ಶ್ರೀಮತಿ ಚಂಪಾರಾಣಿಯವರು ಮೂಲತಃ ಚದರವಳ್ಳಿಯ ಬಂಗಲಗಲ್ಲಿನವರು. ಶಿರಸಿಯ ವಿದ್ವಾನ್ ನರಸಿಂಹ ಭಟ್ ಇವರೊಡನೆ ಸಂಸಾರಸ್ಥರಾಗಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಜಯ ಚಾತುರ್ಮಾಸ್ಯದಲ್ಲಿ ಭಾರತೀಪ್ರಕಾಶನವು ಹೊರತಂದ ಗುರುಗ್ರಂಥಮಾಲಿಕೆಯಲ್ಲಿ “ಶ್ರೀ ರಮಣ ಮಹರ್ಷಿ” ಪುಸ್ತಕದ ಲೇಖಿಕೆಯಾಗಿರುವ ಇವರು ಗುರುಪೀಠದ ಮೇಲೆ ಅಚಲ ಶ್ರದ್ಧೆ ಹೊಂದಿರುವವರು. ತಮ್ಮ ಗುರುಭಕ್ತಿಯನ್ನು ಈ ಸಮ್ಮುಖ ಲೇಖನದ ಮೂಲಕ ಪ್ರಕಟಿಸಿದ್ದಾರೆ.
ಅವರ ಕುಟುಂಬಕ್ಕೆ ಆಯುರಾರೋಗ್ಯಭಾಗವು ಶ್ರೀರಾಮನಿಂದ ಅನುಗ್ರಹಿತವಾಗಲೆಂಬುದು ನಮ್ಮ ಆಶಯ.

~
ಸಂ

‘ಇದು ಹೀಗೆ ಇರದು’ – ಸಂಸ್ಥಾನ ಸೂಕ್ತಿ
ಹೌದು ಗುರುವೇ ಇದು ಹೀಗೆ ಇರದು.
ಅಟ್ಟಹಾಸದಿಂದ ಮೆರೆಯುತ್ತಿರುವ ಅಧರ್ಮಿಗಳ ದುಷ್ಕೃತ್ಯ , ಕುಹಕತೆ ಹೀಗೆ ಇರದು . . . .
ಭ್ರಮೆಯನ್ನು ಸೃಷ್ಟಿಸಿ ಪ್ರಮೆಯನ್ನು ಮರೆಮಾಚುವೆನೆಂಬ ವ್ಯರ್ಥ ಪ್ರಯತ್ನ ಸಾಕಾರವಾಗದು. 

ಲೇ | ಶ್ರೀಮತಿ ಚಂಪಾರಾಣಿ, ಬೆಂಗಳೂರು

ಲೇ | ಶ್ರೀಮತಿ ಚಂಪಾರಾಣಿ, ಬೆಂಗಳೂರು

ಹೆಣ್ಣನ್ನು ತಾಯಿಗೆ ಹೊಲಿಸಿ, ಗೋಮಾತೆಗೆ ಹೊಲಿಸಿ, ವಾತ್ಸಲ್ಯದಲ್ಲಿ ದೈವತ್ವವನ್ನು ಕಾಣುವ ಗುರುವಿಗೆ ಸಲ್ಲದ ಅಪವಾದವನ್ನಿತ್ತು –
ಮಾನಹಾನಿ ಮಾಡಿದೆರೆಂಬ ಭ್ರಮೆ ಅವರಿಗಿದ್ದರೆ ಅದು ಅವರಿಗಿರುವ ಮೂರ್ಖತನ ಮತ್ತು ಅವರಿಗಿರುವ ರೋಗ!
ಕಾಮಾಲೆ ರೋಗಕ್ಕೆ ತುತ್ತಾದವರಿಗೆ ಲೋಕವೆಲ್ಲಾ ಹಳದಿಯಾಗಿ ಕಾಣುವುದಂತೆ. . !!

೪ ವರ್ಷದ ಮಕ್ಕಳಿಂದ ಆರಂಭವಾಗಿ ೮೦ ವರ್ಷದ ವೃದ್ಧರು ಬಲ್ಲರು ಗುರುವಿನ ವಾತ್ಸಲ್ಯವನ್ನು .
ಅದಕ್ಕೆ ಸಾಕ್ಷಿಬೇಕಾಗಿಲ್ಲ; ಸತ್ಯಕ್ಕೆ ಯಾವ ಸಾಕ್ಷಿಯೂ ಕೊಡಬೇಕಾಗಿಲ್ಲ. ಅದು ನಿತ್ಯಪ್ರಕಾಶ.
ಆಡುಮಾತಲ್ಲಿ ಹೇಳುವುದಾದರೆ “ಸೂರ್ಯನಿಗೇ ಟಾರ್ಚೇ?”.ಬೇಕಿಲ್ಲ ಅವರ ಅಂತ್ಯದ ಸಮಯ ಸಮೀಪಿಸುತ್ತಿದೆ .
ಹೌದು ಗುರುವೆ ಇದು ಹೀಗೇ ಇರದು ….

ಸತತವಾಗಿ ಸದ್ವಿಚಾರಗಳನ್ನು ಲೋಕಕ್ಕೆ ನೀಡುತ್ತಾ,
ಆ ಸದ್ವಿಚಾರವನ್ನು ಸ್ವೀಕರಿಸುವ ಮನವನ್ನು ಭಕ್ತರಲ್ಲಿ ಬೆಳೆಸುತ್ತಾ,
ಅವರ ಹೃದಯದಲ್ಲಿ ರಾಮಭಕ್ತಿಯನ್ನು ಹುಟ್ಟಿಸಿ,
ಆಬಾಲ ವೃದ್ಧರಿಗೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿ,
ಒಂದುಸಮಾಜಕ್ಕೆ ಗುರುವಾಗಿ ಮಾಡಬೇಕಾದ ಎಲ್ಲ ಕರ್ತವ್ಯವನ್ನು ನಡೆಸಿಕೊಂಡು ಬಂದ ಸದ್ಗುರುವಿಗೆ ಬಂದ ಸಂಕಷ್ಟ ಕ್ಷಣಿಕ!

ಈ ಕಷ್ಟದ ಸಮಯ ಹೀಗೇ ಇರದು.
ಸಂತರಿಗೆ ಬಂದ ಸಂಕಷ್ಟವು ಸಂತೋಷಕ್ಕೆ ಮೆಟ್ಟಿಲುಗಳಾಗುವುದು.

ಭಕ್ತರ ಮನದಲ್ಲಿ ರಾರಾಜಿಸಿದ ‘ಶ್ರೀರಾಮಚಂದ್ರ’ ಅವನ ಕಥೆಯಾದ ‘ರಾಮಕಥೆ’ ಯನ್ನೇ ವಿಷಯವಾಗಿಟ್ಟುಕೊಂಡು ಸಂಕಟವನ್ನು ತಂದೊಡ್ಡಿದರೆ ಅವರನ್ನು ಕ್ಷಮಿಸುವನೇ?
ಖಂಡಿತಾ ಇಲ್ಲ.
ಎಲ್ಲಿ ರಾಮನಾಮವೋ ಅಲ್ಲಿ ಹನುಮ …. ಅಂಥಹ ‘ರಾಮನಾಮ’ದಲ್ಲಿ ರಮಿಸಿದ ಹನುಮ ಬಿಟ್ಟಾನೆಯೇ?
ಜೀವದ ಜೀವಾಳವಾದ, ವಾಯುತತ್ವ ಒಮ್ಮೆ ಸ್ಥಬ್ಧನಾದರೆ ?! ಆಗದೆ ಇರುವನೇ?
ನಮ್ಮೆಲ್ಲರ ಚಿಂತೆಯೆಂಬ ಕಂತೆಯನ್ನು ಬದಿಗಿರಿಸೋಣ.
ಭಕ್ತಿಯ ತಳಹದಿಯಾದ ನಂಬಿಕೆಯನ್ನು ರಾಮನಲ್ಲಿರಿಸೋಣ.
ರಾಮನನ್ನು ನಂಬೋಣ .
ರಾಮನೆಡೆಗೆ ಕೊಂಡೊಯ್ಯುವ ಗುರುತತ್ವಕ್ಕೆ ಶರಣಾಗೋಣ.
ಅವರು ಹಾಕಿಕೊಟ್ಟ ಧರ್ಮದಪಥದೆಡೆಗೆ ಸಾಗಿ ನಮ್ಮ ಬದುಕನ್ನು ಸಾರ್ಥಕತೆಯೆಡೆಗೆ ಸಾಗಿಸಿಕೊಳ್ಳೋಣ. …….

ಕಾಲ ಹೀಗೇ ಇರದು. ರಾಮನ ಇಚ್ಛೆಯಂತೆ ನಡೆವುದು.
‘ರಾಮ’ ಕಲಿಯ ಕಲುಷಕ್ಕೆ ‘ವಿರಾಮ’ ಹಾಡುವನು.


ಚಂಪಕ

ಗುರುಗ್ರಂಥಮಾಲಿಕೆಯ "ಶ್ರೀರಮಣ ಮಹರ್ಷಿ" ಪುಸ್ತಿಕೆಯನ್ನು ಶ್ರೀ ಶ್ರೀಗಳವರು ಲೋಕಾರ್ಪಣೆಗೊಳಿಸುತ್ತಿರುವ ಸಂದರ್ಭ

ಗುರುಗ್ರಂಥಮಾಲಿಕೆಯ “ಶ್ರೀರಮಣ ಮಹರ್ಷಿ” ಪುಸ್ತಿಕೆಯನ್ನು ಶ್ರೀ ಶ್ರೀಗಳವರು ಲೋಕಾರ್ಪಣೆಗೊಳಿಸುತ್ತಿರುವ ಸಂದರ್ಭ

Facebook Comments Box