Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Author

Info@HareRaama.in

15-ಅಗೋಸ್ತ್- 2015 : ಭಾರತ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಸರ್ವ ಶಿಷ್ಯವೃಂದಕ್ಕೆ ಭಾರತ ಗಣರಾಜ್ಯದ 69ನೆಯ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು.
15-Aug-2015 : Independence Day wishes

ಗೋಕರ್ಣ : ಸಾಲಿಗ್ರಾಮ ಪೀಠಕ್ಕೆ ನೂತನ ರಜತ ಕವಚ ಸಮರ್ಪಣೆ- via : SriGokarna.Org

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆತ್ಮಲಿಂಗದ ಸುತ್ತಲಿನ ಸಾಲಿಗ್ರಾಮ ಪೀಠಕ್ಕೆ ನೂತನವಾಗಿ ನಿರ್ಮಿಸಿದ ರಜತ ಕವಚ ಸಮರ್ಪಿಸಲಾಯಿತು .
ಹನ್ನೆರಡು ಕಿಲೋ ತೂಕದ ಬೆಳ್ಳಿಯಿಂದ ಇದನ್ನು ನಿರ್ಮಿಸಲಾಗಿದೆ .

11-08-2015: ಛಾತ್ರ ಚಾತುರ್ಮಾಸ್ಯ 12ನೇ ದಿನ: ವರದಿ Program Report

ಪೂಜೆಯ ಮುಖ್ಯ ಉದ್ದೇಶ ಪ್ರಸನ್ನತೆ. ಭಗವಂತನ ಪ್ರಸನ್ನತೆ ಹೂವು ಹಾಗೂ ನೈವೇದ್ಯದಲ್ಲಿ ಹರಿದು ಬರುವುದರಿಂದ ಅದಕ್ಕೆ ಪ್ರಸಾದ ಎಂದು ಕರೆಯುತ್ತಾರೆ. ಆ ಪ್ರಸಾದವನ್ನು ಸೇವಿಸಿದಾಗ ನಮ್ಮಲ್ಲಿ ಪ್ರಸನ್ನತೆ ಬರುತ್ತದೆ. ಅಷ್ಟೆ ಅಲ್ಲದೆ ಪೂಜೆಯಲ್ಲಿ ಬಳಸುವ ಎಲ್ಲ ಸುವಸ್ತುಗಳೂ ಮನಸ್ಸನ್ನು ಪ್ರಸನ್ನಗೊಳಿಸುತ್ತವೆ. ಹಾಗಾಗಿ ಪೂಜೆ ನಮಗಾಗಿ ಇರುವುದೇ ಹೊರತು ಭಗವಂತನಿಗಾಗಿ ಅಲ್ಲ

09-08-2015: ಛಾತ್ರ ಚಾತುರ್ಮಾಸ್ಯ 10ನೇ ದಿನ: ವರದಿ Program Report

ಜಗತ್ತಿನಲ್ಲಿ ಎರಡು ಮನಸ್ಸುಗಳು ಒಂದಾಗದೇ ಇದ್ದಾಗ ಆಗುವುದು ಯುದ್ಧ. ಧರ್ಮವನ್ನು ಬಿಟ್ಟ ಯುದ್ಧಕ್ಕೆ ಯಾವ ಅರ್ಥವೂ ಇಲ್ಲ. ಯುದ್ಧ ಯಾರಿಗೂ ಬೇಡ. ಆದರೆ ಅದಕ್ಕೆ ಧರ್ಮ ಸೇರಿದರೆ ಆ ಯುದ್ಧದಷ್ಟು ಪವಿತ್ರ ಯಾವುದೂ ಇಲ್ಲ. ಧರ್ಮದ ಮೇಲೆ ದಾಳಿಯಾದಾಗ ಧರ್ಮ ಯುದ್ಧ ಸಂಭವಿಸುತ್ತದೆ

03-08-2015: ಛಾತ್ರ ಚಾತುರ್ಮಾಸ್ಯ 4ನೇ ದಿನ: ವರದಿ Program Report

ಯಾರಿಂದಲೂ ನಿರೀಕ್ಷೆ ಇಟ್ಟುಕೊಳ್ಳಬೇಡಿ. ನೀರಿಕ್ಷೆಯೇ ದುಃಖಕ್ಕೆ ಮೂಲ. ನಾವು ದೇವರಿಂದ ನಿರೀಕ್ಷೆ ಇಟ್ಟುಕೊಂಡು, ಅದು ಈಡೇರಿಲ್ಲ ಎಂದರೆ ನಾವು ದೇವರನ್ನು ದೂರುತ್ತೇವೆ ಮತ್ತು ದೂರ ಮಾಡುತ್ತೇವೆ.

Aug 7-15, 2015: ಮುಜುಂಗಾವಿನಲ್ಲಿ ರಾಮಾಯಣ ಪಾರಾಯಣ Ramayana Parayana at Mujungavu

ಶ್ರೀರಾಮಚಂದ್ರಾಪುರ ಮಠದ ಕುಂಬಳೆ ವಲಯ ಪರಿಷತ್ತಿನ ಆಶ್ರಯದಲ್ಲಿ ಅಗೋಸ್ತ್ 7 ರಿಂದ 15 ರ ತನಕ ಮುಜುಂಗಾವು ಶ್ರೀಪಾರ್ಥಸಾರಥಿ ಕೃಷ್ಣ ದೇವಸ್ಥಾನದಲ್ಲಿ ವಾಲ್ಮೀಕಿ ರಾಮಾಯಣ ಪಾರಾಯಣ ಕಾರ್ಯಕ್ರಮ ನಡೆಯಲಿದೆ.

02-08-2015: ಛಾತ್ರ ಚಾತುರ್ಮಾಸ್ಯ 3ನೇ ದಿನ: ವರದಿ Program Report

ಶ್ರೀ ಸಂಸ್ಥಾನದವರ ಯೋಜನೆಯಂತೆ ಛಾತ್ರಪುರಸ್ಕಾರದಲ್ಲಿ ರಾಷ್ಟ್ರಮಟ್ಟದಲ್ಲಿ ಗಾಯನ ಹಾಗೂ ಭರತನಾಟ್ಯ ಪಟು ವಿದೂಷಿ ದೀಕ್ಷಾ ಅವರನ್ನು ಶ್ರೀಗಳು ಸನ್ಮಾನಿಸಿದರು. ಶ್ರೀ ಭಾರತಿ ಪ್ರಕಾಶನದ ವತಿಯಿಂದ ಪರಮಪದ ಸೋಪಾನ ಎಂಬ ವಿನೂತನ ಮಾದರಿಯ ಆಟಿಕೆಯನ್ನು ಕುಮಾರಿ ವಿದೂಷಿ ದೀಕ್ಷಾ ಅವರಿಂದ ಲೋಕಾರ್ಪಣೆಗೊಳಿಸಲಾಯಿತು

01-08-2015: ಛಾತ್ರ ಚಾತುರ್ಮಾಸ್ಯ 2ನೇ ದಿನ: ವರದಿ Program Report

ಗುರುಗಳ ಹತ್ತಿರ ಇದ್ದವರ ಮೇಲೆ ಸಹಜವಾಗಿ ಹಲವರಿಗೆ ಅಸೂಯೆ ಮೂಡುತ್ತದೆ. ಹಾಗಾಗಬಾರದು, ಸಮಾಜದ ಶುಭ ಹಾರೈಕೆ ಎಲ್ಲ ಪರಿವಾರದವರ ಮೇಲೆ ಇರಲಿ. ಅಣ್ಣ-ತಮ್ಮಂದಿರ ಹಾಗೆ. ಮನೆಯ ಮಕ್ಕಳ ಹಾಗೆ ಸಂಬಂಧ ಇರಲಿ. ಎಲ್ಲರಿಗೂ ರಾಮನ ಆಶೀರ್ವಾದ ಇರಲಿ, ಹಾಗೂ ಎಲ್ಲರಿಗೂ ಕ್ಷೇಮವನ್ನು ಅಪ್ಪಣೆ ಮಾಡಿದರು.

31-07-2015: ಛಾತ್ರ ಚಾತುರ್ಮಾಸ್ಯ ಆರಂಭ, ವ್ಯಾಸಪೂಜಾ ವರದಿ – Program Report

ಶ್ರೀ ರಾಮಾಶ್ರಮ, ಬೆಂಗಳೂರು 31.07.2015, ಶನಿವಾರ
ಬೆಳಗ್ಗೆ ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ನಂತರ ವ್ಯಾಸಪೂಜೆ ಹಾಗೂ ಚಾತುರ್ಮಾಸ್ಯ ವ್ರತ ಸಂಕಲ್ಪ ಸಂಪನ್ನವಾಯಿತು.

Guru Poornima : ಗುರುಪೂರ್ಣಿಮೆಯ ಶುಭಾಶಯಗಳು

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin