|| ಹರೇರಾಮ ||

ಭಗವಾನ್ ಸೂರ್ಯದೇವನ ಗತಿಯಲ್ಲಿ ಮಹತ್ತರ ಬದಲಾವಣೆಯಾಗುವ ಸಮಯವಿದು..

ದಕ್ಷಿಣದಿಂದ ಉತ್ತರದೆಡೆಗೆ..

ಯಮರಾಜನ ದಿಶೆಯಿಂದ ಧನರಾಜನ ದಿಶೆಯೆಡೆಗೆ..

ಸಾವಿನಿಂದ ಸಮೃದ್ಧಿಯೆಡೆಗೆ..

ಬೆಳಕಿನ ದೇವತೆ ತನ್ನ ಗತಿಯನ್ನು ಬದಲಾಯಿಸುವ ಸುಮುಹೂರ್ತವಿದು..!!

ಸ್ವರ್ಗದಲ್ಲಿ ಸೂರ್ಯೋದಯವಾಗುತ್ತಿದೆ..!

ಮಾನವರ ಒಂದು ವರ್ಷ ದೇವತೆಗಳಿಗೆ ಒಂದು ದಿನ..!!

ಉತ್ತರಾಯಣದ ಆರು ತಿಂಗಳು ಸ್ವರ್ಗದಲ್ಲಿ ಹಗಲಾದರೆ..

ದಕ್ಷಿಣಾಯನದ ಆರು ತಿಂಗಳು ರಾತ್ರಿ..!!

ಭೂಮಿಯಲ್ಲಿ ದಕ್ಷಿಣಾಯನ ಮುಗಿದು ಈಗ ಉತ್ತರಾಯಣ ಪ್ರಾರಂಭವಾಗುತ್ತಿದ್ದರೆ..

ಸ್ವರ್ಗದಲ್ಲಿ ಇರುಳು ಕಳೆದು ಹಗಲು ಪ್ರಾರಂಭವಾಗುವ ಹೊತ್ತಿದು..!!

ಬೆಳಗಾಗುವಾಗ ನಾವು ಮನೆಬಾಗಿಲು ತೆರೆಯುವಂತೆ..

ದೇವತೆಗಳು ಸ್ವರ್ಗದ ಬಾಗಿಲುತೆರೆಯುವ ಮಹಾಪುಣ್ಯಕಾಲ..!!

ಆದುದರಿಂದಲೇ ಸತ್ಪುರುಷರು ಉತ್ತರಾಯಣದ ಮೃತ್ಯುವನ್ನು ಬಯಸುವುದು..

ಭಗವಾನ್ ಭಾಸ್ಕರನ ದಿಶೆ ಬದಲಾಗುವಾಗ ಭವ್ಯ ಭಾರತದ ದಿಶೆ – ದಶೆಗಳೂ ಬದಲಾಗಲೆಂದು ಹಾರೈಸೋಣವೇ..??

ಕಳೆಯಲಿ ನರಕ.. ಇಳೆಗಿಳಿಯಲಿ ನಾಕ..

ನರರಾಗಲಿ ನಾರಾಯಣರೆಂದು ಮಹಾಕಾಲನಲ್ಲಿ ಮೊರೆಯಿಡೋಣವೇ..??

|| ಹರೇರಾಮ ||

Facebook Comments Box