ಒಂದು ಪುಟ್ಟ ಅರ್ಥಪೂರ್ಣ ಭಾಷಣ…

ಬುಧವಾರ, ಸೆಪ್ಟೆಂಬರ 29th, 2010 - - 8 Comments

ಕೋಕಾ-ಕೋಲ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಒಂದು ಪುಟ್ಟ ಅರ್ಥಪೂರ್ಣ ಭಾಷಣ

ಬದುಕನ್ನು ಒಂದು ಚೆಂಡಾಟವೆಂದು ಭಾವಿಸೋಣ.
ನಿಮ್ಮ ಬಳಿ  ಕೆಲಸ, ಕುಟುಂಬ, ಆರೋಗ್ಯ, ಗೆಳೆಯರು ಮತ್ತು ಉತ್ಸಾಹ ಎಂಬ ೫ ಚೆಂಡುಗಳಿವೆ. ಈ ಎಲ್ಲಾ ಚಂಡುಗಳನ್ನು ಗಾಳಿಯಲ್ಲಿಯೇ ಹಾರಿಸುತ್ತ ಕೆಳಬೀಳದಂತೆ ಆಡುವುದೇ ಬದುಕು.
ಈ ಆಟದಲ್ಲಿ ನೀವು ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ ಕೆಲಸ ಎಂಬುದು ಒಂದು ರಬ್ಬರ್ರಿನ ಚೆಂಡು ಎಂದು. ನೀವು ಆಟದಲ್ಲಿ ಅಕಸ್ಮಾತ್ ಅದನ್ನು ಕೆಳಕೆಡವಿದರೂ ಅದು ಮತ್ತೆ ಪುಟನೆಗೆದು ಬರುತ್ತದೆ. ಆದರೆ, ಉಳಿದ ನಾಲ್ಕು ಚೆಂಡುಗಳು ಹಾಗಲ್ಲ..ಅವು ಗಾಜಿನ ಚೆಂಡುಗಳು! ಒಮ್ಮೆ ಕೈಜಾರಿತೆಂದರೆ ಅವುಗಳು ಮುಂದೆಂದೂ ಮೂಲರೂಪಕ್ಕೆ ಬರಲಾರವು. ಕುಳಿಬಿದ್ದೋ, ಗೀರಾಗಿಯೋ, ಸೀಳಾಗಿಯೋ ತಮ್ಮ ನಾಜೂಕು ಕಳೆದುಕೊಂಡುಬಿಡುತ್ತವೆ. ಕೆಲವೊಮ್ಮೆ ಒಡೆದುಹೋಗಿಯೂ ಬಿಡಬಹುದು. ನೀವಿದನ್ನು ಅರ್ಥಮಾಡಿಕೊಳ್ಳಬೇಕು… ಮತ್ತು ಅವುಗಳನ್ನು ಉಳಿಸಿಕೊಳ್ಳಲೆತ್ನಿಸಬೇಕು.
ಕೆಲಸದ ಸಮಯದಲ್ಲಿ ಶ್ರದ್ಧೆಯಿಂದ ದುಡಿಯಿರಿ. ಆದರೆ ಕೆಲಸದ ನಿಗದಿತ ಸಮಯವನ್ನು ಬಿಟ್ಟು ಉಳಿದ ಸಮಯವನ್ನು ನಿಮ್ಮ ಕುಟುಂಬಕ್ಕೆ, ಸ್ನೇಹಿತರಿಗೆ , ಮತ್ತು ನಿಮ್ಮ ವಿರಾಮಕ್ಕೆ ಮೀಸಲಿಡಲು ಮರೆಯದಿರಿ

ಮೌಲ್ಯಕ್ಕೆ ಮೌಲ್ಯವಿರುವುದು ಆ ಮೌಲ್ಯದ ಮೌಲ್ಯಸಂದಾಗ
Source: Sri’s Collection

  • http://hareraama.in/members/manglurmani/ nanda kishora

    nice…

  • Shreekant Hegde

    ಪ್ರಣಾಮಾಃ ಗುರುವರ್ಯ, ಆದ್ರೂ ಈ ಬ್ರಿಯಾನ್ ಡಯ್ಸನ್ , ಇಂಥಾ ಬುದ್ಧಿನ ” ಯುವಕರಿಗೆ ವಿಷಕುಡಿಸುದಕ್ಕೆ” ಬಳ್ಸತಾ ಇದ್ನಲ್ಲಾ ಗುರುಗಳೇ !!

    • http://hareraama.in Sri Samsthana

      ಗುಣಕೆ ಮತ್ಸರವಿಲ್ಲ..

  • http://hareraama.in/members/chirayugk/ gopalakrishna pakalakunja

    ಜೀವನದ ಬಹು ಭಾಗವನ್ನು , ಬಹು ಸಮಯವನ್ನೂ ಗಳಿಕೆಗಾಗಿ ವಿನಿಯೋಗಿಸಿ ,ಆರೋಗ್ಯ ವನ್ನು ಕಳೆ ದು ಕೊಂಡು ಹಣವನ್ನು ಸಂಪಾದಿಸಿದವವರು, ಪ್ರಾಯ ಸಂದಾಗ ಕಳೆದುಕೊಂಡ ಆರೋಗ್ಯವನ್ನು ಮರಳಿ ಪಡೆಯಲು ಗಳಿಸಿದ ಬಹು ಪಾಲು ಗಳಿಕೆಯನ್ನು ವಿನಿಯೋಗಿಸಿ ಪ್ರಯತ್ನಪಡುತ್ತಾರೆ. ಕುಟುಂಬ, ಗೆಳೆಯರು, ಉತ್ಸಾಹ… ಮರೀಚಿಕೆಯಾಗಿಯೇ ಉಳಿದು ಬಿಡುತ್ತದೆ.
    ಸೇವೆ ಸತ್ಸಂಗ ಸಾಧನೆ ಗಳೊಂದಿಗೆ ಶ್ರೀ ಸಂಸ್ಥಾನ ದವರರೊಡನೆ ಕಳೆವ ಕ್ಷಣ ಗಳೇ ನನ್ನ ಜೀವನದ ಪರಮ ಸಾರ್ಠಕ ಕ್ಷಣಗಳು

  • http://hareraama.in/members/suntime/ Vishwa M S Maruthipura

    hareraama

  • http://hareraama.in/members/rnarayana/ Raghavendra Narayana

    SPIRIT
    SPIRITual
    .
    Bless me immense spirit in Spiritual life, don’t want to lean to Spiritual because of sorrows, want to jump into the Spiritual joy with Spirit.
    .
    Anyways, excuse me for this irrelevant comment please.
    .
    Shri Gurubhyo Namah

    • http://hareraama.in Sri Samsthana

      This is the most relevant comment..

  • Anuradha Parvathi

    True

Powered By Indic IME