LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಬಂಗಾರದ ಫೋನು!

Author: ; Published On: ರವಿವಾರ, ಸೆಪ್ಟೆಂಬರ 5th, 2010;

Switch to language: ಕನ್ನಡ | English | हिंदी         Shortlink:

ಒಂದು ಸಲ ಒಬ್ಬ ಅಮೇರಿಕಾ ದೇಶದವ ಜಗತ್ತಿನ ಎಲ್ಲಾ ಪ್ರಸಿದ್ಧ ಚರ್ಚ್‌ಗಳ ಬಗ್ಗೆ ಒಂದು ಪುಸ್ತಕ ಬರೀಬೇಕು ಅಂತ ಹೊರಟ. ಎಲ್ಲಾ ದೇಶಗಳ ವೈಶಿಷ್ಟ್ಯಪೂರ್ಣ ಚರ್ಚುಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು ಅಂತ ಒಂದೊಂದೇ ದೇಶಕ್ಕೆ ಭೇಟಿ ಕೊಡತೊಡಗಿದ.

ಮೊದಲು ಚೀನಾ ದೇಶಕ್ಕೆ ಹೋದ.ಅಲ್ಲಿದ್ದ ಪ್ರಸಿದ್ಧ ಚರ್ಚಿಗೆ ಭೇಟಿ ಇತ್ತು ಚರ್ಚಿನ ಫೋಟೋ ತೇಗಿತಾ ಇರಬೇಕಾದ್ರೆ ಅಲ್ಲೊಂದು ಅಚ್ಚರಿ ಕಾಣಿಸ್ತು. ಗೋಡೆ ಒಂದರ ಮೇಲೆ ಬಂಗಾರದ ಫೋನ್ ಒಂದನ್ನು ತೂಗು ಹಾಕಿದ್ರು. ಫೋನ್ ಪಕ್ಕದಲ್ಲೇ ಒಂದು ಬೋರ್ಡ್‌ನಲ್ಲಿ ’ಒಂದು ಕರೆಗೆ ಒಂದು ಸಾವಿರ ಡಾಲರುಗಳು’ ಅಂತ ಬರೆದಿತ್ತು! ಅಮೇರಿಕದ ಪ್ರವಾಸಿಗೆ ಅಚ್ಚರಿಯಾಯಿತು. ಪಾದ್ರಿ ಬಳಿ ಕೇಳಿದ. ’ಇದು ಸ್ವರ್ಗಕ್ಕೆ ಕರೆ ಮಾಡೋಕೆ ಇರೋ ಫೋನು, ಒಂದು ಲಕ್ಷ ಡಾಲರು ಕೊಟ್ಟು ದೇವರೊಂದಿಗೆ ಮಾತನಾಡಬಹುದು’ ಎಂಬ ಉತ್ತರ. ಪ್ರವಾಸಿಗೆ ಅತ್ಯಾಶ್ಚರ್ಯ ಆಯ್ತು. ತನ್ನ ಪ್ರವಾಸದ ಕೊನೆಯಲ್ಲಿ ಇಲ್ಲಿಗೆ ಮತ್ತೆ ಬಂದು ಒಮ್ಮೆ ದೇವರೊಂದಿಗೆ ಕಷ್ಟ-ಸುಖ ಹೇಳ್ಕೋಬೇಕು ಅಂತ ಅಂದುಕೊಂಡು ಅಲ್ಲಿಂದ ಚರ್ಚು ಚರ್ಚು ತಿರುಗ್ತಾ ಜಪಾನಿಗೆ ಹೋದ.

Golden Telephone

ಅಲ್ಲಿನ ಮುಖ್ಯ ಚರ್ಚಿಗೆ ಹೋದ್ರೆ ಅಲ್ಲೂ ಚೀನಾದಲ್ಲಿ ನೋಡಿದ ಫೋನ್ ತರಹದ್ದೇ ಫೋನ್ ಇಟ್ಟಿದ್ರು! ಮೇಲೊಂದು ಬೋರ್ಡ್ ’ಒಂದು ಕರೆಗೆ ಒಂದು ಸಾವಿರ ಡಾಲರ್ ಮಾತ್ರ’. ‘ಇದು ದೇವರಿಗೆ ಕಾಲ್ ಮಾಡೋಕಿರೋದಾ?’ ಅನುಮಾನ ಬಂದು ಭಕ್ತರನ್ನು ಒಬ್ಬರನ್ನು ಕೇಳಿದ. “ಹೌದು ಹೌದು, ಅಲ್ಲಿ ಕೌಂಟರ್ ಅಲ್ಲಿ ಹಣ ಕೊಟ್ಟು ಕೂಪನ್ ತಗೋಳಿ”. ’ಓ, ಜಪಾನ್‍ನಲ್ಲೂ ಈ ಸೌಲಭ್ಯ ಇದೆ’ ಅಂದುಕೊಂಡು ಅಮೇರಿಕಾದ ಲೇಖಕ ಮುಂದುವರೆದ.
ಅಮೇರಿಕಾದ ಪ್ರವಾಸಿಗೆ ಆಮೇಲೆ ಗೊತ್ತಾದದ್ದು ಏನಂದ್ರೆ ಎಲ್ಲ ದೇಶದ ಮುಖ್ಯ ಚರ್ಚುಗಳಲ್ಲಿ ಈ ಸೌಲಭ್ಯ ಕಲ್ಪಿಸಿದಾರೆ ಅಂತ.
ಹೀಗೆ ಎಲ್ಲಾ ದೇಶದ ಚರ್ಚುಗಳ ಬಗ್ಗೆ ದಾಖಲಿಸುತ್ತಾ ಅಮೇರಿಕನ್ ಲೇಖಕ ಕಡೆಗೆ ಭಾರತಕ್ಕೂ ಬಂದ.

ಭಾರತದ ಮುಖ್ಯ ಚರ್ಚೊಂದನ್ನು ನೋಡಿ ಹೊರಗಡೆ ಬರುತ್ತಾ ಇರಬೇಕಾದ್ರೆ ಪಕ್ಕನೆ ನೆನಪಾಯಿತು. ಭಾರತದಲ್ಲೂ ಬಂಗಾರದ ಫೋನ್ ಇದೆಯ ಅಂತ. ಅಲ್ಲಿ ಇಲ್ಲಿ ಕಣ್ಣು ಹಾಯಿಸಿದ ಮೇಲೆ ಮೂಲೆಲಿ ಕಾಣಿಸಿಯೇ ಬಿಡ್ತು.
ಹತ್ತಿರ ಹೋಗಿ ನೋಡಿದ್ರೆ ಯಥಾಪ್ರಕಾರ ಬೋರ್ಡ್ ಒಂದು ಇತ್ತು. ಆದರೆ ಅದರ ಮೇಲೆ ಬರೆದಿದ್ದು “ಒಂದು ಕರೆಗೆ ಒಂದು ರೂಪಾಯಿ” ಅಮೇರಿಕನ್‍ಗೆ ಹೊಟ್ಟೆ ತೋಳಸೋ ಅಷ್ಟು ಆಶ್ಚರ್ಯ ಆಯಿತು. ’ಇದು ದೇವರಿಗೆ ಕರೆ ಮಾಡೋಕೆ ಇಟ್ಟ ಫೋನಾ?’ ಪಾದರಿಗಳನ್ನ ಕೇಳಿದ. “ಹೌದು ಮಗು”. ’ಎಲಾ! ಉಳಿದ ದೇಶಗಳಲ್ಲಿ ಒಂದು ಲಕ್ಷ ಡಾಲರ್ ಇರೋದು ಇಲ್ಲಿ ಬರಿ ಒಂದು ರುಪಾಯಿ?!’ ಯಾಕೆ ಸುಮ್ಮನೆ ಹೊಟ್ಟೆಲಿಟ್ಗೊಂಡು ಸಂಕಟ ಪಡೋದು ಅಂತ ಪಾದರಿಗಳನ್ನ ಕೇಳಿದ. ” ನಾನು ಬೇರೆ ಬೇರೆ ದೇಶಗಳಲ್ಲಿ ಇದೇ ತರಹದ ಫೋನ್ ನೋಡಿದಿನಿ. ಅಲ್ಲೆಲ್ಲ ಒಂದು ಕರೆಗೆ ಒಂದು ಲಕ್ಷ ಡಾಲರ್ ಚಾರ್ಜ್ ಮಾಡ್ತ ಇದಾರೆ. ಇಲ್ಯಾಕೆ ಬರಿ ಒಂದು ರೂಪಾಯಿ?”

ಪಾದರಿ ತಣ್ಣನೆ ಸ್ವರದಲ್ಲಿ ಉತ್ತರಿಸಿದರು…

ಓದುಗರೇ ಉತ್ತರ ಏನಿರಬಹುದು.. ಊಹಿಸಿ ನೋಡೋಣ…
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
*

“ಓ ಅದಾ.. ಇಂಡಿಯಾದಿಂದ ಸ್ವರ್ಗ ಲೋಕಲ್ ಕಾಲ್ ಅಲ್ವಾ.. ಅದ್ಕೆ ಬರಿ ಒಂದು ರುಪಾಯಿ”!!!
ಜೈ ಭಾರತಾಂಬೆ!

Source: Sri’s collection.

16 Responses to ಬಂಗಾರದ ಫೋನು!

 1. venkata krishna mn

  ನೂರಕ್ಕೆ ನೂರು ಸರಿ

  [Reply]

 2. Raghavendra Narayana

  yes we are locals locals here..
  we are great as well as cheap..

  [Reply]

  Kakunje Keshava Bhatta Reply:

  Please think not that we are cheap….

  We are with Guruji….

  [Reply]

  Raghavendra Narayana Reply:

  Good that you noticed..
  From Positive point of view, we can think that we are cheaply available to God OR God is cheaply available to us
  .
  Since you mentioned Guruji: Being with Guruji, I feel that I have Gold Card and am a Privileged member in this World.. ofcourse I can use this Gold Card only for good things, other places it may not work.. If we are trying to use it for bad transactions, it would stop us and bring us back on right path.
  .
  Shri Gurubhyo Namaha

  [Reply]

 3. shobha lakshmi

  ಜೈ ಭಾರತಾ೦ಬೆ,,ನಿನಗಿದೋ ನಮನ

  [Reply]

 4. Vishwa M S Maruthipura

  ದೇವತೆಗಳು ತಮ್ಮ ದೇವತ್ವವನ್ನೂ, ಸ್ವರ್ಗವಾಸವನ್ನೂ ತೊರೆದು ಮಾನವರಾಗಿ ಹುಟ್ಟಿ ಬರಬಯಸುವ ಮೋಕ್ಷಭೂಮಿಯಿದು..!

  ಭಾರತವೆಂದರೆ ಮಾನವತೆಯಲ್ಲಿ ಹುಟ್ಟಿ, ದಾನವತೆಯನ್ನು ಮೆಟ್ಟಿ, ಮಾಧವತೆಯನ್ನುಮುಟ್ಟುವ ಮಹಾಸಾಧಕರ ತವರೂರು.. !

  [Reply]

 5. Kakunje Keshava Bhatta

  “Sri Gurubhyo Namaha”

  Every Indian is potentially divine. Is there any need for a conversation with a god?!!!

  “Hare Rama “

  [Reply]

 6. seetharama bhat

  Hareraam,

  We find god in each and every things/persons
  even do not have to spend one rupee for local cal
  its Direct Interaction-Like
  srimuka,sammuka,pramuka–mukamuka

  Hareraam

  [Reply]

 7. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು. “ವಿಶ್ವವ್ಯವಸ್ಥೆಯ ಜೀವಸೂತ್ರವಿದು ವಿಶ್ವನಿಯಾಮಕಪೀಠ..! ” ಮತ್ತು “ಬಂಗಾರದ ಫೋನು!” ಎರಡು ಲೇಖನಗಳನ್ನು ಓದಿದಾಗ ಭಾರತೀಯರಾಗಿ ಹುಟ್ಟಿದ ನಾವು “ಎಂಥ ಭಾಗ್ಯಶಾಲಿಗಳು!!…” ಎಂದೆನಿಸುತ್ತದೆ.
  ಮೊದಲ ಲೇಖನವನ್ನು ಓದಿದಾಗ ಉಂಟಾಗುವ ವರ್ಣನಾತೀತ ಅನುಭವಗಳು, ಭಾವ ತರಂಗಗಳನ್ನು ಗಮನಿಸಿದಾಗ – “ಅಮ್ಮ ಪುಟ್ಟ ಕಂದನಿಗೆ ಸಾಗರದ ನೀರಿಗೂ, ಚಿಕ್ಕ ಪಾತ್ರೆಯಲ್ಲಿರುವ ನೀರಿಗೂ ಇರುವ ವ್ಯತ್ಯಾಸವನ್ನು ತಿಳಿಸುತ್ತಿದ್ದಾಳೆಯೋ !! ” ಎಂದೆನಿಸುತ್ತದೆ.

  [Reply]

 8. Anuradha Parvathi

  Irony is that most of the Indians are not using this proximity to God. They are attracted to the western ways. I have many friends and relatives who feel that ours is ‘GODDU SAMPRADAYA’.

  [Reply]

  seetharama bhat Reply:

  Hareraam

  Its Not Goddu

  its God do

  hare ram

  [Reply]

  Madhu Dodderi Reply:

  :) Well said…

  [Reply]

 9. lohitha hebbar

  ಭಾರತಕ್ಕೆ ಪರ್ಯಾಯ ಭಾರತವೇ…!

  [Reply]

 10. gopalakrishna pakalakunja

  “ಓ ಅದಾ.. ಇಂಡಿಯಾದಿಂದ ಸ್ವರ್ಗ ಲೋಕಲ್ ಕಾಲ್ ಅಲ್ವಾ.. ಅದ್ಕೆ ಬರಿ ಒಂದು ರುಪಾಯಿ”!!!

  ಅಷ್ಟೇ ಅಲ್ಲ….ಅಶೋಕೆಗೆ ಬಂದಿದ್ದರೆ….ಶ್ರೀ ಶ್ರೀ ಗಳಾಶ್ರಯದಲ್ಲಿ ಉಚಿತ ಕರೆ ಯೂ ಲಭ್ಯ.

  [Reply]

  Suvarnini Konale Reply:

  :) :) :) well said

  [Reply]

 11. Vidya Ravishankar.

  ಹರೇರಾಮ.

  ಈ ಪುಣ್ಯಭೂಮಿಗೆ ಸರಿಸಮಾನ ಇನ್ನೊಂದಿಲ್ಲ.

  [Reply]

Leave a Reply

Highslide for Wordpress Plugin