ಶ್ರೀಯುತ ಶ್ರೀಹರ್ಷ ಜೋಯಿಸ್ ಇವರು ಪ್ರಸಿದ್ಧ ಜ್ಯೋತಿಷಿಮನೆತನವಾದ ಕೊಂಡಿಬೈಲಿನವರು. ಶ್ರೀಗುರುಗಳ ಪರಿವಾರದಲ್ಲಿ ಒಬ್ಬರಾಗಿ, ಸಂಸ್ಥಾನದ ನಿಕಟ ಸಂಪರ್ಕದಲ್ಲಿ ಇರುವ ಇವರು ಒಳ್ಳೆಯ ಬರಹಗಾರರೂ, ಚಿಂತಕರೂ ಹೌದು. ಅವರ ಮನದಾಳದ ತುಮುಲವನ್ನು ಸಮ್ಮುಖವಾಗಿ ಪ್ರಕಟಿಸುತ್ತಿದ್ದೇವೆ. ಶ್ರೀಯುತರಿಗೆ ಗುರುದೇವರ ಅನುಗ್ರಹ ದೊರೆಯಲೆಂದು ನಮ್ಮ ಆಶಯ.
~
ಸಂ

ಮಧುರಕಂಠದೊಳಿರುವ ಭಾವ ಹುಳುಕುಹೃದಯದೊಳಗಿಲ್ಲವೇ ?
ಬಹಿರಂಗದಲಿ ಕಣ್ಣು ಹೊಳೆಯುತ ಅಂದವಾಗಿದ್ದರೇನು ಅಂತರಂಗದೊಳಗವು ಅಂಧವಾಗಿಲ್ಲವೇ ?

ಕೋಗಿಲೆಯಂತೆ ಉಲಿದರೇನು?
ನವಿಲಿನಂತೆ ನಲಿದರೇನು?
ನುಡಿವ ರಾಗದಲಿ ರಸವಲ್ಲ….!
ಹರಿಯುವುದು ವಿಷವೇ ಸಂಶಯವಿಲ್ಲ..

ಲೇಖಕ ಶ್ರೀಹರ್ಷ ಜೋಯಿಸರು, ಶ್ರೀರಾಮನುಗ್ರಹದ ಸಂತಸದಲ್ಲಿ

ಲೇಖಕ ಶ್ರೀಹರ್ಷ ಜೋಯಿಸರು, ಶ್ರೀರಾಮನುಗ್ರಹದ ಸಂತಸದಲ್ಲಿ

ಮುದುಡಿದ ಬದುಕನರಳಿಸುವವ ಗುರು
ರೂಪಿಸುವ ಶಕ್ತಿ ಗುರು
ಉಳಿಸಿ ಬೆಳೆಸುವವ ಗುರು
ಎತ್ತರ ಎತ್ತರಕೆ ಬೆಳೆಸಿ ಆನಂದಪಡುವವ ಗುರು
ಮರೆತದನು ಬದುಕಿಸಿದವನ ಬುಡವನಗೆದರೆ ನಿನಗೇನು ಸಿಕ್ಕೀತು ಇನ್ನು..?

ತಾಯಿಯ ಪ್ರೀತಿಯೇ ಪ್ರೇಮವೇ..?
ವಾತ್ಸಲ್ಯದೊರತೆಯನು ತೊರೆದು ನೀ ಮರೀಚಿಕೆಯ ಬೆನ್ನು ಹತ್ತಿದೆಯಲ್ಲವೇ ?
ನಿನಗುಳಿಯಿತಿನ್ನೇನು?
ಬರಡು ಭೂಮಿ..

ಬದುಕ ಭದ್ರಗೊಳಿಸುವ ಬುನಾದಿ ಗುರು
ಆ ಆಧಾರವನೇ ಮರೆತರೆ..
ಹೇಳು ನಿನಗಿನ್ನಾರು..?

ದೇವರು ಮುನಿದರೆ ಗುರು ಕಾಯುವನು
ಆದರೆ ಗುರು ಮುನಿದರೆ……?
ಮನೆಯ ತೊರೆಯಬೇಕು ಮಾರಿ..
ಮರೆಯಲೇಬೇಕು ಮಠದ ದಾರಿ…
ಬದುಕಿಗಿನ್ನೇನಿದೆ ಹಿತಕಾರಿ..?

ಹರೇರಾಮ

~*~*~

Facebook Comments