Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Author

Sri Samsthana

ವಿರಾಧ ವಧ ಪಂಡಿತನೆಂದರೆ..??

ಅದೊಂದು ಕಾಡು. . !
ಕಾಡೆಂದರೆ ಪ್ರಕೃತಿಮಾತೆಯ ಮುಗುಳ್ನಗು..
ಆದರೆ ಈ ಕಾಡು ಹಾಗಿರಲಿಲ್ಲ..!!
ಬರ್ಬರ ಆಕ್ರಮಣಕ್ಕೀಡಾದ ಮಾತೃತ್ವದ ಭಯ – ಸಂಕಟಗಳ ಪ್ರತೀಕದಂತಿತ್ತದು..!!
ಅಲ್ಲಿ ಸೌಮ್ಯ ಮೃಗಗಳ ಸುಳಿವಿರಲಿಲ್ಲ..
ಎತ್ತೆತ್ತಲೂ ಕ್ರೂರ – ಘೋರ ಮೃಗಗಳೇ..!!!
ಮುರಿದ ಮರಗಳು..!!
ಬಿದ್ದು ಬಾಡಿ ಬಿಸುಡಿದ ಬಳ್ಳಿಗಳು..!!
ಸಂಕಟ ಮಿತಿಮೀರಿದರೆ ಕಣ್ಣೀರೂ ಬತ್ತಿಹೋಗುವಂತೆ….
ಆ ಕಾಡಿನಲ್ಲಿ ಅದೆಷ್ಟು ನೋಡಿದರೂ . . . ಅದೆಷ್ಟು ನಡೆದರೂ . . ಜೀವಜಲದ ಸುಳಿವಿಲ್ಲ. .!!
ಹಾಡುವ ಹಕ್ಕಿಗಳಿಲ್ಲ..!
ಎಲ್ಲಿನೋಡಿದರಲ್ಲಿ ರಣಹದ್ದುಗಳು, ಗಿಡುಗ, ಗೂಬೆಗಳು..!!!
ಕಾಡಿಗೆ ಕಾಡೇ ಮೊಳಗುವಂತಿದ್ದ ಮಿಡತೆ- ಜೀರುಂಡೆಗಳ ಕಿವಿ ಸೀಳುವ ಕರ್ಕಶ ಕೂಗುಗಳು..!!

ಯಾಕೆ ಹೀಗಾಯಿತು ಈ ಕಾಡು..!?

Divine Symmetry !

Beauty is all about Symmetry ! Look at this: (Source: Sri’s collection)

ಹರಿದುಬರಲಿ ಹಣ ಸರಿ ದಾರಿಯಲ್ಲಿ….

||ಹರೇರಾಮ|| || ಯೋರ್ಥೇ ಶುಚಿಃ ಸ ಶುಚಿಃ ನ ಮೃದ್ವಾರಿ ಶುಚಿಃ ಶುಚಿಃ || ವ್ಯಕ್ತಿ ಶುದ್ಧನಾಗುವುದು ಸಾಬೂನು, ನೀರುಗಳಿಂದಲ್ಲ, ಹಣದ ವಿಷಯದಲ್ಲಿ ಯಾರು ಶುದ್ಧನೋ ಅವನು ಮಾತ್ರವೇ ನಿಜವಾಗಿಯೂ ಶುದ್ಧನು..!! ಶ್ರೀಮಂತರೊಬ್ಬರ ಮನೆಯಲ್ಲಿ ಸಂತರೊಬ್ಬರ ಶುಭಾಗಮನವಾಗಿತ್ತು. ಸಂಭ್ರಮದ ಸ್ವಾಗತ, ವೈಭವದ ಪಾದಪೂಜೆಯ ನಂತರ ಸಮೃದ್ಧವಾದ ಭಿಕ್ಷೆ ಆ ಮನೆಯಲ್ಲಿ ನೆರವೇರಿತು.. ಅದು ಯಾವ ಮಾಟವೋ,… Continue Reading →

Mother, My Mother..!

Do you know?

A human body can bear only upto 45 Del (unit) of pain.
But at the time of giving birth, a woman feels upto 57 Del of Pain.
This is similar to 20 bones getting fractured at a time!!!!

LOVE UR MOM…

ಯುದ್ಧ – ಮೋಕ್ಷದಾಟವೋ..? ಮೋಸದಾಟವೋ..?

“ನಿನ್ನ ಕೊನೆಯ ಕ್ಷಣ ಸನ್ನಿಹಿತವಾಗಿದೆ. ಇಷ್ಟದೇವರನ್ನು ಸ್ಮರಿಸು”

ಪ್ರಾಣಹಾರಿಯಾದ ಪ್ರಹಾರವನ್ನು ಮಾಡುವ ಮೊದಲು ವೀರನೊಬ್ಬ ಪ್ರತಿವೀರನಿಗೆ ಹೇಳುವ ಮಾತಿದು..!(

ವ್ಯಕ್ತಿ ದೇಹಾಂತ ಸಮಯದಲ್ಲಿ ಯಾವುದನ್ನು ಸ್ಮರಿಸುವನೋ, ಮುಂದೆ ಆತ ಅದೇ ಸ್ವರೂಪವನ್ನು ಹೊಂದುವನು.!

(ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಮ್ |
ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ || – ಗೀತೆ )

ಹುಣ್ಣಿಮೆಯ ಪೂರ್ಣಚಂದ್ರ..!

|| ಹರೇ ರಾಮ ||

ಮೊನ್ನೆ ಜನವರಿ 30, 2010 ರ ಶನಿವಾರ ಶುದ್ಧ ಪೌರ್ಣಮಿಯಾಗಿತ್ತು!
ಶುಭ್ರ ಆಕಾಶದಲ್ಲಿ ಶಶಿಪ್ರಭೆಯ ಪ್ರಖರತೆಗೆ ನಕ್ಷತ್ರರಾಶಿಗಳು ಮಂಕಾಗಿದ್ದವು!

ಛಾಯಾಗ್ರಹಣದ ಹವ್ಯಾಸ ಹೊಂದಿರುವ ಅಸ್ಮದತ್ಯಂತ ಪ್ರಿಯಶಿಷ್ಯ ಚಿ | ಉಲ್ಲಾಸನ ಕ್ಯಾಮರಾ (Nikon Coolpix S10) ಕಣ್ಣಿಗೆ ನೀಲಾಕಾಶದ ಪೂರ್ಣಚಂದಿರನ ಚಿತ್ರಗಳು ಕಂಡದ್ದು ಈ ರೀತಿ:

Why ‘MOTHER’ is so special . . . ?

|| Hare Raama ||

Why MOTHER is so special?

Wen I came drenched in d rain,

My Brother asked- Why did’nt u take an umbrella?

Sister advised-Why didn’t u wait till rain stoped?

Father shouted- “Only after gettin a cold u’ll realise!”

ದಾನವೆಂದರೆ ಉಳಿತಾಯ..!!!!

ಹಣವೊಂದು ಮಹಾ ವಿಚಿತ್ರ ವಸ್ತು..!

ಅದು ಹೆಚ್ಚಾದರೂ ಸುಖವಿಲ್ಲ..!!

ಕಡಿಮೆಯಾದರಂತೂ ಹೇಗೂ ಇಲ್ಲ..!

ಕಡಿಮೆಯಾದರೆ ಹಾಹಾಕಾರ..ಹೆಚ್ಚಾದರೆ ಅಹಂಕಾರ..!!!!

ಸುಖವಿರುವುದು ಸಮತೋಲನದಲ್ಲಿ..!

ಹಣ ಕಡಿಮೆಯಾಗದಿರಲು ಚೆನ್ನಾಗಿ ದುಡಿಯಬೇಕು..!

ಹಣ ಹೆಚ್ಚಾಗದಿರಲು ಕೈಬಿಚ್ಚಿ ದಾನ ಮಾಡಬೇಕು..!

ದುಡಿದದ್ದರಿಂದ ಹೊಟ್ಟೆ ತುಂಬಿತು, ದಾನ ಮಾಡಿದ್ದರಿಂದ ಹೃದಯವೂ ತುಂಬಿತು..!

ಸುಲಭ ಸಾಧ್ಯವೇ ಈ ದರ್ಶನ…?

ಸುಲಭ ಸಾಧ್ಯವೇ ಈ ದರ್ಶನ? (Watch the video) (Source: Sri’s Collection)

ಹಿಡಿಯುವಳೇ ನಿನ್ನ ಹಿಡಿಯಲ್ಲಿ… ತಾಯಿ ಮಹಾಲಕ್ಷ್ಮಿ..?

ಒಂದಾನೊಂದು ಊರಿನಲ್ಲಿ ಧನಪಾಲ ಮತ್ತು ದಾನಶೀಲ ಎಂಬ ಶ್ರೀಮಂತರಿದ್ದರು..
ಇಬ್ಬರದೂ ಒಂದೇ ಊರಾದರೂ ಸ್ವಭಾವದಲ್ಲಿ ಆಕಾಶ ಭೂಮಿಗಳ ಅಂತರವಿದ್ದಿತು..
ಹೆಸರಿಗೆ ತಕ್ಕಂತೆ ಹಣಕೂಡಿಡುವುದರಲ್ಲಿ ಧನಪಾಲ ಸುಖಕಂಡರೆ, ದಾನಶೀಲನಿಗೆ ಹಂಚಿ ತಿನ್ನುವುದರಲ್ಲಿ ಪರಮಾನಂದ..!

ಹೊಟ್ಟೆ – ಬಟ್ಟೆ ಕಟ್ಟಿ, ಹೆಂಡತಿ ಮಕ್ಕಳನ್ನು ಉಪವಾಸ ಕೆಡವಿ ಧನಪಾಲ ಹಣ ಕೂಡಿಸುತ್ತಿದ್ದ.
ಹಾಗೆ ಕೂಡಿಸಿದ ಹಣವನ್ನು ಆಗಾಗ ಚಿನ್ನದರೂಪದಲ್ಲಿ ಪರಿವರ್ತಿಸಿ ಊರ ಹೊರಗಿನ ಕಾಡಿನಲ್ಲಿ ಮರವೊಂದರ ಬುಡದಲ್ಲಿ ಹೂತಿಡುತ್ತಿದ್ದ..

ಹೀಗೆ ಹೂತಿಟ್ಟ ಹಣವನ್ನುಆಗಾಗ ನೋಡಿ ಸಂತೋಷಪಡುವುದು ಅವನಿಗೆ ಅಭ್ಯಾಸವಾಗಿತ್ತು..
ಅತ್ತ ದಾನಶೀಲನಿಗಾದರೋ “ಉಣ್ಣು, ಉಡು, ಕೊಡು” ಎನ್ನುವುದೇ ಜೀವನ ಮಂತ್ರವಾಗಿತ್ತು..

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin