LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ವಿದ್ವಾನ್ ರಂಗನಾಥ ಶರ್ಮಾ ಅಸ್ತಂಗತ

Author: ; Published On: ಶನಿವಾರ, ಜನವರಿ 25th, 2014;

Switch to language: ಕನ್ನಡ | English | हिंदी         Shortlink:

ರಾಷ್ಟ್ರಪ್ರಶಸ್ತಿ ವಿಜೇತ ಮಹಾಮಹೋಪಾಧ್ಯಾಯ ವಿದ್ವಾನ್ ನಡಹಳ್ಳಿ ರಂಗನಾಥ ಶರ್ಮರು ತಮ್ಮ 99ನೆಯ ವಯಸ್ಸಿನಲ್ಲಿ ಇಂದು ನಿಧನ ಹೊಂದಿದರು.
ಇವರು ಸಂಸ್ಕೃತ, ಕನ್ನಡ, ವ್ಯಾಕರಣ, ಸಾಹಿತ್ಯ ಕ್ಷೇತ್ರಗಳಲ್ಲಿ ವಿಶೇಷ ಪ್ರಾವೀಣ್ಯ ಹೊಂದಿದ್ದರು.
ಹೊಸನಗರ ಶ್ರೀ ರಾಮಚಂದ್ರಾಪುರ ಮಠದಿಂದ ಕೊಡುವ ಶಂಕರಕಿಂಕರ ಪ್ರಶಸ್ತಿ, ಚಾತುರ್ಮಾಸ್ಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಶ್ರೀಯುತರು ಈರ್ವರು ಪುತ್ರರು, ಈರ್ವರು ಪುತ್ರಿಯರು ಹಾಗೂ ಅಪಾರ ಶಿಷ್ಯವೃಂದದವರನ್ನು ಅಗಲಿದ್ದಾರೆ.
Vidwan-N.Ranganatha-Sharma-2

2 Responses to ವಿದ್ವಾನ್ ರಂಗನಾಥ ಶರ್ಮಾ ಅಸ್ತಂಗತ

  1. ರವೀಂದ್ರ ಭಟ್. ಟಿ. ಎಲ್.

    ಮಹಾಮಹೋಪಾದ್ಯಾಯ ಶ್ರೀ ರಂಗನಾಥ ಶರ್ಮಾ ಅವರು ನಮ್ಮ ಸಮಾಜದ ಅತ್ಯಂತ ಘನವೆತ್ತ ಸಂಸ್ಕೃತ ಭಾಷೆ ಮತ್ತು ಕನ್ನಡ ಪ್ರಾಧ್ಯಾಪಕ ಹಾಗೂ ಮಹಾ ಪಂಡಿತರು. ಅವರು ಶತಕದ ಆಸುಪಾಸಿನಲ್ಲಿ ನಮ್ಮನಗಲಿದ್ದಾರೆ. ಅವರಂತಹ ಮಹಾನ್ ಚೇತನ ನಮ್ಮ ನಡುವೆ ಮತ್ತೆ ಮತ್ತೆ ಬರಲಿ ಎಂಬ ಆಶಯ ನಮ್ಮದು. ನಮಗಲ್ಲರಿಗೂ ಅವರ ಲೇಖನಗಳು ದಾರಿ ದೀಪ, ಅವರ ಜೀವನ ರೀತಿ ನೀತಿಗಳು ನಮಗೆಲ್ಲ ಮಾದರಿ. ಅವರು ಅಗಲುವಿಕೆ ನಮಗೆ ದುಃಖ ತಂದಿದೆ. ಆದರೂ ಅವರ ಪರಿಪರಿಪೂರ್ಣ ಜೀವನ ನಮಗೆಲ್ಲ ಸಮಾಧಾನ ಅಷ್ಟೇ.

    [Reply]

  2. srinandan rao

    ನಿಜವಾಗಲೂ ಮಹಾಮಹೋಪಾಧ್ಯಾಯ ವಿ. ಶ್ರೀ ರಂಗನಾಥ ಶರ್ಮರ ಅಗಲುವಿಕೆ ಇಡೀ ಹವ್ಯಕಸಮಾಜಕ್ಕೆ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ಆದ ನಷ್ಟ. ಇಂತಹ ಮಹಾನ್ ಚೇತನರ ಸಾಧನೆಯ ಹಾದಿಗಳು ಖಂಡಿತವಾಗಿಯೂ ನಮಗೆಲ್ಲ ದಾರಿದೀಪವಾಗಿದೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸದ್ಗತಿ ಸಿಗಲೆಂದೂ, ಕುಟುಂಬ ವರ್ಗದವರಿಗೆ ದುಖಃ ಭರಿಸುವ ಶಕ್ತಿ ಕೊಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

    [Reply]

Leave a Reply

Highslide for Wordpress Plugin