LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ದಿವ್ಯತೆಯ ಭವ್ಯತೆಗೆ ಸವಾಲೇ…? : ಸಂದೇಶ ತಲಕಾಲಕೊಪ್ಪ

Author: ; Published On: ರವಿವಾರ, ಸೆಪ್ಟೆಂಬರ 7th, 2014;

Switch to language: ಕನ್ನಡ | English | हिंदी         Shortlink:

ಚಿರಂಜೀವಿ ಸಂದೇಶರು ಸಾಗರದ ತಲಕಾಲಕೊಪ್ಪದವರು. ಆಧುನಿಕ ಕಾಮರ್ಸ್ ವಿದ್ಯಾರ್ಥಿಯಾಗಿದ್ದರೂ, ಸನಾತನ ಧರ್ಮ, ವೇದ, ಉಪನಿಷತ್ತುಗಳು, ಸಂಸ್ಕೃತ, ಸಂಸ್ಕಾರದ ಮೇಲೆ ಅಪಾರ ಭಕ್ತಿ ಗೌರವವನ್ನು ಹೊಂದಿದ್ದಾರೆ. ಶ್ರೀಸಂಸ್ಥಾನದವರ ಬಗೆಗಿನ ಅಪ್ರತಿಮ ಪ್ರೀತಿಯನ್ನು ಈ ಸಮ್ಮುಖ ಅಂಕಣದ ಮೂಲಕ ಪ್ರಕಟಪಡಿಸಿದ್ದಾರೆ. ಲೇಖಕರಿಗೆ ಗುರು-ದೇವರ ಅನುಗ್ರಹ ಸದಾ ಇರಲೆಂಬುದು ನಮ್ಮ ಆಶಯ.

ಸಂ

ದಿವ್ಯತೆಯ ಭವ್ಯತೆಗೆ ಸವಾಲೇ…??
ತಾಪಸಿಗೆ ಇದಾವ ತಾಪ?
ಅಮ್ಮನಮೇಲೆ ಮಾಡಲು ಈ ಪರಿಯ ಆರೋಪ…
ಬಿಡುವುದೇ ನಿನ್ನ ಆ ಪಾಪ?

ಚಿ ಸಂದೇಶ ತಲಕಾಲಕೊಪ್ಪ

ಚಿ ಸಂದೇಶ ತಲಕಾಲಕೊಪ್ಪ

ಜಿತೇಂದ್ರಿಯ ಅನಾದಿ ಧರ್ಮವೃಕ್ಷಕ್ಕೆ ಬಳ್ಳಿಯ ಪಾಶವೇನು ಮಾಡೀತು?
ಕೋಟಿಸೂರ್ಯಪ್ರಭೆಗೆ ಗ್ರಹಣಗ್ರಸ್ಥ ರವಿಯೇನು ಮಾಡಿಯಾನು?

ಶ್ರೀಮನ್ನಾರಾಯಣನಿಂದ ಆರಂಭವಾದ ಘನ ಪರಂಪರೆಗೆ ನರನಾರಾಯಣನೊಂದು ಲೆಕ್ಕವೇ?
ಇನ್ನು, ಎದುರು ಬರಲೂ ಅಶಕ್ತರಾದ ‘ಕಾಣದ ಕೈಗಳೇ’ ‘ಸಣ್ಣ ಮನಸಿನ ದೊಡ್ಡ ವ್ಯಕ್ತಿಗಳೇ’ ರಾಘವ ಕೋದಂಡ ಪಿಡಿದರೆ ತಾಳೀರೆ ನೀವು??

ಶ್ರೇಷ್ಠತೆಯ ಜ್ಯೇಷ್ಠಯನೊಪ್ಪದಿದ್ದರೆ,
ಗುಣಿಯ ಗುಣಗಳ ಆಸ್ವಾದಿಸುವ-ಆರಾಧಿಸುವ ಗುಣವಿಲ್ಲದಿದ್ದರೆ,
ಧರ್ಮಮಾರ್ಗದಿ ಉತ್ತುಂಗಕ್ಕೆರಿದವರ ಔನತ್ಯವ ಸಹಿಸುವ ಶಕ್ತಿ ಇಲ್ಲವಾದರೆ…
ಇಲ್ಲವಾದೊಡೆ, ಉಟ್ಟ ಬಟ್ಟೆ ಬರಿಯ ಹಗಲುವೇಷವಾದೀತು,ಇರುವ ಸ್ಥಾನ ದೊಂಬರಾಟದ ಸ್ಥಳವಾದೀತು, ಬೋಧೆಗಳು ಸಿನಿಮೀಯವಾದೀತು…

ಕುಳಿತ ಸ್ಥಾನಕ್ಕೆ,ಜನ ಕೊಟ್ಟ ಗೌರವಕೆ ಅರ್ಹವಾಗಿರಲಿ ನಿಮ್ಮ ನೆಡೆ ನುಡಿ…
ಇದು ಬೇಡಿಕೆಯಲ್ಲ… ನಮ್ಮ ಆಗ್ರಹ!
ಬೇಡುವ ಧೈನ್ಯತೆ ನನ್ನ ಕುಲಗುರು ಪೀಠಕ್ಕೆ ಎಂದೂ ಇಲ್ಲ…

ಶ್ರೀಮನ್ನಾರಾಯಣನಿಂದಾರಂಭವಾದ ಘನ ಪರಂಪರೆಯಿದು,
ಶ್ರೀಶಂಕರರ ದಿವ್ಯ ಸಂಕಲ್ಪದ ಪ್ರತಿರೂಪವಿದು,
ಗೋ ಕರ್ಣಮಂಡಲದ(ಕೇರಳದ ತುದಿಯಿಂದ ಗೋವಾದ ಮಾಂಡೋವಿ ನದಿ ಪರ್ಯಂತ)
ಆಚಾರ್ಯತ್ವವ ವಹಿಸಿರುವ ರಾಜಗುರು ಪೀಠವಿದು,
ಶಂಕರರ ಜ್ಞಾನಶಿಷ್ಯ; ಸುರೇಶ್ವರರ ಜ್ಯೇಷ್ಠಶಿಷ್ಯ ವಿದ್ಯಾನಂದರಿಂದಾರಂಭವಾದ,
ತಪೋಧನರು ಅಲಂಕರಿಸಿದ ಧರ್ಮ ಸಿಂಹಾಸನವಿದು,
ಲೋಕನಿಯಮಗಳ ಮೀರಿನಿಂತ ಸಂಕಲ್ಪಿತ ಕಾರ್ಯಸಿದ್ಧಿ ಪ್ರವೀಣರ
ಸಂತ ಪರಂಪರೆಯಿದು,
ಕೋಟಿ ಗೋವುಗಳಿಗೆ ಜೀವವನಿತ್ತ,
ಸಮಸ್ಥ ಮಹಿಳಾಸಮಾಜಕ್ಕೆ ಮಾತೆಯ ಸ್ಥಾನವನೆಕೊಟ್ಟ
ಮಾತೃಸ್ವರೂಪಿಗ ಮಹಾಸಂಸ್ಥಾನವಿದು…
ಅಷ್ಟೇ ಏಕೆ? ಶಂಕರರ ಅಸಂಖ್ಯ ಪರಂಪರೆಗಳಲ್ಲಿ ಅವಿಚ್ಛಿನ್ನವಾದ ಏಕೈಕ ಗುರುಪರಂಪರೆಯಿದು…
ಓ ಕಾಣದ ಕೈಗಳೇ! ಈ ಅವಿಚ್ಛಿನ್ನ ಶಾಂಕರಪೀಠದ ಕೂದಲು ಕೊಂಕಿಸುವ ಕನಸ ಕಂಡರೂ ಮರತುಬಿಡಿ….

ಅಂದು ತಪೋರಾಮಾದಿ ವಿಗ್ರಹಗಳಿಗಾಗಿ ನಮ್ಮ ಮಠದಮೇಲೆ ಮಾಡಿದ ದಾಳಿಗಳ ಇತಿಹಾಸದಲ್ಲಿರಬಹುದು,
ಇಂದು ನೀವು ಮಾಡಿರುವ/ ಮಾಡುತ್ತಿರುವ ಎಲ್ಲ ನೀಚಕಾರ್ಯಗಳಿರಬಹುದು,
ಅದಾವುದರಲ್ಲೂ ನೀವ್ ಯಶಸ್ವಿಯಾಗಿಲ್ಲ,
ಆಗುವುದೂ ಇಲ್ಲ…

ಓ ಸಣ್ಣಮನಸಿನ ದೊಡ್ಡವ್ಯಕ್ತಿಗಳೇ!
ಅಗಸ್ತ್ಯ ಪೂಜಿತ ರಾಮನನುಗ್ರಹವಿರುವರೆಗೂ,
ಶಂಕರರ ದಿವ್ಯಸಂಕಲ್ಪದ ದಿವ್ಯ ಪ್ರವಾಹವ ತಡೆವಶಕ್ತಿ ಯಾರಿಗೂ ಇಲ್ಲ…

ನಮ್ಮ ಪ್ರೀತಿಯ ಶ್ರೀ ಸಂಸ್ಥಾನದವರೊಟ್ಟಿಗೆ ನಾವಿದ್ದೇವೆ,
ಅವರಿಂದಾಗಿ ನಾವು…
ಅವರಿಗಾಗಿ ನಾವು…

ದುರುಳರೇ,
ಶಿಷ್ಯ ಕೋಟಿ ಜಾಗ್ರತವಾಗಿದೆ ಎಚ್ಚರ…ಎಚ್ಚರ…

|| ಹರೇರಾಮ ||

~*~*~

21 Responses to ದಿವ್ಯತೆಯ ಭವ್ಯತೆಗೆ ಸವಾಲೇ…? : ಸಂದೇಶ ತಲಕಾಲಕೊಪ್ಪ

 1. Nandaja

  Hare raama

  [Reply]

 2. maya

  HARERAAMAAA

  SHISHYA KOTIYA BHAVAVANNA ,
  BARAHA LEKHANA ROOPADALLI NEEDIDA NIMAGE
  DHANYAVAADAGALU…..

  [Reply]

  Sandesha Talakalakoppa Reply:

  ಹರೇ ರಾಮ

  [Reply]

 3. Siddarameshwara H.N

  Well said sandesh, Your views are far far matured than your age, Hare Raama bless you

  [Reply]

  Sandesha Talakalakoppa Reply:

  ಧನ್ಯವಾದಗಳು ಸಾರ್…

  ಹರೇ ರಾಮ

  [Reply]

 4. Pallavi

  Hareraama…

  [Reply]

 5. Harikrishna

  Hare raama..

  [Reply]

 6. bsadithi

  Hare Raama

  [Reply]

 7. ನಂದ ಕಿಶೋರ ಬೀರಂತಡ್ಕ

  ಹರೇ ರಾಮ :)
  well said Santhosh :)

  [Reply]

 8. Bhagya, San Diego

  Harerama. Prabhuddha lekhana Sandesh.

  [Reply]

  Sandesha Talakalakoppa Reply:

  ಪ್ರೇರಕ ಗುರು…type ಮಾಡಿದ್ದಸ್ಟೇ ನಾನು…

  ಹರೇ ರಾಮ

  [Reply]

 9. Krishna Prakash

  ನಮ್ಮ ಪ್ರೀತಿಯ ಶ್ರೀ ಸಂಸ್ಥಾನದವರೊಟ್ಟಿಗೆ ನಾವಿದ್ದೇವೆ……

  [Reply]

 10. SHYLENDRAKUMAR T R

  Hare Raama

  Well said Sandesh. This shold be inspiration to all

  [Reply]

  Sandesha Talakalakoppa Reply:

  ಧನ್ಯವಾದಗಳು ಶೈಲೂಮಾವ…
  ಹರೇ ರಾಮ

  [Reply]

 11. Shwetha Shasthry

  Hareraama!

  [Reply]

  Sandesha Talakalakoppa Reply:

  ಹರೇ ರಾಮ

  [Reply]

 12. Jayarama Korikkar

  ಹರೇ ರಾಮ..

  ಸಂದೇಶನ ಸಂದೇಶ ಅದ್ಭುತವಾಗಿದೆ ನಿಮ್ಮ ಭಾವನೆಗಳಿಗೆ ನಮ್ಮ ಸಹಮತವಿದೆ..

  ಸೂತ್ರ ಹಿಡಿದ ಕೈಗಳಿಗೂ, ಬೊಂಬೆಯಾಟದ ಪಾತ್ರಗಳಿಗೂ ಸಂದೇಶ ತಲಪುತ್ತದೆಂದು ಆಶಿಸೋಣವೆ?

  [Reply]

  Sandesha Talakalakoppa Reply:

  ಸೂತ್ರ ಹಿಡಿದವರು ಸೆರೆಸೇರಲಿ…ಧರ್ಮ ಮೆರೆಯಲಿ… ಅಧರ್ಮ ಅಳಿಯಲಿ…

  [Reply]

 13. RK Nanditale

  Well thought and timely message!
  Hare Raama!

  [Reply]

  Sandesha Talakalakoppa Reply:

  ಚಿಂತಿಸಲು ಬುದ್ಧಿಕೊಟ್ಟವ ಗುರು….ಬರೆವ ಚೇತನವ ಕೊಟ್ಟವ ಗುರು…

  ಹರೇ ರಾಮ

  [Reply]

 14. Sandesha Talakalakoppa

  ಸೂತ್ರ ಹಿಡಿದವರು ಸೆರೆಸೇರಲಿ…ಧರ್ಮ ಮೆರೆಯಲಿ… ಅಧರ್ಮ ಅಳಿಯಲಿ…

  [Reply]

Leave a Reply

Highslide for Wordpress Plugin