ಇಷ್ಟೋ ಅಷ್ಟೋ ಈಶ್ವರನಿಗೆ ಸಮರ್ಪಿಸಿ, ‘ನಾನೊಬ್ಬ ಮಹಾದಾನಿ’ ಎಂದು ಗರ್ವಪಡಬೇಡ..
ಏಕೆಂದರೆ ನಿನ್ನಲ್ಲಿರುವುದಷ್ಟೂ ಈಶ್ವರನದೇ ಆಗಿದೆ..
ತೋಟದ ಆಳು ಮಾಲೀಕನಿಗೆ ತೋಟದಿಂದ ನಾಲ್ಕು ಎಳನೀರು ಕಿತ್ತುಕೊಟ್ಟು, ಕೊಟ್ಟೆನೆಂದು ಬೀಗಲುಂಟೇ?
ತೋಟದಲ್ಲಿ ಬೆಳೆದುದೆಲ್ಲವನ್ನೂ ಕೊಟ್ಟು ವಿನಯದಿಂದ ತಲೆಬಾಗಬೇಕಾದುದಲ್ಲವೇ ಕರ್ತವ್ಯ ?

‘ಮೆರೆಯದಿರು ನಾ ಮಹಾದಾನಿಯೆಂದು
ಮರೆಯದಿರು ನೀ ಮಾಲಿ, ಅವನೇ ಮಾಲೀಕನೆಂದು’

॥ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ ॥

Facebook Comments Box