LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನಿರಾಮಯ – 2013: ಎಂಡೋ ಸಂತ್ರಸ್ತರಿಗೆ ಉಚಿತ ಪಂಚಗವ್ಯ ಚಿಕಿತ್ಸೆ ಯೋಜನೆ ಉದ್ಘಾಟನೆ

Author: ; Published On: ರವಿವಾರ, ಸೆಪ್ಟೆಂಬರ 22nd, 2013;

Switch to language: ಕನ್ನಡ | English | हिंदी         Shortlink:

ಪೆರಿಯ – ಕಾಸರಗೋಡು, ಕೇರಳ: 22-ಸೆ-2013:
ಗಡಿನಾಡ ಕೇರಳ ಮತ್ತು ಕರ್ನಾಟಕದ ಭಾಗಗಳಲ್ಲಿ ಎಂಡೋ ಸಲ್ಫಾನ್ ಬಳಕೆಯಿಂದುಂಟಾದ ಜನಾಂಗೀಯ ದುಷ್ಪರಿಣಾಮಗಳಾದ ಚರ್ಮ ರೋಗಗಳು, ರೋಗ ನಿರೋಧಕತೆಯ ಕೊರತೆ, ಆಂಶಿಕ ಅಂಗವೈಕಲ್ಯ ಇತ್ಯಾದಿ ಸಮಸ್ಯೆಗಳಿಗೆ ದೇಸೀ ತಳಿಯ ಗೋವಿನ ಉತ್ಪನ್ನಗಳಿಂದ ತಯಾರಿಸಿದ ಪಂಚಗವ್ಯ ಔಷಧಿಯು ಅತ್ಯಂತ ಪರಿಣಾಮಕಾರಿ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಆ ಪ್ರಯುಕ್ತ ಇಲ್ಲಿನ “ಮಹಾತ್ಮ ಬಡ್ಸ್ ಸ್ಕೂಲ್”ನಲ್ಲಿ ಪ್ರಾಯೋಗಿಕವಾಗಿ ಪಂಚಗವ್ಯ ಚಿಕಿತ್ಸೆ ಇಂದು ನಡೆಯಲಿದೆ ಎಂದು ‘ಮಾ ಫೌಂಡೇಶನ್’ನ ಪೂಚಕ್ಕಾಡ್ ವಿಷ್ಣುಪ್ರಸಾದ್ ಹೆಬ್ಬಾರ್ ತಿಳಿಸಿದ್ದಾರೆ.

ಸೆಪ್ಟೆಂಬರ್ 22 ಭಾನುವಾರ ಅಪರಾಹ್ನ 3 ಗಂಟೆಗೆ ಆಗಮಿಸುವ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಭವ್ಯ ಸ್ವಾಗತವನ್ನು ನೀಡಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುವುದು.
4 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉದುಮಾ ಕ್ಷೇತ್ರದ ಶಾಸಕ ಕೆ. ಕುಞಿರಾಮನ್ ವಹಿಸಲಿದ್ದಾರೆ. ರಾಘವೇಶ್ವರ ಭಾರತೀ ಶ್ರೀಗಳು ದೀಪವನ್ನು ಬೆಳಗಿ, ಅನುಗ್ರಹ ಸಂದೇಶ ನೀಡಲಿದ್ದಾರೆ. ಕೇರಳ ಸರಕಾರದ ಆರೋಗ್ಯ ಸಚಿವ ವಿ.ಎಸ್. ಶಿವಕುಮಾರ್ ಚಿಕಿತ್ಸಾ ವಿಧಾನದ ಲೋಕಾರ್ಪಣೆಯನ್ನು ನೆರವೇರಿಸಲಿದ್ದಾರೆ.
ಅಸ್ಸಾಂ ರಾಜ್ಯ ಸರಕಾರದ ಆರೋಗ್ಯ ಸಚಿವ ಹೇಮಂತೋ ಬಿಸ್ವಾಸ್ ಶರ್ಮ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮಹಾತ್ಮ ಬಡ್ಸ್ ಸ್ಕೂಲ್‌ಗೆ ಸಂಬಂಧಿಸಿದ ಸಿ.ಡಿ.ಯನ್ನು ಕಾಸರಗೋಡು ಲೋಕಸಭಾ ಕ್ಷೇತ್ರದ ಸಂಸದ ಪಿ.ಕರುಣಾಕರನ್ ಬಿಡುಗಡೆಗೊಳಿಸಲಿದ್ದಾರೆ

1 Response to ನಿರಾಮಯ – 2013: ಎಂಡೋ ಸಂತ್ರಸ್ತರಿಗೆ ಉಚಿತ ಪಂಚಗವ್ಯ ಚಿಕಿತ್ಸೆ ಯೋಜನೆ ಉದ್ಘಾಟನೆ

  1. ಮಹೇಶ್ ಪುಚ್ಚಪ್ಪಾಡಿ

    ಅಂತಿಮವಾಗಿ ಗೋವಿನಿಂದ ಮಾತ್ರವೇ ಪರಿಹಾರ… ವಂದೇ ಗೋಮಾತರಂ

    [Reply]

Leave a Reply

Highslide for Wordpress Plugin