ಹೃದಯಬಂಧು,

ಸಪ್ರೇಮ ನಾರಾಯಣ ಸ್ಮರಣೆಗಳು..

ಬಹಳ ದಿನಗಳಿಂದಲೇ ಬರಯಬೇಕೆ೦ದಿದ್ದೆವು.. ನಮ್ಮ ಬದುಕನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕೆ೦ದಿದ್ದೆವು.. ಆದರೆ ಕಾಲದ ಅನುಮತಿ ಸಿಕ್ಕಿರಲಿಲ್ಲ..ಇಂದು ಸಿಕ್ಕಿದೆ..!

ನಿನ್ನೆ ನಮ್ಮ ಪ್ರಭುವಿಗೆ ಸಾಮ್ರಾಜ್ಯ ಪಟ್ಟಾಭಿಷೇಕ..! ಕಳೆದ ೫೩೭ ದಿನಗಳಿಂದ ಶ್ರೀರಾಮನ ಸನ್ನಿಧಿಯಲ್ಲಿ ಪ್ರತಿನಿತ್ಯವೂ ಉಪಾಸನೆಯ ರೂಪದಲ್ಲಿ ಶ್ರೀ ವಾಲ್ಮೀಕಿ ರಾಮಾಯಣದ ಒಂದೊಂದೇ ಅಧ್ಯಾಯವನ್ನು ಅವಲೋಕಿಸುತ್ತಿದ್ದೆವು..ನೆನ್ನೆ ಅದು ಪರಿಸಮಾಪ್ತಿಗೊಂಡಿತು..

ಪರಿಸಮಾಪ್ತಿಯ ಸಮಯದಲ್ಲಿ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕವನ್ನು ನೆರವೇರಿಸುವ ಸಂಪ್ರದಾಯವಿದೆ..ನೆನ್ನೆ ಆ ಸುಮುಹೂರ್ತ..!

ಪಟ್ಟಾಭಿಷೇಕ ಕಾರ್ಯಕ್ರಮವೊಂದು ವಿಶಿಷ್ಟ ಅನುಭವ.. ತ್ರೇತಾಯುಗವನ್ನು ಮರಳಿ ಕರೆಯುವ ಕಾರ್ಯಕ್ರಮವದು..! ಭಾರತವರ್ಷದ ಎಲ್ಲ ಪುಣ್ಯನದಿಗಳಿಂದ ..ಸರೋವರಗಳಿಂದ ..ಸಾಗರಗಳಿಂದ .. ಪಾವನ ಜಲ ಸಂಗ್ರಹಿಸಿ ಭೂಮಂಡಲದ ಇತಿಹಾಸದ ಸರ್ವಶ್ರೇಷ್ಠ  ದೊರೆಗೆ ಅಭಿಷೇಕ ಮಾಡುವಾಗ ಭಾರತವೇ ಒಂದಾದಂತೆ..! ಮತ್ತೊಮ್ಮೆ ರಾಮರಾಜ್ಯದ ಉದಯವಾದಂತೆ..! ಕೊನೆಯಲ್ಲಿ ಪಟ್ಟಾಭಿಷಿಕ್ತ  ಶ್ರೀ ರಾಮಚಂದ್ರನಿಗೆ ಪಟ್ಟ-ಕಾಣಿಕೆ ಸಮರ್ಪಣೆ ಮಾಡುವಾಗ ಆತ್ಮನಿವೇದನೆ ಮಾಡಿದಂತೆ..!!

ಇದೋ..ಆ ಕಣ್ಣಿನಿಂದ ನೋಡಲಾಗದವರಿಗೆ E- ಕಣ್ಣಿನಿಂದ ನೋಡಲೆಂದು ಕೆಲವು ಅಮರಚಿತ್ರಗಳು..!!

Facebook Comments Box