ಬಹುನಿರೀಕ್ಷಿತವಾದ ನಮ್ಮೆಲ್ಲರ E-ಮಠ ‘ಹರೇರಾಮ’ ಬೆಳಕಿನ ಹಬ್ಬದಂದು ಬೆಳಕನ್ನು ಕಂಡಿದೆ.ಇದರೊಂದಿಗೆ ನಿಮ್ಮೆಲ್ಲರೊಡನೆ ಮತ್ತೆ ಮತ್ತೆ ಮಾತನಾಡುವ ನಮ್ಮ ತುಡಿತ ಸಫಲಗೊಂಡಿದೆ.ಎಲ್ಲ ವಿಧದ ದೂರಗಳನ್ನು ಮೀರಿ ನಿಲ್ಲುವ ಶಕ್ತಿ ಪ್ರೀತಿಗಿದೆ.ಬ್ರಹ್ಮಾಂಡದ ಎರಡು ತುದಿಗಳನ್ನು ಒಂದುಗೂಡಿಸಬಲ್ಲುದು ಪ್ರೀತಿ.ಗುರುಶಿಷ್ಯರ ಪರಸ್ಪರ ಪ್ರೀತಿಯ ಪ್ರಕಟ ರೂಪವೇ ಈ ಅಂತರ್ಜಾಲ ತಾಣ ಅಥವಾ ಅಂತರಂಗ ತಾಣ.ಅಂತರಂಗಗಳನ್ನು ಅಂತರವಿಲ್ಲದಂತೆ ಬೆಸೆಯುವ ತಾಣ.ಇಲ್ಲಿಯವರೆಗೆ ಬಹಿರಂಗದಲ್ಲಿ ದೂರವಿದ್ದಾಗ ಅಂತರಂಗದ ಭಾಷೆಯಲ್ಲಿ,ಹೃದಯದ ಭಾಷೆಯಲ್ಲಿ ಪರಸ್ಪರ ಏರ್ಪಡುತ್ತಿದ್ದ ಭಾವ-ವಿನಿಮಯ ಇನ್ನ್ನು ಮುಂದೆ E-ಭಾಷೆಯಲ್ಲಿ ಪ್ರಕಟವಾಗಲಿದೆ.

ಬನ್ನಿ..ಭೇದವಿಲ್ಲದಂತೆ ಬೆಸೆಯೋಣ..ಹರೇರಾಮದಲ್ಲಿ ಒಂದಾಗೋಣ..

ಕೈ ಹಿಡಿದು..

ಕೈ ಹಿಡಿದು..

Facebook Comments