್ಪಣೆ ಮಾಡೋದಿಲ್ಲ. ಗೋವು ಅತ್ಯಂತ ಉಪಕಾರಿ ಪ್ರಾಣಿಯಾಗಿ ಕೂಡಾ ಇದೆ. ಹಾಗಾಗಿ ಸರ್ವ ಸಮ್ಮತ ಆಗಲಿಕ್ಕೇ ಬೇಕಿದು.

೫ ನೆರೆಯ ರಾಜ್ಯಗಳಿಗೆ ಆಗುತ್ತಿರುವ ಗೋ ಸಾಗಾಣಿಕೆಯನ್ನು ತಡೆಯುವಲ್ಲಿ ಗೋಪರಿವಾರದ ಪಾತ್ರವೇನು?
ಒಳ್ಳೆ ಉದ್ದೇಶಕ್ಕೆ ಗೋವುಗಳು ಎಲ್ಲಿಂದ ಎಲ್ಲಿಗೆ ಹೋದರೂ ಸಂತೋ ಷವೇ. ಹಾಗೇ ಗೋ ಸಂತತಿ ಬೇರೆ ಬೇರೆ ತಳಿಗಳಾಗಿ ಬೆಳೆದಿರತಕ್ಕಂಥದ್ದು ಈ ಯಾವುದೇ ಒಂದು ತಳಿಯದ್ದು ಒಂದು ವೈಶಿ ಷ್ಟ್ಯ ಇರುತ್ತದೆ ಇನ್ನೊಂದು ತಳಿಯದ್ದು ಇನ್ನೊಂದು ವೈಶಿಷ್ಟ ಇರುತ್ತದೆ ಎರಡನ್ನೂ ನಾವು ಸಂಕರ ಅಲ್ಲ ಸಂಗಮ ಮಾಡಿದಾಗ, ಭಾರತೀಯ ತಳಿಗಳ ನಡುವೆ, ವಿಶಿಷ್ಟವಾದ ಮತ್ತೊಂದು ತಳಿ ಬರುತ್ತದೆ. ಹಾಗೇ ತಾನೇ ಇವತ್ತು ಬೆಳೆದಿರೋದು ತಳಿಗಳು. ಹಾಗಾಗಿ ಒಳ್ಳೆ ಉದ್ದೇಶದಿಂದ ಗೋವುಗಳು ಎಲ್ಲಿಂದ ಎಲ್ಲಿಗೆ ಹೋದರೂ ತಪ್ಪೇನೂ ಇಲ್ಲ. ಹಾ.. ವಾತಾವರಣ ಹೊಂದುವಂಥ ಸನ್ನಿವೇಶದಲ್ಲಿ, ಅದು ಬಿಟ್ಟು ವಧೆಗಾಗಿ ಗೋವು ಎಲ್ಲಿಂದ ಎಲ್ಲಿಗೆ ಹೋಗುವುದನ್ನು ವಿರೋಧಿಸುತ್ತೇವೆ. ಗೋಪರಿವಾರ ಖಡಾಖಂಡಿತವಾಗಿ ಅದನ್ನ ವಿರೋಧಿಸುತ್ತದೆ. ಗೋಪರಿವಾರಕ್ಕೆ ಅದನ್ನ ತಡೆಯೋದಕ್ಕೂ ತುಂಬಾ ರೀತಿ ದಾರಿಗಳಿವೆ. ಉದಾಹರಣೆಗೆ ’ಗೋ ಸಂಜೀವಿನಿ’. ಗೋ ಸಂಜೀವಿನಿ ಒಂದರಿಂದಲೇ ಕಟುಕರಿಗೆ ಮಾರಾಟವಾಗುವಾಗಲೇ ಅಲ್ಲೇ ಗೋವನ್ನ ನಾವೇ ಪಡೆದುಕೊಂಡು ಗೋವಿನ ಜೀವ ಉಳಿಸಬಹುದು. ಅನ್ಯಾನ್ಯ ರೀತಿಯಿಂದ ತಡೆಯಬಹುದು. ಅಥವಾ ಆ ರಾಜ್ಯಕ್ಕೆ ಹೋಗಿ ಅಲ್ಲಿ ಸಂಘಟನೆ ಮಾಡಿ ಅಲ್ಲೆ ಜನಜಾಗೃತಿ ಮಾಡಿ ಅಲ್ಲಿ ಕಸಾಯಿಖಾನೆ ನಿಂತು ಹೋಗುವ ಹಾಗೆ ಗೋರಕ್ಷಣೆಗೆ ಬೆಂಬಲ ಸಿಗುವ ಹಾಗೆ ಆ ರೀತಿ ಕೂಡಾ ಮಾಡಲು ಸಾಧ್ಯ. ಹೀಗೆ ಎರಡೂ ಕಡೆಯಿಂದ ರಾಜ್ಯದ ಒಳಗಿನಿಂದ ಮತ್ತು ಆ ರಾಜ್ಯದ ಗೋಪರಿವಾರ ಎರಡೂ ಸೇರಿ ಗೋರಕ್ಷಣೆ ಮಾಡಲು ಸಾಧ್ಯವಿದೆ.

 

Read E-Magazine: http://kamadugha.org/gou-vaani-samputa1-sanchike-3

Gouvaani_Kn

~*~*~

Facebook Comments Box