ಶ್ವೇತಾ ಶಾಸ್ತ್ರಿ (ಮುಂಡಾಜೆ), ಕಾನಾವು;
shwetha789m@gmail.com;
U.S

ದುಡ್ಡು ಕೊಟ್ಟರೆ ಬೇಕಾದುದು ಸಿಗುತ್ತೈತಿ ಈ ಜಗದಲಿ ಕಾಣೋ!
– ನೆಮ್ಮದಿ, ಗೌರವ, ಪ್ರೀತಿ ಸಿಗಲು ಸಾಧ್ಯವೇ?

ಅಮ್ಮನ ಹೊಟ್ಟೆಯಲ್ಲಿ ಕರುಳ ಬಳ್ಳಿಯ ಕುಡಿಯಾಗಿ ಬೆಳೆದು, ಆಶ್ರಯ ಪಡೆದು, ಹೊರ ಬಂದು, ಜೀವನ ಏನು ಎಂದು ತಿಳಿದು, ಅಮ್ಮನ ಕತ್ತನ್ನೇ ಹಿಸುಕಿ ಹಾಕಲು ಹೇಗಾದರೂ ಮನಸ್ಸು ಬಂದೀತು?
ಅಷ್ಟೆಲ್ಲಾ ಸಾಲದೆ, ಅಮ್ಮನ ಮೇಲೆ ಇಲ್ಲ ಸಲ್ಲದ ಆರೋಪ ಹಾಕಲು ಹೇಗಾದರೂ ಮನಸ್ಸು ಬಂದೀತು?
ಈಗಿನ ಕಾಲದಲ್ಲಿ ದುಡ್ಡೇ ಪರಮ ಧರ್ಮ ಎಂಬ ವಾಕ್ಯ ಲೋಕದಲ್ಲಿ ಬಿಂಬಿತ. ಯಾವುದನ್ನೂ ದುಡ್ಡು ಒದಗಿಸಿಕೊಡಬಹುದು ಎಂಬ ನೀರಿನ ಮೇಲಿನ ಗುಳ್ಳೆಯಂತಿರುವ ಈ ಮಾತಿಗೆ “ಆಕೆ” ಬಲಿಯಾದಳೇ? ದುಡ್ಡು ಇಂದು ಇರಬಹುದು ನಾಳೆ ಹೋಗಬಹುದು. ಆದರೆ ನಮ್ಮ ಸಂಸ್ಕಾರ, ನಮ್ಮ ಜೀವನದ ಚರಿತ್ರೆಯನ್ನು ಬದಲಿಸಲು ಸಾಧ್ಯವೇ? ಇದನ್ನು “ಆಕೆ” ಹೇಗೆ ಮರೆತಳು?
“ಆಕೆ” ಯಾಕಾದರೂ ಹೀಗೆ ಮಾಡಿದಳು? ಅಮ್ಮನ ಋಣವನ್ನು ಹೇಗೆ ಮರೆತಳು? ಇಲ್ಲ ಸಲ್ಲದ ಅಪವಾದಗಳನ್ನು ಶ್ರೀಗಳವರ ಮೇಲೆ ಹಾಕಿ, ಶ್ರೀಮಠದ ಅದೆಷ್ಟೋ ಶಿಷ್ಯರ ಮನಸ್ಸನ್ನು ಯಾಕಾದರೂ ನೋಯಿಸಿದಳು?
ಛೇ..

ಶ್ರೀಮತಿ ಶ್ವೇತಾ ಶಾಸ್ತ್ರಿ

ಶ್ರೀಮತಿ ಶ್ವೇತಾ ಶಾಸ್ತ್ರಿ – ದಂಪತಿಗಳು

ಹೌದು.. ನಮಗೆಲ್ಲರಿಗೂ ಶ್ರೀಸಂಸ್ಥಾನ “ಗುರು”ವೂ ಹೌದು, “ತಾಯಿ”ಯೂ ಹೌದು!
ನಗುತ್ತಾ, ನಮ್ಮೆಲ್ಲರ ಕಷ್ಟಗಳನ್ನು ಸಮಾಧಾನದಿಂದ ಆಲಿಸಿ, ಕೊನೆಗೆ ತಾವೇ ತೆಗೆದುಕೊಂಡು ಭರವಸೆ ಇಲ್ಲದ ಜೀವನಕ್ಕೆ ಭರವಸೆಯನ್ನು, ಆತ್ಮವಿಶ್ವಾಸವನ್ನು ತಾಯಿಯಂತೆ ನೀಡುತ್ತಾ ಬಂದಿದ್ದಾರೆ.
ಗೋವಿನೊಳಗೆ ಗೋವಾಗಿ, ಗೋವೇ ತಾನಾಗಿ, ಮೂಕಪ್ರಾಣಿಯ ವೇದನೆ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಜಗತ್ತಿಗೇ ತಿಳಿಸಿದವರು ನಮ್ಮೆಲ್ಲರ ಗುರುಗಳು ರಾಘವೇಶ್ವರ ಶ್ರೀಗಳು – ನಮ್ಮ ಗುರುಗಳು ಎಂದು ಹೇಳಲು ಅದೆಷ್ಟು ಸಂತೋಷ!, ಅದೆಷ್ಟು ಸಮಾಧಾನ!, ಅದೆಷ್ಟು ಹೆಮ್ಮೆ!
ಗುರುಗಳೆ!… ಎಂದು ಹೇಳುತ್ತಿದ್ದರೆ ಅದೆಷ್ಟು ನೆಮ್ಮದಿ!
ಚ೦ದ್ರನಿಗೆ ಸ್ವ೦ತ ಬೆಳಕಿಲ್ಲ.  ಚ೦ದ್ರನು ಸೂರ್ಯನ ಸಹಾಯದಿ೦ದ ಬೆಳಗುತ್ತಾನೆ. ಹಾಗೆಯೇ ಪ್ರತಿಯೊಬ್ಬ ಶಿಷ್ಯನ ಬೆಳವಣಿಗೆಯ ಹಿಂದೆ ಸೂರ್ಯನಂತೆ ಗುರುಗಳಿದ್ದಾರೆ..

ಅಮ್ಮಾ…..,

ಶ್ರೀಮಠದ ವಿರುದ್ಧ ಯಾರು ಏನೇ ಪಿತೂರಿ ಮಾಡಲಿ, ಸಂಚು ಮಾಡಲಿ, ಯಾರು ಬೇಕಾದರೂ ನಂಬಲಿ-ಬಿಡಲಿ; ಗುರುಗಳನ್ನು ನಿಜವಾಗಿಯೂ ಅರಿತವರು, ಮಠದ/ಗುರುಗಳ ಪರವಾಗಿಯೇ ಇರುತ್ತಾರೆ, ಮುಂದೆಯೂ ಇರುತ್ತೇವೆ.
ಇರುವುದೊಂದೇ ಜೀವನ! ಇರುವಷ್ಟು ಸಮಯ ಬೇರೆಯವರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ, ಬೇರೆಯವರ ಅಭಿವೃದ್ಧಿಗೆ ಮುಳ್ಳಾಗದಂತೆ ನೋಡೋಣ.
ನಾವು ನಾವಾಗಿರೋಣ!

ಆದರೂ ತುಂಬಾ ನೋವಿನಿಂದ ಈ ಲೇಖನ ಬರೆಯುತ್ತಾ “ಆಕೆ”ಗಿದೋ ಕಡೆಯ ಪ್ರಶ್ನೆ; “ಅಮ್ಮ”ವಿನಂತಿರುವ “ಗುರು“ನ ಮನಸ್ಸನ್ನು ನೋಯಿಸಲು ಹೇಗೆ ಮನಸ್ಸು ಬಂತು?

ದುಷ್ಟ ಶಕ್ತಿಗಳಿಗೆ  ಉತ್ತರ:

‘ಗುರುಪೀಠ’ ಬಲು ದೊಡ್ಡದಣ್ಣ
ಬರಿಗಣ್ಣಿಗೆ ಮಾತ್ರ ಕಾಣುವುದು ಸಣ್ಣ |
ಒಳಗಣ್ಣು ತೆರೆದು ನೀ ನೋಡಿದರೆ
ತಿಳಿಯುವುದು ನಿನಗದರ ಬಣ್ಣ ||

~

Facebook Comments Box