LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಎಂತು ಮಾತಾಡಲಿ..?

Author: ; Published On: ಸೋಮವಾರ, ಜೂನ್ 20th, 2011;

Switch to language: ಕನ್ನಡ | English | हिंदी         Shortlink:

ಭಾವವಿಲ್ಲದಿದ್ದರೆ ಭಾಷೆಗೆ ಜೀವವೆಲ್ಲಿ ..?
ಭಾವ ತುಂಬಿದರೆ ಭಾಷೆಗೆ ಎಡೆಯಲ್ಲಿ..?
ಮಾತಾಡು.. ಮಾತಾಡೆನ್ನುವಿರಿ…
ಎಂತು ಮಾತಾಡಲಿ..?

15 Responses to ಎಂತು ಮಾತಾಡಲಿ..?

 1. Jayashree Neeramoole

  :)

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಮಾತೂ ಅಶೀರ್ವಾದವೇ.. ಮೌನವೂ ಅಶೀರ್ವಾದವೇ.. ನಮಗೆ ಹಿತವೂ, ಪ್ರಿಯವೂ ಆದದ್ದನ್ನು ಯೋಗ್ಯವಾದ ಸಮಯದಲ್ಲಿ ಒದಗಿಸುವ ಕಲ್ಪವೃಕ್ಷದಂತಹ ಗುರುವಿನಲ್ಲಿ ಏನೆಂದು ಬೇಡುವುದು…

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಭಾವ ತುಂಬಿದ ಆ ಅಮೃತ ದೃಷ್ಟಿಯ ಒಂದು ಕಿರಣವು ಸಾಕು ನಮ್ಮಂತಹ ಜೀವಿಗಳ ಉದ್ದಾರಕ್ಕೆ…

  [Reply]

 2. Krishnamurthy Hegde

  ಗುರುವಿಗೋ, ಭಾವವೇ ಭಾಷೆ. ಆ ಭಾಷೆ, ಗುರುವಿಗೆ ಅತಿ ಸಹಜ, ಸುಂದರ.
  ನಮಗೋ, ಆ ಭಾವದ ಭಾರೀ ಆಭಾವ.
  ಆದ್ದರಿಂದ ಗುರುವಿನ ಭಾವದ ಭಾಷೆ ನಮಗರಿಯದು.
  ಬದಲಾಗಿ ಗುರುಭಾಷೆಯೇ ನಮ್ಮಲ್ಲಿ ಗುರುಭಾವದ ಉಧ್ಬವಕ್ಕೆ ಹೇತು, ಸೇತು.

  ಅದಕ್ಕಾಗಿ, ಬೇಕೇ ಬೇಕು. ಗುರು ಭಾಷೆಯು ಬೇಕು. ಗುರು ನಮ್ಮೊಡನೆ ಮಾತನಾಡಲು ಬೇಕು.

  [Reply]

  ಮಂಗ್ಳೂರ ಮಾಣಿ... Reply:

  ಇದೇ ಭಾವ..!!

  [Reply]

 3. ಮಂಗ್ಳೂರ ಮಾಣಿ...

  :)

  [Reply]

 4. gopalakrishna pakalakunja

  ಹರೇ ರಾಮ !

  ಮಾತು ಬೆಳ್ಲಿ ಮೌನ ಬಂಗಾರ ನಮಗೆಲ್ಲ..

  ಮೌನ ಬಂಗಾರ ಮಾತು ವಜ್ರ ವೈಡೂರ್ಯ..ನವರತ್ನ ಗಳ ಗಣಿ ಶ್ರೀ ಶ್ರೀ ಗಳಿಗೆ

  [Reply]

 5. YELAHANKA SHRIKANT HEGDE

  Hare Raama. Koti Pranamagalu Gurudeva.

  Nammellara Jeevanada Jeevakke, Bhavavannu Bhasheyondige Beresi Saviyannu Tumbuttiruvavaru Neevu. Idannu Sada Karunisuttiru Guruve.

  [Reply]

 6. seetharama bhat

  ಹರೇರಾಮ್,

  ಗುರುದೇವಾ–

  ತಮ್ಮ ಬಾಷೆ ಕೇಳಲು ನಮಗೆಲ್ಲಾ ಆಶೆ
  ತಮ್ಮ ಬಾವ ನಮ್ಮೆಲ್ಲರ ಮೇಲೆ ಬೀರಿದೆ ಪ್ರಭಾವ
  ಯಾವುದೊ೦ದರ ಅಭಾವವು ನಮಗೆ ನೀಡುವುದು ನಿರಾಶೆ
  ಬಾಷೆಗೆ೦ದೂ ಬಾರದು ಭಾವ ಕ್ಕೆ ಬ೦ದರೆ ಬ೦ದೀತು

  ಶರಣು

  [Reply]

 7. Ashwini

  ಗುರುನುಡಿಯಿರದಿರೆ ಜೀವಕ್ಕೆ ಅರಿವೆಲ್ಲಿ..?
  ಪರಮಜ್ಞಾನದ ನಿರಂತರ ಹರಿವಿರಲು ತಮಸ್ಸಿಗೆ ಎಡೆಯೆಲ್ಲಿ..?
  ನುಡಿ ಗುರುವೇ..ನುಡಿ
  ನಿನ್ನ ಮೌನದರ್ಥವರಿಯಲರಿಯದ ಶಿಷ್ಯರ ಆತ್ಮಬೆಳಗುವ ಅಮೃತ ನುಡಿಗಳ..

  ಹರೇ ರಾಮ.

  [Reply]

 8. RAVINDRA BHATT T L

  ಅವ್ವೆಯ ನುಡಿಯಲಿ ಕಾಂಬ
  ಮಗುವ ತೊದಲಲಿ ಕಾಂಬ।

  ಜಲ ಜಲಲದಿ ಕಾಂಬ
  ತಂಗಾಳಿಯಲಿ ಕಾಂಬ॥

  ಶಿಲೆಯ ಮೌನದಿ ಕಾಂಬ
  ದೇಗುಲದ ಗಂಟೆಯಲಿ ಕಾಂಬ॥
  ಭಾವದಲಿ, ಮೌನದಲಿ, ಅರಿವ ಹರಿವಿರಲು
  ಹರಿ ನಮಗೆ ದಯಗೈದ ಗುರುವು ಹರಸಿರಲು,

  ಮಾತು ಮುತ್ತು, ಮೌನ ಬಂಗಾರ

  ನಮಗಂತೂ ಈ ಎರಡೂ ಇರಲಿ,
  ನಲಿವು ತುಂಬಿದ ಭಾವ, ಬಾವ ತುಂಬಿದ ಮಾತು.

  [Reply]

 9. Dr Amrita Prasad

  ಹರೇ ರಾಮ ಗುರುಗಳೇ..ದೇವರು ಸದಾ ನಮ್ಮನ್ನು ಮೌನದಿ೦ದಲೇ ಮಾತನಾಡಿಸುತ್ತಿದ್ದರೂ ಅದನ್ನು ಅರಿಯಲು ತಿಳಿಯದ ನಮಗೆ ಗುರುವಿನ ನುಡಿಯೇ ಆ ಮೌನವನು ತಿಳಿಸುವ ಸಾಧನವಲ್ಲವೇ !!

  [Reply]

 10. Suvarnini Konale

  ಭಾವವಿಲ್ಲದ ಭಾಷೆ ಆತ್ಮವಿಲ್ಲದ ದೇಹ… ಭಾಷೆಯೊಳಗಿನ ಭಾವ ತಿಳಿಯದಾತನೆ ಮೂರ್ಖ….ಮೌನದ ಮಾತು ಅರಿಯದ ಮನಸ್ಸು ಎಷ್ಟು ಭಾಷೆಗಳನ್ನು ಆಡಿದರೂ ವ್ಯರ್ಥ…
  ಶ್ರೀಗುರುರಾಘವರ ಚರಣದಲ್ಲಿ ಅರ್ಪಿಸಿಕೊಂಡಮೇಲೆ ಭಾವ-ಭಾಷೆಗಳ ಮಾತೇಕೆ…ಅಲ್ಲಿರುವ ಭಾವ-ಭಾಷೆ ಮಾತು-ಮೌನ ಎಲ್ಲವೂ ಒಂದೇ….ಭಕ್ತಿ-ಪ್ರೀತಿ ..ಆನಂದ-ಪರಮಾನಂದ……

  [Reply]

 11. Vidya Ravishankar

  ಹರೇರಾಮ, ಭಾವ ತುಂಬಿದ ನಿಮ್ಮ ಒಂದು ನೋಟವೇ ಸಾಕು ಗುರುದೇವ ನಮ್ಮ ಜೀವನ ಪಾವನವಾಗಿಸಲು.

  [Reply]

 12. ಬಿ ಯಂ ಸುಬ್ಬಣ್ಣ ಭಟ್ಟ

  ಮಾತು ಕಿವಿಗಳಿಗೆ ಕೇಳಲು ಮಾತ್ರ!ತನು ಮನ ತುಂಬಿದ ಭಾವ ಮುಖದ ಮುಗುಳ್ನಗೆಯೊಂದಿಗೆ ಪ್ರಕಟವಾದಾಗ ಓದುವುದೂ ಮನಸ್ಸೇ ಅಲ್ಲವೇ ಗುರುಗಳೇ

  [Reply]

Leave a Reply

Highslide for Wordpress Plugin