|| ಹರೇರಾಮ ||

ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದುರ್ಮುಖ ಸಂವತ್ಸರದ ಗೋಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಶ್ರೀ ರಾಮಚಂದ್ರಾಪುರದಮಠದ ಬೆಂಗಳೂರು ಶಾಖೆಯಲ್ಲಿ ಇಂದು ಶ್ರೀಗಳವರು ಅಮೃತಹಸ್ತದಿಂದ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಶಾಸನತಂತ್ರದ ಹಾಗೂ ಗೋಚಾತುರ್ಮಾಸ್ಯ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

ಗೋ ಚಾತುರ್ಮಾಸ್ಯವು ಗಿರಿನಗರದ ಶ್ರೀಮಠದಲ್ಲಿ ಜುಲೈ 19 ರಿಂದ ಸೆಪ್ಟಂಬರ್ 16ರ ತನಕ ನಡೆಯಲಿದೆ. ಎಲ್ಲರೂ ಬಂದು ವ್ಯಾಸಮಂತ್ರಾಕ್ಷತೆ ಅನುಗ್ರಹಕ್ಕೆ ಭಾಗಿಯಾಗಬೇಕೆಂದು ಪ್ರಕಟಣೆ ತಿಳಿಸಿದೆ.

ಗೋ ಚಾತುರ್ಮಾಸ್ಯ ಆಮಂತ್ರಣ:

Facebook Comments