LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನೀತಿ ನಿಂದೆಯೊಳಿರದು..!

Author: ; Published On: ರವಿವಾರ, ಜನವರಿ 17th, 2010;

Switch to language: ಕನ್ನಡ | English | हिंदी         Shortlink:

ಸೋಮು ನಮ್ಮ ನಿಮ್ಮಂತೆ ಸಾಧಾರಣ ಮನುಷ್ಯ.!

ಆದರೆ, ಅವನಿಗೆ ರಾಜನ ಶಯ್ಯಾಗಾರದಲ್ಲಿ ಕೆಲಸ..


ಸಾಮಾನ್ಯ ಜನರ ಕಲ್ಪನೆಗೂ ಮೀರಿದ ಶಯ್ಯಾಗಾರದ ವೈಭವವನ್ನು ನೋಡಿದಾಗಲೆಲ್ಲಾ..

ಸೋಮುವಿನ ಮನದಲ್ಲಿ ಆಸೆ ಅಸೂಯೆಗಳ ಅಲೆಗಳು ಏಳುತ್ತಿದ್ದವು..!!

ರಾಜನ ಮೃದು ಮೃದು ಸುಪ್ಪತ್ತಿಗೆಯನ್ನು ಕಂಡಾಗಲೆಲ್ಲಾ

ಜೀವನದಲ್ಲಿ ಒಮ್ಮೆಯಾದರೂ ಅದರ ಸೌಖ್ಯವನ್ನು

ಅನುಭವಿಸಬೇಕೆನ್ನುವ ಆಸೆಯಾದರೆ………!

ಸುಪ್ಪತ್ತಿಗೆಯಲ್ಲಿ ರಾಜ ಪವಡಿಸುವುದನ್ನು ಕಂಡಾಗಲೆಲ್ಲಾ

ಅವನು ಅನುಭವಿಸುತ್ತಿರಬಹುದಾದ ಸೌಖ್ಯವನ್ನೆಣಿಸಿ ಅಸೂಯೆ ಉಂಟಾಗುತ್ತಿತ್ತು..!!


ದಿನೇ ದಿನೇ ಸೋಮುವಿನ ಮನಸ್ಸಿನಲ್ಲಿ ಹೇಗಾದರೂ ರಾಜನ ಕಣ್ಣು ತಪ್ಪಿಸಿ

ಒಮ್ಮೆಯಾದರೂ ರಾಜಶಯ್ಯೆಯಲ್ಲಿ ಪವಡಿಸುವ ಆಸೆ ಪ್ರಬಲವಾಗತೊಡಗಿತು..!

ಆದರೆ ರಾಜನೆಲ್ಲಿಯಾದರೂ ನೋಡಿದರೆ ಪ್ರಾಣಕ್ಕೇ ಸಂಚಕಾರ ಬಂದೀತೆಂಬ ಭಯ..!!

ಹೀಗೆ ಆಸೆ – ಭಯಗಳ ಸಮರದಲ್ಲಿ ಆಸೆಯೇ ಗೆದ್ದ ಒಂದು ದಿನ…..

ಸೋಮು ಯಾರಿಗೂ ಗೊತ್ತಾಗದಂತೆ ಕೊಂಚಹೊತ್ತು ರಾಜನ ಹಂಸತೂಲಿಕಾತಲ್ಪದಲ್ಲಿ ಪವಡಿಸಿದ..!!!


ಇಂಥ ತಪ್ಪುಗಳು ಮಾದಕ ವಸ್ತುಗಳಂತೆ..!

ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡುವಂತಾಗುತ್ತದೆ..


ಸೋಮುವಿಗೆ ಆಗಾಗ ರಾಜನ ಶಯ್ಯೆಯಲ್ಲ್ಲಿ ಕದ್ದು ಮಲಗುವುದು ಅಭ್ಯಾಸವಾಗಿ ಹೋಯಿತು..!!


ತಪ್ಪು ಮಾಡಲು ಮುಹೂರ್ತಗಳಿರುವಂತೆ ಸಿಕ್ಕಿಬೀಳಲು ಕೂಡ ಮುಹೂರ್ತಗಳಿರುತ್ತವೆ…!


ಒಂದು ದಿನ ಅನಿರೀಕ್ಷಿತವಾಗಿ ತನ್ನ ಶಯ್ಯಾಗಾರವನ್ನು ಪ್ರವೇಶಿಸಿದ ರಾಜ,

ಹಂಸತೂಲಿಕಾತಲ್ಪದಲ್ಲಿ ಸೋಮು ಮಲಗಿರುವುದನ್ನು ಕಂಡು ಚಕಿತಗೊಂಡ..

ಸೇವಕನ ಮನದ ಭಾವವೇನೆಂಬುದು ದೊರೆಗೆ ಅರ್ಥವಾಗಿಹೋಯಿತು..!!


ಅತ್ತ, ಸ್ವಪ್ನಲೋಕದಲ್ಲಿ ಸುಖಿಸುತ್ತಿದ್ದ ಸೋಮು ಕಣ್ಬಿಟ್ಟರೆ..

ಎದುರಿಗೆ ದೊರೆ..!!

ಮುಂದೇನಾಗಬಹುದೆಂದು ಊಹಿಸುತ್ತಿದ್ದಂತೆಯೇ ಸೋಮುವಿನ ನಾಲಗೆಯ ಪಸೆಯಾರಿತು..

ಮೈ ನಡುಗಿತು.. ಮುಖಬಿಳುಚಿತು..ಹೃದಯ ನಿಂತಿತು…..!!!!


ಆದರೆ ಮುಂದಿನ ಕ್ಷಣದಲ್ಲಿ ಅತ್ಯಾಶ್ಚರ್ಯವೇ ಕಾದಿತ್ತು..!!

ಮೃತ್ಯುದಂಡವನ್ನು ವಿಧಿಸುವುದಕ್ಕೆ ಬದಲಾಗಿ ಬೆಳಗಾಗುವವರೆಗೂ ಕದಲದೆ ಹಾಸಿಗೆಯಲ್ಲಿಯೇ

ಮಲಗಿರಬೇಕೆಂದು ರಾಜನು ಅಪ್ಪಣೆ ಮಾಡಿದ..!

ಅಷ್ಟುಮಾತ್ರವಲ್ಲ…

ಕೂದಲೆಳೆಯೊಂದರಲ್ಲಿ ಹರಿತವಾದ ಖಡ್ಗವೊಂದನ್ನು ಕಟ್ಟಿ ಸೋಮುವಿನ ಕೊರಳಿನ ನೇರಕ್ಕೆ ಬರುವಂತೆ

ಮೇಲ್ಛಾವಣಿಯಲ್ಲಿ ತೂಗು ಹಾಕಿಸಿದ…!!


ಮೃತ್ಯು ಉಂಟುಮಾಡುವ ಕ್ಲೇಶಕ್ಕಿಂತಲೂ ಮೃತ್ಯುಭೀತಿ ಉಂಟುಮಾಡುವ ಕ್ಲೇಶ ಬಲುದೊಡ್ಡದು..!!


ಕೊರಳಮೇಲೆ ಯಾವ ಕ್ಷಣದಲ್ಲಿಯೂ ಬೀಳುವಂತೆ ತೂಗಾಡುತ್ತಿರುವ ಕತ್ತಿಯನ್ನು ಕಾಣುವಾಗ

ಸೋಮುವಿಗೆ ಬೇರೆಲ್ಲವೂ ಮರೆತುಹೋಯಿತು..!!


ಸುಸಜ್ಜಿತ ಶಯ್ಯಾಗಾರವಾಗಲಿ ಹಂಸತೂಲಿಕಾತಲ್ಪವಾಗಲಿ

ಅಥವಾ ಅಲ್ಲಿಯ ಬಗೆ ಬಗೆಯ ಸುಖ ಸಾಧನವಾಗಲಿ ಅವನಿಗೆ

ಯಾವಸುಖವನ್ನೂ ನೀಡಲಿಲ್ಲ..!!

ಲಕ್ಷ್ಯಭೇದನಕ್ಕೆ ಸಿದ್ಧನಾಗಿ ನಿಂತ ಅರ್ಜುನನಿಗೆ ಪಕ್ಷಿಯ ಕಣ್ಣಲ್ಲದೇ ಬೇರೇನೂ ಕಾಣದಂತೆ

ಇರುಳಿಡೀ ಚೂಪಾದ ಕತ್ತಿಯ ಮೊನೆಯಲ್ಲದೇ ಆತನಿಗೆ ಬೇರೇನೂ ಕಾಣಲೇ ಇಲ್ಲ..!!


ಹೇಗೋ ಬೆಳಗಾಯಿತು..

ರಾಜನ ಆಗಮನವೂ ಆಯಿತು..

“ಸುಪ್ಪತ್ತಿಗೆಯ ಸುಖ ಹೇಗಿತ್ತು ಸೋಮು..?” ರಾಜ ಪ್ರಶ್ನಿಸಿದ..

ತೆನಾಲಿ ರಾಮನ ಬೆಕ್ಕಿನಂತಾಗಿತ್ತು ಸೋಮುವಿನ ಸ್ಥಿತಿ..!!

ಸುಪ್ಪತ್ತಿಗೆಯ ಬಗೆಗೆ ಮಾತನಾಡುವುದಿರಲಿ, ಸಾಯುವವರೆಗೂ ಆ ಕಡೆ ತಲೆಹಾಕಿ ಮಲಗುವ ಸ್ಥಿತಿಯಲ್ಲೂ ಕೂಡ ಅವನಿರಲಿಲ್ಲ..!


ದೊರೆಯ ಮುಂದಿನ ಮಾತುಗಳು ಸೋಮುವಿನ ಅಂತರಂಗವನ್ನು ಹೊಕ್ಕವು..

” ನೀನು ಕಲ್ಪಿಸಿಕೊಂಡು ಅಸೂಯೆ ಪಟ್ಟಂತೆ ಪರಮ ಸುಖಿಯೇನಲ್ಲ ನಾನು..

ಒಂದು ರಾತ್ರಿ  ನೀನೇನನುಭವಿಸಿದೆಯೋ, ಅದನ್ನು ಜೀವನಪರ್ಯಂತ ಅನುಭವಿಸುವ ಯೋಗ ನನ್ನದು..

ಅಧಿಕಾರವಿರುವಲ್ಲಿ ಸಂಪತ್ತು ಹೇಗಿರುತ್ತದೆಯೋ ಆಪತ್ತುಗಳು ಕೂಡಾ ಹಾಗೇ ಇರುತ್ತವೆ..

ತಲೆಯಮೇಲೆ ತೂಗುಕತ್ತಿ ಇರುವಾಗ ಎಷ್ಟು ಸಂಪತ್ತಿದ್ದೇನು ಯಾವ ಸೌಕರ್ಯವಿದ್ದೇನು..?

ಆಸ್ವಾದಿಸುವ ಸ್ಥಿತಿಯಲ್ಲಿ ಮನಸ್ಸೇ ಇರದಿದ್ದಾಗ ಇವುಗಳಿದ್ದೇನು ಫಲ..?

ನಿನ್ನ ಕಂಬಳಿ ಕೊಡುವ ಸುಖವನ್ನು ನನ್ನ ರತ್ನಗಂಬಳಿ ನನಗೆ ಕೊಡಲಾರದು….!! “


ನಮ್ಮ ರಾಜಕಾರಣಿಗಳಿಗೆ ಪೂರ್ಣವಾಗಿ ಅನ್ವಯವಾಗುವ ಕಥೆ ಇದು..!

ಕಾಣದು ಪ್ರಮುಖರ ನೋವಿನ ಮುಖ..

ಕಾಣದು ಪ್ರಮುಖರ ನೋವಿನ ಮುಖ..

ಸುಖವೆಂಬುದು ದೊಡ್ಡ ಮಿಥ್ಯೆ ಅವರ ಜೀವನದಲ್ಲಿ..

ಒಂದೊಂದು ಸ್ಥಾನಕ್ಕೆ ಹತ್ತತ್ತು ಸ್ಪರ್ಧಿಗಳು..!

ಒಬ್ಬ ಹತ್ತಿ ಕುಳಿತರೆ ಉಳಿದ ಒಂಭತ್ತು ಮಂದಿ ಕಾಲೆಳೆಯುವವರು..!!

ಹೀಗಿರುವಾಗ ಅಧಿಕಾರ – ಸ್ಥಾನಗಳು ಕೊಡುವ ಸುಖವಾದರೂ ಎಂತು..?


ಗಿಡುಗವೊಂದು ಮಾಂಸದ ತುಣುಕೊಂದನ್ನು ಕಚ್ಚಿಕೊಂಡು ಹಾರಿತು..

ಅದರ ಕೊಕ್ಕಿನಲ್ಲಿರುವ ಮಾಂಸದ ತುಣುಕನ್ನು ಕಸಿಯಲು

ಇತರ ನೂರಾರು ಗಿಡುಗಗಳು ಅದರ ಮೇಲೆ ಆಕ್ರಮಣ ನಡೆಸಿದವು..!!

ಕೆಲಹೊತ್ತು ಕಾದಾಟ ನಡೆಯಿತು..

ಕಿತ್ತಾಟದಲ್ಲಿ ಅದುಹೇಗೋ ಮಾಂಸದ ತುಣುಕು ಗಿಡುಗದ ಕೊಕ್ಕಿನಿಂದ ಜಾರಿ ಕೆಳಗೆ ಬೀಳುವಾಗ

ಇತರ ಗಿಡುಗಗಳು ಆ ಗಿಡುಗವನ್ನು ಬಿಟ್ಟು  ಮಾಂಸದ ತುಣುಕಿನೆಡೆಗೆ ಹಾರಿದವು..!

ಈಗ ನಿಜವಾಗಿಯೂ ಅದಕ್ಕೆ ಹಾಯೆನಿಸಿತು..!!


ರಾಜಕಾರಣಿಗಳ ಅವಸ್ಥೆ ಇದಕ್ಕಿಂತಲೂ ಕಳಪೆ..!

ಮೊದಲು ಅಧಿಕಾರ ಪ್ರಾಪ್ತಿಗಾಗಿ ಕಿತ್ತಾಟ..

ಅಧಿಕಾರ ಬಂದಮೇಲೆ ಉಳಿಸಿಕೊಳ್ಳಲು ಕಿತ್ತಾಟ..

ಅಧಿಕಾರ ಹೋದ ಮೇಲೆ ಉಪೇಕ್ಷೆ,ತಿರಸ್ಕಾರ.. ಕೆಲವೊಮ್ಮೆ ಪ್ರತೀಕಾರದ ವಸ್ತುಗಳಾಗಿಬಿಡುತ್ತಾರೆ..!!


ರಾಜಕಾರಣಿಗಳ ಸಮರ್ಥನೆ ಖಂಡಿತವಾಗಿಯೂ ಈ ಲೇಖನದ ಉದ್ದೇಶವಲ್ಲ..!

ಜಗ ನೋಡದ ರಾಜಕಾರಣಿಗಳ ಬದುಕಿನ ಇನ್ನೊಂದು ಮುಖವನ್ನು ನೋಡುವ ಪ್ರಯತ್ನವಿದು..!


ರಾಜಕಾರಣಿಗಳಲ್ಲಿ ತಪ್ಪು ಕಾಣದವರಾರು?

ಅವರನ್ನು ನಿಂದಿಸದವರಾರು..?

ನಾವೂ ಅದನ್ನೇ ಮಾಡುವುದರಲ್ಲಿ ಸಾರ್ಥಕತೆಯೇನಿದೆ..?


ಅರಿತು ಮಾಡಿದ ನಿಂದೆ ತಪ್ಪಲ್ಲ

ಅಜ್ಞಾನದ ನಿಂದೆ ತಪ್ಪು..

ಸಮಾಜದಲ್ಲಿ ರಾಜಕಾರಣಿಗಳ ನಿರಂತರ ನಿಂದೆ ನಡೆಯುವುದು ಕಂಡುಬರುತ್ತದೆ.

ಆದರೆ ಆ ಕುರಿತು ವ್ಯವಸ್ಥಿತವಾದ ಅಧ್ಯಯನ ನಡೆದಂತೆ ಕಂಡುಬರುವುದಿಲ್ಲ..


ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು ? |

ಆತುಮದ ಪರಿಕಥೆಯನರಿತವರೆ ನಾವು..? ||

ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ |

ನೀತಿ ನಿಂದೆಯೊಳಿರದು – ಮಂಕುತಿಮ್ಮ ||


ಪಾಪವೆಂಬುದದೇನು ಸುಲಭಸಾಧನೆಯಲ್ಲ |

ತಾಪದಿಂ ಬೇಯದವನ್ ಅದನೆಸಪನಲ್ಲ ||

ವಾಪಿ(ಬಾವಿ)ಯಾಳವ ದಡದಿ ನಿಂತಾತನರಿವನೇಂ..?|

ಪಾಪಿಯೆದೆಯೊಳಕಿಳಿಯೊ – ಮಂಕುತಿಮ್ಮ ||

ತಪ್ಪು ಕಾಣುವುದು ತಪ್ಪಲ್ಲ..

ತಪ್ಪು ಕಂಡಲ್ಲಿ ಖಂಡಿಸುವುದೂ ತಪ್ಪಲ್ಲ..

ಆದರೆ ತಪ್ಪೇಕಾಯಿತೆಂದು ಕಾಣದಿರುವುದು ದೊಡ್ಡ ತಪ್ಪು..!!


ಶರೀರದ ಅಂಗವೊಂದು ರೋಗಗ್ರಸ್ತವಾದರೆ ನಾವದನ್ನು ನಿಂದಿಸುತ್ತಾ ಕುಳಿತಿರುವುದಿಲ್ಲ,

ರೋಗಕ್ಕೆ ಕಾರಣವೇನು ಮತ್ತು ಪರಿಹಾರವೇನು ಎಂಬುದನ್ನು ಅನ್ವೇಷಿಸುತ್ತೇವೆ..!!

ರಾಜಕಾರಣಿಗಳೂ ಕೂಡ ಸಮಾಜದ ಒಂದು ಅಂಗವೇ…


ಗುಂಪಿನಲ್ಲಿ ಒಬ್ಬ ವ್ಯಕ್ತಿ ತಪ್ಪುಮಾಡಿದರೆ ಅದನ್ನು ವ್ಯಕ್ತಿದೋಷ ಎಂದು ಕರೆಯಬಹುದು..

ಆ ವ್ಯಕ್ತಿಯನ್ನು ಬದಲಾಯಿಸಿದರೆ ದೋಷ ಪರಿಹಾರವಾಗಲೂಬಹುದು..

ಇಡಿಯ ವರ್ಗವೇ ಕಲುಷಿತವಾದರೆ ಅದು ವ್ಯಕ್ತಿದೋಷ ಮಾತ್ರವಲ್ಲ, ವ್ಯವಸ್ಥೆಯ ದೋಷವೆಂದೇ ಹೇಳಬೇಕಾಗುತ್ತದೆ..!!

ಒಂದುವೇಳೆ ರಾಜಕಾರಣಿಗಳೆಲ್ಲರನ್ನೂ ಅರಬ್ಬೀಸಮುದ್ರಕ್ಕೆಸೆದರೆ.. ಸಮಸ್ಯೆಗಳು ಮುಗಿಯುವುದಿಲ್ಲ..!

ಎಲ್ಲಿಯವರೆಗೆ ವ್ಯವಸ್ಥೆ ಸರಿಯಾಗುವುದಿಲ್ಲವೋ,

ಅಲ್ಲಿಯವರೆಗೆ ಈ ಸಮಸ್ಯೆ ಪರಿಹಾರವಾಗುವುದಿಲ್ಲ..!

ವ್ಯವಸ್ಥೆ ದೋಷಗ್ರಸ್ತವಾಗಿರುವವರೆಗೆ ಮತ್ತೆ ಹುಟ್ಟಿಬರುವ ರಾಜಕಾರಣಿಗಳೂ ಕೂಡ

ಹಿಂದಿನವರ ಪಡಿಯಚ್ಚಿನಂತೆ ಇರುತ್ತಾರೆ..!!


ಕುಶಲ ಕೃಷಿಕ ಹೊಲದಲ್ಲಿ ಕಳೆ ಕೀಳುವಾಗ ಬೇರುಸಹಿತವಾಗಿಯೇ ಕೀಳುತ್ತಾನೆ..

ಹಾಗೆ ಮಾಡದೇ ಮೇಲೆ ಕಾಣುವ ಭಾಗವನ್ನಷ್ಟೇ ಕತ್ತರಿಸಿದರೆ ಅದು ಮತ್ತೆ ಮತ್ತೆ ಚಿಗುರುತ್ತಲೇ ಇರುತ್ತದೆ.. !!


ರಾಜಕಾರಣಿಗಳೂ ನಮ್ಮವರೇ ,

ರಾಷ್ಟ್ರ vs ರಾಜಕಾರಣ..

ರಾಷ್ಟ್ರ vs ರಾಜಕಾರಣ..

ನಮ್ಮ ಪ್ರತಿನಿಧಿಗಳೇ,

ನಮ್ಮ ಮಧ್ಯದಿಂದ ಹೋದವರೇ..!

ನಾವು ಹೇಗಿರುತ್ತೇವೆಯೋ ನಮ್ಮ ಪ್ರತಿನಿಧಿಗಳೂ ಕೂಡಾ ಹಾಗೆ ತಾನೆ ಇರಲು ಸಾಧ್ಯ..!!

ಒಂದು ವರ್ಗವನ್ನು ನಿರಂತರ ವ್ಯರ್ಥ ಹಳಿಯುವುದಕ್ಕಿಂತ ಸಮಸ್ಯೆಯ ಮೂಲ ಕಾರಣ ಮತ್ತು ಪರಿಹಾರ ಹುಡುಕುವುದೊಳಿತು..!!!


ರಾಮಬಾಣ :- ಅಜ್ಜನ ಕಾಲದಲ್ಲಿ ನಡೆದ ಸ್ವತಂತ್ರತಾ ಆಂದೋಲನ ಸಾರ್ಥಕವಾಗಬೇಕಾದರೆ..ಮೊಮ್ಮಕ್ಕಳ ಕಾಲದಲ್ಲಿಯಾದರೂ ದೇಶಸ್ವಚ್ಛತಾ ಆಂದೋಲನ ನಡೆಯಲೇಬೇಕಲ್ಲವೇ..?

17 Responses to ನೀತಿ ನಿಂದೆಯೊಳಿರದು..!

 1. ravi n

  ಹೌದು ಸಂಸ್ಥಾನ … ಇದಕ್ಕೆ ಸರಿಯಾದ ಪರಿಹಾರ ಏನು..?

  [Reply]

  Sri Samsthana Reply:

  ರಾಮಬಾಣವೇ ಪರಿಹಾರ..!

  [Reply]

 2. ravi n

  ಬಾಣ ಸಿದ್ಧವಾಗಿದೆ ಶ್ರೀರಾಮ ಅದನ್ನು ಯಾವಾಗ ಬಳಸುತ್ತಾನೋ….!!!!

  [Reply]

 3. venkatakrishna kk

  ಒಂದು ಧ್ಶಷ್ಠಿಯಲ್ಲಿ ನೋಡಿದರೆ ಈ ಕತೆ ರಾಜರು ತಮ್ಮ ಸುಖವನ್ನು ಖಾಯಂಗೊಳಿಸಲೋಸುಗ ಕಟ್ಟಿದ ವಾದ ಅಂತಲೂ ಅನ್ನ ಬಹುದಲ್ಲ? ರಾಜ ನಿಗೆ ತನ್ನ ಸಂಪತ್ತು ಸವಲತ್ತನ್ನು ಅನುಭವಿಸುವ ಆನಂದ ಇಲ್ಲದಿದ್ದಲ್ಲಿ, ಆ ಎಲ್ಲ ಸವಲತ್ತಿಗೆ ತಗಲುವ ವೆಚ್ಹವನ್ನು ಜನತೆಗೆ ಉಪಯೋಗವಾಗುವ ಕೆಲಸಕ್ಕೆ ಉಪಯೋಗಿಸಬಹುದಲ್ಲ!
  ಸೇವಕ ಸೇವಕನಾಗಿಯೇ ಉಳಿಯಬೇಕು,ರಾಜ ರಾಜ ಬೋಗವನ್ನು ಅನುಭವಿಸಬೇಕು.ಅನ್ನುವುದಕ್ಕೋಸ್ಕರ ಕಟ್ಟಿಕೊಂಡ ಮಿಥ್ಯಾ ಸಮರ್ಥನೆ ಅಂತ,ಎಲ್ಲೋ ಒಂದುಕಡೆ ಅನಿಸುವುದಿಲ್ಲವೇ?
  ದೇಹಸುಖದ ಪರಿವೆ ಇಲ್ಲದವರಿಗೆ, ಸುಪ್ಪತ್ತಿಗೆ, ಸಾರೋಟು ಯಾಕೆ?
  ಜವಾಬ್ದಾರಿಯ ಹೆಸರಲ್ಲಿ ಇಂದಿನ ರಾಜಕೀಯ ಧುರೀಣರು,ದೇಹ ಸುಖದ ಅಮಲಿನಲ್ಲಿ ಪ್ರಜೆಗಳ/ದೇಶದ ಸಂಪತ್ತನ್ನು ಎರಡೂ ಕೈಗಳಿಂದ ಬಾಚಿ ಕೊಳ್ಳೆಹೊಡೆಯುತ್ತಿರುವುದು ಕಣ್ಣಿಗೆ ರಾಚುತ್ತಿಲ್ಲವೇ?
  ಸಮಯ ಸಾಧಕ,ಸಾಮಾನ್ಯರನ್ನು ಬಿಡಿ, ಆದರ್ಶದ ಹೆಸರಿನಲ್ಲಿ,ದೇಶಸೇವೆಗಾಗಿ ರಾಜಕೀಯಕ್ಕೆ ಬಂದವರು ಮಾಡುತ್ತಿರುವುದೇನು?
  ತತ್ವವನ್ನು ಭೋಧಿಸುವ,ತತ್ವನಿಷ್ಠೆಯನ್ನು ಹೊಂದಿದ ಹಿಂಬಾಲಕರ ಪಡೆಯನ್ನೇ ಪಡೆದಿರುವ ಮಂದಿ ಮಾಡುತ್ತಿರುವುದೇನು?
  ತತ್ವನಿಷ್ಟೆಯ ಶೋಶಣೆಯಲ್ಲವೇ? ಸರ್ವಾಧಿಕಾರವಲ್ಲವೇ?
  ಯಾರು ಒಳ್ಳೆಯವರು,ಇವರ ಮೇಲೆ ಭರವಸೆಯಿಡಬಹುದು ಅಂತ ಪ್ರಜ್ನಾವಂತರು ನಂಬಿದರೋ ಅವರ ಭ್ರಮೆ ನಿರಸನ ಹೋಂದುವುದನ್ನು ನಾವು ಇಂದು ಕಾಣುತ್ತಿದ್ದೇವೆ.
  ಹಾಗಾಗಿ ವ್ಯಾವಹಾರಿಕ ಜಗತ್ತು ಇರುವುದೇ ಹೀಗೆ,ಇಲ್ಲಿ ಹೆಚ್ಹು ಚಿಂತೆ ಅನಾವಶ್ಯಕ ಅಂತ ಅನಿಸುತ್ತೆ.
  ಉಪದೇಶ ಸುಲಭ, ಆಚರಣೆ ಕಷ್ಟ.
  ಈ ವ್ಯವಸ್ಥೆ ಇದು ಹೀಗೆಯೇ…ಯಾಕೆಂದರೆ ಎಲ್ಲರೂ ಮನುಷ್ಯರೇ ತಾನೆ?
  ನರ ನಾರಾಯಣನಾದರೆ.ಅವನ ಲೋಕವೇ ಬೇರೆ.
  ಅದಕ್ಕೇ ದಾಸರು ಹಾಡಿದರು..ಇಲ್ಲಿ ಬಂದೆ ಸುಮ್ಮನೆ…ಅಲ್ಲಿದೆ ನಮ್ಮನೆ..

  [Reply]

  Sri Samsthana Reply:

  ಇದು ಯಾವ ರಾಜರು ಕಟ್ಟಿದ ಕಥೆಯೂ ಅಲ್ಲ..ರಾಜಕೀಯದಲ್ಲಿ ಸುಖವಿದೆ ಎಂದು ಭ್ರಮಿಸುವವರಿಗೊಂದು ಪಾಠ.. ಅಷ್ಟೇ..!

  [Reply]

 4. Sharada Jayagovind

  Samsthana this article is a wonderful analysis of the political system existing in our country.We have created our politicians,we have created our system and society.We have the moral responsibility to clean it. If each one of us begin to clean the self I think the system will be clean… Hare Rama

  [Reply]

 5. Raghavendra Narayana

  ನೀತಿ ನಿಂದೆಯೊಳಿರದು – ನಿಜ.
  ಇತ್ತಿಚೆಗೆ ನಿ೦ದೆ ಮಾಡುವುದು, ನಿ೦ದೆ ಮಾಡಿಕೊಳ್ಳುವುದು, ಎಲ್ಲೆಲ್ಲಿಯು ಹೆಚ್ಚು ಕ೦ಡು ಬರುತ್ತದೆ.
  ರಾಜಕಾರಣಿಗಳು ಸಿರಿ ಸ೦ಪತ್ತು ಪದವಿ ಹಿ೦ದೆ ಓಡುತ್ತಾರೆ, ಸರಿ, ನಮ್ಮನ್ನು ನಾವು ನೋಡಿಕೊ೦ಡರೆ – ನಾವು ಕೂಡ ಅದನ್ನೆ ಮಾಡುತ್ತಿರುವುದು. ಕೆಲವರಿಗೆ ಲಕ್ಷಗಳನ್ನು ಮುಟ್ಟುವ ಆಸೆ, ಕೆಲವರಿಗೆ ಕೋಟಿಗಳನ್ನು ಮುಟ್ಟುವ ಆಸೆ. ಎ೦ದು ಮುಗಿಯದ ಹಾಡು, ಕತ್ತೆಯ ಮು೦ದೆ ತಿ೦ಡಿ. ಸರಳ ಜೀವನ ಬಿಟ್ಟೆವು, ಸೃಷ್ಟಿಯ ಪರಮ ವೈಭವ ಬಿಟ್ಟೆವು, ಪುರುಷನ ಘನತೆ ಬಿಟ್ಟೆವು. ಕುರಿಯಾದೆವು, ಕಣ್ಣಿಗೆ ಬಟ್ಟೆ ಕಟ್ಟಿಕೊ೦ಡ ಕುದುರೆಯಾದೆವು. ಕಳಾಹೀನರಾದೆವು.
  ಪ೦ಜರದೊಳಗೆ ಇದ್ದು ಭೂತವಾಗುವ ಬದಲು, ಪ೦ಚಭೂತಗಳೊಡನೆ ಕ್ರೀಡಿಸೋಣ, ಆನ೦ದದ ನ೦ದನವನದಲ್ಲಿ ಎಲ್ಲರಿಗೂ ಅವಕಾಶ ಮಾಡಿಕೊಡೋಣ.
  ದೇಶವನ್ನು ಕೊಳ್ಳೆ ಹೊಡೆದು, ಜೀವನವನ್ನೆ ಹಾಳು ಮಾಡಿಕೊ೦ಡು, ತನ್ನ-ಹೆ೦ಡತಿ-ಮಕ್ಕಳ-ಸ೦ಬದಿಕರ ಹೆಸರಲ್ಲಿ ದುಡ್ಡು ಶೇಕರಿಸಿ ಅನರ್ಥವಾಗಿ ಸಾಯುವ ಬದಲು, ಸೇವೆ ಮಾಡಿ – ಲೋಕದ ಅನ೦ತ ಆಶೀರ್ವಾದ ಶೇಕರಿಸಿ ಶಾಶ್ವತವಾಗಬಹುದಲ್ಲವೆ? “..ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿ೦ಗೆ.. – ಮ೦ಕುತಿಮ್ಮ”

  [Reply]

 6. Raghavendra Narayana

  ಗುರುಗಳೇ, ದೇಶಸ್ವಚ್ಛತಾ ಆಂದೋಲನ ಹೇಗೆ ಶುರುವಾಗಬೇಕು, ಮೊದಲ ಹೆಜ್ಜೆಗಳಾವುವು ತಿಳಿಸುವಿರಾ?

  [Reply]

  Sri Samsthana Reply:

  ಮನಃಶುದ್ಧಿ ಮತ್ತು ಅರ್ಥಶುದ್ಧಿಯಿಂದ..
  ಆರಂಭ ನಮ್ಮ ಮನೆ ಅಂಗಳದಿಂದಲೇ..

  [Reply]

 7. venkatakrishna kk

  ಸರಳ ಜೀವನ ಬಿಟ್ಟೆವು, ಸೃಷ್ಟಿಯ ಪರಮ ವೈಭವ ಬಿಟ್ಟೆವು, ಪುರುಷನ ಘನತೆ ಬಿಟ್ಟೆವು. ಕುರಿಯಾದೆವು, ಕಣ್ಣಿಗೆ ಬಟ್ಟೆ ಕಟ್ಟಿಕೊ೦ಡ ಕುದುರೆಯಾದೆವು. ಕಳಾಹೀನರಾದೆವು.Raghavendra Narayana ರೇ,ಚೆನ್ನಾಗಿ ಹೇಳಿದಿರಿ.ನಮ್ಮ ಯೋಚನೆ ಯಾವ ದಿಕ್ಕಿನತ್ತ ಹೋಗ ಬೇಕೋ ಆ ದಿಕ್ಕಿನತ್ತ ಕೈ ತೋರಿಸಿದ್ದೀರಾ…
  ಬರಹದ ಆಶಯವನ್ನು ಸರಿಯಾಗಿ ಗ್ರಹಿಸಿದ್ದೀರಿ.
  …ಅಲ್ಲಿದೆ ನಮ್ಮನೆ..

  [Reply]

  jayamala vn Reply:

  ವೆಂಕಟಕ್ರುಷ್ಣರೇ,ಸರಿಯಾಗಿ ಹೇಳಿದ್ದೀರಿ.ಬಿಡಿ ಬಿಡಿ ವ್ಯಕ್ತಿಗಳಿಂದ ಸಮಾಜದಲ್ಲಿ ಪರಿವರ್ತನೆ ಕಷ್ಟಸಾಧ್ಯ.ಆದರೆ ಮನುಕುಲದ ದುರಂತವೆಂದರೆ,ದೇಶದಲ್ಲಿ ಪರಿವರ್ತನೆ ತರಬೇಕು ಅಂತ ಹೊರಟ ಸಂಘಟನೆಗಳೂ ಯೋಚಿಸುವುದು ನಮ್ಮಂತೆ,ಅಂದರೆ ವ್ಯಕ್ತಿಗಳಿಗೆ ಒಂದು ಮನಸ್ಸಿರುವಂತೆ,ಸಂಘಟನೆಗಳಿಗೂ ಒಂದು ಮನಸ್ಸಿರುತ್ತದೆ.ವ್ಯಕ್ತಿ ತನ್ನ ಅನುಕೂಲಕ್ಕಾಗಿ ಚಿಂತಿಸಿದಂತೆ,ಸಂಘಟನೆಗಳು ಕೂಡಾ ಅದರ ಸುತ್ತಲೇ ಚಿಂತಿಸುತ್ತವೆ,ಸಂಸ್ಥೆಗಳೂ ಹೀಗೆಯೇ..ಮಾನವನ ಆರು/ಮೂರರ ನಂಟು,ನಾನಾ ಧ್ಯೆಯ ಹೊತ್ತ,ಎಡ,ಬಲ,ಹಾಗೂ ಆಧುನಿಕ ಆಧ್ಯಾತ್ಮಗುರುಗಳ ಹಿಂಬಾಲಕರ,ಪಕ್ಶ,ಗುಂಪುಗಳಿಗೂ…ಅಂಟಿರುವುದನ್ನು ನಾವು ನೋಡಬಹುದು.
  ನೀತಿ ನಿಂದೆಯೊಳಿಲ್ಲ..ನಿಜ.
  ನೀತಿ ಪಾಠಹೇಳುವುದರಲ್ಲೂ ಇಲ್ಲ.
  ಸುಖ(ಆನಂದ)ಕ್ಕಾಗಿ,(ಇಲ್ಲದ) ವ್ಯಾವಹಾರಿಕ ಪ್ರಪಂಚದಲ್ಲಿ,ಎಷ್ಟು ಗುದ್ದಾಡಿದರೂ,ಹಗ್ಗವನ್ನೇ ಹಾವೆಂದು ಭ್ರಮಿಸಿದಂತೆ ಅಲ್ಲವೇ ಗುರುಗಳೇ?
  ಇಲ್ಲಿ ಎಲ್ಲೂ ಇಲ್ಲದ ಸುಖವ ಅರಸುವ ಅರಸರಾಗುವ ಬದಲು,ನಮ್ಮೊಳಗಿನ ಅನಂತ ಆನಂದದಲ್ಲಿ ವಿಹರಿಸುವುದು ಎಂದಿಗೂ ಮೇಲಲ್ಲವೇ ಗುರುಗಳೇ?

  [Reply]

  Raghavendra Narayana Reply:

  ನೀತಿ ಪಾಠಗಳೇ ಇಲ್ಲದಿದ್ದರೆ, ನಾವೆಲ್ಲ ಅನಾಥರಾದೆವು. ನೀತಿ ಪಾಠಗಳು ಈ ರೀತಿ ಗುರುಗಳ ಮೂಲಕ ಬ೦ದರೆ, ಒಪ್ಪಿಕೊಳ್ಳುವುದಕ್ಕೆ ಅಪ್ಪಿಕೊಳ್ಳುವುದಕ್ಕೆ ಸುಲಭ

  [Reply]

 8. Shreekant Hegde

  ಪ್ರಣಾಮ ಸಂಸ್ಥಾನ,

  ಬೆಳೆಗಿಂತ ಕಳೆಯೇ ಜಾಸ್ತಿಯಾಗಿದೆ, ಆದ್ದರಿಂದ ಬೆಳೆಯನ್ನೇ ಕಿತ್ತು ಬೇರೆ ಗದ್ದೆಯುಲ್ಲಿ ನೆಡುವುದು ಒಳ್ಳೆಯದೇನೋ !!

  [Reply]

 9. seetharama bhat

  Guruji,

  Each and every field is now becoming like this only. Dhana,Dhyana gaLiruvalli samadhanavu irabahudallve.

  Please bless us the same.

  Hareram

  [Reply]

 10. Anuradha Parvathi

  ದೂರದ ಬೆಟ್ಟ ನುಣ್ಣಗೆ. ದೂರದ ಬೆಟ್ಟ ನುಣ್ಣಗೆ. ಗುರುಗಳೆ, ನಾವೂ ಈ ವ್ಯವಸ್ಥೆಯ ಒಂದು ಭಾಗ, ಅನ್ನೊದನ್ನು ಚೆನ್ನಾಗಿ ಮನದಟ್ಟು ಮಾಡಿದಿರಿ. ತುಂಬಾ ಚೆನ್ನಾಗಿತ್ತು. ಈ angleಇಂದ ನಾವು ನೂಡೊದೆ ಇಲ್ಲ.

  [Reply]

 11. Sharada Krishna

  ಶ್ರೀಗುರುದೇವರಿಗೆ ಶಿರಸಾ ವಂದನೆಗಳು .
  ಶ್ರೀಗಳೇ ,ರಾಜ ಮಹಾರಾಜರ ಕಾಲದಲ್ಲಾದರೆ ,ನಿಯಮಾನುಶಾಸನ ಪ್ರಕಾರ ,ರಾಜ್ಯವನ್ನಾಳುವ ಅಧಿಕಾರ, ಕರ್ತವ್ಯ ಅವರ ಮಕ್ಕಳು ,ಮೊಮ್ಮಕ್ಕಳದ್ದಾಗಿರುತ್ತಿತ್ತು. ಆದರೆ ಈಗ ಹಾಗಿಲ್ಲವಷ್ಟೇ ,ಎಲ್ಲಾ ರಾಜಕಾರಿಣಿಗಳೂ ತಾವೇ ಇಷ್ಟಪಟ್ಟು ಅಧಿಕಾರ ಬಯಸಿ ಗದ್ದುಗೆಗೆ ಏರುವವರಲ್ಲವೇ? ಅದನ್ನು ಬಯಸಿದಾಗಲೇ ಅವರಿಗೆ ನಾಳಿನ ಪರಿಸ್ಥಿತಿಯರಿವು ಇರುವುದಲ್ಲವೇ? ಅದಾಗ್ಯೂ ಅವರು ಈ ವೃತ್ತ್ತಿಧರ್ಮ ಪಾಲಿಸಲು ಮುಂದೆ ಬರುವರು ತಾನೇ ? ಮತ್ತು
  ಮೊದಲು ಅವರಿಗೆ ಆಧಳಿತದಲ್ಲಿ ಕಾಣುವ ಲೋಪ ದೋಷ ಗಳು ಅವರು ಅಧಳಿತಕ್ಕಿಳಿದ ಮೇಲೆ ಕಾಣಿಸದೆ ಹೋಗುವುದು ಏತಕ್ಕೆ? ಮೊದಲಾದ ಲೋಪವೇ ಮುಂದುವರಿವುದೇಕೆ?ಪರಿಸ್ಥಿತಿ ವ್ಯವಸ್ತೆ ತಿದ್ದಲು ಅವರಿಂದಾಗದೆ?
  ಹಗೆನ್ದಾದರೆ ಏಕೆ ತ್ಯಜಿಸರು ? ಆಳುವ ಆಸೆ ತಾನೇ? ಅಲ್ಲ ಹೆಸರಿಗಾಗಿಯೇ?

  [Reply]

 12. chs bhat

  Hare raama. Bahushaha, pitrarjita rajakaranigalannu bittare hosadaagi raajakaaranakke baruvavaru, olleya uddesha ittukonde baruttare endu anisuttade.Omme talavuralu kelavu dharma baahira kelasagalannu maaduttare. Aamele adarinda horabaralaaguvudilla. Sullanne halavaaru baari helidare aa mele taane adannu satyavendu nambidante. Samaja endiddaru kettudanne sulabhavaagi kaanuttade. Olleyavu nuraariddaru kettadde kaanuttade. Atyaase adharmakkedemaadikoduttade. Olleyavaru/efficients, aa kshetrakke barale hinjariyuttare. Mundadaru idu badalaagabahudendu harisuva. HARE RAAMA. chs

  [Reply]

Leave a Reply

Highslide for Wordpress Plugin