ಅಭಯಾಕ್ಷರ ಪರಿಕಲ್ಪನೆ ಹುಟ್ಟುಹಾಕಿ, ಈ ಮಹಾಂದೋಲನವನ್ನು ಮನ ಮನೆಗಳಿಗೆ ತಲುಪಿಸುವ ಸಂಕಲ್ಪ ತೊಟ್ಟು, ಲಕ್ಷ ಲಕ್ಷ ಗೋಕಿಂಕರರಿಗೆ ಸ್ಫೂರ್ತಿಯ ಚಿಲುಮೆಯಾಗಿರುವ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಜತೆಗಿನ ಸಂದರ್ಶನ ಈ ಬಾರಿಯ ಕೌಸ್ಟೋರಿ..

ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ

ಗೋಮಾತೆಯ ಉಳಿವಿಗೆ ಅಭಯಾಕ್ಷರ

1 ಅಭಯಾಕ್ಷರ ಪರಿಕಲ್ಪನೆ ಬಗ್ಗೆ ವಿವರಿಸುವಿರಾ?
ಶ್ರೀಶ್ರೀ: ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಅವನ ಬೆರಳ ತುದಿಯಲ್ಲಿ ಪ್ರಭುತ್ವದ ನೆಲೆ ಇದೆ. ಅವನ ಬೆರಳ ತುದಿ ಆಳುವವರನ್ನು ನಿರ್ಮಾಣ ಮಾಡಬಲ್ಲದು, ನಿರ್ನಾಮ ಮಾಡಬಲ್ಲದು. ಈ ಶಕ್ತಿಯನ್ನು ಬಳಸಿ ಗೋರಕ್ಷೆಯನ್ನು ಸಾಧಿಸುವಂಥದ್ದು ಅಭಯಾಕ್ಷರದ ಒಂದು ಪ್ರಧಾನ ಉದ್ದೇಶ, ಮಾತ್ರವಲ್ಲ ಸಮಾಜದ ನಡುವೆ ಗೋವಿಗಿರುವ ಪ್ರಚಂಡ ಬಹುಮತವನ್ನು ದಾಖಲಿಸುವಂಥದ್ದು, ಇದನ್ನು ಪ್ರಭುಗಳಿಗೆ ತಲುಪಿಸಿ (ಆಡಳಿತಕ್ಕೆ ತಲುಪಿಸಿ) ಗೋಹತ್ಯೆ ನಿ?ಧವನ್ನು ಸಾಧನೆ ಮಾಡುವಂಥದ್ದು ಇದರ ಇನ್ನೊಂದು ಮಜಲು.

2 ಪ್ರಸ್ತುತ ಸನ್ನಿವೇಶದಲ್ಲಿ ಅಭಯಾಕ್ಷರಕ್ಕೆ ಯಾಕೀ ಪ್ರಾಮುಖ್ಯ?
ಗೋವಿನ ಮೇಲೆ ದೇಶ ನಿಂತಿದೆ, ಗೋವಿನ ಮೇಲೆ ಧರ್ಮ ನಿಂತಿದೆ ಗೋವಿನ ಮೇಲೆ ಜನಜೀವನ ನಿಂತಿದೆ, ಆದರೆನಿರಂತರ ಗೋಹತ್ಯೆ ಮತ್ತು ತಳಿ ಸಂಕರಗಳಿಂದಾಗಿ ಗೋವಂಶವೇ ನಶಿಸಿ ಹೋಗುತ್ತಿದೆ. ಆದ್ದರಿಂದ ಗೋ ರಕ್ಷಣೆಗೆ ಎಲ್ಲಿಲ್ಲದ ಮಹತ್ವ ಇದೆ ಗೋರಕ್ಷಣೆಗೆ ಬೇರೆಲ್ಲಾ ಮಾಧ್ಯಮಗಳೂ ವಿಫಲವಾಗಿರುವುದರಿಂದ ಈ ಮಾಧ್ಯಮ ಜನಶಕ್ತಿಯ ಮಾಧ್ಯಮಕ್ಕೆ ಈಗ ಅತ್ಯಂತ ಮಹತ್ವ ಬರಲೇ ಬೇಕು.

3 ಈ ವಿಷಯವಾಗಿ ಸಮಾಜವನ್ನು ತಲುಪುವ ಬಗ್ಗೆ ಸಮಾಜದ ಸ್ಪಂದನೆ?
ಜಿಲ್ಲೆ ತಾಲ್ಲೂಕು ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವಂಥ ಗೋಪರಿವಾರಗಳು ಮತ್ತು ಗೋದೀಕ್ಷೆ ಪಡೆದು ಗೋಕಿಂಕರರಾಗಿರುವಂಥ ಅಸಂಖ್ಯ ಕಾರ್ಯಕರ್ತರು ಇವರ ಮೂಲಕವಾಗಿ ಜನರನ್ನು ತಲುಪುವಂತಹ ಚಿಂತನೆ.

4 ಹಾಲುಹಬ್ಬದ ಬಗ್ಗೆ…
ಗೋವು ಅನಂತ ಅದ್ಭುತಗಳ ಆಗರ ಅಪರಿಮಿತ ಜೀವನೋಪಯೋಗಿ ವಸ್ತುಗಳ ಭಂಡಾರ ನಾವು ತಿಳಿದಿದ್ದು ಕಡಿಮೆ ಇದೆ, ತಿಳಿಯಬೇಕಾದದ್ದು ತುಂಬಾ ಇದೆ ಈ ವಿ?ಯದಲ್ಲಿ. ಮತ್ತು ಸಮಾಜಕ್ಕೆ ಪರಿಚಯಿಸಬೇಕು. ಹಾಲು ಇರಬಹುದು, ಗೋಮೂತ್ರ ಇರಬಹುದು, ಗೋಮಯ ಇರಬಹುದು. ಇವುಗಳಿಂದ ಎ? ರೀತಿ ಉತ್ಪನ್ನಗಳನ್ನು ಸಿದ್ಧಪಡಿಸಿಕೊಳ್ಳಬಹುದು, ಅದಕ್ಕೆ ಜೀವನದಲ್ಲಿ ಎ? ಉಪಯೋಗ ಇದೆ, ಅನ್ನುವುದನ್ನು ಸಮಾಜಕ್ಕೆ ಪ್ರತ್ಯಕ್ಷ ಪರಿಚಯ ಮಾಡಿಕೊಡುವ ದೃಷ್ಟಿಯಿಂದಲೇ ಹಾಲು ಹಬ್ಬ. ಗೋವನ್ನು ಕಡಿದು ತಿನ್ನುವುದು ಉಪಯೋಗವಲ್ಲ.. ಗೋವಿದ್ದಾಗಲೇ ಅದು ಕೊಡುವ ವರಪ್ರಸಾದವನ್ನ ಸ್ವೀಕರಿಸಿ ಬದುಕನ್ನು ಹಸನು ಮಾಡಿಕೊಳ್ಳುವುದು ಜಾಣತನ.

5 ಅಭಿಯಾನದಲ್ಲಿ ಸಂತರ ಪಾಲ್ಗೊಳ್ಳುವಿಕೆ…
ಸಂತರ ಸ್ಪಂದನ ಅದ್ಭುತ. ಸಂಪ್ರದಾಯಗಳ ಬೇಧವನ್ನು ಪರಂಪರೆಗಳ ಬೇಧವನ್ನು ಜಾತಿ-ಜನಾಂಗಗಳ ಭೇದವನ್ನು ಬದಿಗಿಟ್ಟು ಅವರು ಪಾಲುಗೊಳ್ಳುತ್ತಿದ್ದಾರೆ, ಮೇಲು ಕೀಳು ಭಾವಕ್ಕೆ ಇಲ್ಲಿ ಅವಕಾಶವಿಲ್ಲ, ಎಲ್ಲರೂ ಕೈಜೋಡಿಸುತ್ತಿದ್ದಾರೆ. ಹಾಗೆ ನೋಡಿದರೆ ವ್ಯಾಪಕವಾಗಿ ಜಿಲ್ಲೆ, ತಾಲ್ಲೂಕುಗಳ ಮಟ್ಟದಲ್ಲಂತೂ ಸಂತರೇ ನೇತೃತ್ವ ವಹಿಸುತ್ತಾ ಇದ್ದಾರೆ. ಇದು ಒಂದು ಶುಭ ಸೂಚನೆ.

 

Read E-Magazine: http://kamadugha.org/gou-vaani-samputa1-sanchike-1

Gouvaani

~*~*~

Facebook Comments Box