LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನೆಗಡಿಯೆನಿಸಿದರೆ ಮೂಗು ಕೊಯ್ದುಕೊಳ್ಳಬೇಕೆ…!?

Author: ; Published On: ರವಿವಾರ, ಜೂನ್ 27th, 2010;

Switch to language: ಕನ್ನಡ | English | हिंदी         Shortlink:

||ಹರೇರಾಮ ||

ಗಿಡವ ತಿದ್ದಲಿಕೆಂದು ಬುಡವ ಕೀಳ್ವುದು ಸರಿಯೆ….?

ಅಸಂಖ್ಯಾತ ಸಮಯದಿಂದ ನಡೆದುಬಂದ ಸನಾತನ ವ್ಯವಸ್ಥೆಯಲ್ಲಿ ವ್ಯಕ್ತಿಗಳ ದೋಷದಿಂದಲೋ,
ವ್ಯವಸ್ಠೆಯ ದೋಷದಿಂದಲೋ, ಅಥವಾ ನಮ್ಮ ದೃಷ್ಟಿದೋಷದಿಂದಲೋ, ಏರುಪೇರುಗಳಿವೆಯೆಂದೆನಿಸಿದರೆ..
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಪರಕೀಯ ವ್ಯವಸ್ಥೆ ಸೊಬಗೆನಿಸಿದರೆ..
ಆಗ ಮಾಡಬೇಕಾದುದೇನು…?

ಎಂದೆಂದೂ ತನ್ನದಾದುದನ್ನು ತನ್ನದಲ್ಲವೆಂದು ಹೇಳಿ, ಇಂದಿನವರೆಗೆ ತನ್ನದಲ್ಲದುದನ್ನು ತನ್ನದೆನ್ನುವುದೆ..!?

ಇಂದಿನಿಂದ ಮತಾಂತರದ ಬಗ್ಗೆ ಚರ್ಚಿಸೋಣ..

ಭಾವಸಂವಾದದ ನಿರೀಕ್ಷೆಯಲ್ಲಿ…

16 Responses to ನೆಗಡಿಯೆನಿಸಿದರೆ ಮೂಗು ಕೊಯ್ದುಕೊಳ್ಳಬೇಕೆ…!?

 1. Mahesha Elliadka

  ಹರೇರಾಮ ಗುರುಗಳೇ..
  ಮತಾಂತರ, ಧರ್ಮಾಂತರ – ಇವೆರಡಕ್ಕೆ ವ್ಯತ್ಯಾಸ ಇವೆಯೇ?
  ಇದ್ದಲ್ಲಿ, ಮತಾಂತರ ಹೆಚ್ಚು ಹಾನಿಕರವೋ? ಅಲ್ಲ ಧರ್ಮಾಂತರ ಹೆಚ್ಚು ಹಾನಿಕರವೋ?

  [Reply]

  Sri Samsthana Reply:

  ಮತವೆಂದರೆ ಅಭಿಮತ,,ಒಬ್ಬರ ಅಭಿಪ್ರಾಯ. ಅದು ಸರಿಯಿರಲೂಬಹುದು, ತಪ್ಪಿರಲೂಬಹುದು…

  ಧರ್ಮವೆಂದರೆ ಶಾಶ್ವತ ಸತ್ಯ. ಸೂರ್ಯನ ಹಾಗೆ ಸಕಲ ಜೀವರಿಗೂ ಅದು ಒಂದೇ…
  ‘ಅನ್ಯತ್ ಮತಂ ಮತಾಂತರಮ್’..||
  ಮತಾಂತರವೆಂದರೆ, ಬೇರೆ ಅಭಿಪ್ರಾಯ ಅಥವಾ ಅಭಿಪ್ರಾಯ ಭೇದ….

  ಬೇರೆಬೇರೆ ಅಭಿಪ್ರಾಯಗಳನ್ನು ತಾಳುವುದಕ್ಕೆ, ಮಂಡಿಸುವುದಕ್ಕೆ,ಅನುಷ್ಠಾನಿಸುವುದಕ್ಕೆ, ಬೋಧಿಸುವುದಕ್ಕೆ, ಸನಾತನ ವ್ಯವಸ್ಥೆಯಲ್ಲಿಯೇ ಧಾರಾಳವಾದ ಅವಕಾಶವಿದೆ..
  ಅದಕ್ಕಾಗಿ ವ್ಯವಸ್ಥೆಯಿಂದ ಹೊರಹೋಗಬೇಕಾಗಿಲ್ಲ.
  ಹಾಗಾಗಿಯೇ ನಮ್ಮಲ್ಲಿ ಕಪಿಲರ ಸಾಂಖ್ಯ…
  ಕಣಾದ-ಗೌತಮರ ನ್ಯಾಯ ವೈಶೇಷಿಕ..
  ಪತಂಜಲಿಗಳ ಯೋಗ..
  ಜೈಮಿನಿಗಳ ಮೀಮಾಂಸ…
  ವ್ಯಾಸರ ವೇದಾಂತ..ಮೊದಲಾದವುಗಳು ಹುಟ್ಟಿಕೊಂಡಿದ್ದು…!

  ಅಷ್ಟೇ ಏಕೆ..?
  ವ್ಯಾಸರ ವೇದಾಂತದಲ್ಲಿಯೇ ಶಂಕರಾಚಾರ್ಯರ ಅದ್ವೈತ, ರಾಮಾನುಜರ ವಿಶಿಷ್ಟಾದ್ವೈತ, ಮಧ್ವರ ದ್ವೈತ..ಮೊದಲಾದ ಬೇರೆಬೇರೆ ಮತಗಳಿಲ್ಲವೆ..?
  ಒಂದೇ ಪರ್ವತವು ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ದಿಕ್ಕಿನಲ್ಲಿ ನಿಂತಿರುವ ವ್ಯಕ್ತಿಗಳಿಗೆ ಬೇರೆಬೇರೆ ರೀತಿ ಕಾಣಿಸುವುದಿಲ್ಲವೇ..?
  ಅವು ನಾಲ್ಕೂ ದರ್ಶನಗಳೇ ಅಲ್ಲವೇ…!?

  [Reply]

  Sri Samsthana Reply:

  ಧರ್ಮವೆಂದರೆ ಎಲ್ಲಾ ಕಾಲಗಳಲ್ಲಿಯೂ, ಎಲ್ಲಾ ದೇಶಗಳಲ್ಲಿಯೂ, ಎಲ್ಲರಲ್ಲಿಯೂ ಬೆಳಗುವ ಸತ್ಯ..!
  ಮತವೆಂದರೆ ವ್ಯಕ್ತಿ ಅದನ್ನು ನೋಡುವ ರೀತಿ…
  ಮತಗಳು ಬದಲಾಗಬಹುದು, ಆದರೆ ಧರ್ಮ ಬದಲಾಗದು…!
  ನಮ್ಮ ದೃಷ್ಟಿ ಬದಲಾದ ಮಾತ್ರಕ್ಕೆ ಸೃಷ್ಟಿಯೇ ಬದಲಾಗಲು ಸಾಧ್ಯವೇ…?
  ಮತಕ್ಕೆ ಪರ್ಯಾಯವಿದೆ, ಆದರೆ ಧರ್ಮಕ್ಕೆ ಪರ್ಯಾಯವಿಲ್ಲ…
  ನಾವು ಧರ್ಮವನ್ನು ಬಿಟ್ಟರೆ ನಮ್ಮನ್ನು ಹಿಡಿದುಕೊಳ್ಳುವುದು ಅಧರ್ಮವೇ…!
  ಧರ್ಮಾಂತರವೆಂದರೆ ಗಂಡಾಂತರವೇ…!

  [Reply]

  ರಾಘವೇ೦ದ್ರ ನಾರಾಯಣ Raghavendra Narayana Reply:

  uncomparable explanations. “full stop” / “period” kind of explanations.

  [Reply]

  Anuradha Parvathi Reply:

  Tooooo Good….. never knew/thought about the above.

  [Reply]

 2. Vishwa M S Maruthipura

  ಮಿನುಗುವುದೆಲ್ಲಾ ಚಿನ್ನವಲ್ಲ …..!

  [Reply]

 3. Shridevi Vishwanath

  ಹರೇ ರಾಮ ಸಂಸ್ಥಾನ…
  ಕುರುಡು ಕಾಂಚಾಣದ ವ್ಯಾಮೋಹದಲ್ಲಿ ತಮ್ಮಿರವನ್ನು, ತಮ್ಮ ತನವನ್ನು, ತಮ್ಮನ್ನು ತಾವು ಮಾರಿಕೊಳ್ಳುವುದೇ… ಅಲ್ಲವೇ?

  [Reply]

 4. Suma Nadahalli

  ನಮಗೆ ಬೇಕು ನಮ್ಮ ಧರ್ಮವನ್ನು ಬಿಟ್ಟರೆ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ ಎಂಬ (ಅ)ಜ್ಞಾನ …

  ಹಣದ ಆಸೆಗೋ, ಯಾವುದೊ ಒಂದು ವ್ಯಕ್ತಿಯ ಸೆಳತವೋ …ಮತಾಂತರ ಪ್ರಕ್ರಿಯೆ ನಡೀತಾ ಇದೆ …
  ಇದಕ್ಕಾಗಿ ಅವರು ಬಳಸ್ತಾ ಇರೋದು ಕಷ್ಟದಲ್ಲಿ ಇರೋರನ್ನ , ಬಡವರನ್ನ.

  ಅವರು ಮತಾಂತರಿಸಿದ ಮೇಲೆ ಬಳಸುವ ಭಾಷೆ ಕೂಡ ಹಿಂದುಗಳದ್ದೆ ಆಗಿದೆ …!!!!!!!!!
  ಉದಾಹರಣೆಗೆ, ” ಕ್ರಿಸ್ತ ದೇವಾಲಯ ಬನ್ನಿ ಪೂಜಿಸೋಣ”……!!!!!!!!!!,
  ಪೂಜಾ ಸಮಯ ಎಂಬ ಫಲಕಗಳು …!!!!!!!!!…ಯಾಕೆಂದರೆ ನಮಗೆ ಅರ್ಥ ಆಗು ಭಾಷೆಯನ್ನೇ ಬಳಸಿ ಇದು ನಮಗಿಂತ ಭಿನ್ನ ಇಲ್ಲ ..ಎಲ್ಲ ಒಂದೇ ಎನ್ನುವ ಭಾವನೆ ತುಂಬಲು …

  ನಂತರನೆ ಗೊತ್ತಾಗೋದು “ಇದು ಕೆಸರಿನ್ನಲ್ಲಿ ಹೊಕ್ಕಿರೋ ಮುಳ್ಳು ಅಂತ ”

  ನಮ್ಮ ಧರ್ಮದ ಮೇಲೆ ತಿಳುವಳಿಕೆಯ ಕೊರತೆ ಇಂತಹ ಅವಾಂತರಗಳಿಗೆ ಕಾರಣ…

  [Reply]

 5. Raghavendra Narayana

  ಅದ್ಭುತ, ಯೋಚಿಸಬೇಕಾದ ವಿಷಯ.
  .
  ಮತಾ೦ತರ – ಯಾರಾಗುತ್ತಾರೆ, ಯಾಕಾಗುತ್ತಾರೆ, ಕೆಟ್ಟವೆರೆ – ಒಳ್ಳೆಯವರೆ, ಆದಮೇಲೆ ನಮ್ಮ ಧರ್ಮದ ಮೇಲಿನ ಅಭಿಪ್ರಾಯವೇನಾಗುತ್ತದೆ. ನಾವು ಅವರನ್ನ ಬೈಯ್ಯಬೇಕೆ, ನಮ್ಮನ್ನೆ ನಾವು ಬೈದುಕೊಳ್ಳಬೇಕೆ?
  .
  ಬಡವರೇ, ಬಡ ಮನಸ್ಸಿನವರೆ, ಕಾಸಿಗೆ, ಷೋಕಿಗೆ?
  .
  ಮತಾ೦ತರ ಆಗುತ್ತಿರುವವರನ್ನು ಆಗಲಿರುವವರನ್ನು ತಡೆದು ಒಳ್ಳೆಯ ಮಾರ್ಗ ತೋರಿಸುವ ಕೆಲಸ ಯಾರು ಮಾಡುತ್ತಿದ್ದಾರೆ? ಮತಾ೦ತರ ಆದವರನ್ನು ಪುನಃ ಕರೆದುಕೊ೦ಡುಬರಲು ಆಗುತ್ತಿರುವ ಪ್ರಯತ್ನವೇನು?
  .
  ವಿದ್ಯೆಗೋ ಹಣಕ್ಕೋ ಔಷದಿಗೋ ಕೆಲವು ಉಪಯೋಗಕ್ಕೋ ಆಗುತ್ತಿರುವವರಿಗೆ – ನಮ್ಮ ಸ೦ಘ ಸ೦ಸ್ಥೆಗಳು ಏಕೆ ಕೆಲಸ ಮಾಡುತ್ತಿಲ್ಲ?
  .
  ಬೇರೆಯವರನ್ನು ಹಳಿಯುವ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಮೊದಲು ನಮಗೆಲ್ಲಾ ಆತ್ಮವಿದೆ ಎ೦ದು ಅರಿತುಕೊಳ್ಳಬೇಕಿದೆ.
  .
  ಮೊದಲಾಗಿ ಮತಾ೦ತರ ಆತುತ್ತಿರುವವರು ಯಾರು? ಆಗಲಿಚ್ಛಿಸುವವರು ಯಾರು?
  .
  ಅದಕ್ಕೆಲ್ಲಾ ಮೊದಲಾಗಿ ನಮ್ಮ ಧರ್ಮಕ್ಕೆ ನಾವು ಮೊದಲು ಮತಾ೦ತರ ಆಗಬೇಕಿದೆ? ದಾರಿ ತಪ್ಪಿಸುತ್ತಿರುವವರಿಗೆ ಶಿಕ್ಷಣ ನೀಡಬೇಕಿದೆ?

  [Reply]

 6. Y V Bhat

  Nammavaru nammavarannu doora madidude nammavaru doora hogalu karanavirabahude? or Nammali illaddu alli kandu hogiranahude ? Avaru nammavarige alli enadaru hosatannu torisuva bhrameannu unto madirabahude ?
  Ottinalli idakke karanavu nave irabahude ? Nammannu navu tiddidare idakke parihara kanabahude ? Ee prashne ge uttarvu naveye ?. Nanage nammlle badalavane agatyavide ennisuthide . Nadedante nudidare , nudidante nadedare ,nammannu navu tiddikondare ellavu sariaga bahudennisuttde. Innobbara kanninalli kannittu nodidare alli kanuvudu nanna pratibimbave.

  [Reply]

 7. govindaraj korikkar

  Yada Yadahi Dharmasya…………Avatharakke kalave kayuthirabekallave?

  [Reply]

 8. shobha lakshmi

  ಹರೇರಾಮ,,,ಮತಾ೦ತರದ ಬಗ್ಗೆ ಚರ್ಚ ಮಾಡುದಾದರೆ ನನ್ನೆರಡು ಅನಿಸಿಕೆ,

  ಮತಾ೦ತರದ ರೋಗ ಹಬ್ಬಿಸುವ ಉಳಿದ ಮತಗಳ ಮೇಲೆ ಆರೋಪ ಹೊರಿಸುವ ಮೊದಲು ನಮ್ಮಧರ್ಮದ ಬಗ್ಗೆ ಅವಲೋಕನ ಮಾಡುದು ಒಳ್ಳೇದು…ಯಾಕೆ ಹಿ೦ದುಗಳೇ ಮತಾ೦ತರಕ್ಕೆ ಒಳಪ್ಡುವುದು? ಅದರಲ್ಲೂ ತೀರ ಬಡವರು? ಆದಿವಾಸಿಗಳು? ಧರ್ಮಸ೦ಖಟಕ್ಕೆ ಸಿಕ್ಕಿ ಸೊರಗಿದವು?

  ಎಷ್ತೇ ಬಡವನಿರಲಿ , ಬಿಕ್ಷುಕನಿರಲಿ ಹೇಗೆ ಇರಲಿ, ಒಬ್ಬ ಮುಸಲ್ಮಾನ ವ್ಯಕ್ತಿ ಯಾಕೆ ಹಿ೦ದೂ ಅಥವಾ ಕ್ರಿಸ್ಥ ಮತವನ್ನು ಸ್ವೀಕರಿಸುದಿಲ್ಲ? ಒಬ್ಬ ಕ್ರಿಸ್ಥ ಮತದವ ಯಾಕೆ ಮುಸಲ್ಮಾನ ಆಗುದಿಲ್ಲ? ಆಗಿದ್ದರೂ ಅದರ ಪ್ರಮಾಣ ಎಷ್ತೂ?

  ಒಬ್ಬ ವ್ಯಕ್ತಿ ಅಥವಾ ಒ೦ದು ಕುಟು೦ಬ ಮತಾ೦ತರಕ್ಕೆ ಒಳಪಡಲು ಕಾರಣಗಳೇನು?ಆವನ ಪರಿಸ್ಥಿತಿ ಅಲ್ಲವೇ? ಅವನ ಪರ೦ಪರೆಯ ಧರ್ಮ ಸ೦ಸ್ಕ್ರುತಿಯ ಅರಿವಿಲ್ಲದಿರುವುದೆ… ಬಡತನ… ನೋವು..ಸ೦ಕಟ… ತನ್ನವರಿ೦ದಲೇ ತನಗಾದ ಅನ್ಯಾಯ , ನೋವು,ಗೆ ಪ್ರತಿಕ್ರಿಯೆಯೆ..ಇರಭಹುದು…………

  ಇಲ್ಲಿ ನೆಮ್ಮದಿ ಸಿಗದಿರುವುದರಿ೦ದ ಅಲ್ಲಿ ನೆಮ್ಮದಿ ,ಉತ್ತಮ ಗುಣಮಟ್ಟದ ಜೀವನ ಸಿಗಬಹುದೆ೦ಬ ಆಸೆ ಮತಾ೦ತರಕ್ಕೊಳಪಡಲು ಕಾರಣವಲ್ಲವೇ?

  ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ,,ನೋವು ನಲಿವಿಗೆ ಸ್ಪ೦ದಿಸುವ ಕೊರತೆ ಇದೆ ಎ೦ದನಿಸುತ್ತಿದೆ…ಇನ್ನು ಮುಖ್ಯವಾಗಿ ವರ್ಣಪಧ್ಧತಿ ಯನ್ನು ಅರ್ಥಮಾಡಿಕೊಳ್ಳದೇ ಆದ ಅನರ್ಥ ಈ ಮತಾ೦ತರದ ರೋಗ…

  ಸನಾತನ ಧರ್ಮ ವನ್ನು ಸರಿಯಾಗಿ ತಿಳಿಯದೇ ಅದನ್ನು ವಿಕ್ರುತವಾಗಿಸಿ ವಿಚಿತ್ರವಾಗಿ ಜೀವನಕ್ಕೆ ಒಳಪಡಿಸಿ ಅದರಿ೦ದ ಉ೦ಟಾಗುವುದು ಗೊ೦ದಲ, ಅಶಾ೦ತಿ,
  ಮೂಢನ೦ಬಿಕೆ , ಮೂಢ ಆಚ್ರರಣೆ ಇದೇ ಮುಖ್ಯವಾಗಿ ಧರ್ಮದ ಒಳ ಮರ್ಮ ಮರೆಯಾಗಿ ಕುಳಿತಿರುವುದು,,
  ಧಾರ್ಮಿಕ ಶಿಕ್ಶಣ ಮಕ್ಕಳಿಗೆ ಕೊಡದಿರುವುದು….ಆಧುನಿಕ ಶಿಕ್ಷಣಕ್ಕೆ ಮೊರೆ ಹೋಗಿರುವುದು,,ಇದೂ ಒ೦ದು ಕಾರಣ..

  ಮುಖ್ಯವಾಗಿ ಮತಾ೦ತರಕ್ಕೆ ಒಳಪಟ್ಟಿರುವುದು,,ಗುಡ್ದಗಾಡಿನ ಬಡಜನ ಸಾಮೂಹಿಕವಾಗಿ, ಹಾಗೂ ರೋಗರುಜಿನದಿ೦ದ ಸೊರಗಿದವರು, ನ೦ಬಿಕೆಯ ಆಧಾರದಲ್ಲಿ ಮತಾ೦ತರವಾಗುವುದು ಕಾಣುತ್ತಿದೆ..ಹರೇರಾಮ…ಇದು ನನ್ನ ಅಭಿಪ್ರಾಯ,,,,,

  [Reply]

 9. Suvarnini Konale

  ಮತಾಂತರ ಯಾಕೆ? ಅಥವಾ ಯಾಕಾಗಬಾರದು? ಎರಡೂ ಪ್ರಶ್ನೆಗಳು ತುಂಬಾ ಕಾಡುತ್ತವೆ. ಎರಡಕ್ಕೂ ಅದರದ್ದೇ ಆದ ಸಮರ್ಥನೆಗಳೂ ಇವೆ. ಆದರೆ, ಯಾವುದು ಸರಿ ಅಂತ ಒಪ್ಪುವುದು ಹೇಗೆ? ಎಲ್ಲವೂ ಸತ್ಯ, ಯಾವುದನ್ನು ಬಿಡಲಿ? ಸೂರ್ಯ ಪೂರ್ವದಲ್ಲಿಯೇ ಹುಟ್ಟುತ್ತಾನೆ, ಇದು ಸತ್ಯ!! ಆದರೆ ಪೂರ್ವಕ್ಕೆ ಪೂರ್ವ ಅಂತ ಹೆಸರಿದೆ ಅದಕ್ಕೆ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ, ಅದೇ ಪೂರ್ವಕ್ಕೆ ವಾಯುವ್ಯ ಅಂತ ಹೆಸರಿತ್ತರೆ? ಸೂರ್ಯ ವಾಯುವ್ಯದಲ್ಲಿ ಹುಟ್ಟುತ್ತಾನೆ!! ನಮ್ಮ ಹಲವು ವರ್ಷಗಳ ನಂಬಿಕೆಗಳ ಗತಿ ಏನು? ಆದರೆ ದಿಕ್ಕಿಗಿರುವ ಹೆಸರು ಮಾತ್ರ ಬದಲಾಗಿದೆ, ದಿಕ್ಕಲ್ಲ. ಈಗ ಸೂರ್ಯ ಎಲ್ಲಿಂದ ಹುಟ್ಟುತ್ತಾನೆ? ಪೂರ್ವ ಅಂದರೆ ಒಂದು ಗುಂಪಿನ ಜನಕ್ಕೆ ಸಿಟ್ಟು, ವಾಯುವ್ಯ ಅಂದರೆ ಇನ್ನೊಂದು ಗುಂಪಿನವರಿಗೆ ಸಿಟ್ಟು. ನಿಜ ಸಂಗತಿ ಅಂದ್ರೆ.. ಸೂರ್ಯ ತನ್ನ ಪಥ ಬದಲಿಸಲೇ ಇಲ್ಲ !! ನಮ್ಮ ನಂಬಿಕೆ ಬದಲಾಗಿದೆ, ದೃಷ್ಟಿಕೋನ ಬದಲಾಗಿದೆ, ಸತ್ಯ ಇದ್ದ ಹಾಗೇ ಇದೆ !! ಇದನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ನಮ್ಮಲ್ಲಿ ಯಾಕೆ ಇಲ್ಲ?

  [Reply]

  ರಾಘವೇ೦ದ್ರ ನಾರಾಯಣ ಉಪಾಧ್ಯ Raghavendra Narayana Reply:

  ಅತ್ಯದ್ಭುತ

  [Reply]

 10. Anuradha Parvathi

  ಮತಾಂತರಕ್ಕೆ ಒಂದು ಕಾರಣ: ನಮ್ಮ ಮತದ ಬಗ್ಗೆ, ಧರ್ಮದ ಬಗ್ಗೆ ನಮಗೆ ಪೂರ್ಣ ತಿಳುವಳಿಕೆ ಇರದಿರುವುದು.

  [Reply]

 11. Shreenivas Hegde

  olleya abhipraya

  [Reply]

Leave a Reply

Highslide for Wordpress Plugin