( ಬುದ್ದಿ ಜೀವಿ ಗಳಲ್ಲಿ) ಒಂದು ಸಣ್ಣ ಮನವಿ:
ಕೆಲವು ನನ್ನ ಸ್ನೇಹಿತರು , ಕೆಲವು ಬರಹಗಾರರು, ಬುದ್ಧಿಜೀವಿಗಳು, ಕೆಲವು ಫೇಸ್ ಬುಕ್ ಸದಸ್ಯರು ನಮ್ಮ ಪ್ರೀತಿಯ ಶ್ರೀ ಸಂಸ್ಥಾನದ ಕುರಿತಾಗಿ ಅನಗತ್ಯ ವಾಗಿ ಅವರ ಘನತೆಗೆ ಕುಂದು ತರುವಂತಹ ಪೋಸ್ಟ್ ಗಳನ್ನು ಮಾಡುತ್ತಿದ್ದು ಅದಕ್ಕೆ ಉತ್ತರಿಸುವಂತೆ ಕೇಳುತ್ತಿದ್ದಾರೆ. ಒಬ್ಬೊಬ್ಬರಿಗೆ ಉತ್ತರ ಕೊಡುವುದರ ಬದಲಾಗಿ ನನ್ನ ಭಾವನೆ ಗಳನ್ನು ಈ ಚಿಕ್ಕ ಬರಹ ದ ಮೂಲಕ ಹಂಚಿ ಕೊಳ್ಳುತ್ತಿದ್ದು ತಾವು ಯಾರಾದರೂ ಫೇಸ್ಬುಕ್ ನಲ್ಲಿ ಶ್ರೀಗಳ ಘನತೆಗೆ ಕುಂದಾಗುವಂತಹ ಪೋಸ್ಟ್ ಗಳನ್ನು ಕಂಡಲ್ಲಿ ನನ್ನ ಈ ಪೋಸ್ಟ್ ನ್ನು ಅವರೊಂದಿಗೆ ಹಂಚಿ ಕೊಳ್ಳಬಹುದು.
ಈ ಕೆಳಗಿನ ಬರಹದ ಸಂಪೂರ್ಣ ಜವಾಬ್ದಾರಿ ನನ್ನದೇ!

ಹೆಚ್ಚು ಅಭಿಮಾನ ಮತ್ತು ಒಂಚೂರು ಅಹಂಕಾರ ದಿಂದ ನಾನು ಈ ಮಾತನ್ನು ಹೇಳ ಬಯಸುತ್ತೇನೆ – ಇಲ್ಲಿ ಶ್ರೀಗಳನ್ನು ಪೂಜಿಸುವ, ಆರಾಧಿಸುವ ಸಾವಿರ ಸಾವಿರ ಜನರಿಗೆ ಅಪೇಕ್ಷೆ ಇರುವುದು ಅವರ ಆಶೀರ್ವಾದ ಮಾತ್ರ . ಅಂದರೆ ನಮಗ್ಯಾರಿಗೂ ಕೂಡ ಯಾವುದೇ ಲೌಕಿಕ ಲಾಭದ ಅಸೆ ಇಲ್ಲ – ಮಠದ ಒಂದು ಪೈಸೆ ಹಣ, ಮಠದಿಂದ ಬರಬಹುದಾದ ಕೀರ್ತಿ ಪ್ರತಿಷ್ಠೆ ಇವ್ಯಾವೂ ನಮ್ಮ ಪಟ್ಟಿ ಯಲ್ಲಿ ಇಲ್ಲ – ಶ್ರೀ ರಾಮ ಮತ್ತು ಶ್ರೀ ಗುರುಗಳ ಆಶೀರ್ವಾದ ಮಾತ್ರ ನಮ್ಮ ನೀರೀಕ್ಷೆ – ಅದರಿಂದಾಗಿಯೇ ಅವರ ಲಕ್ಷಾಂತರ ಭಕ್ತರು ಸಮಾಜದಲ್ಲಿ ಅತ್ಯಂತ ಗೌರವ ಯುತವಾಗಿ ಬದುಕುತ್ತಿದ್ದು ಸರಿ ತಪ್ಪುಗಳ ವಿಶ್ಲೇಷಣೆಗಳನ್ನು ಸ್ವತಂತ್ರ ವಾಗಿ ಮಾಡಲು ಸಮರ್ಥರಿದ್ದೇವೆ ಎಂದು ಹೇಳಿಕೊಳ್ಳಲು ಅಭಿಮಾನ ವನ್ನೇ ಪಡಬೇಕು ಅಲ್ಲವೇ?

ಲೇಖಕರು: ಪ್ರಸನ್ನ.ಎಂ.ಮಾವಿನಕುಳಿ

ಲೇಖಕರು: ಪ್ರಸನ್ನ.ಎಂ.ಮಾವಿನಕುಳಿ

ಆದರೆ ಮೇಲೆ ಹೇಳಿದ ಎಲ್ಲ ಲೌಕಿಕ ಲಾಭಗಳನ್ನು ಮಠದಿಂದ ಪಡೆದುಕೊಂಡ ಒಂದೆರಡು ಪುಣ್ಯಾತ್ಮರು ನಮ್ಮ ಪ್ರೀತಿಯ ಶ್ರೀ ಸಂಸ್ಥಾನದ ಮೇಲೆ ಕ್ಷುದ್ರ ಆರೋಪಗಳನ್ನು ಹೊರಿಸಿದ್ದಾರೆ.
(ಇರಲಿ ಹೊನ್ನಾವರದ ಮ್ಯಾಜಿಸ್ಟ್ರೇಟ್ ಎದುರು ಕೊಟ್ಟ ದೂರಿನ ವಿಸ್ತ್ರತ ಕಾಪಿಯನ್ನು ನಾನೂ ನೋಡಿದ್ದೇನೆ – ಒಬ್ಬ ಮೂರನೆಯ ವ್ಯಕ್ತಿ ಆಗಿ ಅದನ್ನು ಅಭ್ಯಸಿಸುತ್ತಿದ್ದು ಅದರಲ್ಲಿ ಇರುವ ಅಂಶಗಳ ಮೇಲೆ ಸದ್ಯದಲ್ಲೇ ಬರೆಯುತ್ತೇನೆ). ಮೊದಲ ದೂರಿನ ಬಗೆಗೆ ನಾನು ವ್ಯಕ್ತ ಪಡಿಸಿದ ಅಭಿಪ್ರಾಯದಂತೆಯೇ (link) ಉಚ್ಚ ನ್ಯಾಯಾಲಯ ಅದನ್ನು ಗಂಭೀರ ವಾಗಿ ತೆಗೆದುಕೊಂಡಿಲ್ಲ!!

ಇಂತಹ ಒಂದು ಸಂದರ್ಭದಲ್ಲಿ , ಅದಾಗಲೇ ಹೇಳಿದಂತೆ ಸ್ವತಂತ್ರ ವಾಗಿ ಯೋಚಿಸಬಲ್ಲ ಲಕ್ಷ ಲಕ್ಷ ಜನ ಶ್ರೀಗಳ ಮೇಲೆ ಇರುವ ಆ ದೂರಿನಲ್ಲಿ ಪ್ರಾಮಾಣಿಕತೆ ಇಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುವ ಸಂಗತಿ – ಎಂದು ಅಭಿಪ್ರಾಯ ಪಡುತ್ತಿದ್ದರೂ ಶ್ರೀಗಳನ್ನು ಗೊತ್ತಿರದವರು ಮಾತ್ರ ಶ್ರೀಗಳ ಘನತೆಗೆ ತಕ್ಕದಲ್ಲದಂತೆ ಮಾತನಾಡುವ ಘಟನೆಗಳಾಗುತ್ತಿವೆ.
ಅದೂ ಸರಿ . ತಮಗೆ ಈ ವಿಷಯದ ಬಗೆಗೆ ಮಾತನಾಡಲೇ ಬೇಕು ಎಂದು ಇದ್ದಲ್ಲಿ ಅಲ್ಲಿ ಹೋಗಿ ಒಮ್ಮೆ ಅವರನ್ನು ಬೇಟಿ ಮಾಡಿ .
ಅದೂ ಸಾದ್ಯ ವಿಲ್ಲ ವೆಂದದಾಲ್ಲಿ, ಆ ದೂರು ಪ್ರಾಮಾಣಿಕ ವಲ್ಲ ಎಂಬ ಅಭಿಪ್ರಾಯದ ಹಿಂದಿನ ಕಾರಣಗಳನ್ನು ಅರಿತು ಕೊಳ್ಳಲು ಪ್ರಯತ್ನ ಪಡಿ .
ಅದಕ್ಕೂ ಸಮಯವಿಲ್ಲ ವೆಂದಾದಲ್ಲಿ ದಯವಿಟ್ಟು ಒಮ್ಮುಖ ವಾಗಿ ಶ್ರೀಗಳ ಘನತೆಗೆ ಕುಂದಾಗುವಂತಹ ಅಭಿಪ್ರಾಯ ಗಳನ್ನು ವ್ಯಕ್ತ ಪಡಿಸಲು ಮುಂದಾಗುವ ಮುನ್ನ ಇನ್ನೊಮ್ಮೆ ಯೋಚನೆ ಮಾಡಿ.

ಹೌದು – ವಾಕ್ ಸ್ವಾತಂತ್ರ ಸಂವಿಧಾನ ದತ್ತ ಹಕ್ಕು ಆದರೆ ಅದು absolute ಅಲ್ಲ . ಶ್ರೀಗಳ ಮೇಲೆ ಅವರ ಘನತೆಗಳಿಗೆ ಕುಂದಾಗುವಂತಹ ಬರವಣಿಗೆ ನೇರವಾಗಿ ಭಾರತೀಯ ದಂಡ ಸಂಹಿತೆ ಯ ಸೆಕ್ಷನ್ 295-A ಕೆಳಗೆ ಜಾಮೀನು ರಹಿತ ಅಪರಾಧ ಮತ್ತು ಅದಕ್ಕೆ 3 ವರ್ಷಗಳವೆರೆಗೆ ಜೈಲು ವಾಸವನ್ನು ಘನ ನ್ಯಾಯಾಲಯ ವಿಧಿಸಬಹುದು ಎಂಬುದನ್ನು ತಮ್ಮೆಲ್ಲರ ಗಮನಕ್ಕೆ ತರುತ್ತೇನೆ ..

– ಸೆಕ್ಷನ್ ೨೯೫ a ಉದ್ದೇಶ ಪೂರ್ವಕವಾಗಿ ಒಂದು ಸಮುದಾಯದ ಜನರ ಧಾರ್ಮಿಕ ನಂಬಿಕೆಗಳಿಗೆ ಅವಮಾನ/ಹಾನಿ ಮಾಡುವುದು ಅತವ ಹಾನಿ ಮಾಡಲು ಪ್ರಯತ್ನಿಸುವುದನ್ನು ತಡೆಯುತ್ತದೆ – ಹೀಗೆ ಹಾನಿ ಮಾಡುವುದು ಬರವಣಿಗೆ ಅಥವಾ ಮಾತುಗಳು ಅಥವಾ ಇನ್ನು ಯಾವುದೇ ಮಾಧ್ಯಮ ಗಳ ಮೂಲಕ ಆಗಿರಬಹುದು .
ಆದ್ದರಿಂದ ಅನಾವಶ್ಯಕವಾಗಿ ಶ್ರೀಗಳ ಮೇಲೆ ಅವರ ಘನತೆಗಳಿಗೆ ಕುಂದು ತರುವ ಬರವಣಿಗೆ ಗಳ ಮೂಲಕ ಲಕ್ಷಾಂತರ ಜನರ ಧಾರ್ಮಿಕ ನಂಬಿಕೆ ಗಳಿಗೆ ಹಾನಿ ಮಾಡಬೇಡಿ ಎಂದು ಎಚ್ಚರಿಸುತ್ತೇನೆ, ಕೋರಿಕೊಳ್ಳುತ್ತೇನೆ..


ಪ್ರಸನ್ನ ಎಂ ಮಾವಿನಕುಳಿ, ಬಿ.ಇ, ಎಲ್.ಎಲ್.ಬಿ

Facebook Comments Box