ವರದಿ: ಗೋವಿಂದ ಬಳ್ಳಮೂಲೆ

ಕಾಸರಗೋಡು. 04.01.2015
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಮಂಡಲ ಕಾಸರಗೋಡು ಹವ್ಯಕ ವಲಯ ಸಮಾವೇಶವು ವಿದ್ಯಾನಗರದ ಶ್ರೀಕೃಷ್ಣಾ ಭಜನಾ ಮಂದಿರದಲ್ಲಿ ಜರಗಿತು. ಹಿರಿಯ ನ್ಯಾಯವಾದಿ ಐ. ವಿ. ಭಟ್ ದೀಪ ಜ್ವಾಲನ ಮಾಡಿದರು. ಈಶ್ವರ ಭಟ್ ಉಳುವಾನ ಅಧ್ಯಕ್ಷಸ್ಥಾನ ವಹಿಸಿದರು. ಮಹಾ ಮಂಡಲ ಅಧ್ಯಕ್ಷ ಡಾ || ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಕೀಲರಾದ ಶ್ರೀ ಜಯಾನಂದ ಸೋಂದಿ, ಪುತ್ತೂರು ಇವರು – ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳ – ಮಾಹಿತಿಗಳನ್ನು ವಿವರಿಸಿದರು.

ನ್ಯಾಯವಾದಿ ನರಸಿಂಹ ಪ್ರಸಾದ್ ನ್ಯಾಯಾಲದಲ್ಲಿ ನಡೆಯುತ್ತಿರುವ ಪ್ರಕೃತ ವಿಚಾರಗಳ ಬಗ್ಗೆ ಅವಲೋಕಾನಾ ಮಾತುಗಳನ್ನಾಡಿದರು. ಶ್ರೀ ಹರಿಪ್ರಸಾದ್ ಪೆರಿಯಾಪು ಅವರು ಸಂಘಟನಾತ್ಮಕ ವಿಚಾರಗಳನ್ನು ಮಂಡಿಸಿದರು. ಮಹಾ ಮಂಡಲ ಮಾತೃ ಪ್ರಧಾನೆ ಶ್ರೀಮತಿ ಈಶ್ವರಿ ಬೇರ್ಕಡವು ಶುಭಾಶಂಸನೆಗಳನ್ನಿತ್ತರು. ಕಾರ್ಯದರ್ಶಿ ಜಯನಾರಾಯಣ ಸಭಾ ನಿರೂಪಣೆ ಮಾಡಿದರು. ವೈ. ಕೆ. ಗೋವಿಂದ ಭಟ್ ಸ್ವಾಗತಿಸಿದರು . ಹಿರಿಯ ವೈದ್ಯ ಕಂಗಿಲ ಕೃಷ್ಣ ಭಟ್. ಡಾ | ಗಣಪತಿ ಭಟ್ ಕುಳಮರ್ವ , ಡಾ||ರಾಮಕೃಷ್ಣ ಭಟ್ ಕಾಂಞಂಗಾಡ್ ಇವರು ಉಪಸ್ಥಿತರಿದ್ದರು.

ಗುರುವಂದನೆಯೊಂದಿಗೆ ಪ್ರಾರಂಭವಾದ ಸಭೆಯು ಸಂಯುಕ್ತ ರಾಮನಾಮಸ್ಮರಣೆ, ಶಾಂತಿ ಮಂತ್ರ ದೊಂದಿಗೆ ಮುಕ್ತಾಯವಾಯಿತು.

ಸಭಾದೃಶ್ಯ

ಸಭಾದೃಶ್ಯ

Facebook Comments