ಲೇಖಕ ಶಿವಪ್ರಸಾದ ಭಟ್ಟರು ತೆಂಕಬೈಲು ಮನೆತನದವರು, ಶ್ರೀಯುತ ಸುಬ್ರಾಯ ಭಟ್, ಲೀಲಾವತೀ ದಂಪತಿಗಳ ಸುಪುತ್ರ. ಪ್ರಸ್ತುತ ಪುತ್ತೂರಿನ ಬಳಿಯ ಕಬಕದಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು, ಪ್ರವೃತ್ತಿಯಲ್ಲಿ ಹಿಂದೂ ಸಮಾಜದ ಬಗ್ಗೆ, ಸನಾತನ ಧರ್ಮದ ಬಗ್ಗೆ, ರಾಷ್ಟ್ರವಾದಿ ಚಿಂತನೆಗಳ ಬಗ್ಗೆ ಬಹಳಷ್ಟು ಒಲವನ್ನು ಇರಿಸಿಕೊಂಡಿದ್ದಾರೆ. ಲೇಖಕರಿಗೆ ಗುರುದೇವರ ಒಲುಮೆ ದೊರೆಯಲಿ ಎಂಬುದು ನಮ್ಮ ಹಾರೈಕೆ.
~
ಸಂ

ಧ್ಯಾನ ಮೂಲಂ ಗುರೋರ್ಮೂತಿಃ
ಪೂಜಾ ಮೂಲಂ ಗುರೋಃಪದಂ
ಮಂತ್ರಮೂಲಂ ಗುರೋರ್ವಾಕ್ಯಂ
ಮೋಕ್ಷಮೂಲಂ ಗುರೋಃಕೃಪಾಃ !!
– ಎಂತಹಾ ಗುರುವಿನಿಂದಾಗಿ ನಮಗೆ ಜೀವನದಲ್ಲ್ಲಿ ಮುಕ್ತಿ ಹೊಂದಲು ಸಾಧ್ಯವಿದೆಯೋ, ಎಂತಹಾ ಗುರುವಿನಿಂದಾಗಿ ನಮಗೆ ಮೋಕ್ಷ ಸಿಗಲು ಸಾಧ್ಯವಿದೆಯೋ ಅಂತಹಾ ಗುರುವೀಗ ಸಂಕಷ್ಟಕ್ಕೀಡಾಗಿದ್ದಾರೆ.

ಬಹುಶಃ ಯಾರೂ ನಿರೀಕ್ಷೆ ಮಾಡದಂತಹ ಗೊಂದಲಗಳಿಗೆ ರಾಘವೇಶ್ವರ ಶ್ರೀಗಳು ಸಿಲುಕಿದ್ದಾರೆ.
ಗೋ ಸಂರಕ್ಷಣೆಗಾಗಿ ಜೀವವನ್ನೇ ಮುಡಿಪಾಗಿಟ್ಟ, ರಾಮಾಯಣ ಮಹಾಕಾವ್ಯದ ಉಳಿವು ಮತ್ತು ಧರ್ಮದ ಪ್ರಚಾರಕ್ಕಾಗಿ ಅವಿರತ ಶ್ರಮಿಸುತ್ತಿರುವ ಸಂತನಿಗೀಗ ಲೈಂಗಿಕ ಕಿರುಕುಳದ ಆರೋಪ, ಛ್ಹೆ!
ಭಕ್ತ ಕೋಟಿ ಕನಸಿನಲ್ಲಿಯೂ ನಿರೀಕ್ಷಿಸದ ನೀಚ ಅರೋಪವಿದು!
ಇದೇನು ಮೊದಲಲ್ಲ ಬಿಡಿ, ಆವತ್ತು ಗೋಕರ್ಣದ ಸ್ವಛ್ಛತೆಯನ್ನು ಸಹಿಸದ ಜನ ಸ್ವಾಮೀಜಿಯವರನ್ನೇ ಹೋಲುವ ವ್ಯಕ್ತಿಯಿಂದ ನಕಲೀ ಬ್ಲೂಫಿಲಂ ಸಿಡಿ ತಯಾರಿಸಿ ಶ್ರೀಗಳ ಮಾನ ಹರಾಜಿಗೆ ಯತ್ನಿಸಿದರು.
ಆದರೆ ಶ್ರೀಗಳನ್ನು ಬಲ್ಲ ಜನ ಅದನ್ನು ನಂಬಲಿಲ್ಲ.
ಪೋಲಿಸರು ಆ ಸಿಡಿಯ ಅಸಲಿಯತ್ತನ್ನೂ ಬಯಲಿಗೆಳೆಯುದರೊಂದಿಗೆ ಯಾರನ್ನೋ ಮಿಕ ಮಾಡಲು ಹೊರಟವರು ತಾವೇ ಮಿಕ ಅಗಿ ಬಿಟ್ಟರು.
ಅಲ್ಲಿಗೆ ಗೋಕರ್ಣದ ಪಟ್ಟಭದ್ರರಿಗೆ ಮೊದಲ ಬಾರಿಗೆ ಗರ್ವಭಂಗವಾಗಿತ್ತು.

ಲೇ| ಶಿವಪ್ರಸಾದ್ ತೆಂಕಬೈಲು

ಲೇ| ಶಿವಪ್ರಸಾದ್ ತೆಂಕಬೈಲು

ಆದರೆ ದುಷ್ಟ ಬುಧ್ಧಿಗಳು ಅಷ್ಟಕ್ಕೇ ಸುಮ್ಮನಿದ್ದಾವೆಯೆ?
ಅದ್ಯಾವುದೋ ಸುಳ್ಳು ಕೇಸಿನ ನೆಪ ಹಿಡಿದುಕೊಂಡು ಕೋಟಿ ಹಣಕ್ಕೆ ಬೇಡಿಕೆಯಿಟ್ಟ ತಂಡವೂ ಪೋಲೀಸ್ ಬಲೆಗೆ ಸಿಲುಕಿತು.
ಸುಳ್ಳಿಗೆ ಮತ್ತೆ ಸೋಲಾಗಿತ್ತು. ಎಲ್ಲ ಬಿಟ್ಟು ಗೋಕರ್ಣದ ಮಹಾರಥೋತ್ಸವಕ್ಕೇ ವಿಘ್ನ ತಂದೊಡ್ಡಿದರು.

ಆದರೆ ಶ್ರೀಮಂತ ಸುಸಂಸ್ಕ್ರತ ಮಠವೊಂದರ ಮಾನ ಹರಾಜು ಹಾಕುವುದು ಅಷ್ಟೊಂದು ಸುಲಭವಲ್ಲ ಎಂದರಿತ ಜನ ಇದೀಗ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ!
ನಿಸ್ಸಂಶಯವಾಗಿಯೂ ಇದೊಂದು ಸುಳ್ಳಿನ ಕಂತೆ ಅಂತ ನನಗನಿಸುತ್ತಿದ್ದೆ.
ಏಕೆಂದರೆ ಶ್ರೀಗಳನ್ನು ಒಮ್ಮೆ ಹತ್ತಿರದಿಂದ ಮಾತನಾಡಿಸಿದವರು, ಅವರ ಪ್ರವಚನವನ್ನು ಕೇಳಿದವರು ಖಂಡಿತಾ ಇದನ್ನೆಲ್ಲ ಒಪ್ಪಲು ಸಾಧ್ಯವಿಲ್ಲ.
ನಿತ್ಯವೂ ರಾಮಕಥಾ ,ಭಜಗೋವಿಂದಂ ಮುಂತಾದ ಅದ್ಭುತ ಪ್ರವಚನಗಳ ಮೂಲಕ ಶಿಷ್ಯರಿಗೆ ಸಾತ್ವಿಕ ಜೀವನ ನಡೆಸಲು ಪ್ರೇರೇಪಿಸುವ ರಾಘವೇಶ್ವರರು ರಾಮಚಂದ್ರನಾಣೆಗೂ ಈ ತಪ್ಪುಗಳನ್ನು ಎಸಗಿದವರಲ್ಲ.

ಇದು ಕಲಿಯುಗ ಕಣ್ರಿ, ಯಾರು ಯಾರ ಮೇಲಾದರೂ ಆರೋಪಗಳನ್ನು ಹೊರಿಸಬಹುದು.
ಲಂಚ, ವರದಕ್ಷಿಣೆ,ಲೈಂಗಿಕ ಕಿರುಕುಳದ ಸುಳ್ಳು ಆರೋಪಗಳಂತೂ ತೀರಾ ಕಾಮನ್ ಆಗಿ ಬಿಟ್ಟಿದೆ.
ಕಳಂಕ ಆರೋಪಗಳು ಯಾರನ್ನು ಬಿಟ್ಟಿಲ್ಲ ಹೇಳಿ?
ಕಲಿಯುಗದಲ್ಲಿ ಹಿಂದೂ ಸಮಾಜದ ಉಧ್ಧಾರಕ್ಕಾಗಿ ಅವತಾರವೆತ್ತಿದ ಪ್ರತಿಯೊಬ್ಬರನ್ನೂ ಇಂತಹ ಆರೋಪಗಳು ಕಾಡಿದೆ.

ಅರ್ಧ ಶತಮಾನಗಳಿಂದಲೂ ಕೃಷ್ಣನ ಆರಾಧನೆಯಲ್ಲಿ ತೊಡಗಿ, ಹಿಂದೂ ಸಮಾಜದ ಒಳಿತಿಗಾಗಿ ಇಳಿವಯಸ್ಸಿನಲ್ಲೂ ಸಕ್ರೀಯವಾಗಿರುವ ಪೇಜಾವರ ಶ್ರೀಗಳನ್ನೂ ಬಿಟ್ಟಿಲ್ಲ (ರಾಜಕೀಯ ಪ್ರೇರಿತ ಆರೋಪವಷ್ಟೆ).ಮತ್ತೋರ್ವ ಹಿರಿಯ ಯತಿ ಕಂಚಿ ಶ್ರೀಗಳ ಮೇಲೂ ಕೊಲೆ ಆರೋಪ ಹೊರಿಸಿ ಅವರನ್ನು ಜೈಲಿಗೆ ಕಳುಹಿಸಲಾಯಿತು. (ಕೇಸ್ ಏನಾಯಿತೆಂದು ನಿಮಗೆ ಗೊತ್ತೇ ಇದೆ ಬಿಡಿ)
ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ಸ್ವಾಮಿ ರಾಮದೇವ್ ಅವರನ್ನೂ ಬಿಡಲಿಲ್ಲ.
ಹೀಗೆ ಹಿಂದೂ ಸಮಾಜದಲ್ಲಿ ತಮ್ಮದೇ ಪ್ರತಿಷ್ಟೆಯನ್ನು ಗಳಿಸಿರುವ ಪ್ರತಿಯೊಬ್ಬರೂ ಒಂದಿಲ್ಲೊಂದು ಆರೋಪಕ್ಕೆ ಗುರಿಯಾದವರೇ,
ಅಲ್ಲಾ ತ್ರೇತಾಯುಗದಲ್ಲಿ ಮರ್ಯಾದಾ ಪುರುಷೋತ್ತಮನನ್ನೇ ಬಿಡದ ಆರೋಪಗಳು ಕಲಿಯುಗದಲ್ಲಿ ಇಂತಹ ಸಾಧು ಸಂತರನ್ನು ಸುಮ್ಮನೆ ಬಿಟ್ಟಾವೆಯೆ??

ತಮ್ಮ ಮೇಲೆ ಬಂದ ಎಲ್ಲ ಅವಮಾನಗಳು,ಆರೋಪಗಳನ್ನು ಮೀರಿ ನಿಂತವರು ಶ್ರೀಗಳು.
ಹಾಗೆ ಹೇಳುವುದಾದರೆ ಗೋಸಮ್ಮೇಳನ, ರಾಮಾಯಣ ಮಹಾಸತ್ರದಂತಹ ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇ ಇವರಿಗೆ ಮುಳುವಾಯಿತೆಂದೆನಿಸುತ್ತದೆ.
ರಾಜ್ಯಾದ್ಯಂತ ಸಂಚರಿಸಿ ಗೋಸಂರಕ್ಷಣೆಯ ಬಗ್ಗೆ ತಿಳುವಳಿಕೆ ಮೂಡಿಸುವ, ಹವ್ಯಾಸಿಗಳ ತಂಡವನ್ನು ಕಟ್ಟಿ ಹಗಲಿರುಳೆನ್ನದೆ ಅಭ್ಯಾಸ ನಡೆಸಿ ರಾಮಕಥೆಯನ್ನು ಪ್ರಸ್ತುತ ಪಡಿಸುವ ದರ್ದು ಶ್ರೀಗಳಿಗೇನಿತ್ತು?
ಅದು ಸುಮ್ಮನೆ ಮನರಂಜನೆಗಾಗಿ ಮಾಡಿದ್ದಲ್ಲ, ಭಾರತೀಯರು ತಾಯಿಯ ಸ್ಥಾನದಲ್ಲಿ ಪೂಜಿಸುವ ಗೋ ಮಾತೆಯನ್ನು ಬದುಕಿಸುವ ಕಾಳಜಿ ಇತ್ತು,ರಾಮಾಯಣದ ಅಂತಃಸತ್ವವನ್ನು ಜನರಿಗೆ ಬಗೆದೂ ಬಗೆದೂ ನೀಡುವ ಸದುದ್ದೇಶ ಅದರಲ್ಲಿತ್ತು.
ಆದರೆ ಶ್ರೀಗಳ ಯಶಸ್ಸನ್ನು ಸಹಿಸದ ವಿಘ್ನ ಸಂತೋಷಿಗಳು ಮತ್ತೆ ಮತ್ತೆ ಪ್ರಹಾರ ನಡೆಸುತ್ತಲೇ ಇವೆ!
ಮಾಧ್ಯಮಗಳೂ ಇಂತಹ ವಿಷಯಗಳಲ್ಲಿ ತಮ್ಮ ಹೊಣೆ ಮರೆತು ವರ್ತಿಸುತ್ತಿವೆ.

ಆರೋಪ ಬಂದ ತಕ್ಷಣ ವ್ಯಕ್ತಿಯನ್ನು ತಪ್ಪಿತಸ್ಥನೆಂದು ಕೋರ್ಟಿಗೂ ಮೊದಲೇ ತೀರ್ಪು ನೀಡುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ.
ಅದರಿಂದ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ ಎಂದು ಸ್ವಲ್ಪವೂ ಯೋಚಿಸದೆ ಜಿದ್ದಿಗೆ ಬಿದ್ದಂತೆ ಸುದ್ದಿ ಬಿತ್ತರಿಸುತ್ತವೆ.
ಇದೆಲ್ಲಾ ಸರಿ ಆಗುವುದು ಎಂದು?
ಮಾಧ್ಯಮಗಳು ತಮ್ಮ ಹೊಣೆಯರಿತು ಜನಸ್ನೇಹಿಯಾಗಿ ಬದಲಾಗುವುದೆಂದು?
ಬರೀ ರಾಘವೇಶ್ವರ ಶ್ರೀಗಳ ವಿಷಯದಲ್ಲಿ ಮಾತ್ರ ಅಲ್ಲ, ಮಾಧ್ಯಮಗಳು ಅವಿವೇಕಿತನದಿಂದ ವರ್ತಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.

ಅದೇನೇ ಇರಲಿ, ರಾಘವೇಶ್ವರ ಶ್ರೀಗಳಲ್ಲಿ ತಪಃಶ್ಶಕ್ತಿಯಿದೆ, ಶ್ರೀ ರಾಮಚಂದ್ರನ ಆಶೀರ್ವಾದವಿದೆ.
ಶಿಷ್ಯಕೋಟಿಯ ಪ್ರಾರ್ಥನೆಯಿದೆ.
ಖಂಡಿತವಾಗಿಯೂ ಶ್ರೀಗಳು ಇದರಿಂದ ಶೀಘ್ರ ಹೊರಬರುತ್ತಾರೆ.
ಧರ್ಮದ ರಕ್ಷಣೆಗಾಗಿ, ಶತ್ರುಗಳ ನಾಶಕ್ಕಾಗಿ ಹೊಸ ಅವತಾರವೆತ್ತುತ್ತಾರೆ ಎನ್ನುವ ನಂಬಿಕೆ ನನ್ನದು.
ಸಂಭವಾಮಿ ಯುಗೇ ಯುಗೇ!

ಹರೇರಾಮ
~
ಶಿವಪ್ರಸಾದ್ ಭಟ್ ಟಿ ಪುತ್ತೂರು

Facebook Comments Box