LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

‘ರಾಮ’ಕಲಿಯ ಕಲುಷಕ್ಕೆ ‘ವಿರಾಮ’ : ಚಂಪಾ ರಾಣಿ

Author: ; Published On: ಶುಕ್ರವಾರ, ಸೆಪ್ಟೆಂಬರ 12th, 2014;

Switch to language: ಕನ್ನಡ | English | हिंदी         Shortlink:

ಶ್ರೀಮತಿ ಚಂಪಾರಾಣಿಯವರು ಮೂಲತಃ ಚದರವಳ್ಳಿಯ ಬಂಗಲಗಲ್ಲಿನವರು. ಶಿರಸಿಯ ವಿದ್ವಾನ್ ನರಸಿಂಹ ಭಟ್ ಇವರೊಡನೆ ಸಂಸಾರಸ್ಥರಾಗಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಜಯ ಚಾತುರ್ಮಾಸ್ಯದಲ್ಲಿ ಭಾರತೀಪ್ರಕಾಶನವು ಹೊರತಂದ ಗುರುಗ್ರಂಥಮಾಲಿಕೆಯಲ್ಲಿ “ಶ್ರೀ ರಮಣ ಮಹರ್ಷಿ” ಪುಸ್ತಕದ ಲೇಖಿಕೆಯಾಗಿರುವ ಇವರು ಗುರುಪೀಠದ ಮೇಲೆ ಅಚಲ ಶ್ರದ್ಧೆ ಹೊಂದಿರುವವರು. ತಮ್ಮ ಗುರುಭಕ್ತಿಯನ್ನು ಈ ಸಮ್ಮುಖ ಲೇಖನದ ಮೂಲಕ ಪ್ರಕಟಿಸಿದ್ದಾರೆ.
ಅವರ ಕುಟುಂಬಕ್ಕೆ ಆಯುರಾರೋಗ್ಯಭಾಗವು ಶ್ರೀರಾಮನಿಂದ ಅನುಗ್ರಹಿತವಾಗಲೆಂಬುದು ನಮ್ಮ ಆಶಯ.

~
ಸಂ

‘ಇದು ಹೀಗೆ ಇರದು’ – ಸಂಸ್ಥಾನ ಸೂಕ್ತಿ
ಹೌದು ಗುರುವೇ ಇದು ಹೀಗೆ ಇರದು.
ಅಟ್ಟಹಾಸದಿಂದ ಮೆರೆಯುತ್ತಿರುವ ಅಧರ್ಮಿಗಳ ದುಷ್ಕೃತ್ಯ , ಕುಹಕತೆ ಹೀಗೆ ಇರದು . . . .
ಭ್ರಮೆಯನ್ನು ಸೃಷ್ಟಿಸಿ ಪ್ರಮೆಯನ್ನು ಮರೆಮಾಚುವೆನೆಂಬ ವ್ಯರ್ಥ ಪ್ರಯತ್ನ ಸಾಕಾರವಾಗದು. 

ಲೇ | ಶ್ರೀಮತಿ ಚಂಪಾರಾಣಿ, ಬೆಂಗಳೂರು

ಲೇ | ಶ್ರೀಮತಿ ಚಂಪಾರಾಣಿ, ಬೆಂಗಳೂರು

ಹೆಣ್ಣನ್ನು ತಾಯಿಗೆ ಹೊಲಿಸಿ, ಗೋಮಾತೆಗೆ ಹೊಲಿಸಿ, ವಾತ್ಸಲ್ಯದಲ್ಲಿ ದೈವತ್ವವನ್ನು ಕಾಣುವ ಗುರುವಿಗೆ ಸಲ್ಲದ ಅಪವಾದವನ್ನಿತ್ತು –
ಮಾನಹಾನಿ ಮಾಡಿದೆರೆಂಬ ಭ್ರಮೆ ಅವರಿಗಿದ್ದರೆ ಅದು ಅವರಿಗಿರುವ ಮೂರ್ಖತನ ಮತ್ತು ಅವರಿಗಿರುವ ರೋಗ!
ಕಾಮಾಲೆ ರೋಗಕ್ಕೆ ತುತ್ತಾದವರಿಗೆ ಲೋಕವೆಲ್ಲಾ ಹಳದಿಯಾಗಿ ಕಾಣುವುದಂತೆ. . !!

೪ ವರ್ಷದ ಮಕ್ಕಳಿಂದ ಆರಂಭವಾಗಿ ೮೦ ವರ್ಷದ ವೃದ್ಧರು ಬಲ್ಲರು ಗುರುವಿನ ವಾತ್ಸಲ್ಯವನ್ನು .
ಅದಕ್ಕೆ ಸಾಕ್ಷಿಬೇಕಾಗಿಲ್ಲ; ಸತ್ಯಕ್ಕೆ ಯಾವ ಸಾಕ್ಷಿಯೂ ಕೊಡಬೇಕಾಗಿಲ್ಲ. ಅದು ನಿತ್ಯಪ್ರಕಾಶ.
ಆಡುಮಾತಲ್ಲಿ ಹೇಳುವುದಾದರೆ “ಸೂರ್ಯನಿಗೇ ಟಾರ್ಚೇ?”.ಬೇಕಿಲ್ಲ ಅವರ ಅಂತ್ಯದ ಸಮಯ ಸಮೀಪಿಸುತ್ತಿದೆ .
ಹೌದು ಗುರುವೆ ಇದು ಹೀಗೇ ಇರದು ….

ಸತತವಾಗಿ ಸದ್ವಿಚಾರಗಳನ್ನು ಲೋಕಕ್ಕೆ ನೀಡುತ್ತಾ,
ಆ ಸದ್ವಿಚಾರವನ್ನು ಸ್ವೀಕರಿಸುವ ಮನವನ್ನು ಭಕ್ತರಲ್ಲಿ ಬೆಳೆಸುತ್ತಾ,
ಅವರ ಹೃದಯದಲ್ಲಿ ರಾಮಭಕ್ತಿಯನ್ನು ಹುಟ್ಟಿಸಿ,
ಆಬಾಲ ವೃದ್ಧರಿಗೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿ,
ಒಂದುಸಮಾಜಕ್ಕೆ ಗುರುವಾಗಿ ಮಾಡಬೇಕಾದ ಎಲ್ಲ ಕರ್ತವ್ಯವನ್ನು ನಡೆಸಿಕೊಂಡು ಬಂದ ಸದ್ಗುರುವಿಗೆ ಬಂದ ಸಂಕಷ್ಟ ಕ್ಷಣಿಕ!

ಈ ಕಷ್ಟದ ಸಮಯ ಹೀಗೇ ಇರದು.
ಸಂತರಿಗೆ ಬಂದ ಸಂಕಷ್ಟವು ಸಂತೋಷಕ್ಕೆ ಮೆಟ್ಟಿಲುಗಳಾಗುವುದು.

ಭಕ್ತರ ಮನದಲ್ಲಿ ರಾರಾಜಿಸಿದ ‘ಶ್ರೀರಾಮಚಂದ್ರ’ ಅವನ ಕಥೆಯಾದ ‘ರಾಮಕಥೆ’ ಯನ್ನೇ ವಿಷಯವಾಗಿಟ್ಟುಕೊಂಡು ಸಂಕಟವನ್ನು ತಂದೊಡ್ಡಿದರೆ ಅವರನ್ನು ಕ್ಷಮಿಸುವನೇ?
ಖಂಡಿತಾ ಇಲ್ಲ.
ಎಲ್ಲಿ ರಾಮನಾಮವೋ ಅಲ್ಲಿ ಹನುಮ …. ಅಂಥಹ ‘ರಾಮನಾಮ’ದಲ್ಲಿ ರಮಿಸಿದ ಹನುಮ ಬಿಟ್ಟಾನೆಯೇ?
ಜೀವದ ಜೀವಾಳವಾದ, ವಾಯುತತ್ವ ಒಮ್ಮೆ ಸ್ಥಬ್ಧನಾದರೆ ?! ಆಗದೆ ಇರುವನೇ?
ನಮ್ಮೆಲ್ಲರ ಚಿಂತೆಯೆಂಬ ಕಂತೆಯನ್ನು ಬದಿಗಿರಿಸೋಣ.
ಭಕ್ತಿಯ ತಳಹದಿಯಾದ ನಂಬಿಕೆಯನ್ನು ರಾಮನಲ್ಲಿರಿಸೋಣ.
ರಾಮನನ್ನು ನಂಬೋಣ .
ರಾಮನೆಡೆಗೆ ಕೊಂಡೊಯ್ಯುವ ಗುರುತತ್ವಕ್ಕೆ ಶರಣಾಗೋಣ.
ಅವರು ಹಾಕಿಕೊಟ್ಟ ಧರ್ಮದಪಥದೆಡೆಗೆ ಸಾಗಿ ನಮ್ಮ ಬದುಕನ್ನು ಸಾರ್ಥಕತೆಯೆಡೆಗೆ ಸಾಗಿಸಿಕೊಳ್ಳೋಣ. …….

ಕಾಲ ಹೀಗೇ ಇರದು. ರಾಮನ ಇಚ್ಛೆಯಂತೆ ನಡೆವುದು.
‘ರಾಮ’ ಕಲಿಯ ಕಲುಷಕ್ಕೆ ‘ವಿರಾಮ’ ಹಾಡುವನು.


ಚಂಪಕ

ಗುರುಗ್ರಂಥಮಾಲಿಕೆಯ "ಶ್ರೀರಮಣ ಮಹರ್ಷಿ" ಪುಸ್ತಿಕೆಯನ್ನು ಶ್ರೀ ಶ್ರೀಗಳವರು ಲೋಕಾರ್ಪಣೆಗೊಳಿಸುತ್ತಿರುವ ಸಂದರ್ಭ

ಗುರುಗ್ರಂಥಮಾಲಿಕೆಯ “ಶ್ರೀರಮಣ ಮಹರ್ಷಿ” ಪುಸ್ತಿಕೆಯನ್ನು ಶ್ರೀ ಶ್ರೀಗಳವರು ಲೋಕಾರ್ಪಣೆಗೊಳಿಸುತ್ತಿರುವ ಸಂದರ್ಭ

17 Responses to ‘ರಾಮ’ಕಲಿಯ ಕಲುಷಕ್ಕೆ ‘ವಿರಾಮ’ : ಚಂಪಾ ರಾಣಿ

 1. sandhya

  hare raama

  [Reply]

 2. ganesh k s

  ನಿಜ .. ಇವೆಲ್ಲ ಮೋಡಗಳಿದ್ದ ಹಾಗೆ.. ತಾತ್ಕಾಲಿಕ.. ಆಮೇಲೆ ಕಾಣುವುದು ಶುಭ್ರ ಆಕಾಶ.. ಪ್ರಖರ ಪ್ರಕಾಶ..

  ಹರೇ ರಾಮ

  [Reply]

 3. Pallavi

  Howdu. Kaala heege irddhu.kaalachakra suttutta badhalaavane aagutte.kasta-sukha,dharma-adharma,solu-geluvu,sathya-asathya,nyaya-anyaya etc ondhe naanyadha eradu mukhagaliddanthe. Yavdu jeevanadalli shashwathavalla.yavdakku higgaluubharadhu.kuggalubaradhu.druthigedabharadhu.dhairyadinda eduristha hogbeku.Hareraama…

  [Reply]

 4. Pallavi

  Idu heli keli kaligaala. sullu kuuda sathyavaagi raraajisuva kaala.janaralli brame huttisuva maayajaala.elladakku jaagruthi,arivu mukhya.aa maayeyinda tappisikollalu yarindalu saadhyavilla.kaala kaledanthe maatra sari hogalu saadhya.’maaye’ yaarannu bittilla.devaanudevathegalanne bittilla.nammantha hulumaanavarannu biduvudhe..?Hareraama…

  [Reply]

 5. shankara bhat p

  ಅತ್ಯಂತ ಗೌರವಯುತ ಸ್ಥಾನಗಳನ್ನು ಹೊಂದಿದ್ದರೂ, ನೀಚತನ ತೋರಿ ನೈತಿಕ ಅಧ:ಪತನವನ್ನೇ ಆಯ್ಕೆ ಮಾಡಿಕೊಂಡ ಆ ಎರಡು ಹವ್ಯಕ ಹುಳಗಳ ದುರುದ್ದೇಶ ಸರ್ವಥಾ ಖಂಡನೀಯ.

  ಇನ್ನಾದರೂ ತಪ್ಪೊಪ್ಪಿಕೊಂಡು ಸನ್ಮಾರ್ಗದಲ್ಲಿ ಸಾಗುವ ಸದ್ಬುದ್ಧಿಯನ್ನು ಭಗವಂತ ಆ ಹುಳಗಳಿಗೆ ಕರುಣಿಸಲಿ.

  [Reply]

 6. L.A.Hegde Dombivali

  Hare Raama

  Nainam Chindhati shashtrani
  Nainam Dahati Paavaka
  Na Chainam Kleda yantyapo
  Na Shoshayati Maarutaha

  Soorya Vamsha ke Gurupeeth per koi Prahaar karane ki chesta karega woh jalkar Bhasma hojayega

  Hare Raama Hare Raama Raama Raama Hare Hare, Hare Krishna Hare Krishna, Krishna Krishna Hare Hare

  Jai Shree Ram

  [Reply]

 7. ManjunathRajalakshmi Tumkur

  Hare Raama,
  Sri Samsthana evarannu kshamisabahudu Aadare Sri Ramachandra and Hanumantha Aa krimigalannu khanditha kshamisuvudilla. Shishyarugalanthu khanditha kshamisuvudilla kshamisaloo baaradu.

  Hare Raama
  ManjunathRajalakshmi, Tumkur

  [Reply]

 8. Ravi Bhat Dombivali

  hare rama

  [Reply]

 9. ನಂದಜ

  Hare raama

  [Reply]

 10. sandhya

  ಹನುಮ ಬಾಲಕಿಟ್ಟ ಬೆಂಕಿ
  ಲಂಕೆಯನ್ನು ಸುಡದೆ ಬಿಟ್ಟಿತೆ? …
  ವಿಷದ ಜ್ವಾಲೆ ಕಕ್ಕಿದವರ
  ಮತಿಯು ಕೆಡದೆ ಇದ್ದೀತೆ?
  ಹರೇ ರಾಮ

  [Reply]

 11. drdpbhat

  hareraama.
  madabaraddannu madidare aagabaraddu aaguttade. guruvani nijavagalu hechu samaya bekilla.jailinalli koleyuttiruva krimigalu arthamadikollali.
  hareraama.

  [Reply]

 12. Laxman Shanbhag Kadtoka Sirsi

  Shrigalli naavu Sri Ramanannu kanutteve. Inthaha sandhigda samaydalli vanara seneyante naavella ondaagi edurisona. Swamigala bembalakke nillona. Hanumanante horadona. Satyameva jayate. Hareram.

  [Reply]

 13. PRASAD MAIRKALA

  HARE RAAMA

  [Reply]

 14. Shwetha Shasthry

  Hareraama! Tumba chennagi heliddeeri!

  [Reply]

 15. bsadithi

  Hare Raama

  [Reply]

 16. Aruna K.S.Bhat

  ಖಂಡಿತಾ ನಿಜ. ಜನ ಮಾನಸದಲ್ಲಿ ಧರ್ಮವು ಮಸುಕಾಗುತ್ತಿರುವ ಕಾಲಘಟ್ಟದಲ್ಲಿ ಧರ್ಮದ ವಿಚಾರಧಾರೆಯನ್ನು ಹರಿಸಿ, ಧರ್ಮವನ್ನು ಉಳಿಸಿ ಬೆಳೆಸುವ ಮಹತ್ಕಾರ್ಯದಲ್ಲಿ ತೊಡಗಿದಂತಹ ಪ್ರೀತಿಯ ಸಂಸ್ಥಾನವೆನ್ನುವ ಗುರುವಿನಲ್ಲಿ ಬೆಳಕನ್ನು ಕಾಣದಾದರೇ? ಬುದ್ಧಿಯು ಮಂಕಾದಾಗ ದೃಷ್ಟಿಯಿದ್ದರೂ ಬೆಳಕು ಕಾಣದು. ಅವರ ಪಗಡೆಯಾಟದಲ್ಲಿ ಗುರುವನ್ನೇ ದಾಳವಾಗಿಸ ಹೊರಟಿರುವುದು ಅವರ ಭ್ರಮೆ ಅಷ್ಟೆ. ಆದರೆ, ಸಂತನಿಗೆ ಇದೊಂದು ಉತ್ತುಂಗಕ್ಕೆ ಏರುವ ಮೆಟ್ಟಿಲಾಗುತ್ತದೆ.

  || ಜೈ ಶ್ರೀರಾಮ|| || ಜೈ ಆಂಜನೇಯ|| || ಜೈ ಗುರುದೇವ ||

  || ನಮ್ಮ ಪ್ರೀತಿಯ ಸಂಸ್ಥಾನಕ್ಕೆ ಜಯವಾಗಲಿ ||

  ಹರಿ ಒಲಿದವರಿಗೆ ಹನುಮ ಒಲಿವ | ಹನುಮ ಒಲಿಯದಿರೆ ಹರಿ ಒಲಿಯಲಿಲ್ಲ ||
  ಹರಿ ಸಂಕಲ್ಪವೆಲ್ಲ ಹನುಮ ಬಲ್ಲ | ಹನುಮ ಬಿಟ್ಟುದದನು ಹರಿ ತಾ..ನೊಲ್ಲ ||

  ಅರುಣ
  ಬೆಂಗಳೂರು.

  [Reply]

 17. sudarshan

  harerama

  [Reply]

Leave a Reply

Highslide for Wordpress Plugin