ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲದ ವಿಭಾಗೀಯ ಸಭೆಯು ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠದಲ್ಲಿ ಜರಗಿತು. ಸಭೆಯು ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಪ್ರಾರಂಭವಾಯಿತು. ಶ್ರೀ ಬಿ. ಜಿ. ರಾಮ ಭಟ್ ಅಧ್ಯಕ್ಷಸ್ಥಾನ ವಹಿಸಿ ಸಂಘಟನಾತ್ಮಕ ಮಾಹಿಗಳನ್ನಿತ್ತರು. ಮಹಾಮಂಡಲ ಕಾರ್ಯದರ್ಶಿಗಳಾದ ಶ್ರೀ ಪ್ರಮೋದ್ ಪಂಡಿತ್ ಬೆಂಗಳೂರು ಅವರು ಸಂಘಟನೆಯಲ್ಲಿ ಸಮಕಾಲೀನ ನವೀನ ವಿಚಾರಗಳನ್ನು ಸಂಭಾಷಣಾ ರೂಪದಲ್ಲಿ ಸಮಾಲೋಚಿಸಿ ವ್ಯಕ್ತಪಡಿಸಿದರು. ಮಹಾ ಮಂಡಲ ಮಾತೃ ಪ್ರಧಾನೆ ಈಶ್ವರಿ ಬೇರ್ಕಡವು ಬೆಂಗಳೂರು ಗಿರಿನಗರದಲ್ಲಿ ದಿನಾಂಕ 31.07.2015, ಶುಕ್ರವಾರದಿಂದ 28.07.2015, ಸೋಮವಾರದ ತನಕ ಜರಗಲಿರುವ ಶ್ರೀ ಶ್ರೀಗಳವರ ಛಾತ್ರ ಚಾತುರ್ಮಾಸ್ಯ ಕೇಶವನತ್ತ ಕಿಶೋರಚಿತ್ತ ಸಮಾರಂಭದ ಕುರಿತಾಗಿ ಮಾಹಿತಿಗಳನ್ನು ನೀಡಿದರು. ಮಹಾ ಮಂಡಲ ಸಹಾಯ ಪ್ರಧಾನ ಶ್ರೀ ಹೇರಂಭ ಶಾಸ್ತ್ರಿ ಗಳವರು ಶುಭಾಶಂಸನೆಯಿತ್ತರು. ಮಂಡಲ ಪ್ರತಿನಿಧಿಗಳಾದ ಬಾಲಕೃಷ್ಣ ಶರ್ಮ , ಶಾಮ್ ಭಟ್ ಬೇರ್ಕಡವು, ಕುಮಾರ್ ಪೈಸಾರಿ, ಚಂದ್ರಶೇಖರ ಭಟ್ ಪಳ್ಳತ್ತಡ್ಕ, ಕೇಶವಪ್ರಸಾದ್, ಗೋವಿಂದ ಬಳ್ಳಮೂಲೆ ಉಪಸ್ಥಿತರಿದ್ದರು. ಚಂದ್ರಗಿರಿ, ಪಳ್ಳತ್ತಡ್ಕ, ಎಣ್ಮಕಜೆ, ಪೆರಡಾಲ ವಲಯಗಳ ಕಾರ್ಯಕರ್ತರು ಸಮಾಲೋಚನಾ ಸಂಭಾಷಣೆ ಮತ್ತು ಚರ್ಚಾ ವಿಷಯಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿದರು. ಸಾಂಘಿಕ ರಾಮತಾರಕಮಂತ್ರ, ಶಂಖನಾದ, ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.

ವರದಿ: ಗೋವಿಂದ ಬಳ್ಳಮೂಲೆ,
ಪ್ರಸಾರ ಪ್ರಧಾನ – ಮುಳ್ಳೇರ್ಯ ಮಂಡಲ

Facebook Comments