Category Articles/Pramukha

ಧಾರಾ~ರಾಮಾಯಣ – ಒಂದು ಅನನ್ಯ ಅನುಭವ: ಶ್ರೀಮತಿ ರೋಹಿಣಿ ಕಾಂಚನ ಸುಬ್ಬರತ್ನಂ

ಶ್ರೀ ಗುರುಭ್ಯೋ ನಮಃ ದಿನಾಂಕ 15 – 12 – 2019ರಂದು ಇಕ್ಷ್ವಾಕು ಕುಲದೇವನಾದ ಸೂರ್ಯನ ಆಧಿಪತ್ಯದ ದಿನ, ಭಾನುವಾರ. ಮಹಾರಾಜ ದಶರಥನೇ ಶ್ರೀರಾಮನ ಪಟ್ಟಾಭಿಷೇಕಕ್ಕೆಂದು ಉದ್ದೇಶಿಸಿ ನಿಶ್ಚಯಿಸಿದ್ದ ಮುಹೂರ್ತವಾದ ಪುಷ್ಯಾ ನಕ್ಷತ್ರವಿದ್ದ ದಿನ, ದುಷ್ಟರನ್ನು ಸಂಹಾರ ಮಾಡಿ ವನವಾಸವನ್ನು ಮುಗಿಸಿ ಸೀತಾಸಮೇತನಾಗಿ ತನ್ನ ಎಲ್ಲ ಪರಿವಾರಸಮೇತನಾಗಿ ಅಯೋಧ್ಯೆಗೆ ಹಿಂತಿರುಗಿದ ಪುಷ್ಯಾ ನಕ್ಷತ್ರವಿದ್ದ ದಿನ. ಈ… Continue Reading →

ನೀನಿತ್ತಿಹ ಬಾಳ್ ನಿನ್ನರ್ಚನೆಗೆ….

ಇಷ್ಟೋ ಅಷ್ಟೋ ಈಶ್ವರನಿಗೆ ಸಮರ್ಪಿಸಿ, ‘ನಾನೊಬ್ಬ ಮಹಾದಾನಿ’ ಎಂದು ಗರ್ವಪಡಬೇಡ..
ಏಕೆಂದರೆ ನಿನ್ನಲ್ಲಿರುವುದಷ್ಟೂ ಈಶ್ವರನದೇ ಆಗಿದೆ..
ತೋಟದ ಆಳು ಮಾಲೀಕನಿಗೆ ತೋಟದಿಂದ ನಾಲ್ಕು ಎಳನೀರು ಕಿತ್ತುಕೊಟ್ಟು, ಕೊಟ್ಟೆನೆಂದು ಬೀಗಲುಂಟೇ?
ತೋಟದಲ್ಲಿ ಬೆಳೆದುದೆಲ್ಲವನ್ನೂ ಕೊಟ್ಟು ವಿನಯದಿಂದ ತಲೆಬಾಗಬೇಕಾದುದಲ್ಲವೇ ಕರ್ತವ್ಯ ?

‘ಮೆರೆಯದಿರು ನಾ ಮಹಾದಾನಿಯೆಂದು
ಮರೆಯದಿರು ನೀ ಮಾಲಿ, ಅವನೇ ಮಾಲೀಕನೆಂದು’

॥ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ ॥

“ಮಾತೃಹೃದಯದ ಶ್ರೀಗಳು” – ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.

ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ. ನನಗೂ ಶ್ರೀರಾಮಚಂದ್ರಾಪುರಮಠಕ್ಕೂ ಸಂಪರ್ಕವಾಗಿದ್ದು ಹಿಂದಿನ ಗುರುಗಳ  ಕಾಲದಲ್ಲಿ.  ಹಿಂದಿನ ಗುರುಗಳನ್ನು ಒಂದೆರಡು ಬಾರಿ ದರ್ಶನ ಮಾಡುವಂತಹ ಅವಕಾಶ ನನಗೆ ಸಿಕ್ಕಿತ್ತು. ನನಗೆ ನೆನಪಿದ್ದ ಹಾಗೆ, ಒಂದು ಬಾರಿ ಕೊಲ್ಲೂರಿನಲ್ಲಿ ನಡೆದ ಚಂಡಿಕಾ ಹೋಮದ ಸಂದರ್ಭದಲ್ಲಿ, ಮತ್ತೊಂದೆರಡು ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭೇಟಿ ಮಾಡಿದ್ದೆ. ಅವರ ತೇಜಸ್ಸು… Continue Reading →

ಗುರುವಿರಲೆನ್ನ ಮಾನಸದಿ..

ಕರುಣರಸದ ಕೋಡಿವರಿವ ಕಟಾಕ್ಷದ.. ಪರತತ್ತ್ವವರುಪುವ ಆಲಾಪದ.. ವರಪುಣ್ಯಮಯಶರೀರದ.. ನಿರಾಭಾರಿ ಗುರುವಿರಲೆನ್ನ ಮಾನಸದಿ.. ಗುರುಪದಗಳೇನು, ನಿಜಗುಣರ ಈ ‘ಪದವೊಂದು’ ಮಾನಸದಲ್ಲಿ ಸ್ಥಿರವಾಗಿ ನೆಲೆನಿಂತರೆ ಸಾಕು.. ‘ಪರಮಪದ’ವಾತನಿಗೆ ಸಿದ್ಧ, ಸಿದ್ಧ, ಸಿದ್ಧ..!!!

ಕಲಾಪ ಗ್ರಾಮದ ಬಗ್ಗೆ ಮತ್ತಷ್ಟು ಮಾಹಿತಿ

ಈ ಕಲಾಪ ಗ್ರಾಮವು ಹಿಮಾಲಯದ ಬದರಿಕಾಶ್ರಮದ ಸಮೀಪದಲ್ಲಿದೆ. ಅನೇಕ ಯೋಗಿಗಳು ಈಗಲೂ ಇಲ್ಲಿ ಗುಪ್ತಸ್ವರೂಪದಲ್ಲಿ ಯೋಗಸಮಾಧಿಯಲ್ಲಿರುತ್ತಾರೆ ಎಂಬ ಪ್ರತೀತಿಯಿದೆ. ಊರ್ವಶಿಯು ಪುರೂರವನೊಡನೆ ಕೆಲಕಾಲ ಇಲ್ಲಿ ವಾಸಿಸಿದ್ದಳು.-ಕಲ್ಕಿಪುರಾಣ. ಕಲಾಪ ಗ್ರಾಮವು ಸರಸ್ವತೀ ಮೂಲದಲ್ಲಿ ‘ಅಲಕನಂದಾ-ಘರ್ ವಾಲ್ ‘ಗಳ ಮಧ್ಯದಲ್ಲಿದೆ -ಕ್ಯಾಪ್ಟನ್ ರೇಪರ್ ಬ್ರಿಟಿಶ್ ಸಂಶೋಧಕ. ದೇವಾಪಿ:ಪೌರವೋ ರಾಜಾ ಮರುಶ್ಚೆಕ್ಷ್ವಾಕು ವಂಶಜ: | ಮಹಾಯೋಗಬಲೋಪೇತೌ ಕಲಾಪಗ್ರಾಮಸಂಶ್ರಯೌ|| ಏತೌ ಕ್ಷಾತ್ರಪ್ರಣೇತಾರೌ… Continue Reading →

“ಕಲಾಪ” ಗ್ರಾಮದ ಬಗ್ಗೆ ಮತ್ತಷ್ಟು ಮಾಹಿತಿ….

ಮರುಮಹಾರಾಜನು ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವನ್ನು ಪುನಃ ಬೆಳಗಿಸುವವನಾದರೆ ಚಂದ್ರವಂಶದ ದೇವಾಪಿಯು ಈ ಯುಗಾಂತ್ಯದಲ್ಲಿ ಚಂದ್ರವಂಶವನ್ನು ಪುನಃ ಮುಂದುವರೆಸುವನು. ಶಂಭಲ ಎಂಬ ಗ್ರಾಮದಲ್ಲಿ  ವಿಷ್ಣುಯಶಸ ಎಂಬ ಮಹಾತ್ಮನಾದ ಬ್ರಾಹ್ಮಣನಮನೆಯಲ್ಲಿ ಪ್ರಾದುರ್ಭವಿಸುವ ಕಲ್ಕಿಯ ಆಜ್ಞೆಯಂತೆ ಮರು ಮಹಾರಾಜ ಹಾಗೂ ದೇವಾಪಿಯರೀರ್ವರೂ ಸತ್ಯಯುಗದಲ್ಲಿ ಸನಾತನಧರ್ಮವನ್ನು ಬೆಳೆಸುತ್ತಾರೆ. ಇವರಿಬ್ಬರು ಅದ್ಭುತ ಯೋಗಶಕ್ತಿಯನ್ನು ಪಡೆದವರಾಗಿದ್ದು ಈಗ “ಕಲಾಪ” ಗ್ರಾಮದಲ್ಲಿ ಗೋಪ್ಯವಾಗಿ ತಪಸ್ಸನ್ನಾಚರಿಸುತ್ತಿದ್ದಾರೆ.. ದೇವಾಪಿ :- ಭೀಷ್ಮಪಿತಾಮಹನ ತಂದೆಯಾದ… Continue Reading →

ರಾಮನ ಬಳಿಕದ ರಘುವಂಶ..

 ಶ್ರೀರಾಮನ ನಂತರದ ಸೂರ್ಯವಂಶದ ಭವಿಷ್ಯದ ಕುರಿತು ಬಂದಿರುವ ಹಲವಾರು ಪ್ರಶ್ನೆಗಳಿಗೆ ಶ್ರೀ ಭಾಗವತದಲ್ಲಿ ಕಂಡುಬರುವ ಉತ್ತರವಿದು..

• ಪ್ರಭು ಶ್ರೀರಾಮಚಂದ್ರನಿಗೆ ಲವ-ಕುಶರೀರ್ವರು ಮಕ್ಕಳು..
• ಭರತನಿಗೆ ತಕ್ಷ-ಪುಷ್ಕಲರು..
• ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು..
• ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು..
• ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..
• ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..

ಬದುಕೆಲ್ಲ-ಜಗವೆಲ್ಲ ದೀಪಾವಳಿಯೇ ಆಗಲಿ…

|| ಹರೇರಾಮ || ಭಾರತರೆಲ್ಲರಿಗೆ ‘ಪ್ರಭಾದಿನ’ದ ಮಂಗಲಕಾಮನೆಗಳು… ಆಗಸದಲ್ಲಿ ರವಿ-ಶಶಿ-ತಾರೆಗಳೆಂಬ ಮಹಾದೀಪಗಳನ್ನು ಬೆಳಗಿ ಜಗದೀಶ್ವರನು ನಿತ್ಯದೀಪಾವಳಿಯನ್ನಾಚರಿಸುವನು.. ಆತನ ಮಕ್ಕಳಾದುದಕ್ಕೆ ವರುಷಕ್ಕೊಮ್ಮೆಯಾದರೂ ಹಣತೆಗಳ ಹಬ್ಬವನ್ನಾಚರಿಸಿ ಸಂಭ್ರಮಿಸೋಣ.. ‘ಆತ’ ಹಚ್ಚುವ ದೀಪಗಳು ಅವನಿರುವ ತಾವೆಲ್ಲವನ್ನೂ-ವಿಶ್ವವೆಲ್ಲವನ್ನೂ ಬೆಳಗಿದರೆ ನಾವು ಹಚ್ಚುವ ದೀಪಗಳು ನಾವಿರುವ ತಾವುಗಳನ್ನು-ನಮ್ಮ ಪರಿಸರವನ್ನು ಬೆಳಗಲಿ.. ಬೀದಿಯಲಿ ಬೆಳಕೆಷ್ಟಿದ್ದರೇನು ಫಲ ಮನೆಯೊಳಗೆ ಕತ್ತಲಿದ್ದರೆ..!? ಬದುಕಿನ ಬಹಿರಂಗವು ಬೆಳಗಿದರೆ ಸಾಕೇನು..ಅಂತರಂಗವು… Continue Reading →

ಶ್ರೀಗಳ ಕಾರ್ಯದಿಂದ ವಿಸ್ಮಿತರಾಗಿದ್ದೇವೆ! – ಶ್ರೀ ಆರ್. ಎಸ್. ಅಗರವಾಲ್

ಶ್ರೀ ಆರ್. ಎಸ್. ಅಗರವಾಲ್ ಇಮಾಮಿ ಲಿಮಿಟೆಡ್ ಅಧ್ಯಕ್ಷರು ಅಲೌಕಿಕ ಶಕ್ತಿಯೊಂದನ್ನು ವರ್ಣಿಸುವುದಾಗಲೀ, ಆ ಶಕ್ತಿಸ್ವರೂಪವನ್ನು ಶಬ್ದಗಳಲ್ಲಿ ಕಟ್ಟುವುದಾಗಲೀ ಸರಳವಲ್ಲ. ಅವರ ಸಾಮೀಪ್ಯದಲ್ಲಿ ಕುಳಿತು ನಾವೇನನ್ನು ಪಡೆದಿದ್ದೇವೆ ಎನ್ನುವುದು ವರ್ಣನೆಗೆ ಮೀರಿದ ಸಂಗತಿ. ಅವರ ರೋಮ ರೊಮಗಳಲ್ಲಿ ಜ್ಞಾನ, ಶಾಂತಿ, ಶಕ್ತಿ, ಪ್ರಕಾಶಗಳು ತುಂಬಿದೆಯೆಂದರೆ; ಅವರಿಂದ ಆನಂದದ ಪ್ರವಾಹವೇ ಹರಿದು ಬರುತ್ತದೆಯೆಂದರೆ; ಆ ಆನಂದ ನಿಮ್ಮನ್ನು… Continue Reading →

“ನಾನೆಷ್ಟು ಅದೃಷ್ಟವಂತ!”- ಶ್ರೀ ಬಿ.ಕೆ.ಎಸ್. ವರ್ಮಾ

ಶ್ರೀ ಬಿ. ಕೆ. ಎಸ್. ವರ್ಮಾ ಅಂತಾರಾಷ್ಟ್ರೀಯ ಚಿತ್ರಕಲಾವಿದರು ಕೆಲವು ದಿನಗಳ ಹಿಂದೆ ಪವಾಡವೊಂದು ಜರುಗಿತು. ‘ಶ್ರೀಗಳು ಭಕ್ತರೊಬ್ಬರಿಗೆ ಕೊಡುವುದಕ್ಕೆ ಎರಡು ಚಿತ್ರಗಳು ಬೇಕು’ ಅಂತ ನನಗೆ ದೂರವಾಣಿ ಕರೆ ಬಂತು. ಚಿತ್ರದ ಕಾನ್ಸೆಪ್ಟ್ ಏನಿರಬೇಕೆಂದು ಶ್ರೀಗಳೇ ಲೈನ್ ಮೇಲೆ ಬಂದು ತಿಳಿಸಿದರು. ಅದನ್ನು ಕೇಳಿದ ಮೇಲೆ ನನಗನ್ನಿಸಿದ್ದು ಈ ಚಿತ್ರ ರಚಿಸಲು ೩ ತಿಂಗಳು… Continue Reading →

« Older posts

© 2023 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑