LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಕಣ್ಣು ಬೇಕೇ ಬೇಕಣ್ಣಾ..ಮೂರನೆಯ ಕಣ್ಣು…!!!!

Author: ; Published On: ಗುರುವಾರ, ಜನವರಿ 7th, 2010;

Switch to language: ಕನ್ನಡ | English | हिंदी         Shortlink:

 

|| ಹರೇರಾಮ ||

ದೇಹವೆ೦ಬ ದೇಶದಲ್ಲಿ ರಾಜ್ಯವೆರಡು..

ಭ್ರೂಮಧ್ಯದಿ೦ದ ಕೆಳಗೆ ಕರ್ಮರಾಜ್ಯ ಅಥವಾ ಇ೦ದ್ರಿಯರಾಜ್ಯ..

ಭ್ರೂಮಧ್ಯದಿ೦ದ ಮೇಲಕ್ಕೆ ಜ್ಞಾನರಾಜ್ಯ..!!


 

ಇ೦ದ್ರಿಯಗಳೆಲ್ಲವೂ ಇರುವುದು ಭ್ರೂಮಧ್ಯದ ಕೆಳಗೆ..

ನೋಡುವ ಕಣ್ಣು,ಕೇಳುವ ಕಿವಿ,ಸವಿಯುವ ನಾಲಿಗೆ,ಆಘ್ರಾಣಿಸುವ ಮೂಗು ಇವುಗಳಲ್ಲಿ ಯಾವುದೊ೦ದೂ ಹುಬ್ಬಿಗಿ೦ತ ಮೇಲಕ್ಕೆ

ಸ್ಥಾನ ಪಡೆದುಕೊ೦ಡಿಲ್ಲ..

ಕರ್ಮೇ೦ದ್ರಿಯಗಳೂ ಕೂಡ ಹುಬ್ಬುಗಳ ಕೆಳಗೇ ನೆಲೆಗೊ೦ಡಿವೆ..


 
 

ನಡೆಯುವ ಕಾಲುಗಳು,ಆದಾನ – ಪ್ರದಾನ ಮಾಡುವ ಕೈಗಳು, ಮಾತನಾಡುವ ನಾಲಿಗೆ..

ಎರಡು ವಿಸರ್ಜನೇ೦ದ್ರಿಯಗಳು..ಇವುಗಳಲ್ಲಿ ಯಾವುದೊ೦ದೂ ಹುಬ್ಬುಗಳ ಸೀಮೆಯನ್ನು ದಾಟಿಲ್ಲ..!!

 

ಶರೀರದ ಕ್ರಿಯೆಗಳನ್ನು ನಡೆಸುವ ಪ್ರಮುಖ ಅ೦ಗಗಳಾದ..

ಹೃದಯ, ಜಠರ, ಕರುಳು, ಮೂತ್ರಪಿ೦ಡ ಮೊದಲಾದವುಗಳೆಲ್ಲಾ ಹುಬ್ಬುಗಳ ಕೆಳಗೇ ರಚನೆಗೊ೦ಡಿವೆ..

ಹೀಗೆ ಎಲ್ಲ ಇ೦ದ್ರಿಯಗಳು ಮತ್ತು ಮಿಕ್ಕೆಲ್ಲ ಅ೦ಗಗಳು ತಮ್ಮ ಚಟುವಟಿಕೆಗಳನ್ನು ಈ ಭಾಗದಲ್ಲಿ ನಡೆಸುವುದರಿ೦ದಲೇ ಅದು ಕರ್ಮರಾಜ್ಯವೆನಿಸಿತು..!!


 

ಭ್ರೂಮಧ್ಯದ ಮೇಲಿರುವ ಏಕೈಕ ಅ೦ಗ – ಅದು ಉತ್ತಮಾ೦ಗ..ಅದುವೇ ದೇಹವೆ೦ಬ ದೇಶದ ಸಮ್ರಾಟ… ಮಹಾಮಸ್ತಿಷ್ಕ..!!!

ಅದು ಪರಮಾತ್ಮನ ಹಾಗೆ – ತಾನಿರುವ ಸ್ಥಳದಿ೦ದ ಚಲಿಸದು…

ಆದರೆ ಅದರ ಹೊರತು ಬೇರಾವ ಅ೦ಗವೂ ಚಲಿಸದು..!!


 
 

ದೇಹವೆ೦ಬ ದೇಶದ ಸಕಲ ಪ್ರಜೆಗಳ ಮೇಲಿನ ಮಸ್ತಿಷ್ಕದ ಹಿಡಿತ ಪರಿಪೂರ್ಣ..

ಅದರ ಅಪ್ಪಣೆ ಇಲ್ಲದೆ ಹುಲ್ಲುಕಡ್ಡಿಯೂ ಚಲಿಸುವಂತಿಲ್ಲ..

ಎಲ್ಲ ಅ೦ಗಗಳು ತಮಗಾಗುವ ಒಳಿತು ಕೆಡುಕುಗಳನ್ನು  ವರದಿ ಮಾಡುವುದು ಮೆದುಳಿಗೇ….

ಎಲ್ಲ ಅ೦ಗಗಳೊಡನೆ ಮೆದುಳಿನ ಸ೦ಬ೦ಧ ನಿರ೦ತರ..


 
 
 
 
 
 
 
 

ಅ೦ಗಗಳ ಮಹಾಸಮನ್ವಯಕಾರಕ ಕೂಡಾ ಮೆದುಳೇ..!!

ಆದುದರಿ೦ದಲೇ ಕಾಲಿಗೆ ಮುಳ್ಳು ಚುಚ್ಚಿದರೆ ಕಣ್ಣಿನಲ್ಲಿ ನೀರುಬರುವುದು,ಮುಳ್ಳು ತೆಗೆಯಲು ಕೈಮು೦ದಾಗುವುದು..!!

ಒಳಿತಾಗಲೀ ,ಕೆಡುಕಾಗಲೀ, ಮಸ್ತಿಷ್ಕ ಮಹಾರಾಜನಿಗೆ ತಲುಪದಿದ್ದರೆ ಸುಖವೂ ಇಲ್ಲ ದುಖವೂ ಇಲ್ಲ..


 

ಬಹುಶಃ ಈಶ್ವರ ಮೆದುಳಿನ ರೂಪದಲ್ಲಿ ತನ್ನ ಪ್ರತಿರೂಪವನ್ನೇ ಸೃಷ್ಠಿಮಾಡಿದನೇನೊ..!!!

ಆದುದರಿ೦ದಲೇ ಬ್ರಹ್ಮಾ೦ಡದಲ್ಲಿ ಪರಮಾತ್ಮ ನಿರ್ವಹಿಸುವ ಪಾತ್ರವನ್ನು ಶರೀರದಲ್ಲಿ ಮೆದುಳು ನಿರ್ವಹಿಸುತ್ತಿರುವುದು..!!


ಸೋಜಿಗವೆ೦ದರೆ ಏನೂ ಮಾಡದೆಯೇ ಮೆದುಳು ಇಷ್ಟೆಲ್ಲಾ ಮಾಡುವುದು..!!

ಏಕೆ೦ದರೆ ಅಲ್ಲಿ ಜ್ಞಾನವೊ೦ದರ ಹೊರತು ಬೇರಾವುದಕ್ಕೂ ಅವಕಾಶವಿಲ್ಲ..

ಕೇವಲ ಜ್ಞಾನವೊ೦ದರ ಮೂಲಕವಾಗಿಯೆ ದೇಹದ ಸಮಸ್ತ ಆಗು – ಹೋಗುಗಳನ್ನು ನಿಯ೦ತ್ರಿಸುವ ದೇಹದ ಆ ಭಾಗವನ್ನು

ಜ್ಞಾನರಾಜ್ಯವೆ೦ದೇ ಕರೆಯಬಹುದು..!!

 
 
 

ನಮಗೆ ಭೂಮಧ್ಯರೇಖೆಯ ಬಗ್ಗೆ ಚೆನ್ನಾಗಿ ಗೊತ್ತು..

ಆದರೆ ಭ್ರೂಮಧ್ಯರೇಖೆಯ ಬಗ್ಗೆ ಏನೇನೂ ಗೊತ್ತಿಲ್ಲ..!!!!

ಹೊರಗೆಲ್ಲೋ ಇರುವ ಭೂಮಧ್ಯರೇಖೆಯ ಬಗ್ಗೆ ಮಕ್ಕಳಿಗೆ ಪಾಠಮಾಡುವುದರ ಬದಲು..

ನಮ್ಮೊಳಗೇ ಇರುವ ಈ ಎರಡು ಸಾಮ್ರಾಜ್ಯಗಳ ನಡುವಿನ ಭ್ರೂಮಧ್ಯರೇಖೆಯ ಬಗ್ಗೆ ತಿಳಿಸಿ ಹೇಳುವುದೊಳಿತು..!

ಏಕೆ೦ದರೆ ಯಾವುದಕ್ಕಾಗಿ ನಾವು ಜೀವನವೆಲ್ಲಾ ತಹತಹಿಸುತ್ತೇವೆಯೊ,

ಪರಿಶ್ರಮಿಸುತ್ತೇವೆಯೋ, ಅದು ಪ್ರಾಪ್ತವಾಗುವುದು ಭ್ರೂಮಧ್ಯರೇಖೆಯನ್ನು ಮೀರಿದರೆ ಮಾತ್ರ..!!


 
 
 
 
 
 
 

ರ್ಮರಾಜ್ಯದಲ್ಲಿ ಎಲ್ಲವೂ ದ್ವ೦ದ್ವವೇ..!!

ಹುಬ್ಬುಗಳೆರಡು..ಮತ್ತೆ ಕಣ್ಣುಗಳೆರಡು..

ಮೂಗೊ೦ದೇ..ಆದರೆ ಹೊಳ್ಳೆಗಳೆರಡು..

ಬಾಯೊ೦ದೇ ಆದರೆ ತುಟಿಗಳೆರಡು..

ನಾಲಿಗೆಯೊ೦ದೇ ಆದರೂ ಸವಿಯುವ- ಮಾತನಾಡುವ ಇ೦ದ್ರಿಯಗಳೆರಡು..

ಕೈಗಳೆರಡು..ಕಾಲುಗಳೆರಡು….!!


 
 
 

ಕರ್ಮರಾಜ್ಯದ ಬದುಕೂ ದ್ವ೦ದ್ವಮಯವೇ ಆಗಿದೆ..

ಸುಖವಿದೆ – ಜೊತೆಯಲ್ಲಿ ದುಃಖವೂ ಇದೆ..

ಬೆಳಕಿದೆ – ಜೊತೆಯಲ್ಲಿ ಕತ್ತಲೆಯೂ ಇದೆ..

ಬದುಕಿದೆ – ಒಡನೆ ಸಾವೂ ಇದೆ ..

ಜ್ಞಾನವಿದೆ – ಜೊತೆಜೊತೆಯಲ್ಲಿ ಅಜ್ಞಾನವೂ…!!!!

ಪ್ರೀತಿಯಿದೆ – ದ್ವೇಷವೂ ಇದೆ..


 
 

ನಮಗೆ ಬೇಕಾದದ್ದು ದುಃಖವಿಲ್ಲದ ಸುಖ..

ಕತ್ತಲಿಲ್ಲದ ಬೆಳಕು..

ಸಾವಿಲ್ಲದ ಬದುಕು..

ಅಜ್ಞಾನದ ಸೋ೦ಕಿಲ್ಲದ ಜ್ಞಾನ..

ದ್ವೇಷರಹಿತ ಪ್ರೀತಿ..


 
 

ಅದು ಪ್ರಾಪ್ತವಾಗಬೇಕೆ೦ದರೆ, ನಾವು ಕರ್ಮರಾಜ್ಯವನ್ನು ದಾಟಿ ಜ್ಞಾನರಾಜ್ಯವನ್ನು ಪ್ರವೇಶಿಸಲೇಬೇಕು..

ಮೂರನೆಯ ಕಣ್ಣಿರುವುದು ಅಲ್ಲಿಯೇ..!!!


 
 

ಭ್ರೂಮಧ್ಯದಾಚೆ ಮೊತ್ತಮೊದಲು ಸಿಗುವುದೇ ಮೂರನೆಯ ಕಣ್ಣಿನ ಸ್ಥಾನ..

ಮೋಕ್ಷರಾಜ್ಯದ ಮಹಾದ್ವಾರವದು..!!

ಮಹಾಮಸ್ತಿಷ್ಕವನ್ನು ನೇರವಾಗಿ ಪ್ರತಿನಿಧಿಸುವ ಏಕೈಕ ಅ೦ಗವದು..!!!


 
 

ಮಹಾಮಸ್ತಿಷ್ಕವೆಂದರೆ ಅನಂತಶಕ್ತಿ ಸಾಗರ..!!

ಅದರ ಶಕ್ತಿಯಲ್ಲಿ..ಈಗ ಉಪಯೋಗವಾಗುತ್ತಿರುವುದು ಕೋಟಿಯಲ್ಲೊ೦ದು ಪಾಲು ಕೂಡ ಅಲ್ಲ..!!


 
 
 

ಈಶ್ವರನ ಪ್ರತಿರೂಪದ೦ತಿರುವ ಮಹಾಮಸ್ತಿಷ್ಕ ಈಶ್ವರನನ್ನೇ ನೋಡಬಲ್ಲದು..!!

ಜೀವವನ್ನು ಈಶ್ವರಭಾವಕ್ಕೆತ್ತಬಲ್ಲುದು..!!

ಆದರೆ ಈಶ್ವರನನ್ನು ನೋಡಬೇಕಾದರೆ ಮೂರನೇಯಕಣ್ಣು ತೆರೆಯಲೇಬೇಕು..!!


 
 

ದ್ವ೦ದ್ವಲೋಚನಗಳು ದ್ವ೦ದ್ವವನ್ನು ಮಾತ್ರವೇ ಕಾಣಬಲ್ಲವು, ಅದ್ವೈತವನ್ನಲ್ಲ..

ಎಲ್ಲಿ ..!!ಒಮ್ಮೆ ಗಮನಿಸಿ ನೋಡಿ…!!!

ಅವುಗಳ ಗತಿ ಇರುವುದೇ ಕೆಳಮುಖವಾಗಿ..

ಹೆಚ್ಚೆ೦ದರೆ ಸಮಾನಾ೦ತರೆವಾಗಿ..

ಮೇಲ್ಮುಖವಾಗಿ ನೋಡಬೇಕೆ೦ದರೆ ಮುಖವನ್ನೇ ಮೇಲೆತ್ತಬೇಕಾಗುತ್ತದೆ..

ಭುವಿಗೆ ಸೀಮಿತವಾದ ದೃಷ್ಠಿಗಳವು..

 
 
 
 
 

ಅಸೀಮಿತವಾದ ಮೂರನೆಯ ಕಣ್ಣುಮಾತ್ರವೇ ದಿವಿಯನ್ನು ನೋಡಬಲ್ಲುದು..


 
ಆ ಕಣ್ಣು ತೆರೆದರೆ………..

ಅಬ್ಬಾ..!! ಚಮತ್ಕಾರ..!!!
ಮಾಯೆ ಮಾಯ..!!
ಬದುಕು ನಿರಾಮಯ..
ಮತ್ತೆ ಉಳಿಯುವುದು….
 

 
ಮೊಗೆದಷ್ಟೂ ಮುಗಿಯದ ಅನಂತ ಆನಂದಸಾಗರ…….!!!!

 

 

(ಸಶೇಷ..)

|| ಹರೇರಾಮ ||

21 Responses to ಕಣ್ಣು ಬೇಕೇ ಬೇಕಣ್ಣಾ..ಮೂರನೆಯ ಕಣ್ಣು…!!!!

 1. Raghavendra Narayana

  Unique.

  [Reply]

 2. sriharsha.jois

  ತಂದೇ………

  ನಿಜ,ಈ ಸಾಂಸಾರಿಕ ಕರ್ಮಗಳಿಂದ ಮುಕ್ತಿ ಬೇಕೇ ಬೇಕು.ಇಲ್ಲಿರುವುದು ಕ್ಷಣಿಕ ಆನಂದ….

  ಆದರೆ..ಈ ನಮ್ಮ ದೇಹವನ್ನಾಳುವ ಮಹಾಮಸ್ತಿಷ್ಕಕ್ಕೇ ದಾರಿ ತೋರುವ ಮಹಾಶಕ್ತಿಯೊಂದು ಬೇಕು…!!

  ಆ ಶಕ್ತಿಯಾಗಿ ನಮ್ಮ ಬೆನ್ನಿಗಿರುವ ,ಆ ದಾರಿಯನ್ನು ತೋರುವ ,ಗುರುದೇವನಿರುವಾಗ……

  ನಮಗೆಲ್ಲಿಯ ಚಿಂತೆ…!!!

  ಬಾ, ಗುರುವೇ….ದಾರಿ ತೋರು ಬಾ……

  [Reply]

 3. mahesh balasubramaniam

  ಕರ್ಮ ರಾಜ್ಯದಿಂದ ಜ್ಞಾನರಾಜ್ಯಕ್ಕೆ ಒಯ್ಯುವ ಮಾಧ್ಯಮದ ಅನುಗ್ರಹ ಬೇಕಾಗಿದೆ!

  [Reply]

 4. abhirama Hegde

  “ಹಣೆ” ಬರಹದಲ್ಲಿ ಕ೦ಡೂ “ಕಾಣದ” ವ್ಯತ್ಯಾಸ..!!!

  [Reply]

 5. nandaja haregoppa

  Hare raama

  idu jnana raajya darshana {viswa roopa darshanadante}iduvaregu yava

  pustakadallu tilisada,yaaruu vivarisada marma, hegaadru adanomme

  nodalebeku,adara sihi saviyale beku,idu nanasaguttaaaaa….?

  [Reply]

  Sri Samsthana Reply:

  Why not..?

  [Reply]

 6. Mohan Bhaskar

  kannu tereyisaddakke – tereyisuttiruvfadakke dhanyavaadagalu gurugale

  [Reply]

 7. chs bhat

  Hare raama.Hosa noatagurugalindaagi doreyuttide.Naave punyavantharu.Ee baravanigeyannu gurugala mukhadindale kelabekennuvaase. Bengalurige bandaaga gurugala pravachana mulaka ellarigu idu doreyabeku. Prarthane. Hareraama.CHS

  [Reply]

  Sri Samsthana Reply:

  Astu..

  [Reply]

 8. Raghavendra Narayana

  ಗುರುಗಳೇ ದಯವಿಟ್ಟು ತಿಳಿಸಿ,
  ಪರಮಾತ್ಮ ಸ್ಥಿತಿ ಆನ೦ದವೋ, ತಟಸ್ಥವೋ?

  ಜ್ಞಾನ ವೃದ್ದಿಯಾಗುವಾಗ, ಕಡೆಗೆ ಲೀನವಾಗುವಾಗ ಆನ೦ದವಿರಬಹುದು, ಆದರೆ, ಕೊನೆಯ ಸ್ಥಿತಿ ತಟಸ್ಥವಲ್ಲವೆ?
  ಆನ೦ದದ ಅನುಭವ ಕೂಡ ಸ೦ಸಾರವಲ್ಲವೆ?

  [Reply]

  Sri Samsthana Reply:

  ತಟ ಎಂಬ ಶಬ್ಧವನ್ನು ತೀರ ಎಂಬ ಅರ್ಥದಲ್ಲಿ ಬಳಸುವುದಾದರೆ ಮೊಕ್ಷವನ್ನು ತಟಸ್ಥ ಆನಂದವೆಂದು ಕರೆಯಬಹುದು..!!

  [Reply]

 9. Anuradha Parvathi

  ದ್ವಂದ್ವಗಳ ಬಗ್ಗೆ ವಿವರಣೆ ತುಂಬ ತುಂಬ ಚೆನ್ನಗಿತ್ತು. ಈ ತರದ ವಿವರಣೆ ಯಾವತ್ತು ಕೇಳಿಲ್ಲ. ಇಂಥ ಗುರುಗಳಿರುವ ನಾವೆ ಧನ್ಯರು. ಮೂರನೆಯ ಕಣ್ಣನ್ನು ತೆರೆಯಲು ಗುರುಗಳ ಆಶೀರ್ವಾದ ಬೇಕು.

  [Reply]

 10. shobha lakshmi

  idara bagge aBipraya ,athavaa prathikriyasalu nanna murane kannu ellide endu modalu thiliyabekagide..hudukaadutha iddene…gurudeva..ellide endu thorisuviraa??

  [Reply]

 11. Raghavendra Narayana

  ಜ್ಞಾನರಾಜ್ಯ ಮತ್ತು ಕರ್ಮರಾಜ್ಯ ಅಥವಾ ಇ೦ದ್ರಿಯರಾಜ್ಯ – ಅದ್ಭುತ.
  .
  ಆಳಕ್ಕೆ ಇಳಿದರೆ, ವಿಜ್ಞಾನ, ಅಜ್ಞಾನ, ಸುಜ್ಞಾನ, ಅಭಿಜ್ಞಾನ, ಸರ್ವಜ್ಞಾನವಿದೆ..
  .
  ಇ೦ದ್ರಿಯರಾಜ್ಯದಿ೦ದ ಮಾಹಿತಿ ಹರಿದು, ಜ್ಞಾನರಾಜ್ಯದಿ೦ದ ಕಾರ್ಯಕ್ಕೆ ಸೂಚನೆ ಬರುತ್ತದೆಯೆ?
  .
  ಇ೦ದ್ರಿಯಗಳಿಗೆ ಸ್ವಾತ೦ತ್ರ್ಯವೇ ಇಲ್ಲವೆ?
  .
  ಜ್ಞಾನರಾಜ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸ೦ಪೂರ್ಣ ಸ್ವಾತ೦ತ್ರ್ಯ ಇದೆಯೆ?
  .
  ಇ೦ದ್ರಿಯಗಳು ಜ್ಞಾನರಾಜ್ಯದ ಮೇಲೆ ಪ್ರಭಾವ ಹೇರಬಹುದೆ?
  .
  ಜ್ಞಾನರಾಜ್ಯವನ್ನು ಯಾರು ನಿಯ೦ತ್ರಣ ಮಾಡುತ್ತಾರೆ?
  .
  ಜ್ಞಾನದ್ದೆ ರಾಜ್ಯವಾದರು, ಯಾಕೆ ಕೆಟ್ಟ ಕೆಲಸಗಳನ್ನು ಮಾಡುತ್ತೇವೆ?
  .
  How Conscious and Subconscious relates to this article?
  .
  “The Matrix” – English movie is on similar lines I feel.. dialogue “Ignorance is bliss..” in the movie is my favorite.

  [Reply]

 12. Raghavendra Narayana

  ಕಣ್ಣಿರದೆ ರವಿಯೇನು? ರವಿಯಿರದೆ ಕಣ್ಣೇನು? |
  ಅನ್ಯೋನ್ಯ ಸಹಕೃತಿಯಿನುಭಯ ಸಾರ್ಥಕತೆ ||
  ನಿನ್ನಾತ್ಮ ಜಗದಾತ್ಮಕ೦ತು ಸ೦ಬ೦ಧವವು |
  ವಹ್ನಿಸ್ಫುಲಿ೦ಗಗಳೊ – ಮ೦ಕುತಿಮ್ಮ ||

  [Reply]

 13. Nandini V

  ಗುರುಗಲಿಗೆ ನಮಸ್ಕಾರಗಳು..
  ಹೊಸ ವರುಷದ ಹಾರ್ದಿಕ ಶುಭಾಶಯಗಳು…
  ಈ ಬ್ಲಾಗ್ ತುಂಬಾ ಚನ್ನಾಗಿದೆ… ಓದಿ ಮನಸಿನ ಮೇಲೆ ಆಗಿದ ಪರಿಣಾಮವನ್ನು ಹೇಳಲು ಅಸದ್ಯವಾಗಿದೆ… very enlighting….
  ನನ್ನದೊಂದು ಪ್ರಶ್ನೆ…
  ಮೂರನೇ ಕಣ್ಣು ಒಂದಕ್ಕೆ ದೇವರನ್ನು ನೋಡುವ ಸಾಮರ್ಥ್ಯವಿದೆ ಎಂದಾಗ… ಅದನ್ನು ನಮ್ಮಂಥ ಸಾಮಾನ್ಯರು ಹೀಗೆ activate ಮಾಡುವುದು?
  ನಮ್ಮಲಿರುವ ದೇವರನ್ನೇ ಕಾಣಲು ಸದ್ಯವಾಗದಿದ್ದಾಗ…. ಕಂಡರೂ ಅವನ ಶಕ್ತಿಯನ್ನು bear ಮಾಡಲು ಶಕ್ತಿ ನಮ್ಮಗೆ ಇಲ್ಲದಿದ್ದಾಗ…. ನಮ್ಮ ಕಾಯುವ ಆ ದೇವನ ನೋಡುವ ಸಾಮರ್ಥ್ಯವನ್ನು ಹೀಗೆ ಬೆಲಿಸುವುದು ?
  ಈಗಿನ stress and lack of time situations ನಲ್ಲಿ… ದೇವನು ಸದಾ ಮನಸಿನಲ್ಲಿ ಇದ್ದರು ಅವನೊಡನೆ ಇರಬೇಕೆನಿಸಿದರು, ಯಾಕೋ ಏನೋ ಆಗದಿರುವ situations ನಲ್ಲಿ… ಇದನ್ನ ಹೀಗೆ ಸದಿಸುವುದು??

  [Reply]

 14. vdaithota

  “ಮೂರನೆ ಕಣ್ಣು ” ಎನ್ನಲೇ ಆನಂದಾ…
  ಅ ಕಣ್ಣು ತೆರೆವುದೇ ಒಂದು “ಚಮತ್ಕಾರಾ”…
  ಅಲ್ಲವೆ….???!!!!!

  [Reply]

 15. Shreekant Hegde

  ಪ್ರಣಾಮಾಃ ಕುಲಗುರೋ|

  ಗುರುಗಳೇ ಎಲ್ಲೋ ಹೇಳಿದ ನೆನಪು, at least 40 ಆದಮೇಲಾದರೂ ಆ ಕಣ್ಣು ತೆರೆಯಲಿ ಎಂದು ಈ ಕಂಗಳಿಗೆ ಚಾಳೀಸ್ ಬರುವುದು, ಆಗಲೂ ಕನ್ನಡಕ ಹಾಕಿ ಹೊರವನ್ನೇ ನೋಡುತ್ತೇವೆ.

  [Reply]

 16. Anantha Hegde

  moore kanne ? Nanatara yava Kannu

  [Reply]

 17. Mahendra

  Hare Raama,

  Sri Gurugalige dandwat namaskaar.

  I just read through the artical and its really nice. I had a question for the website administrators – Is there any material (articles or audio) in this website about meditation method?

  [Reply]

 18. G.S.Hegde- Dombivli(Mumbai)

  harerama

  [Reply]

Leave a Reply

Highslide for Wordpress Plugin