LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ದಾನವೆಂದರೆ ಉಳಿತಾಯ..!!!!

Author: ; Published On: ರವಿವಾರ, ಜನವರಿ 31st, 2010;

Switch to language: ಕನ್ನಡ | English | हिंदी         Shortlink:

ಹಣವೊಂದು ಮಹಾ ವಿಚಿತ್ರ ವಸ್ತು..!

ಅದು ಹೆಚ್ಚಾದರೂ ಸುಖವಿಲ್ಲ..!!

ಕಡಿಮೆಯಾದರಂತೂ ಹೇಗೂ ಇಲ್ಲ..!

ಕಡಿಮೆಯಾದರೆ ಹಾಹಾಕಾರ..ಹೆಚ್ಚಾದರೆ ಅಹಂಕಾರ..!!!!

ಸುಖವಿರುವುದು ಸಮತೋಲನದಲ್ಲಿ..!

ಹಣ ಕಡಿಮೆಯಾಗದಿರಲು ಚೆನ್ನಾಗಿ ದುಡಿಯಬೇಕು..!

ಹಣ ಹೆಚ್ಚಾಗದಿರಲು ಕೈಬಿಚ್ಚಿ ದಾನ ಮಾಡಬೇಕು..!

ದುಡಿದದ್ದರಿಂದ ಹೊಟ್ಟೆ ತುಂಬಿತು, ದಾನ ಮಾಡಿದ್ದರಿಂದ ಹೃದಯವೂ ತುಂಬಿತು..!

ನಮ್ಮ ಬದುಕಿಗೆ ಎಷ್ಟು ಹಣದ ಅಗತ್ಯವಿದೆಯೋ, ಅಷ್ಟು ಮಾತ್ರವೇ ನಮ್ಮದು..!!

ಮಿಕ್ಕಿದ್ದು ನಮ್ಮ ಬಳಿ ಇದ್ದರೂ ಪ್ರಯೋಜನವೇನೂ ಇಲ್ಲ..!

ಅನ್ನದ ರಾಶಿಯೇ ಇದ್ದರೂ ಹೊಟ್ಟೆಗೆ ಹಿಡಿಯುವಷ್ಟೇ ತಾನೆ ಉಣ್ಣಲು ಸಾಧ್ಯ..!

ಚಿನ್ನದ ರಾಶಿಯೇ ಇದ್ದರೂ ಮೈಯಿರುವಷ್ಟು ತಾನೆ ತೊಡಲು ಸಾಧ್ಯ..!!

ಆದರೆ ಹೆಚ್ಚಾದ ಹಣಕ್ಕಿರುವ ಒಂದು ಪ್ರಯೋಜನವನ್ನು ಅಲ್ಲಗಳೆಯಲಾಗದು..

ಅದೆಂದರೆ  “ಉಳಿತಾಯ”..!!!

ಇಂದು ಹೆಚ್ಚಾಗಿರುವ ಹಣ, ಒಂದೊಮ್ಮೆ ಕಡಿಮೆಯಾದಾಗ ಉಪಯೋಗಕ್ಕೆ ಬಂದೀತು..!

ಅಲ್ಲದಿದ್ದರೆ ,ಮಕ್ಕಳು- ಮೊಮ್ಮಕ್ಕಳಿಗೆ ಉಪಯೋಗವಾದೀತು..!!

ತನ್ನಲ್ಲಿ, ತನ್ನವರಲ್ಲಿ,ತಾನಿರುವ ಜಗದ ಜೀವಗಳಲ್ಲಿ, ನಾನಾ ಬಗೆಯ ಕಷ್ಟ -ಕಾರ್ಪಣ್ಯಗಳನ್ನು ಕಂಡ ಮನುಷ್ಯ,

ಹೀಗೊಮ್ಮೆ ಮುಂದಾಲೋಚನೆ ಮಾಡಿದರೆ ತಪ್ಪೇನಿಲ್ಲ..!

ಆದರೆ ,

ನಾವು ಅಷ್ಟಾಗಿ ಗಮನಿಸದ ಒಂದು ಸಂಗತಿ ಎಂದರೆ..

ದಾನವೆಂಬುದು ದೊಡ್ಡ ಮುಂದಾಲೋಚನೆ,

ಅದೊಂದು ವಿಶಿಷ್ಠ ರೀತಿಯ ಉಳಿತಾಯವೇ ಆಗಿದೆ ಎಂಬುದು..!!

ಭಾರತದ ರೂಪಾಯಿಗೆ ಅಮೇರಿಕಾದಲ್ಲಿ ಯಾವ ಉಪಯೋಗವೂ ಇಲ್ಲ ..!

ರೂಪಾಯಿಯನ್ನು ಡಾಲರಾಗಿ ಪರಿವರ್ತಿಸಿದರೆ ಮಾತ್ರವೇ ಅದು ಅಲ್ಲಿ ಉಪಯೋಗಕ್ಕೆ ಬರಲು ಸಾಧ್ಯ..!

ಹಾಗೆಯೇ ಭೂಮಿಯ ರೂಪಾಯಿಗೆ ಪರಲೋಕದಲ್ಲಿ ಯಾವ ಉಪಯೋಗವೂ ಇಲ್ಲ..!

ಸೂಜಿಮೊನೆಯಷ್ಟಾದರೂ ಸಂಪತ್ತನ್ನು ಇಲ್ಲಿಂದ ತೆಗೆದುಕೊಂಡು ಹೋಗುವಂತಿಲ್ಲ..!!

ಮುರಿಯಲಾರದ ವಿಧಿನಿಯಮವದು..!

ನಾವೆಷ್ಟು ದುಡಿದರೂ, ಮತ್ತೆಷ್ಟು ಕೂಡಿಟ್ಟರೂ ಈ ಲೋಕವನ್ನು ಬಿಟ್ಟು ಹೋಗುವಾಗ ಅವೆಲ್ಲವೂ ಇಲ್ಲಿಯೇ ಉಳಿದು ಬಿಡುವುದಲ್ಲವೇ..?

ಒಂದು ಚಿಕ್ಕಾಸನ್ನೂ ಜೊತೆಗೊಯ್ಯುವಂತಿಲ್ಲವೆಂದರೆ ಆಘಾತವೆನಿಸುವುದಿಲ್ಲವೇ..?

ಈ ಸಮಸ್ಯೆಗೆ ಮನೀಷಿಗಳು ಕಂಡುಕೊಂಡ ಪರಿಹಾರವೇ ದಾನ..!!

ದಾನ ಮಾಡಿದ ಸಂಪತ್ತು ಪುಣ್ಯದರೂಪ ತಾಳುತ್ತದೆ..!

ಪುಣ್ಯವು ಸಮಯ ಬಂದಾಗ ತಾನೇ ತಾನಾಗಿ ಸುಖದ ರೂಪವನ್ನು ತಾಳುತ್ತದೆ..!

ಹೀಗೆ ಹಣವನ್ನು  ಸುಖವನ್ನಾಗಿ ಪರಿವರ್ತಿಸುವ ಆಶ್ಚರ್ಯಕರ ವಿಧಾನವೇ ದಾನ..!!

ಪುಣ್ಯದ ರೂಪದಲ್ಲಿ ಪರಿವರ್ತಿತವಾದ ಹಣ ಪರಲೋಕದಲ್ಲಿಯೂ ಉಪಯೋಗಕ್ಕೆ ಬರಬಲ್ಲದು..!

ಆದುದರಿಂದ, ಬದುಕಿನ ನಂತರ ಮುಂದೇನು..? ಎನ್ನುವ ಬಹುದೊಡ್ಡ ಮುಂದಾಲೋಚನೆಯೇ ದಾನ..!!

ಬದುಕಿನ ಸಂಪತ್ತುಗಳನ್ನು ಬದುಕಿನ ನಂತರಕ್ಕೂ ಉಳಿಸಿಕೊಳ್ಳುವ ಅತಿ ವಿಶಿಷ್ಡ  ಉಳಿತಾಯ ವಿಧಾನವೇ ದಾನ..!!

ವಿಚಿತ್ರವೆಂದರೆ ದಾನಪ್ರಕ್ರಿಯೆಯಲ್ಲಿ ಕೊಡುವಾತ ತೆಗೆದುಕೊಳ್ಳುವಾತನಿಗೆ ನಮಸ್ಕರಿಸುವ ಪದ್ಧತಿಯಿದೆ..!

ಏಕೆಂದರೆ ಕೊಡುವವನು ತೆಗೆದುಕೊಳ್ಳುವವನಿಗೆ ಕೊಡುವುದು ನಶ್ವರ ಸಂಪತ್ತನ್ನು..!!!

ಬದಲಾಗಿ ಪಡೆದುಕೊಳ್ಳುವುದು ಪುಣ್ಯದ ರಾಶಿಯನ್ನು ..!!

ಹಣವನ್ನು ನಾವು ರಕ್ಷಿಸಬೇಕಾಗುತ್ತದೆ..!

ಆದರೆ ಪುಣ್ಯವು ತಾನೇ ನಮ್ಮನ್ನು ರಕ್ಷಿಸುತ್ತ

ಹಣಕ್ಕೆ ಇಲ್ಲಿ ಮಾತ್ರವೇ ಉಪಯೋಗ.. ಪುಣ್ಯಕ್ಕೆ ಎಲ್ಲೆಲ್ಲಿಯೂ ಉಪಯೋಗ..!!!

ಹಣಕ್ಕೆ ಕಳ್ಳರ ಭೀತಿಯಿದೆ..ಪುಣ್ಯಕ್ಕೆ ಯಾವ ಭೀತಿಯೂ ಇಲ್ಲ..!

ಹಣದಂತೆ ಪುಣ್ಯವನ್ನು ಹೊತ್ತುಕೊಂಡೊಯ್ಯಬೇಕಾಗಿಲ್ಲ

ಅದು ನಮ್ಮೊಳಗೆ, ನಮ್ಮೊಡನೆ ಸೇರಿಕೊಂಡು ನಮ್ಮ ನಿರಂತರ ಸಂಗಾತಿಯಾಗಿರುವುದಲ್ಲದೇ, ಸಮಯ ಬಂದಾಗ ನಮ್ಮನ್ನೇ ಕೊಂಡೊಯ್ಯುವುದು ..!

ಹಣದಂತೆ ಪುಣ್ಯವನ್ನುದು ಹುಡುಕಬೇಕಾಗಿಲ್ಲ..!!

ನಮಗೆ ಅಗತ್ಯವಿದ್ದಾಗ ಅದು ತಾನಾಗಿಯೇ ನಮ್ಮ ನೆರವಿಗೆ ಧಾವಿಸಿ ಬರುವುದು

ಆದುದರಿಂದ ,ಯಾಚಕ – ದಾನಿಗಳಲ್ಲಿ  ಯಾಚಕನೇ ದೊಡ್ಡ ದಾನಿಯೆನ್ನಬಹುದು..!

ದಾನಂ ಭೋಗೋ ನಾಶಃ ತಿಸ್ರೋ ಗತಯೋ  ಭವಂತಿ ವಿತ್ತಸ್ಯ |

ಯೋ ನ ದದಾತಿ ನ ಭುಂಕ್ತೇ ತಸ್ಯ  ತೃತೀಯಾ ಗತಿಃ ಭವತಿ   ||

ಹಣಕ್ಕೆ ಮೂರುವಿಧವಾದ ಗತಿಗಳು..

ಒಂದು ದಾನ..

ಎರಡು ಭೋಗ..

ಮೂರು ನಾಶ..

ತಾನೂ ಅನುಭವಿಸದ, ಬೇರೆಯವರಿಗೂ ನೀಡದ ಹಣಕ್ಕೆ ಆಗುವುದು ಮೂರನೆಯ ಗತಿ..!

ಹಣವಿರುವುದೇ ಅನುಭವಿಸಲೆಂದು..!

ಒಂದೋ ನಾವು ಅನುಭವಿಸಬೇಕು ,ಅಥವಾ ಬೇರೆಯವರು ಅನುಭವಿಸಬೇಕು..

ನಾವು ಅನುಭವಿಸಿ ಮಿಗುವುದನ್ನು ಬೇರೆಯವರಿಗೆ ನೀಡಿದರೆ ಅದು ಇಬ್ಬರಿಗೂ ಲಾಭಕರ..!!

ತೆಗೆದುಕೊಂಡವನಿಗೆ ಹಣವಾಗಿ ಅದು ಉಪಯೋಗಕ್ಕೆ ಬಂದರೆ, ಕೊಟ್ಟವನಿಗೆ

ಪುಣ್ಯವಾಗಿ – ಆತ್ಮತೃಪ್ತಿಯಾಗಿ ಉಪಯೋಗಕ್ಕೆ ಬರುತ್ತದೆ..!

ಹರಿಯುವುದು ಹಣದ ಸ್ವಭಾವ (ದುಡ್ಡು – ಬ್ಲಡ್ಡು ಹರಿದರೇ ಒಳಿತು – ಗಾದೆ)..!

ನಾವಾಗಿ  ಹರಿಸದಿದ್ದರೆ ಅದು ತಾನಾಗಿಯೇ ಹರಿಯುತ್ತದೆ..!!!!

ಆಗ ನಮಗೆ ಉಳಿಯುವುದು ದುಃಖ ಮಾತ್ರ..!

ಜಿಪುಣತನದಿಂದಾಗಿ ನೀರನ್ನು ಉಪಯೋಗಿಸದ ಮಾತ್ರಕ್ಕೆ ಬಾವಿಯೇನೂ ತುಂಬಿಬಿಡುವುದಿಲ್ಲ..!

ಬದಲಿಗೆ ಇರುವ ನೀರೂ ಕಲುಷಿತಗೊಳ್ಳುತ್ತದೆ..!!

ಲಾಭವಾಗುವುದು ನೀರನ್ನು ಬಳಸಿದಾಗ..!!!

ನೀರೆತ್ತಿದಷ್ಟೂ ಬಾವಿಯಲ್ಲಿ ಹೊಸನೀರು ಬರುತ್ತಿರುತ್ತದೆ..ಮಾತ್ರವಲ್ಲ ನೀರು ನಿರ್ಮಲವಾಗಿರುತ್ತದೆ..!!

ಸಂಪತ್ತು ಸಂತೋಷವಾಗಿ ಪರಿವರ್ತಿತವಾಗಬೇಕಾದರೆ ಈ ತತ್ವ ಮನಸ್ಸಿಗೆ ಬರಬೇಕು..!

ಕೊಟ್ಟದು ಸದ್ವಿನಿಯೋಗವಾಗುತ್ತಿದರೆ ಕೊಡುವವನು (ದೇವರು) ಮತ್ತೆ ಮತ್ತೆ ಕೊಡುತ್ತಿರುತ್ತಾನೆ..!

ಹಾಗಾಗದಿದ್ದಾಗ ಕೊಟ್ಟದ್ದನ್ನೂ ಕಿತ್ತುಕೊಳ್ಳುತ್ತಾನೆ..!!

ದನ ಕಾಯುವವರನ್ನು ನಾವು ನೋಡಿದ್ದೇವೆ

ಕಾಯುವುದು ಮಾತ್ರ ಅವರ ಕೆಲಸ ,

ಫಲ ಉಣ್ಣುವಂತಿಲ್ಲ..ಅಂದರೆ ಹಾಲು ಕುಡಿಯುವಂತಿಲ್ಲ..!

ಅದು ಅವರ ವೃತ್ತಿಧರ್ಮ..

ಹಾಗೆಯೇ ಧನ ಕಾಯುವವರೂ ಕೂಡ..!!

ಹಾವಿನ ಹಾಗೆ ಹಣವನ್ನು ಕಾಯುತ್ತಿರುತ್ತಾರೆ..

ಅನುಭವಿಸುವುದು ಅವರ ಹಣೆಯಲ್ಲಿ ಬರೆದಿಲ್ಲ..

ಇದು ಯಾವ ಧರ್ಮವೂ ಅಲ್ಲ..!

ಇಂಥ “ಧನಪಾಲ”ರಾಗುವುದಕ್ಕಿಂತ ಅಂಥ  “ದನಪಾಲ”ರಾಗುವುದು ಎಷ್ಟುಮಾತ್ರಕ್ಕೂ ಒಳಿತು..!!

ಹಣವನ್ನು ನಾವು ಅನುಭವಿಸದೇ ಬ್ಯಾಂಕಿನಲ್ಲಿಟ್ಟು  ಅದು ನಮ್ಮ ಹಣವೆಂಬ ಭಾವನೆಯಲ್ಲಿಯೇ ಸಂತೋಷಪಡುವುದಿದ್ದರೆ..

ಜಗತ್ತಿನ ಎಲ್ಲಾ ಬ್ಯಾಂಕುಗಳ,ಎಲ್ಲಾ ಹಣವೂ ನಮ್ಮದೇ ಎಂದುಕೊಂಡು ಇನ್ನೂ ಹೆಚ್ಚು ಸಂತೋಷವನ್ನೇಕೆ ಪಡಬಾರದು..???

20 Responses to ದಾನವೆಂದರೆ ಉಳಿತಾಯ..!!!!

 1. Madhu Dodderi

  Article ತುಂಬಾ…. ಚಂದ ಆಯ್ದು…

  [Reply]

 2. Raghavendra Narayana

  ಗುರುಗಳೇ, ವಿವರಣೆ ಸ್ಪಷ್ಟ-ನೇರ.
  ಗುರುಗಳ ಲೇಖನಗಳು, ನಮ್ಮೊಳಗೇ ಇರುವ ಪ೦ಚಾಯತನಕ್ಕೆ, “ದೀಪ೦ ದರ್ಶಯಾಮಿ” ಎನ್ನುವ ಹಾಗೆ ಒಮ್ಮೆ ಬೆಳಕು ಮೂಡಿಸುತ್ತದೆ..
  ಆ ಗರ್ಭಗುಡಿಯ ಮ೦ದ ಬೆಳಕಿನಲಿ, ಈ ದೀಪಗಳ ಬೆಳಕಿನ ಆನ೦ದದಲಿ, ಒಮ್ಮೆ ಮತ್ತು ನೀಗಿ, ತೇಲಿದ೦ತಾಗುತ್ತದೆ – ನಿಜ ಮತ್ತಿನ ಅನುಭವ ಪರಿಚಯ ದೊರೆಯುತ್ತದೆ.. ಮತ್ತೆ ಕ್ಷಣ ಕಾಲದಲ್ಲಿ ಮತ್ತೊ೦ದರ ಮತ್ತು ಬ೦ದು ಭಾರದ ಭಾಸವಾಗುತ್ತದೆ..
  ಈ ಬೆಳಕಿನ ಮಿ೦ಚುಗಳನ್ನು, ತಟಸ್ಥವಾಗಿಸಿ, ಒಮ್ಮೆ ಪೂರ್ಣ ತಿಳಿಯುವ ಆಸೆ. ಮಿ೦ಚುಹುಳದ೦ತಾಗದೆ, ಮಿ೦ಚಿಗೆ ಎದೆ ಕೊಟ್ಟು ಮಿ೦ಚಿ ಮಿನುಗುತ್ತಲೇ ಇರುವ ಆಸೆ.. ಆ ದರ್ಶನ ಸಿಗಲಿ, ಆ ವೀರತ್ವ ಬರಲಿ..
  ಈ ಮಿ೦ಚೆ ನಮ್ಮ ಆದಿ ಅ೦ತ್ಯ ಎ೦ದು ಗೊತ್ತಿದ್ದರೂ, ಈ ಮಿ೦ಚೇ ನಾನು ಎ೦ದು ಗೊತ್ತಿದ್ದರು, ಎದೆ ಕೊಡುಲು ಅದೇಷ್ಟು ಭಯ, ಅದೇಷ್ಟು ಸಮಯ..
  ….
  ….
  ಆದರೂ ಈ ಭಾವಗಳು ಮಿ೦ಚಿ ಮಾಯವಾಗುವುದದೇಕೋ..? ಹಿಡಿದು ನಿಲ್ಲಿಸುವ ಮ೦ತ್ರದ೦ಡ ಯಾವುದೊ..?
  ಈ ಬೆಳಕಿನ ದೀಪಗಳಿ೦ದ, ಆತ್ಮಜ್ಯೋತಿಯನ್ನು ಕಿಚ್ಚಗಿಸಿ, ಕಿಚ್ಚನ್ನು ಇಡೀ ವಿಶ್ವಕ್ಕೆ ವ್ಯಾಪಿಸಿ, ವಿಶ್ವವನ್ನೇ ಅಗ್ನಿಯಾಗಿಸಿ, ಅದರೊಳು ಹಳದಿ ಸೀರೆಯೊಡನೆ – ಕೆ೦ಪು ತಿಲಕದೊಡನೆ ವಿಜೃ೦ಭಿಸುವ ದುರ್ಗೆಯನ್ನು ಆನ೦ದದಿ ನೋಡುತ್ತ, ಮುಕ್ತನಾಗುವ ದಾರಿ ಯಾವುದು..

  [Reply]

  Sri Samsthana Reply:

  ಪ್ರೇಮ . . . . . . . . . ! ! ! ! ! ! ! !

  [Reply]

 3. Raghavendra Narayana

  “ಹಣವೊಂದು ಮಹಾ ವಿಚಿತ್ರ ವಸ್ತು..!”
  ಹಣ ಎ೦ಬ ಮಾಯೆಗೆ ಸದಾ ಹದಿನಾರರ ಹರೆಯ..
  ಮಾಯೆಯ೦ಬ ಕನ್ನಡಿಯ ಮು೦ದೆ, ಹಣ ಎ೦ಬ ಕನ್ನಡಿ..
  ಕನ್ನಡಿಯ ಮು೦ದೆ ಕನ್ನಡಿ ಇಟ್ಟು, ನಡುವೆ ಮನುಷ್ಯನನ್ನು ಬಿಟ್ಟರೆ, ನೋಟ ಗಮ್ಮತ್ತು..
  ಕನ್ನಡಿಯೊಳಗೆ ತೋರುವ ಅನ೦ತವನ್ನು ಅನ೦ತನೆ೦ದು ಭ್ರಮಿಸುವ೦ತೆ ಮಾಡಿ, ನಮ್ಮನ್ನು ಗೋವಿ೦ದ ಮಾಡಿಸುತ್ತದೆ ಮಾಯೆ..
  ಕನ್ನಡಿಯನ್ನು ಒಡೆಯದೇ, ಅನ೦ತನ ದರ್ಶನವಾಗದೆ..
  ಮಾಯೆಯ ಆಟಕ್ಕೆ ಸಾಟಿ ಇಲ್ಲ, ಕೇವಲ ತ್ರಿಗುಣದಿ೦ದ ಎ೦ತಹ ಬಲವ೦ತರನ್ನು ಮ೦ಗನ೦ತಾಡಿಸುವ ಮಾಯೆಗೆ, ತ್ರಿಗುಣದ ಜೊತೆಗೆ ಇನ್ನೂ ಎರಡು ಮೂರು ಗುಣ ಸೇರಿದ್ದರೆ ನಮ್ಮ ಗತಿ ಏನಾಗುತಿತ್ತು?

  [Reply]

  Raghavendra Narayana Reply:

  ಸದಾ ದಾನಿ ಸೂರ್ಯನಾರಾಯಣ, ನಾರಾಯಣ ಕೊಟ್ಟ ಬೆಳಕಿನ ದಾನದಿ೦ದ ಸದಾ ಬೆಳಗುತ್ತಲೆ ಇದ್ದಾನೆ, ಅವನ ಐಶ್ವರ್ಯ ಕಡಿಮೆ ಆಗುವುದಿಲ್ಲವೇಕೆ..
  .
  ನಾರಾಯಣ ಮೊದಲ ಪಾಠ ಸೂರ್ಯನಿಗೆ ಏಕೆ ಮಾಡಿದ..?
  .
  ಪ್ರಳಯ ಸ೦ಭವಿಸುವುದು ಕ್ಯಾಲೆ೦ಡರ್ ನಿ೦ತಾಗ ಅಲ್ಲ, ನಿಷ್ಕಾಮ ದಾನ ಎನ್ನುವುದು ನಿ೦ತಾಗ..
  ——————————————————————————————

  [Reply]

  Sri Samsthana Reply:

  ಸರಿ..

  [Reply]

 4. Sharada Jayagovind

  Hare rama Samsthana

  Money divides brothers, multiplies enemity, adds worries, breeds jealousy and greed, yet it is worshipped as Goddess Lakshmi why? Pl. explain…

  [Reply]

  Sri Samsthana Reply:

  ದೈವೀ ಸಂಪತ್ತು ಮತ್ತು ಆಸುರೀ ಸಂಪತ್ತು ಎಂಬುದಾಗಿ ಸಂಪತ್ತು ಎರಡು ವಿಧ . . .
  ನೀನು ಉಲ್ಲೇಖಿಸುತ್ತಿರುವುದು ಆಸುರೀ ಸಂಪತ್ತು..

  ಮಹಾಲಕ್ಷ್ಮಿಯೋ ದೈವೀ ಸಂಪತ್ತಿನ ಸ್ವರೂಪ..!

  [Reply]

  Sharada Jayagovind Reply:

  Dhanyavadagalu samsthana.

  [Reply]

 5. Anuradha Parvathi

  ಗುರುಗಳ ವಿವರಣೆ ಓದುವಾಗ ಅದರ ಅರ್ಥ ಮನಸ್ಸಿಗೆ ಮುಟ್ಟುತ್ತೆ, ನಾಟುತ್ತೆ.
  ಈ ಕೆಳಗಿನ ಉದಾಹರಣೆ ಮತ್ತು ವಿವರಣೆ ಅದ್ಭುತ. ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು.

  ಭಾರತದ ರೂಪಾಯಿಗೆ ಅಮೇರಿಕಾದಲ್ಲಿ ಯಾವ ಉಪಯೋಗವೂ ಇಲ್ಲ ..!
  ರೂಪಾಯಿಯನ್ನು ಡಾಲರಾಗಿ ಪರಿವರ್ತಿಸಿದರೆ ಮಾತ್ರವೇ ಅದು ಅಲ್ಲಿ ಉಪಯೋಗಕ್ಕೆ ಬರಲು ಸಾಧ್ಯ..!
  ಹಾಗೆಯೇ ಭೂಮಿಯ ರೂಪಾಯಿಗೆ ಪರಲೋಕದಲ್ಲಿ ಯಾವ ಉಪಯೋಗವೂ ಇಲ್ಲ..!
  ಸೂಜಿಮೊನೆಯಷ್ಟಾದರೂ ಸಂಪತ್ತನ್ನು ಇಲ್ಲಿಂದ ತೆಗೆದುಕೊಂಡು ಹೋಗುವಂತಿಲ್ಲ..!!
  ಮುರಿಯಲಾರದ ವಿಧಿನಿಯಮವದು..!

  [Reply]

 6. Shreekant Hegde

  ಅಡ್ಡಬಿದ್ದೆ ಸಂಸ್ಥಾನ,

  ಕೆಲವರಿಗೆ ಖರ್ಚ ಹೇಂಗೆ ಮಾಡವು ಗುತ್ತಾಗ್ತಿಲ್ಲೆ, ಹಲವರಿಗೆ ‘ಖರ್ಚಿಕೆ ‘ ಹೇಂಗ್ ಮಾಡ ಹೇಳಿ ತಿಳಿತಿಲ್ಲೆ. ಅಲ್ದಾ ?

  ಭಾಸೋಕ್ತಿ ನೆನಪಾತು….
  ಕಾಲಕ್ರಮದಲ್ಲಿ …………… ಅನಭ್ಯಾಸದ ವಿದ್ಯೆ ನಾಶವಾಗುತ್ತದೆ. ಘಟ್ಟಿನಿಂತ ಮರಗಳು ಧರೆಗುರುಳುತ್ತವೆ, ಜಲಮೂಲಗಳೂ ಬತ್ತುತ್ತವೆ, ಹವಿಸ್ಸಾಗಿದ್ದೂ, ದಾನಮಾಡಿದ್ದೂ ಶಾಶ್ವತವಾಗಿರುತ್ತದೆ.

  [Reply]

 7. seetharama bhat

  Hareram,

  The best investment plan never suggested by any financial analist.
  but by you gurudeva. our guide for “Iha and Para”

  Dhanya

  [Reply]

 8. ಜಗದೀಶ್ B. R.

  ಬಿಟ್ಟು ಹೋಗುವ ಮುನ್ನ ಇಟ್ಟು ಹೋಗದೆ ಕೊಟ್ಟು ಹೋಗು! -ಯಾರೋ

  [Reply]

 9. ravi n

  ಹಣದ ಬಗ್ಗೆ ಏಕೆ ಇಷ್ಟೊಂದು ಹಣಾಹಣಿ…. ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮೌಲ್ಯವಿದೆ.. ಹಾಗೆಯೇ ಹಣವೂ… ಹಣದಿಂದ ಎಲ್ಲವನ್ನೂ ಖರೀದಿಸಬಲ್ಲೆವೆನ್ನುವ ಭಾವವೇ ನಮ್ಮನ್ನು ಅದಕ್ಕೆ ದಾಸರನ್ನಾಗಿ ಮಾಡಿರುವುದು… ಅದರ ಮೌಲ್ಯ ಹಾಳಾಗದಂತೆ ಅದನ್ನು ಬಳಸಿಕೊಳ್ಳುವುದು ಒಂದು ಕಲೆ… ಸೃಷ್ಟಿಯಲ್ಲಿ ಯಾವುದೂ ಕೆಟ್ಟದ್ದಿರುವುದಿಲ್ಲ, ನಮ್ಮ ಮನಸ್ಸಿನ ಭಾವಗಳಿಂದ ಅದರ ಕೆಟ್ಟತನ-ಒಳ್ಳೆಯತನ ನಮಗೆ ಗೋಚರವಾಗುತ್ತದೆ… ಹಣವೇ ಸರ್ವಸ್ವ ಎನ್ನುವ ಭಾವನೆ ನಮ್ಮಿಂದ ದೂರವಾಗಿ, ನಾವು ಹಣದ ದಾಸರಾಗದೆ ಉಳಿದರೆ… ಆಗ ಹಣವಿದ್ದರೂ… ಇಲ್ಲದಿದ್ದರೂ… ಸುಖ ಸಂತೃಪ್ತಿ ನಿಶ್ಚಿತ.

  [Reply]

 10. chs bhat

  ದಾನ ಪ್ರಕ್ರಿಯೆಯಿಂದಾಗಿ ಯಾಚಕನೇ ದೊಡ್ಡ “ದಾನಿ”ಯಾಗುವ ವಿಷಯ ಎಷ್ಟೊಂದು ಸತ್ಯ! ಇಲ್ಲಿ ಮಾತ್ರ ನಡೆಯಬಲ್ಲ ಸಂಪತ್ತನ್ನು ದಾನ ಮಾಡಿ ಯೂನಿವರ್ಸಲ್ ಕರ್ರೆನ್ಸಿ “ಪುಣ್ಯ”ಸಂಪಾದನೆ ಸಾಧ್ಯ ಎಂಬುದನ್ನು ಪಾಮರನಿಗೆ ತಿಳಿಸಿಕೊಟಸಟಿದ್ದೀರಿ.ದಾನ ಮಾಡುವ ಮನಸ್ಸು ಬರಲಿ, ಶಕ್ತಿ ಬರಲಿ ಎಂಬುದೇ ಪ್ರಾರ್ಥನೆ. ಹರೇರಾಮ.ಸತ್ಯ.

  [Reply]

 11. Raghavendra Narayana

  “ಆದುದರಿಂದ ,ಯಾಚಕ – ದಾನಿಗಳಲ್ಲಿ ಯಾಚಕನೇ ದೊಡ್ಡ ದಾನಿಯೆನ್ನಬಹುದು..!”
  ————————————————————————————————
  ಈ ಸಾಲು ಅತ್ಯದ್ಭುತ. ಬಾಗಿಲು ತೆರೆದು ಒಳಹೊಕ್ಕರೆ ದೊಡ್ಡ ಲೋಕವೆ ಇದೆ. ಬಾಗಿಲು ತೆಗೆದು ಒಳ ಹೋಗುವುದೋ, ಹೊರಗಡೆ ಬರುವುದೋ..?
  ಇ೦ತಹ ದಾನಿಗಳ ಸ೦ಖ್ಯೆ ಹೆಚ್ಚಾಗಲಿ, ಧರೆಗೆ ರಜ್ಜ ಹಗುರವಾಗಲಿ. (ರಜ್ಜ = ಸ್ವಲ್ಪ)

  [Reply]

  Raghavendra Narayana Reply:

  “ಹಣವನ್ನು ನಾವು ಅನುಭವಿಸದೇ ಬ್ಯಾಂಕಿನಲ್ಲಿಟ್ಟು ಅದು ನಮ್ಮ ಹಣವೆಂಬ ಭಾವನೆಯಲ್ಲಿಯೇ ಸಂತೋಷಪಡುವುದಿದ್ದರೆ..
  ಜಗತ್ತಿನ ಎಲ್ಲಾ ಬ್ಯಾಂಕುಗಳ,ಎಲ್ಲಾ ಹಣವೂ ನಮ್ಮದೇ ಎಂದುಕೊಂಡು ಇನ್ನೂ ಹೆಚ್ಚು ಸಂತೋಷವನ್ನೇಕೆ ಪಡಬಾರದು..???”

  This line opens up many thoughts, we need to read this everyday to feel happy – we are so so so rich.

  [Reply]

 12. Manju ..

  ತಪೋ ಧನಂ, ಧನಂ ಧನಂ

  [Reply]

 13. ಅಶ್ವಿನಿ ಭಾರ್ಗವ

  ಹರೇ ರಾಮ….. ಪರಮ ಪೂಜ್ಯ ಶ್ರೀಗಳಿಗೆ ಕೋಟಿ ಕೋಟಿ ಪ್ರಣಾಮಗಳು….
  ಬೆಳಗಿನ ಸೂರ್ಯನ ಕಿರಣಗಳಂತೆ,
  ಹುಣ್ಣಿಮೆಯ ಬೆಳದಿ೦ಗಳಿನಂತೆ,
  ಪುಟ್ಟ ಮಕ್ಕಳ ಮುದ್ದು ನಗುವಿನಂತೆ,
  ಗೋಮಾತೆಯ ಪರಿಶುದ್ಧ ಹಾಲಿನಂತೆ,
  ದಾಹ ತಣಿಸುವ ಗಂಗಾ ಕಾವೇರಿಯಂತೆ,
  ಗುರೂಪದೇಶ ನಮ್ಮೆಲ್ಲರಿಗೂ ತುಂಬಾ ತುಂಬಾ ಬೇಕೇ ಬೇಕಂತೆ,
  ಅದಿಲ್ಲದಿರೆ ಸಮಾಜ ಆಗಲಿದೆ ಹುಚ್ಚರ ಸಂತೆ……
  ***********************************
  ಸರಿ ಹಾಗಿದ್ರೆ,,,,
  ಸಾಧ್ಯವಾದಷ್ಟೂ ಸಮಯ ಶ್ರೀಗಳೊಂದಿಗೆ ಕಳೆಯೋಣವೇ,,,,
  ಅವರ ನುಡಿಮುತ್ತುಗಳನ್ನು ಮನದಲ್ಲಿಟ್ಟುಕೊಂಡು ಮುನ್ನಡೆಯೋಣವೇ,,,,
  ಅರಮನೆ ಮೈದಾನಕ್ಕೆ ಒಟ್ಟಾಗಿ ಒಗ್ಗಟ್ಟಾಗಿ ಸೇವಕರಾಗಿ ಹೋಗೋಣವೇ,,,,

  ವಂದನೆಗಳು……ಶ್ರೀರಾಮ….

  [Reply]

 14. sachin.r.m

  i want to join this group

  [Reply]

Leave a Reply

Highslide for Wordpress Plugin