LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಕಣ್ತೆರೆದನೇ ಕಡಲಶಯನ !!

Author: ; Published On: ಶುಕ್ರವಾರ, ಅಕ್ತೂಬರ 30th, 2009;

Switch to language: ಕನ್ನಡ | English | हिंदी         Shortlink:

ಕಣ್ಮುಚ್ಚಿ ಕಲ್ಪಿಸಿಕೊಳ್ಳಿ.

ವಿಮಾನವೊಂದರಲ್ಲಿ ನೀವು ಪ್ರಯಾಣಿಸುತ್ತಿದ್ದೀರಿ.

ಒಂದು ವೇಳೆ ವಿಮಾನವನ್ನು ನಡೆಸುವಾತ ದೀರ್ಘ ನಿದ್ರೆಗೆಳಿದರೆ ಪರಿಣಾಮವೇನಾದೀತು?

ದೇಶವನ್ನು ಕಾಯುವ ಸೈನಿಕ ಮೈಮರೆತು ಮಲಗಿದರೆ ಪ್ರಜೆಗಳ ಪಾಡೇನು?

ಒಂದಡಿ ಮುಂದಿಟ್ಟು ಕಲ್ಪಿಸಿಕೊಳ್ಳಿ.

ಬ್ರಹ್ಮಾಂಡವನ್ನು ನಡೆಸುವಾತ/ಕಾಯುವಾತ ನಾಲ್ಕುತಿಂಗಳುಗಳ ಕಾಲ ನಿದ್ರಿಸಿದರೆ…?

ಹೀಗೂ ಉಂಟೇ?

ಋಷಿ ದೃಷ್ಟಿಯಲ್ಲಿ –

ವಿಶ್ವವನ್ನು ಕಟ್ಟುವ ಶಕ್ತಿಗೆ ಬ್ರಹ್ಮನೆಂದು ಹೆಸರು.

ಕಾಯುವ ಶಕ್ತಿಗೆ ವಿಷ್ಣುವೆಂದು ಹೆಸರು.

ಕೊಲ್ಲುವ ಶಕ್ತಿಗೆ ಮಹೇಶ್ವರನೆಂದು ಹೆಸರು.

ಬ್ರಹ್ಮನ ಸೃಷ್ಟಿಯನ್ನು ಪ್ರಳಯದವರೆಗೆ ಪಾಲಿಸುವ/ನಡೆಸುವ ಹೊಣೆಹೊತ್ತ ನಾರಾಯಣನಿಗೆ ವರುಷದ ನಾಲ್ಕು ತಿಂಗಳು ನಿದ್ರೆ.

ಆಷಾಡ ಶುದ್ದ ಏಕಾದಶಿಯಿಂದ ಕಾರ್ತೀಕ ಶುದ್ದ ದ್ವಾದಶಿಯವರೆಗೆ (ಪ್ರಥಮೈಕಾದಶಿಯಿಂದ ಉತ್ಥಾನ ದ್ವಾದಶಿಯವರೆಗೆ) ನಾಲ್ಕು ತಿಂಗಳ ಮಳೆಗಾಲ ಶ್ರೀವಿಷ್ಣುವಿನ ಯೋಗ ನಿದ್ರೆಯ ಸಮಯ.

ಮುಚ್ಚಿದ ಕಣ್ಣುಗಳಿಂದ ಎಡಬಿಡದೇ ವಿಶ್ವವನ್ನೆಲ್ಲಾ ನೋಡುವ ಪ್ರಭು….

ಜಗದ ರಕ್ಷಣೆಯಲ್ಲಿ ಜಾಗರೂಕವೇ ಆಗಿರುವ ನಿದ್ರಾಮುದ್ರೆ (ನಿದ್ರಾಮುದ್ರಾಂ ನಿಖಿಲಜಗತೀ ರಕ್ಷಣೇ ಜಾಗರೂಕಾಂ – ಭೋಜರಾಜ).

ಎಚ್ಚರದಲ್ಲೂ ನಿದ್ರಿಸುವವರ ಪ್ರಪಂಚವಿದು.

ವಿಚಿತ್ರ!!

ನಿದ್ದೆಯಲ್ಲೂ ಎಚ್ಚರವಿರುವವನು ಇದರ ಪ್ರಭು!!!

ನಿದ್ರೆಯಲ್ಲಿ ಎರಡು ವಿಧ.

ಒಳಗೂ ಹೊರಗೂ ಕತ್ತಲಾವರಿಸುವಂತೆ ನಿದ್ರಿಸಿದರೆ… ಅದು ಜಾಡ್ಯ ನಿದ್ರೆ.

ಅಂತರಂಗ ಬಹಿರಂಗಗಳು ಆನಂದದ ಬೆಳಕಿನಲ್ಲಿ ಬೆಳಗಿದರೆ… ಅದು ಯೋಗನಿದ್ರೆ.

ಶಂಕರಾಚಾರ್ಯರು ಯೋಗನಿದ್ರೆಯನ್ನು ವರ್ಣಿಸುವ ಪರಿ…

ಇದು ಎಚ್ಚರವಲ್ಲ (ಎಚ್ಚರದಲ್ಲಿ ಬಾಹ್ಯ ಪ್ರಪಂಚದ ಪರಿವೆ ಇರುತ್ತದೆ).

ಇದು ನಿದ್ರೆಯಲ್ಲ (ನಿದ್ರೆಯಲ್ಲಿ ಅಂತಃ ಪ್ರಪಂಚದ ಪರಿವೆ ಇರುವುದಿಲ್ಲ).

ಇದು ಬದುಕಲ್ಲ (ಬದುಕಿನ ಲಕ್ಷಣಗಳಾದ ಉಸಿರಾಟ, ಹೃದಯ ಸ್ಪಂದನ, ರಕ್ತ ಸಂಚನಗಳಿಲ್ಲದ ಸ್ಥಿತಿ ಇದು).

ಇದು ಮೃತ್ಯುವಲ್ಲ ( ಮೃತರಾದವರು ಮತ್ತೆ ಎದ್ದು ಬರಲಾರರು).

ಕೊನೆಗೆ ಯೋಗ ನಿದ್ರೆಗೆ ಶಂಕರಾಚಾರ್ಯರು ಕೊಟ್ಟ ಹೆಸರು…

ವಿಚಿತ್ರಂ!!!

ನಮ್ಮ ನಿದ್ರೆ ನಿದ್ರೆಯಲ್ಲ.

ಏಕೆಂದರೆ…

ನಿದ್ರೆಯಲ್ಲಿ ನಮ್ಮ ಸರ್ವಾವಯವಗಳೂ ಪೂರ್ಣ ವಿಶ್ರಾಂತಿಯನ್ನು ಪಡೆಯುವುದಿಲ್ಲ.

ನಮ್ಮ ಎಚ್ಚರ ಎಚ್ಚರವಲ್ಲ.

ಕಾರಣ…

ಎಚ್ಚರದಲ್ಲಿ ನಮ್ಮೊಳಗೆ ಹುದುಗಿರುವ ಸರ್ವ ಶಕ್ತಿಗಳು ಪರಿಪೂರ್ಣವಾಗಿ ಜಾಗೃತವಾಗಿರುವುದಿಲ್ಲ.

ಜೀವಲೋಕಕ್ಕೆ ಎಚ್ಚರ ನಿದ್ರೆಗಳನ್ನು ಕಲಿಸಿಕೊಡುವ ದೇವರ ದೇವ ನಾಲ್ಕು ತಿಂಗಳ ಕಾಲ ತನ್ನ ಯೋಗ ನಿದ್ರೆಯನ್ನು ತೊರೆದು ಎಚ್ಚೆತ್ತುಕೊಳ್ಳುವ “ಉತ್ಥಾನ ದ್ವಾದಶಿ” ಇಂದು.

(ಮುಂದುವರೆಯುವುದು…)

19 Responses to ಕಣ್ತೆರೆದನೇ ಕಡಲಶಯನ !!

 1. hegderu@gmail.com

  nammadu echaradallu nidre bagavandtanadu nidreyallu ecchara……
  sari namma e nidrege namma krma palave karaNavE?
  athavaa jagrata prajneyinda naavu echaraagalu sadyave?
  namma vismrutige karaNa  nane allave ?

  [Reply]

  Sri Sri Reply:

  ವಿಸ್ಮೃತಿಗೆ ಕಾರಣ ‘ ನಾನಲ್ಲ ‘
  ನನ್ನನ್ನುಳಿದು ಅನ್ಯ ಪ್ರಪಂಚ..

  [Reply]

 2. venkateshwara

  jagattinalli eega yava stiti nidre ,yava stiti echchara endu tiliuvade kasta.innu swallapa bidisi helabahude?  

  [Reply]

  Sri Sri Reply:

  ಮತ್ತೆಲ್ಲವೂ ಮರೆಯಾಗಿ ‘ ನಾನು’ ಮಾತ್ರ ಬೆಳಗುತ್ತಿದ್ದರೆ ಅದು ಸಂಪೂರ್ಣ ಎಚ್ಚರ..
  ‘ನಾನು’ ಮರೆಯಾಗಿ ಮತ್ತೆಲ್ಲವೂ ಪ್ರಕಟವಾಗುತ್ತಿದ್ದರೆ ಅದು ನಿದ್ರೆ..

  [Reply]

 3. sshilpa8

  @all,
  nidreyoLage ecchara echharadalle nidre iveradannu ottige maduva
  “divya mahimanu   ninna yavanu ballanu “…????????????????

  [Reply]

 4. shamukpb

  hare ram,
  bhagavanta yoga nidreyinda ecchettu kolluva dina utthanadwaadashi sari ,aadare andu habbadandu tulasi pooje  tulasi maduve aamla gida iddakkella eenu sabandha shreegale?krupe madi aruhuvire? dhanyavadagalu ee avakashakkagi

  [Reply]

 5. lakshmi

  mahavishnu  yoga nidde yallu jagava kaitha,,rakshisutha..
  samanyarige yoganidde yadare prapanchada arivu irutha? yoga nidde gu samaadhi sthithi gu vyathyasa ideya? hareraama..

  [Reply]

  Sri Reply:

  ಯೋಗನಿದ್ರೆಗೇ ಸಮಾಧಿ ಎಂದು ಹೆಸರು.. ಬಾಹ್ಯ-ಪ್ರಜ್ಞೆ ಇರುವ ಸ್ಥಿತಿಯಲ್ಲ ಅದು..

  [Reply]

 6. shilpa purohith

  guru deva manushyaru “HaTa (PraaNaayama) ” yogadinda yoganidre stithi honduttare….

  Bhagavanthana yoganidregu manushyara yoganidre(samadhi gu)  vytyasa virutta..???

  [Reply]

  Sri Sri Reply:

  ಮಾನವ ಮಾಧವನಾಗುವ ಸ್ಥಿತಿಯದು.!!

  [Reply]

  shilpa purohith Reply:

  ಘಟ ವು ಒಡೆದ ನಂತರ ಘಟದಲ್ಲಿನ ಆಕಾಶವು ಮಹಾಕಶದಲ್ಲಿ ಲೀನ ವಾಗುವಂತೆ …
  ಯೋಗಿಯು ತಾತ್ಕಾಲಿಕವಾಗಿ ಮಾಡುವ ಯೋಗನಿದ್ರೆ ಅಥವಾ ಸಮಾಧಿ ಸ್ಥಿತಿಯಿಂದ
  ಮಾಧವನೇ ಆಗುತ್ತಾನ ??

  [Reply]

 7. Shaila Ramachandra

  sampoorna manoo naashakku samadhiguu iruva vetyasaveenu?

  [Reply]

  Sri Sri Reply:

  Vyatyaasavilla..

  [Reply]

 8. karthikshrikar

  Hare Raama 

  Devarige suprapada helluvudu ekke? Avanannu  namminda ebbisalu  saadyave.  what is our  role? Are  we  like  alarm clocks? or  like  little  children  who wake up their mother ?

  sharada  Jayagovind

  [Reply]

  Sri Sri Reply:

  ನಮ್ಮೊಳಗೆ ಅವನನ್ನು ಜಾಗೃತ ಮಾಡಿಕೊಳ್ಳುವುದು..

  [Reply]

 9. geervaanee

  ಹರೇ ರಾಮ, ಎಲ್ಲ ಗುರುಬಂಧುಗಳಲ್ಲಿ ಒಂದು ಅರಿಕೆ, ಕನ್ನಡವನ್ನು ಕನ್ನಡ /ದೇವನಾಗರೀ ಬರೆಯೋಣ, ಈ ಕಂಗ್ಲಿಶ್ ಓದುಲೆ ಬಲು ಕಷ್ಟ, Rama – ರಾಮ, ರಮಾ ಹೇಗೂ ಓದಲಕ್ಕಲ್ದ, ಮತ್ತೆ ಕನ್ನಡ ಯುನಿಕೋಡ್ ಸೌಲಭ್ಯವಿಲ್ಲದಾಗ English ಭಾಷೆಯಲ್ಲೇ ಸ್ಪಂದಿಸೋಣ, ಗುರುಗಳು ಇದಕ್ಕೆ ಅನುಮತಿಸುವರೆಂಬ ಆಶಯ.

  [Reply]

  shobha lakshmi Reply:

  ಹರೇರಾಮ,ಖ೦ಡಿತ ಸರಿ

  [Reply]

  Sri Sri Reply:

  ಸರಿ..!!

  [Reply]

 10. shobha lakshmi

  ಗುರುದೇವಾ…”ನಾನು” ಎನ್ನುವ ಗುರುತಿಸುವಿಕೆ “ಅಹ೦” ನ ಸೂಚಿಸುತ್ತಿಲ್ಲವೆ??ನಾನು ಭಾವ ಹೋದರೆ ಭಗವ೦ತನ ಸೇರುವೆನೆ೦ದು ಕನಕದಾಸರು ತನ್ನ ಗುರುಗಳಿಗೆ ಹೇಳಿದ್ದು ಓದಿದ ನೆನಪು..
  ಗುರುದೇವಾ…ನಾನು ಭಾವ ಹೋಗಿ ನೀನೇ ಆಗಬೇಕೆ೦ದು ಭಕ್ತರು ದೇವರಲ್ಲಿ ಮೊರೆಇಡುವ ಪರಿಅಲ್ಲವೇ.. ಇಲ್ಲಿ “ನಾನು ” ಎನ್ನುವ ಪದವನ್ನು ಯಾವರೀತಿಯಲ್ಲಿ ಅನುಸ೦ಧಾನ ಮಾಡಬೇಕೆ೦ದು ತಿಳಿಸಲು ಪ್ರಾರ್ಥಿಸುವೆ..

  [Reply]

Leave a Reply

Highslide for Wordpress Plugin